ಇಂದಿನ ವೇಗದ ಜೀವನಶೈಲಿಯಲ್ಲಿ ಮನುಷ್ಯರು ದೈಹಿಕವಾಗಿಯೂ, ಮಾನಸಿಕವಾಗಿಯೂ ನಾನಾ ರೀತಿಯ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ತಂತ್ರಜ್ಞಾನ ಪ್ರಗತಿ, ಆರ್ಥಿಕ ಸ್ಪರ್ಧೆ, ಕೆಲಸದ ಒತ್ತಡ, ಕುಟುಂಬ ಮತ್ತು ಸಾಮಾಜಿಕ ಜವಾಬ್ದಾರಿಗಳ ನಡುವೆ ಸಿಲುಕಿರುವ ಜೀವನ ಮನುಷ್ಯನ ಆರೋಗ್ಯವನ್ನು ಹಾಳು ಮಾಡುತ್ತಿದೆ. ಸಾಮಾನ್ಯವಾಗಿ ಖಾಯಿಲೆ ಬಂದಾಗ ಮಾತ್ರ ಆರೋಗ್ಯದ ಮಹತ್ವವನ್ನು ಅರಿಯುವ ಪ್ರವೃತ್ತಿ ನಮ್ಮಲ್ಲಿದೆ. ಆದರೆ, ವೈದ್ಯಕೀಯ ಕ್ಷೇತ್ರದ ಪ್ರಮುಖ ತಜ್ಞರು ಹೇಳುವಂತೆ, ಆರೋಗ್ಯವನ್ನು ಕಾಪಾಡಿಕೊಳ್ಳಲು ಕೇವಲ ಔಷಧಿ ಮಾತ್ರ ಸಾಕಾಗುವುದಿಲ್ಲ, ಜೀವನದ ತಾಳ್ಮೆ, ತೃಪ್ತಿ ಮತ್ತು ಸಂತೋಷವೇ ನಿಜವಾದ ಔಷಧಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ವಿಷಯವನ್ನು ಪ್ರಸಿದ್ಧ ಹೃದಯ ತಜ್ಞರಾದ ಡಾ. ಸಿ.ಎನ್. ಮಂಜುನಾಥ್(Dr. C.N. Manjunath) ಅವರು ಸಂವಾದ ಕಾರ್ಯಕ್ರಮದಲ್ಲಿ ಸೊಗಸಾಗಿ ವಿವರಿಸಿದ್ದಾರೆ.“ನಮ್ಮ ಬದುಕಿನ ಎಲ್ಲಾ ಖಾಯಿಲೆಗಳಿಗೆ ಒಂದು ಸಾಮಾನ್ಯ ಔಷಧಿ ಇದೆ. ಅದು ಸಂತೋಷ.”ಎಂದು ಹೇಳಿದ್ದಾರೆ.
ಡಾ. ಮಂಜುನಾಥ್ ಅವರ ಅಭಿಪ್ರಾಯದಲ್ಲಿ, ಇಂದಿನ ಕಾಲದಲ್ಲಿ ಪರಿಸ್ಥಿತಿ ತಲೆಕೆಳಗಾಗಿದೆ. ಹಿಂದೆ ವಯಸ್ಸಾದ ತಂದೆ-ತಾಯಿಯರನ್ನು ಮಕ್ಕಳು ಹೃದಯ ಸಂಬಂಧಿ ಅಥವಾ ಇತರ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪೋಷಕರೇ ತಮ್ಮ ಯುವ ಮಕ್ಕಳನ್ನು ಹೃದಯ ಸಮಸ್ಯೆ, ಮಧುಮೇಹ, ಒತ್ತಡ ಸಂಬಂಧಿ ಖಾಯಿಲೆಗಳಿಗಾಗಿ ಆಸ್ಪತ್ರೆಗೆ ಕರೆದುಕೊಂಡು ಬರಬೇಕಾಗುತ್ತಿದೆ. ಇದು ಯುವ ಪೀಳಿಗೆಯ ಜೀವನದಲ್ಲಿ ಅತಿಯಾದ ಒತ್ತಡ, ಆತುರ ಮತ್ತು ಅತೃಪ್ತಿಯ ಪರಿಣಾಮ.
ಸಾಮಾನ್ಯವಾಗಿ ನಾವು ಖಾಯಿಲೆ ಬಂದಾಗ ಮಾತ್ರ ಔಷಧಿ ತೆಗೆದುಕೊಳ್ಳುತ್ತೇವೆ. ಆದರೆ ಆ ಔಷಧಿಗಳು ತಾತ್ಕಾಲಿಕ ಪರಿಹಾರವನ್ನು ನೀಡುತ್ತವೆ, ನಿಜವಾದ ಸಂತೋಷವನ್ನು ಕೊಡಲಾರವು. ನಮ್ಮ ದೈನಂದಿನ ಬದುಕಿನಲ್ಲಿ ತೃಪ್ತಿ, ನೆಮ್ಮದಿ ಮತ್ತು ಸಂತೋಷವಿಲ್ಲದೆ ಇದ್ದರೆ ಯಾವುದೇ ಔಷಧಿ ಶಾಶ್ವತ ಪರಿಹಾರ ನೀಡುವುದಿಲ್ಲ. ಇಂದಿನ ಯುವಕರು “ಬೇಗನೆ ಮೇಲೇರಬೇಕು, ಹೆಚ್ಚುಗಳಿಸಬೇಕು, ಹೆಚ್ಚು ಸಾಧಿಸಬೇಕು” ಎಂಬ ಓಟದಲ್ಲಿ ನೆಮ್ಮದಿ ಮತ್ತು ಸಂತೋಷವನ್ನು ಮರೆತುಬಿಡುತ್ತಾರೆ. ಈ ನಿರಂತರ ಧಾವಂತವೇ ದೇಹ ಮತ್ತು ಮನಸ್ಸಿಗೆ ಅನೇಕ ಸಮಸ್ಯೆಗಳನ್ನುಂಟುಮಾಡುತ್ತದೆ.
ಒಟ್ಟಾರೆಯಾಗಿ, ಸಂತೋಷವೇ ಜೀವನದ ಅತೀ ದೊಡ್ಡ ಔಷಧಿ ಎಂದು ಡಾ. ಮಂಜುನಾಥ್ ಅವರು ಹೇಳಿದ್ದಾರೆ. ಜೀವನದ ಚಿಕ್ಕ-ಚಿಕ್ಕ ವಿಷಯಗಳಲ್ಲಿ ತೃಪ್ತಿ, ಹೃದಯದಲ್ಲಿ ಕೃತಜ್ಞತೆ ಮತ್ತು ಮನಸ್ಸಿನಲ್ಲಿ ಶಾಂತಿ ಬೆಳೆಸಿಕೊಂಡರೆ, ದೇಹ-ಮನಸ್ಸು ಆರೋಗ್ಯವಾಗಿರುತ್ತದೆ. ಸಂತೋಷವೇ ಮನುಷ್ಯನ ಎಲ್ಲಾ ಖಾಯಿಲೆಗಳಿಗೆ ನಿಜವಾದ ಔಷಧಿ. ನಾವೆಲ್ಲರೂ ಜೀವನದಲ್ಲಿ ಸಂತೋಷವನ್ನು ಆದ್ಯತೆಯಾಗಿ ಅಳವಡಿಸಿಕೊಂಡರೆ, ಔಷಧಿಗಳ ಅವಶ್ಯಕತೆ ತಾನಾಗಿಯೇ ಕಡಿಮೆಯಾಗುತ್ತದೆ ಮತ್ತು ಜೀವನ ಇನ್ನಷ್ಟು ಸುಂದರವಾಗುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.