Loan Scheme – ಸರ್ಕಾರಕ್ಕೆ ಮತ್ತೊಂದು ಹೊಸ ಯೋಜನೆ, 5 ಲಕ್ಷ ಸಾಲಕ್ಕೆ , 2.5 ಲಕ್ಷ ಸಬ್ಸಿಡಿ ಪಡೆಯಿರಿ, ಇಲ್ಲಿದೆ ವಿವರ

santwana yojana

ರಾಜ್ಯದಲ್ಲಿ ಬಡತನವನ್ನು(poverty) ಹೋಗಲಾಡಿಸಲು ರಾಜ್ಯ ಸರ್ಕಾರ(state government) ಹಲವಾರು ಯೋಜನೆಗಳನ್ನು(schemes) ಜಾರಿಗೆ ತಂದಿದೆ. ಇದರಿಂದ ರಾಜ್ಯದಲ್ಲಿ ಬಡತನವನ್ನು ಹೋಗಲಾಡಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ, ಈ ಯೋಜನೆಯ ಉಪಯೋಗ ಕೆಲವರಿಗೆ ದೊರೆತಿದ್ದರೆ ಇನ್ನು ಕೆಲವರು ಕಾಯುತ್ತಿದ್ದಾರೆ. ಇದರ ಜೊತೆಗೆ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಏಳಿಗೆಗಾಗಿ(For upliftment of minorities) ಸಹಾಯಧನ ನೀಡಲು ಮುಂದಾಗಿದೆ. ಇನ್ನು ಇದಕ್ಕಾಗಿ ರಾಜ್ಯ ಸರ್ಕಾರ ಸಾಂತ್ವನ ಯೋಜನೆಯನ್ನು ಜಾರಿಗೆ ತಂದಿದೆ. ಏನಿದು ಯೋಜನೆ, ಯಾರೆಲ್ಲ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸಾಂತ್ವನ ಯೋಜನೆ(Santwana scheme) ಎಂದರೇನು?

ಪ್ರವಾಹ, ಅಗ್ನಿ ದುರಂತ, ಕೋಮು ಗಲಭೆ ಹಾಗೂ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗುವ ಕುಟುಂಬಗಳಿಗೆ ನೇರವಾಗಲು ‘ಸಾಂತ್ವನ ‘ ಯೋಜನೆಯನ್ನು ಆರಂಭಿಸಲಾಗಿದೆ.
ಇನ್ನು ಈ ಯೋಜನೆಯ ಬಗ್ಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನವಾಗಿ ಈ ಯೋಜನೆಗೆ ಚಾಲನೆ ನೀಡಿದರು. ಪ್ರಕೃತಿ ವಿಕೋಪ ಹಾಗೂ ಕೋಮು ಗಲಭೆಯಲ್ಲಿ ಸಂತ್ರಸ್ತರಾಗಿ ಮನೆ ಹಾಗೂ ಅಂಗಡಿ ಕಳೆದುಕೊಳ್ಳುವ ಕುಟುಂಬ ಗಳಿಗೆ ಐದು ಲಕ್ಷ ರೂ. ವರೆಗೆ ಸಾಲ ನೀಡುವ ಯೋಜನೆ(Loan schrme) ಇದಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಯೋಜನೆಯಲ್ಲಿ ಎಷ್ಟು ಸಾಲ ಪಡೆಯಬಹುದು?

ಐದು ಲಕ್ಷ ರೂ. ಪೈಕಿ 2.5 ಲಕ್ಷ ರೂಪಾಯಿಗಳನ್ನು ಸರ್ಕಾರ ಸಬ್ಸಿಡಿ(subsidy) ಆಗಿ ನೀಡುತ್ತದೆ. ಶೇ.50 ರಷ್ಟು ಅಂದರೆ 2.50 ಲಕ್ಷ ರೂ. ಸಾಲ, ಉಳಿದ 2.50 ಲಕ್ಷ ಸಬ್ಸಿಡಿ ದೊರೆಯಲಿದ್ದು ಸಾಲಕ್ಕೆ ಶೇ.3 ರಷ್ಟು ಬಡ್ಡಿ ವಿಧಿಸಲಾಗುವುದು. ಈ ಮೊತ್ತದಲ್ಲಿ ಸಂತ್ರಸ್ತ ಕುಟುಂಬಗಳು ವ್ಯಾಪಾರ ಅಥವಾ ಇತರೆ ಉದ್ಯೋಗದಲ್ಲಿ ತೊಡಗಬಹುದಾಗಿದೆ.
ಇನ್ನು ಅಲ್ಪಸಂಖ್ಯಾತರ ಸಮುದಾಯ ಕುಟುಂಬಗಳಿಗೆ ಈ ಯೋಜನೆಯಡಿಯಲ್ಲಿ ಸಹಾಯವಾಗಲಿದೆ. ಇದರಿಂದ ತೊಂದರೆಗೆ ಸಿಲುಕುವ ಕುಟುಂಬಗಳಿಗೆ ಸಹಾಯವಾಗಲಿದೆ.

ಇದರಿಂದಾಗಿ ಅಲ್ಪಸಂಖ್ಯಾತರಿಗೆ ಆರ್ಥಿಕವಾಗಿ ಬಹಳ ಅನುಕೂಲವಾಗಲಿದ್ದು. ಅವರು ಸ್ವಂತ ಉದ್ಯೋಗವನ್ನು ಮಾಡಿಕೊಳ್ಳುವಲ್ಲಿ ಸಹಾಯವಾಗಲಿದೆ.ಇನ್ನು ಈ ಯೋಜನೆಗೆ ಆನ್ಲೈನ್(online) ಮೂಲಕ ಅಲ್ಪಸಂಖ್ಯಾತರ ಅಧಿಕೃತ ಜಾಲತಾಣದಲ್ಲಿ(official website) ಸಾಂತ್ವನ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

One thought on “Loan Scheme – ಸರ್ಕಾರಕ್ಕೆ ಮತ್ತೊಂದು ಹೊಸ ಯೋಜನೆ, 5 ಲಕ್ಷ ಸಾಲಕ್ಕೆ , 2.5 ಲಕ್ಷ ಸಬ್ಸಿಡಿ ಪಡೆಯಿರಿ, ಇಲ್ಲಿದೆ ವಿವರ

Leave a Reply

Your email address will not be published. Required fields are marked *

error: Content is protected !!