Ration card – ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ವರ್ ಸಮಸ್ಯೆ, ಇಂದೇ ಕೊನೆಯ ದಿನ.. ನಿಮ್ಮ ಅರ್ಜಿ ಸ್ಟೇಟಸ್ ಹೀಗೆ ಚೆಕ್ ಮಾಡಿ

ration card correction server issue

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಪಡಿತರ ಚೀಟಿ(Ration card)ಗೆ ನೀಡಿದ ತಿದ್ದುಪಡಿಯ ಅವಕಾಶ ಎಷ್ಟರಮಟ್ಟಿಗೆ ಸದುಪಯೋಗ ಆಗಿದೆ ಎಂಬುವುದರ ಬಗ್ಗೆ  ಮಾಹಿತಿಯನ್ನು ನೀಡಲಾಗುತ್ತದೆ. ಸರ್ವರ್‌ ಸಮಸ್ಯೆಯಿಂದಾಗಿ ಪಡಿತರ ಚೀಟಿ ತಿದ್ದುಪಡಿ ಸುಗಮವಾಗಿ ನಡೆಯದೇ ಜನರು ಹೈರಾಣಾಗಿದ್ದಾರೆ. ಅಕ್ಟೋಬರ್ 11 ರಿಂದ ಅಕ್ಟೋಬರ್ 13 ರ ವರೆಗೂ ತಿದ್ದುಪಡಿ ಮಾಡಲು ಅವಕಾಶವಿದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಾರ್ವಜನಿಕರು ಅರ್ಜಿ ಸಲ್ಲಿಸುವ ಕಾಲಾವಕಾಶವನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಲೇಖನವನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಲು ಜನರು ಹೈರಾಣ ಪಡುತ್ತಿದ್ದಾರೆ :

ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯು  ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿದ್ದು, ಈ ಯೋಜನೆಗಳ ಲಾಭವನ್ನು ಪಡೆಯಲು ರೇಷನ್ ಕಾರ್ಡ್ ತಿದ್ದುಪಡಿ(Ration card correction) ಮಾಡುವುದು ಅತೀ ಅವಶ್ಯಕವಾಗಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಮೂರು ದಿನ ಅವಕಾಶ ಕಲ್ಪಿಸಿ, ಜಿಲ್ಲಾವಾರು ದಿನಾಂಕಗಳನ್ನು ನಿಗದಿಪಡಿಸಿತ್ತು. ಹೊಸದಾಗಿ ಮದುವೆಯಾದ ಮಹಿಳೆಯರ ಹೆಸರು ಸೇರ್ಪಡೆ, ತಪ್ಪುಗಳ ತಿದ್ದುಪಡಿ, ಯಜಮಾನನ ಹೆಸರಿನಲ್ಲಿರುವ ಪಡಿತರ ಚೀಟಿ ಯಜಮಾನಿಗೆ ವರ್ಗಾವಣೆ, ವಿಳಾಸ ಬದಲಾವಣೆ, ಇತರೆ ತಿದ್ದುಪಡಿಗೆ 3 ದಿನಗಳ ಅವಕಾಶ ನೀಡಲಾಗಿತ್ತು.
ಅದರಂತೆ, ತುಮಕೂರು ಜಿಲ್ಲೆಯಲ್ಲಿ ಅ.11ರಿಂದ 13 ರವರೆಗೆ ತಿದ್ದುಪಡಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ  ದಿನಗಳು ಕಳೆದರು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಇದಕ್ಕೆ ಕಾರಣ ಸರ್ವರ್. ಅರ್ಜಿ ಸಲ್ಲಿಸುವ ಅ.13 ಕೊನೆಯ ದಿನಾಂಕವಾಗಿದ್ದು, ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ತಿದ್ದುಪಡಿ ಸುಗಮವಾಗಿ ನಡೆಯದೇ ಇದ್ದಲ್ಲಿ ಜನರು ಹೈರಾಣಾಗಿದ್ದಾರೆ.

whatss

ತಿದ್ದುಪಡಿಯ ಕಾರ್ಯಕ್ಕಾಗಿಯೇ ಎರಡು ದಿನಗಳಿಂದ ನಿರಂತರವಾಗಿ ಬಂದರೂ ಸಹ ಅರ್ಜಿ ಸಲ್ಲಿಸಲಾಗುತ್ತಿಲ್ಲ. ಕಾದು ಕಾದು ಸುಸ್ತಾಗಿದೆ. ಬೆಳಗ್ಗೆಯಿಂದ ಒಂದೂ ಅರ್ಜಿಯು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಅರ್ಜಿ ಸಲ್ಲಿಸಲು ಬಂದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ವರ್ ಕಾಟದಿಂದ ಅರ್ಜಿ ಸಲ್ಲಿಸಿಲ್ಲ :

ಕರ್ನಾಟಕ ಒನ್‌(Karnataka one) ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಬಂದ ಸ್ತ್ರೀಯರು ತಮ್ಮ ಪುಟ್ಟ ಮಕ್ಕಳೊಂದಿಗೆ ಬಂದಿದ್ದು, ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ತಡವಾಗುತ್ತಿರುವ ಹಿನ್ನಲೆಯಲ್ಲಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಎಲ್ಲ ಕೆಲಸಗಳನ್ನು ಬದಿಗಿಟ್ಟು ಪಡಿತರ ಚೀಟಿ ತಿದ್ದುಪಡಿಗಾಗಿ ಬಂದವರು ಇಡೀ ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾನಗರ ಪಾಲಿಕೆಯ ಆವರಣದಲ್ಲಿರುವ ತುಮಕೂರು ಒನ್‌ ಕೇಂದ್ರದಲ್ಲಿ ಎರಡು ಗಂಟೆಗೆ ಒಂದು ಅರ್ಜಿ ಸ್ವೀಕೃತವಾಗುತ್ತಿತ್ತು.
ಜಿಲ್ಲೆಯ ಕರ್ನಾಟಕ ಒನ್‌, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಕೆಲವೊಂದಿಷ್ಟು ಅರ್ಜಿಗಳು ಮಾತ್ರ ಸ್ವೀಕೃತವಾಗಿವೆ. ಆದರೆ ಗ್ರಾಮ ಒನ್‌ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸರಿಯಾಗಿ ಸಲ್ಲಿಕೆಯೇ ಸಾಧ್ಯವಾಗಿಲ್ಲ.

ಬೆಳಗ್ಗೆಯಿಂದ ಸರ್ವರ್‌ ಸಮಸ್ಯೆ ಸರ್‌. ದಿನವಿಡೀ ಕೇವಲ 7 ಅರ್ಜಿಗಳನ್ನು ಮಾತ್ರ ಸ್ವೀಕೃತವಾಗಿವೆ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆಹರಿದರೆ ಅರ್ಜಿ ಸಲ್ಲಿಕೆ ಸರಾಗವಾಗಲಿದೆ ಎಂದು ಬೆಂಗಳೂರು ಒನ್‌ ಕೇಂದ್ರದ ಸಿಬ್ಬಂದಿಯು ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸದ್ದಾರೆ.
ಅರ್ಜಿದಾರರ ಅರ್ಜಿ ಸ್ವೀಕೃತಿ ಪಡೆದರೆ ಯಾವದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿ ರಿಜೆಕ್ಟ್ ಆದರೆ, 30 ದಿನಗಳ ಕಾಲ ಲಾಗಿನ್ ಆಗಲು ಕಾಯಬೇಕಾಗುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಅರ್ಜಿ ಸಲ್ಲಿಸುವ ಅವಧಿ ಹೆಚ್ಚಿಸಲು ಒತ್ತಾಯ:

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ(Department of Food, Civil Supplies and Consumer Affairs)ಯು ಬಿಪಿಎಲ್‌ ಕಾರ್ಡ್‌ ತಿದ್ದುಪಡಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದರು ಅರ್ಜಿ ಸಲ್ಲಿಸಲು ಅಸಾಧ್ಯವಾಗುತ್ತಿದೆ.
ಮೊದಲನೇಯ ದಿನ (ಅ.11) ಮತ್ತು ಎರಡನೇ ದಿನ ( ಅ.12) ಅರ್ಜಿ ಸಲ್ಲಿಕೆಗೆ ಸರ್ವರ್‌ ಸಮಸ್ಯೆಯಾಗಿತ್ತು, ನೂರಾರು ಮಂದಿ ಬಿಪಿಎಲ್‌ ಕಾರ್ಡ್‌(BPL card)ದಾರರು ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಕೆಗಾಗಿ ಕಾದಿದ್ದರು.
ಮೂರು ದಿನವೂ ಸರ್ವರ್ ಸಮಸ್ಯೆಯಿಂದ ಕಳೆದುಹೋಯ್ತು. ಹೀಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಹೆಚ್ಚಿಸಬೇಕೆಂಬ ಸಾರ್ವಜನಿಕರ ಅಭಿಪ್ರಾಯವಿದೆ.

ಗ್ರಾಮ ಒನ್‌ ಕೇಂದ್ರಗಳಿಗೆ ಅ.11ರ ಸಂಜೆ 5 ಗಂಟೆಗೆ ಲಾಗಿನ್‌ ಅವಕಾಶ ಕೊಡಲಾಯಿತು. ಆದರೆ, ಸರ್ವರ್‌ ಸಮಸ್ಯೆ ಕಾರಣ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ. ಕೆಲ ಅರ್ಜಿಗಳನ್ನು ಸೇರಿಸಿದ್ದೇವೆ. ಆದರೆ, ಸ್ವೀಕೃತಿ ಜನರೇಟ್‌ ಆಗುತ್ತಿಲ್ಲ. ಹೀಗೆ ಮುಂದುವರಿದರೆ ಜನರಿಗೆ ಸಮಸ್ಯೆಯಾಗಲಿದೆ ಎಂದು ಗ್ರಾಮ ಒನ್‌ ಕೇಂದ್ರದ ಸದಸ್ಯರಾದ ಕಾರ್ತಿಕ್‌ ಅವರು ಹೇಳಿದ್ದಾರೆ.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!