ರಿಯಲ್‌ಮಿ ಗ್ರಾಹಕರಿಗೆ ನೀಡಿದೆ ಗುಡ್ ನ್ಯೂಸ್, ವಿಶೇಷ ಆಫರ್ಸ್ ಮತ್ತು ಕ್ಯಾಶ್ ಬ್ಯಾಕ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರಿಯಲ್‌ಮಿ 13+ 5G(Realme 13+)!
ಜಗತ್ತು ಬದಲಾದಂತೆ ಹೊಸ ತಂತ್ರಜ್ಞಾನಗಳು (Technology), ಆವಿಷ್ಕಾರಗಳು ಹೆಚ್ಚುತ್ತಾ ಇವೆ. ದಿನೇ ದಿನೇ ನಾವು ಬದಲಾವಣೆಯನ್ನು ಹೊಂಡುತ್ತಿದ್ದೇವೆ. ಅನೇಕ ರೀತಿಯ ಹೊಸ ತಂತ್ರಜ್ಞಾನ ಕಂಡು ಹಿಡಿದು ಅದನ್ನು ಇಂದು ಪ್ರಪಂಚಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಇನ್ನು ಸಾಫ್ಟ್ ವೇರ್, ಡಿಜಿಟಲ್, ಇಂಟರ್ನೆಟ್, ಆರ್ಟಿಫಿಷಿಯಲ್ ಇಂಟೆಲಿಜೆಂನ್ಸ್ ಇವೆಲ್ಲಾ ಹೊಸ ಬದಲಾವಣೆಯನ್ನು ತಂದಿದೆ. ಹಾಗೆ ನೋಡುವುದಾದರೆ ಇಂದು ಎಲ್ಲರೂ ಸ್ಮಾರ್ಟ್ ಫೋನ್ ಗಳನ್ನು (smart phones) ಹೊಂದಿದ್ದರೆ. ಇಂದು ಅನೇಕ ತಂತ್ರಜ್ಞಾನ ಮತ್ತು ವಿವಿಧ ರೀತಿಯ ವೈಶಿಷ್ಟ್ಯಗಳನ್ನು (Features) ಒಳಗೊಂಡ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ನಾವು ಇಂದು ಎಲ್ಲಾ ಕೆಲಸಗಳನ್ನು ಅರೆ ಕ್ಷಣದಲ್ಲಿ ನಮ್ಮ ಅಂಗೈಯಲ್ಲಿ ಮಾಡಿ ಮುಗಿಸುತ್ತೇವೆ. ಅದಕ್ಕೆ ಕಾರಣ ಸ್ಮಾರ್ಟ್ ಫೋನ್ ಹಾಗೆಯೇ ಇಂದು ಎಲ್ಲರೂ ವಿವಿಧ ವೈಶಿಷ್ಟ್ಯಗಳುಳ್ಳ ಸ್ಮಾರ್ಟ್ ಫೋನ್ ಕೊಂಡುಕೊಳ್ಳುತ್ತಿದ್ದಾರೆ. ಹೆಚ್ಚು ಜನಪ್ರಿಯ ಹೊಂದಿದ ಸ್ಮಾರ್ಟ್ ಫೋನ್ ಕಂಪನಿಯಾದ ರಿಯಲ್‌ಮಿಯು ಇತ್ತೀಚೆಗೆ ರಿಯಲ್‌ಮಿ 13+ 5G (Realme 13+ 5G) ಫೋನನ್ನು ಬಿಡುಗಡೆ ಮಾಡಿದೆ. ಇದು ತನ್ನ ರಿಯಲ್‌ಮಿ 13 ಸರಣಿಯ ಇತ್ತೀಚಿನ ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್ ಆಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರಿಯಲ್‌ಮಿ 13+ 5G ಸ್ಮಾರ್ಟ್ ಫೋನ್ ಸೆಪ್ಟೆಂಬರ್ 6 ರಿಂದ ಮೊದಲ ಮಾರಾಟ ಪ್ರಾರಂಭ :
ರಿಯಲ್‌ಮಿಯು ಬಿಡುಗಡೆ ಮಾಡುವ ಈ ಸ್ಮಾರ್ಟ್ ಫೋನ್ ಸೆಪ್ಟೆಂಬರ್ 6 (September 6th) ರಿಂದ ಮೊದಲ ಮಾರಾಟ ಪ್ರಾರಂಭಿಸಲಿದೆ. ಈಗಾಗಲೇ ಮುಂಗಡ ಬುಕಿಂಗ್ ಶುರು ಆಗಿದ್ದು, ಕಂಪನಿಯು 3,000 ರೂ. ರಿಯಾಯಿತಿ ಮತ್ತು 1,500 ಕ್ಯಾಶ್‌ಬ್ಯಾಕ್ (Cash back) ಘೋಷಿಸಿದೆ. ಈ ಸ್ಮಾರ್ಟ್ ಫೋನಿನ ಬೆಲೆ ಮತ್ತು ಲಭ್ಯತೆ ಬಗ್ಗೆ ಈ ಕೆಳಗೆ ತಿಳಿದುಕೊಳ್ಳೋಣ.
ರಿಯಲ್‌ಮಿ 13+ 5G ಸ್ಮಾರ್ಟ್ ಫೋನ್ ಗ್ರಾಹಕರಿಗೆ ಸ್ಟೋರೇಜ್ ಗೆ ತಕ್ಕಂತೆ ವಿವಿಧ ಬೆಲೆಗಳಲ್ಲಿ ಲಭ್ಯವಿದೆ :
8GB + 128GB ಸ್ಟೋರೇಜ್ ಬೆಲೆ = 22,999 ರೂ.
8GB + 256GB ಸ್ಟೋರೇಜ್ ಬೆಲೆ = 24,999 ರೂ.
2GB + 256GB ಸ್ಟೋರೇಜ್ ಬೆಲೆ = 26,999 ರೂ.
ಗ್ರಾಹಕರಿಗೆ ನಾಲ್ಕು ಬಣ್ಣಗಳ (colors) ಆಯ್ಕೆಯಲ್ಲಿ ಲಭ್ಯವಿದೆ ಈ ಸ್ಮಾರ್ಟ್ ಫೋನ್ :
ಕಂಪನಿಯು ರಿಯಲ್‌ಮಿ 13+ 5G ಫೋನನ್ನು ವಿಕ್ಟರಿ ಗೋಲ್ಡ್, ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಬಣ್ಣಗಳಲ್ಲಿ ಪರಿಚಯಿಸಿದೆ.
ಮೊದಲ ಮಾರಾಟದ ಭಾಗವಾಗಿ ಕಂಪನಿಯು ಕೆಲವು ಆಫರ್‌ಗಳನ್ನು ಘೋಷಿಸಿದೆ :
ಈ ಫೋನ್ ಖರೀದಿ ಮೇಲೆ 1,500 ಕ್ಯಾಶ್‌ಬ್ಯಾಕ್ ಮತ್ತು 3,000 ರೂ.ಗಳ ವೆರೆಗೆ ಸೀಮಿತ ಪ್ರೀ ಬುಕಿಂಗ್ ಆಫರ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್ (realme.com), ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮುಂಗಡ ಬುಕಿಂಗ್ ಕೂಡ ಮಾಡಬಹುದು.
ರಿಯಲ್‌ಮಿ 13+ 5G ಸ್ಮಾರ್ಟ್ ಫೋನ್ ನ ವೈಶಿಷ್ಟ್ಯಗಳು (features) :
ಡಿಸ್ಪ್ಲೇ (Display) :
ರಿಯಲ್‌ಮಿ 13+ 5G ಫೋನ್ 6.67 ಇಂಚಿನ ಪೂರ್ಣ HD+ AMOLED ಡಿಸ್ಲ್ಪೇಯನ್ನು ಹೊಂದಿದೆ. ಇದು 2400 × 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲವನ್ನು ಹೊಂದಿದೆ.
ಪ್ರೊಸೆಸರ್ (Processor) :
ಈ ಸ್ಮಾರ್ಟ್ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಅನ್ನು ಹೊಂದಿದ್ದು, ಈ ಫೋನ್ ರಿಯಲ್‌ಮಿ UI 5 ಜೊತೆಗೆ Android 14 ನಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ (Camera) :
ರಿಯಲ್‌ಮಿ 13+ 5G ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು Sony LYT-600 ಸಂವೇದಕ ಹೊಂದಿದೆ. ಜೊತೆಗೆ, LED ಫ್ಲಾಶ್, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಇದೆ. ಸೆಲ್ಪಿ ಮತ್ತು ವಿಡಿಯೋ ಕೆರೆಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಇದು ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ ಹೊಂದಿದೆ.
ಬ್ಯಾಟರಿ ಪ್ಯಾಕ್ ಅಪ್ (Battery Pack Up) :
ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸಪೋರ್ಟ್ ಇದರಲ್ಲಿದೆ.
ರಿಯಲ್‌ಮಿ 13+ 5G ಫೋನ್ ನ ಇತರ ಫಿಚರ್ಸ್ ಗಳು (Features) :
ರಿಯಲ್‌ಮಿ 13+ 5G ಫೋನ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಹೊಂದಿದೆ. 161.7×74.7×7.6 ಎಂಎಂ ದಪ್ಪ ಮತ್ತು 185 ಗ್ರಾಂ ತೂಕ ಹೊಂದಿದೆ. ಈ ಫೋನ್ 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.4, GPS, ಗೆಲಿಲಿಯೊ, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಇನ್ನಿತರ ಸೌಲಭ್ಯವನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




