ಮಾಹಿತಿ ಹಕ್ಕು ಕಾಯ್ದೆ (RTI) 2005, ಭಾರತದ ಸಂಸತ್ತು ಜಾರಿಗೆ ತಂದ ಒಂದು ಕಾಯ್ದೆಯಾಗಿದ್ದು, ಇದು ನಾಗರಿಕರಿಗೆ ಸಾರ್ವಜನಿಕ ಪ್ರಾಧಿಕಾರಗಳಿಂದ ಮಾಹಿತಿ ಪಡೆಯುವ ಹಕ್ಕನ್ನು ನೀಡುತ್ತದೆ. ಇದರ ಮುಖ್ಯ ಉದ್ದೇಶಗಳು ಸರ್ಕಾರದ ಕೆಲಸದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವುದು ಹಾಗೂ ಭ್ರಷ್ಟಾಚಾರವನ್ನು ತಡೆಯುವುದು.
ಕಲಂ(ಎಫ್)
“ಮಾಹಿತಿ” ಎಂದರೆ ತತ್ಕಾಲದಲ್ಲಿ ಜಾರಿಗಲ್ಲಿರುವ ಯಾವುದೇ ಇತರೆ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರದಿಂದ ಪಡೆಯಬಹುದಾದ ದಾಖಲೆಗಳು, ದಸ್ತಾವೇಜುಗಳು, ಮೆಮೋಗಳು, ಇ-ಮೇಲ್‌ಗಳ, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಹೇಳಿಕೆಗಳು, ಸುತ್ತೋಲೆಗಳು, ಆದೇಶಗಳು, ಲಾರ ಪುಸ್ತಕಗಳು, ಕರಾರುಗಳು, ವರದಿಗಳು, ಕಾಗದ ಪತ್ರಗಳು, ನಮೂನೆಗಳು, ಮಾದರಿಗಳು, ಯಾವುದೇ ವಿದ್ಯುನ್ಮಾನ ರೂಪದಲ್ಲಿ ಹೊಂದಿರುವ ದತ್ತಾಂಶ ಮತ್ತು ಯಾವುದೇ ಖಾಸಗಿ ನಿಕಾಯಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡಂತೆ ಯಾವುದೇ ರೂಪದಲ್ಲಿರುವ ಯಾವುದೇ ವಿಷಯ ಸಾಮಾಗ್ರಿ.
ಕಲಂ(ಹೆಚ್)
ಸಾರ್ವಜನಿಕ ಪ್ರಾಧಿಕಾರ ಎಂದರೆ,
ಅ) ಸಂವಿಧಾನ ಮೂಲಕ ಅಥವಾ ಅದರ ಅಡಿಯಲ್ಲಿ
ಆ) ಸಂಸತ್ತಿನಿಂದ ಮಾಡಲಾದ ಯಾವುದೇ ಇತರ ಕಾನೂನಿನ ಮೂಲಕ
ಇ) ರಾಜ್ಯ ವಿಧಾನ ಮಂಡಲದಿಂದ ಮಾಡಲಾದ ಯಾವುದೇ ಇತರ ಕಾನೂನಿನ ಮೂಲಕ ಸ್ಥಾಪಿತವಾದ ಅಥವಾ ರಚಿತವಾದ ಯಾವುದೇ ಪ್ರಧಾಕಾರ ಅಥವಾ ನಿಕಾಯ ಅಥವಾ ಸ್ವಯಂ ಆಡಳಿತ ಸಂಸ್ಥೆ ಮತ್ತು ಇದು
1) ಸಮುಚಿತ ಸರ್ಕಾರದ ಒಡೆತನಕ್ಕೆ, ನಿಯಂತ್ರಣಕ್ಕೆ ಒಳಪಟ್ಟ ಅಥವಾ ಸರ್ಕಾರ ಒದಗಿಸಿದ ನಿಧಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಗಣನೀಯ ಪ್ರಮಾಣದ ಹಣಕಾಸು ನೆರವು ಪಡೆದ ಯಾವುದೇ ನಕಾಯವನ್ನು
2) ಸಮುಚಿತ ಸರ್ಕಾರ ಒದಗಿಸಿದ ನಿಧಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಗಣನೀಯ ಪ್ರಮಾಣದ ಹಣಕಾಸು ನೆರವು ಪಡೆದ ಸರ್ಕಾರೇತರ ಸಂಸ್ಥೆಯನ್ನು ಒಳಗೊಳ್ಳುತ್ತದೆ .
ಕಲಂ4(1)(ಎ)
ಕಡತಗಳ ಕ್ರಮಬದ್ದ ಸೂಚಿಪಟ್ಟಿಯನ್ನು ಸಿದ್ಧಪಡಿಸುವುದು ಹಾಗೂ ನಿರ್ವಹಣೆ – ಸದರಿ |ಕಾರ್ಯವನ್ನು 12-10-2005 ರೊಳಗಾಗಿ ಪೂರ್ಣಗೊಳಿಸಿರಬೇಕು.
ಕಲಂ4(1)(ಬಿ)
ಘೋಷಿತ ಪಟ್ಟಿಯ ತಯಾರಿಕೆ- ಸದರಿ 17 ವಿಷಯಗಳನ್ನೊಗೊಂಡಂತೆ ಸ್ವಯಂ ಘೋ ಕಾರ್ಯವನ್ನು 12-10-2005 ರೊಳಗಾಗಿ ಪೂರ್ಣಗೊಳಿಸಿರಬೇಕು.
ಕಲಂ005(1)ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪದನಾಮೀಕರಿಸುವುದು.
ಕಲಂ 5005(2) : ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪದನಾಮೀಕರಿಸುವುದು.
ಕಲಂ5(3) : ಮಾಹಿತಿ ಕೋರುವ ವ್ಯಕ್ತಿಗಳಿಂದ ಬರುವ ಮನವಿಗಳ ಬಗ್ಗೆ ಮಾಹಿತಿ ಕೋರುವ ವ್ಯಕ್ತಿಗಳಿಗೆ ಸೂಕ್ತ ನೆರವು ನೀಡತಕ್ಕದ್ದು.
ಕಲಂ 5(4) : ಸಾ.ಮಾ, ಅ.ಯು ತನ್ನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಅವಶ್ಯಕವೆಂದು ಪರಿಗಣಿಸುವಂತಹ ಯಾರೇ ಇತರ ಅಧಿಕಾರಿಗಳು ನೆರವು ಪಡೆಯುವುದು.
ಕಲಂ 005(5) : ಸಾ.ಮಾ.ಅ.ಗೆ ನೆರವು ನೀಡುವ ಅಧಿಕಾರಿಯನ್ನು ಸಂದರ್ಭನುಸಾರ ಸಾ.ಮಾ.ಅ, ಎಂದು ಪರಿಗಣಿಸುವುದು.
006(1) ಪ್ರಾರಂಭಿಕ ಶುಲ್ಕ ರೂ 10/- ಗಳನ್ನು ಪಾವತಿಸಿ, ಮಾಹಿತಿ ಕೋರಿ ಅರ್ಜಿ ಸಲ್ಲಿಸುವುದು.
ಕಲಂ6(2) ಮಾಹಿತಿಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರನನ್ನು ವೈಯುಕ್ತಿಕ ವಿವರಗಳನ್ನು/ಕಾರಣ ನೀಡುವಂತೆ ಅಗತ್ಯಪಡಿಸತಕ್ಕದ್ದಲ್ಲ.
006(3) ಸಾರ್ವಜನಿಕ ಮಾಹಿತಿ ಅಧಿಕಾರಿಯ ಅರ್ಜಿದಾರರು ಕೋರಿಸುವ ಮಾಹಿತಿ ತನ್ನಲ್ಲಿ ಲಭ್ಯವಿಲ್ಲದಿದ್ದಲ್ಲಿ 5 ದಿನಗಳೊಳಗಾಗಿ ಅರ್ಜಿದಾರರ ಮಾಹಿತಿ ಕೋರಿದೆ ಅರ್ಜಿಯನ್ನು ಅಥವಾ ಸಮುಚಿತವಾದ ಅದರ ಭಾಗವನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರ್ಗಾಯಿಸಿ,
ವರ್ಗಾವಣೆಯನ್ನು ಕೊಡಲೆ ಅರ್ಜಿದಾರರಿಗೆ ತಿಳಿಸತಕ್ಕದ್ದು.
30 ದಿನಗಳೊಳಗಾಗಿ ನಿಗದಿಪಡಿಸಬಹುದಾದಂತಹ ಶುಲ್ಕವನ್ನು ಸಂದಾಯ ಮಾಡಿಕ ಮೇಲೆ ಮಾಹಿತಿ ಒದಗಿಸತಕ್ಕದ್ದು. ಮಾಹಿತಿಯು ಒಬ್ಬ ವ್ಯಕ್ತಿಯ ಜೀವ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಲ್ಲಿ ಆ ಮಾಹಿತಿಯ ಕೋರಿಕೆಯನ್ನು ಸ್ವೀಕರಿಸಿದ ನಲವತ್ತೆಂಟು ಗಂಟೆಗಳೊಳಗಾಗಿ ಒದಗಿಸತಕ್ಕದ್ದು.
ಕಲಂ 007(2) ನಿಗದಿಪಡಿಸಿದ ಅವಧಿಯೊಳಗೆ ತೀರ್ಮಾನ ಕೈಗೊಳ್ಳಲು ಸಾ.ಮಾ.ಅ. ವಿಫಲನಾದಲ್ಲಿ ಸಾ.ಮಾ.ಅ., ಕೋರಿದೆಯನ್ನು ತಿರಸ್ಕರಿಸಿದ್ದಾನೆಂದು ಭಾವಿಸತಕ್ಕದ್ದು.
ಕಲಂ7(3) ಮಾಹಿತಿ ಶುಲ್ಕವನ್ನು ಲೆಕ್ಕಾಚಾರ ಮಾಡಿ ಲೆಕ್ಕಾಚಾರದೊಂದಿಗೆ ಅರ್ಜಿದಾರರಿಗೆ 30 ದಿನಗಳೊಳಗಾಗಿ ತಿಳಿಸುವುದು. ಮಾಹಿತಿ ಶುಲ್ಕ ಪ್ರತಿ ಪುಟ ಎ4 ಅಳತೆಗೆ ರೂ.2/-№ 4(1)(2) 4(1) (2) 1 0.1/-
007(4) ಅಂಗವಿಕಲರಿಗೆ ಮಾಹಿತಿ ಒದಗಿಸಲು ಸೂಕ್ತವಾದ ನೆರವು ನೀಡುವುದು.
6007(5) ತಹಸೀಲ್ದಾರರಿಂದ ಪಡೆದ ಬಡತನ ರೇಖೆಗಿಂತ ಕೆಳಗಿಸುವ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿ 100 ಪುಟಗಳ ವರೆಗೆ ಶುಲ್ಕ ವಿಧಿಸತಕ್ಕದ್ದಲ್ಲ.
6007(6)ನಿಗಧಿತ 30 ದಿನಗಳೊಳಗಾಗಿ ಮಾಹಿತಿ ಪೂರೈಸಲು ವಿಫಲನಾದಲ್ಲಿ, ತದನಂತರ ಪೂರ್ಣ ಮಾಹಿತಿಯನ್ನು ಉಚಿತವಾಗಿ ಪೂರೈಸತಕ್ಕದ್ದು.
ಕಲಂ7(7)11ನೇ ಪ್ರಕರಣದ ಅಡಿಯಲ್ಲಿ ಮೂರನೇ ವ್ಯಕ್ತಿಯು ಸಲ್ಲಿಸಿದ ಮನವಿಯನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದು.
007(8)ಅರ್ಜಿಯನ್ನು ನಿರಾಕರಿಸಿದಲ್ಲಿ ಅರ್ಜಿದಾರರಿಗೆ ನಿರಾಕರಣೆಗೆ ಕಾರಣ, ಮೇಲ್ಮನವಿಯನ್ನು ಸಲ್ಲಿಸಲು ಇರುವ ಅವಧಿ,ಅಪೀಲು ಪ್ರಾಧಿಕಾರದ ವಿವರಗಳನ್ನು ತಿಳಿಸತಕ್ಕದ್ದು.
507(9)ಕೋರಿಸುವ ಮಾಹಿತಿ ಅಧಿಕವಾಗಿದ್ದಲ್ಲಿ ಕಡತ ತಪಾಸಣೆಗೆ ಸಮಯ ಹಾಗೂ ದಿನಾಂಕ ನಿಗಧಿಪಡಿಸಿ, ಮೊದಲ 1 ಗಂಟೆ ಉಚಿತ ಹಾಗೂ ನಂತರದ ಪ್ರತಿ ಅರ್ಧ ಗಂಟೆಗೆ ರೂ.10/-ಗಳ ಶುಲ್ಕ ವಿಧಿಸಿ.ಕಡತ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು.





ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




