Samsung Galaxy Z Fold 5 : ಹೊಸ ಫೋಲ್ಡ್ ಮೊಬೈಲ್ ಆ.18ಕ್ಕೆ ಬಿಡುಗಡೆ, ಇಲ್ಲಿದೆ ಕಂಪ್ಲೀಟ್ ಮಾಹಿತಿ

WhatsApp Image 2023 08 17 at 09.16.18

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Samsung Galaxy Z Fold 5 ಜೊತೆಗೆ Z Flip 5, ಆಗಸ್ಟ್ 18 ರಂದು ತನ್ನ ಮೊದಲ ಮಾರಾಟಕ್ಕೆ ಸಿದ್ಧವಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೇ ಈ ಸ್ಮಾರ್ಟ ಫೋನ್ pre – bookings ಶುರುವಾಗಿದೆ. ಬುಕಿಂಗ್ ಮಾಡಿದ ಆಸಕ್ತ ಖರೀದಿದಾರರು Window sale ನಲ್ಲಿ ಖರೀದಿಸಲು ಯೋಚಿಸುತ್ತಿರುವ ಜನರಿಗಿಂತ ಮುಂಚಿತವಾಗಿ ಈ ಫೋನ್ ಪಡೆಯುತ್ತಾರೆ. ನೀವು ಕೂಡ ಈ ಫೋನ್ ಖರೀದಿಸಲು ಇಚ್ಛೆಸುತ್ತಿದ್ದರೆ ಕೂಡಲೇ ಬುಕಿಂಗ್ ಮಾಡಿಕೊಳ್ಳಿ, ಬುಕಿಂಗ್ ಮಾಡುವ ಮುಂಚೆ ಈ ಎರಡು ಸ್ಮಾರ್ಟ್ ಫೋನ್ ಗಳ ವೈಶಿಷ್ಠೆತೆ, ವಿನ್ಯಾಸ ಮತ್ತು ಬೆಲೆಯ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Samsung Galaxy Z Fold 5 and Z Flip 5 smartphone :

ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ 5th Generation ಫೋಲ್ಡಬಲ್ ಸ್ಮಾರ್ಟ್‌ಫೋನ್‌ Galaxy Z Fold 5 ಮತ್ತು Galaxy Z ಫ್ಲಿಪ್ ಅನ್ನು ಜಾಗತಿಕವಾಗಿ ಘೋಷಣೆಮಾಡಿದೆ. ಅದರ ನಂತರ, ಕಂಪನಿಯು ಎರಡೂ ಸ್ಮಾರ್ಟ್‌ಫೋನ್‌ಗಳಿಗೆ ಪೂರ್ವ-ಬುಕಿಂಗ್ ಅನ್ನು ಪ್ರಾರಂಭಿಸಿತು ಮತ್ತು ಕಂಪನಿಯ ಪ್ರಕಾರ, ಹ್ಯಾಂಡ್‌ಸೆಟ್‌ಗಳು ಸುಮಾರು 1 ಲಕ್ಷ ಮುಂಗಡ ಬುಕಿಂಗ್‌ಗಳನ್ನು ಸ್ವೀಕರಿಸಿವೆ. ಪೂರ್ವ-ಬುಕಿಂಗ್ ಮಾಡಿದ ಗ್ರಾಹಕರಿಗೆ ಪ್ರೀ ಡೆಲಿವರಿಯನ್ನು ಘೋಷಿಸಿ, Samsung Galaxy Z Fold 5 ಮತ್ತು Galaxy Z Flip 5 ಮಾರಾಟದ ದಿನಾಂಕವನ್ನು ಆಗಸ್ಟ್ 18 ಎಂದು ದೃಢಪಡಿಸಿದೆ. ಆಗಸ್ಟ್ 18 ರ ದಿನದಿಂದೂ ಆಸಕ್ತ ಖರೀದಿದಾರರು ಈ ಹ್ಯಾಂಡ್‌ಸೆಟ್‌ಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಿಂದ ಖರೀದಿಸಲು ಸಾಧ್ಯವಾಗುತ್ತದೆ. ಇನ್ನು ಈ ಸ್ಮಾರ್ಟ್ ಫೋನ್ ಹ್ಯಾಂಡ್‌ಸೆಟ್‌ಗಳ ಕುರಿತು ಮಾಹಿತಿಯು ಈ ಕೆಳಗಿನಂತಿವೇ.

whatss

Samsung galaxy Z Fold 5 ಮತ್ತು Z Flip 5 ರ ಪ್ರಮುಖ ಫೀಚರ್ಸ್ ಇಲ್ಲಿದೆ :

Samsung galaxy Z Fold 5:

ಡಿಸ್ಪ್ಲೇ (Display):

Samsung Galaxy Z Fold 5 6.2-ಇಂಚಿನ HD+ ಡೈನಾಮಿಕ್ AMOLED 2X ಕವರ್ ಡಿಸ್ಪ್ಲೇಯೊಂದಿಗೆ 7.6-ಇಂಚಿನ QXGA+ ಡೈನಾಮಿಕ್ AMOLED 2X ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಜೊತೆಗೆ 120Hz ಅಡಾಪ್ಟಿವ್ ರಿಫ್ರೆಶ್ ದರವನ್ನು ಹೊಂದಿದೆ.
ಇದು Qualcomm Snapdragon 8 Gen 2 ಮೊಬೈಲ್ ಪ್ರೊಸೆಸರ್‌ನಿಂದ ನಡೆಸಲ್ಪಡುತ್ತಿದೆ.

ಕ್ಯಾಮೆರಾ (Camera):

Samsung Galaxy  Z Fold 5  ಟ್ರಿಪಲ್ ಕ್ಯಾಮೆರಾ ಸೆಟಪ್ ಬೆಂಬಲಿತವಾಗಿದೆ.
50MP ಪ್ರಾಥಮಿಕ ಕ್ಯಾಮೆರಾ,12mp ಅಲ್ಟ್ರಾ-ವೈಡ್ ಸೆಕೆಂಡರಿ ಸೆನ್ಸರ್ ಕ್ಯಾಮರಾ, ಮತ್ತು 10MP 3x ಟೆಲಿಫೋಟೋ ಲೆನ್ಸ್  ಕ್ಯಾಮರಾ ಒಳಗೊಂಡಿದೆ.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 10MP ಸೆನ್ಸರ್ , ಅಂಡರ್-ಡಿಸ್ಪ್ಲೇ ಘಟಕವು 4MP ಸೆನ್ಸರ್ ಹೊಂದಿದೆ.

ಬ್ಯಾಟರಿ (Battery):

ಈ  Samsung Galaxy Z Fold 5  4,400mAh ಬ್ಯಾಟರಿ ಜೊತೆಗೆ 25W ಫಾಸ್ಟ್ ಚಾರ್ಜಿಂಗ್ ಬೆಂಬಲಿತವಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಬೆಲೆ(price) ಮತ್ತು ಸ್ಟೋರೇಜ್ :

Samsung Galaxy Z Fold 5 ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ, 12GB+256GB, 12GB+512GB ಮತ್ತು 12GB+1TB, ಕ್ರಮವಾಗಿ ರೂ 154,999, ರೂ 164,999 ಮತ್ತು ರೂ 184,999.
Galaxy Z Fold 5 ಅನ್ನು cream, Icy ಬ್ಲೂ ಮತ್ತು Phantom Black ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

Samsung galaxy Z Flip 5:

ಡಿಸ್ಪ್ಲೇ (Display):
Samsung Galaxy Z Flip 5 6.7-ಇಂಚಿನ FHD+ ಡೈನಾಮಿಕ್ AMOLED 2X ಡಿಸ್ಪ್ಲೇ ಜೊತೆಗೆ 120Hz ಮತ್ತು 60Hz ರಿಫ್ರೆಶ್ ದರದೊಂದಿಗೆ 3.4-ಇಂಚಿನ ಸೂಪರ್ AMOLED ಕವರ್ ಡಿಸ್ಪ್ಲೇ ಹೊಂದಿದೆ.
ಇದು ಕೂಡ Z Fold 5 ನ ಹಾಗೆ Qualcomm Snapdragon 8 Gen 2 ಮೊಬೈಲ್ ಪ್ರೊಸೆಸರ್‌ನಿಂದ ನಡೆಸಲ್ಪಡುತ್ತಿದೆ.

ಕ್ಯಾಮೆರಾ (Camera):

Samsung Galaxy  Z Flip 5 12MP + 12MP ಡುಯಲ್  ಕ್ಯಾಮೆರಾ ಸೆಟಪ್ ಬೆಂಬಲಿತವಾಗಿದೆ.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 10MP ರೆಸಲ್ಯೂಷನ್ ಹೊಂದಿದೆ.

ಬ್ಯಾಟರಿ (Battery):
ಈ Samsung Galaxy Z Flip 5  3,700mAh ಬ್ಯಾಟರಿಯ ಆಯ್ಕೆದೊಂದಿಗೆ ಲಭ್ಯವಿದೆ.

ಬೆಲೆ ಮತ್ತು ಸ್ಟೋರೇಜ್:

Samsung Galaxy Z Flip 5 8GB + 256GB ಯ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ರೂ 99,999 ಮತ್ತು 8GB + 512GB ಬೆಲೆ ರೂ 109,999 ನಲ್ಲಿ ಬರುತ್ತದೆ.
Galaxy Z Flip 5 ಭಾರತದಲ್ಲಿ ನಾಲ್ಕು ಬಣ್ಣಗಳಲ್ಲಿ ಲಭ್ಯವಿರುತ್ತದೆ: ಕ್ರೀಮ್, ಗ್ರ್ಯಾಫೈಟ್, ಲ್ಯಾವೆಂಡರ್ ಮತ್ತು ಮಿಂಟ್.

tel share transformed

ನೀವೇನಾದರೂ ಈ ಎರಡು ಹೊಚ್ಚಹೊಸ ಫೋನ್ ಗಳನ್ನು ಖರೀದಿಸಬೇಕೆಂದಿದ್ದರೆ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ, ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!