Ration card update – ರೇಷನ್ ಕಾರ್ಡ್‌ದಾರರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ : ಕೇಂದ್ರದ ಮಹತ್ವದ ಘೋಷಣೆ

ration card new rule

ಎಲ್ಲರಿಗೂ ನಮಸ್ಕಾರ. ಇವತ್ತಿನ ನಮ್ಮ ವರದಿಯಲ್ಲಿ, ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ರೂಲ್ಸ್ ಜಾರಿಯ( Ration card New Rules) ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ರೇಷನ್ ಕಾರ್ಡ್ ಹೊಂದಿದವರಿಗೆ ಹೊಸ ನಿಯಮ ಜಾರಿ:

ನಮಗೆಲ್ಲಾ ತಿಳಿದಿರುವ ಹಾಗೆ ನಮ್ಮ ರಾಜ್ಯದ ನ್ಯಾಯ ಬೆಲೆ ಅಂಗಡಿಗಳಲ್ಲಿ ಬಿಪಿಎಲ್ ರೇಷನ್ ಕಾರ್ಡ್(BPL Ration card) ಹೊಂದಿರುವರಿಗೆ ಈ ಮೊದಲು 5kg ಆಕ್ಕಿ ಅನ್ನು ನೀಡುತ್ತಿದ್ದರು, ಆದರೆ ಇದೀಗ ಹೊಸ ಕಾಂಗ್ರೆಸ್ ಸರ್ಕಾರವು ಬಂದ ನಂತರ ಅವರ ಅನ್ನಭಾಗ್ಯದ ಯೋಜನೆಯಡಿ 5kg ಅಕ್ಕಿಯ ಬದಲು 5kg ಅಕ್ಕಿಯ ಹಣವನ್ನು ಹಾಕುತ್ತಿರುವರು ಎಂದು ನಮಗೆಲ್ಲ ತಿಳಿದೇ ಇದೆ. ಆದರೆ ಇನ್ನ ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಪಡೆಯುವ ಪಡಿತರದಾರರಿಗೆ ಧಾನ್ಯಗಳ ಜತೆಗೆ ಮುದ್ರಿತ ರಸೀದಿ ನೀಡುವುದು ಕಡ್ಡಾಯವಾಗಿದೆ(Printed Receipt Compulsory In Ration Shop ). ಇದರ ಕುರಿತು ಕೇಂದ್ರ ಸರಕಾರ ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ.

whatss

ಹೊಸ ನಿಯಮದ ಉದ್ದೇಶ :

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ’ (PMGKAY) ಅಡಿ ಅಕ್ಕಿ ಕೊಡುತ್ತಿರುವುದು ಕೇಂದ್ರವೇ ಆಗಿರುವುದರಿಂದ ಈ ಯೋಜನೆ ಬಗ್ಗೆ ಜನರಿಗೆ ತಿಳಿಸುವುದು ಈ ಮಾರ್ಗಸೂಚಿಯ ಹಿಂದಿನ ಉದ್ದೇಶವಾಗಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೊರೊನಾ ಸಂದರ್ಭದಲ್ಲಿ ಬಡವರಿಗೆ ಆಹಾರ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯನ್ನು (Pradan Mantri Gariba Kalyan Anna Yojana) (PMGKAY) ಜಾರಿಗೆ ತಂದಿತ್ತು. ಈ ಯೋಜನೆಯನ್ನು ಸದ್ಯ 2024 ರ ಜೂನ್‌ ವರೆಗೆ ವಿಸ್ತರಣೆಯನ್ನು ಮಾಡಿದ್ದು, ಈ ಮೂಲಕ ಬಡವರಿಗೆ ಅಕ್ಕಿಯನ್ನು ವಿತರಣೆ ಮಾಡುತ್ತಿದೆ.

ಆದರೆ ಕೇಂದ್ರ ಸರಕಾರವು ಬಿಪಿಎಲ್‌ (BPL)ಕಾರ್ಡ್‌ದಾರರಿಗೆ ಉಚಿತವಾಗಿ ವಿತರಿಸುತ್ತಿರುವ ಅಕ್ಕಿಯನ್ನು ರಾಜ್ಯ ಸರಕಾರ ತನ್ನದು ಎಂದು ಬಿಂಬಿಸಿಕೊಳ್ಳುತ್ತಿದೆ. ಆದರಿಂದ, ಕೇಂದ್ರ ಸರಕಾರ ಈ ರೀತಿ ರಸೀದಿ ನೀಡುವ ನಿಯಮ ತಂದಿದೆ.
ಈ ಆದೇಶದ ಹಿನ್ನಲೆಯಲ್ಲಿ ರಾಜ್ಯದಲ್ಲಿರುವ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಆಹಾರಧಾನ್ಯಕ್ಕೆ ರಸೀದಿ ನೀಡಬೇಕಾಗುತ್ತದೆ.

ನೀಡಲಾದ ರಶೀದಿಯಲ್ಲಿ ಏನೆಲ್ಲ ಇರುತ್ತದೆ :

ಮುದ್ರಿತ ರಸೀದಿಯಲ್ಲಿ (Printed Recipt) ಏನೆಲ್ಲಾ ಇರುತ್ತದೆ ಎಂದು ಇನ್ನೂ ತಿಳಿದುಕೊಳ್ಳುವುದಾದರೆ ,
ಮುದ್ರಿತ ರಸೀದಿಯಲ್ಲಿ ಯೋಜನೆಯ ಹೆಸರು, ಜಿಲ್ಲೆ, ತಾಲೂಕು ಹೆಸರು, ಫಲಾನುಭವಿಯ ಹೆಸರು, ಒಟ್ಟು ಸದಸ್ಯರ ಸಂಖ್ಯೆ, ಹಂಚಿಕೆ ದಿನಾಂಕ, ಆಹಾರ ಧಾನ್ಯದ ವಿವರ, ಇದಕ್ಕೆ ತಗಲುವ ವೆಚ್ಚ, ಕೇಂದ್ರ ಮತ್ತು ರಾಜ್ಯ ಸರಕಾರದ ಸಹಾಯಧನ ಎಷ್ಟು, ಪಾವತಿಸಬೇಕಾದ ಮೊತ್ತ ಇತ್ಯಾದಿ ಮಾಹಿತಿಗಳು ಎಲ್ಲಾ ಒಳಗೊಂಡಿರುತ್ತದೆ.

ಈ ಹೊಸ ನಿಯಮವನ್ನು ಎಲ್ಲರೂ ತಿಳಿದುಕೊಳ್ಳುವುದು ಮುಖ್ಯವಾಗಿದೆ ಆದ್ದರಿಂದ, ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನೂ ಓದಿ: Gruhalakshmi – ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಕಾಲಾವಕಾಶ – ಯಾವ ಜಿಲ್ಲೆಗೆ ಯಾವ ದಿನ ಇಲ್ಲಿದೆ ಕಂಪ್ಲೀಟ್ ಮಾಹಿತಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

One thought on “Ration card update – ರೇಷನ್ ಕಾರ್ಡ್‌ದಾರರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ : ಕೇಂದ್ರದ ಮಹತ್ವದ ಘೋಷಣೆ

  1. ಪಡಿತರ ಚೀಟಿಗೆ ಜಾತಿ& ಆದಾಯ ನಿರ್ಧಾರ ಕಡ್ಡಾಯ ಮಾಡಬಾರದು ಈ ಮೊದಲು ಈ ಷರತ್ತು ವಿನಾಯಿತಿ ನೀಡಿ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಹನ್ನೊಂದನೇ ಉಳ್ಳುರು ಗ್ರಾಮದ upralli kapinamane ಶ್ರೀಮತಿ ಗೀತಾ ದೇವಿ ಪೂಜಾರಿ ಅವರ ಕುಟುಂಬ ಅವಲಂಬಿತರು೧ ತಿಂಗಳು ೧೫ದಿನದಿಂದ ಬೈಂದೂರು ತಾಲೂಕು ಕಚೇರಿಗೆ ತಿರುಗುತ್ತಿದ್ದಾರೆ.(ಜಾತಿ ದಾಖಲೆ ನೀಡಿದರೆ ೧೯೮೦-೧೯೮೭ ರ ಶೈಕ್ಷಣಿಕ ದಾಖಲೆ ನೀಡಿ. ಈ ಸಮಸ್ಯೆ ಬಗೆಹರಿಸಿ

Leave a Reply

Your email address will not be published. Required fields are marked *

error: Content is protected !!