Picsart 25 11 06 23 00 25 427 scaled

ಹಳೆಯ ಬ್ಯಾಂಕ್ ಖಾತೆ FD, ಸೇವಿಂಗ್ಸ್ ಅಕೌಂಟ್ ಹಣ ಹುಡುಕಲು RBIಯ UDGAM ಪೋರ್ಟಲ್.! ಸಂಪೂರ್ಣ ಮಾಹಿತಿ 

Categories:
WhatsApp Group Telegram Group

ಇಂದಿನ ವೇಗದ ಜೀವನಶೈಲಿಯಲ್ಲಿ, ಬ್ಯಾಂಕ್ ಖಾತೆಗಳ ನಿರ್ವಹಣೆ, ಠೇವಣಿ ನವೀಕರಣ, ಖಾತೆ ಬದಲಾವಣೆ ಇತ್ಯಾದಿ ವಿಷಯಗಳು ನಮ್ಮ ಗಮನಕ್ಕೆ ಬಾರದಂತೆ ಹೋಗುತ್ತವೆ. ಕೆಲಸದ ಒತ್ತಡ, ನಗರ ಬದಲಾವಣೆ, ಬ್ಯಾಂಕ್‌ ವಿಲೀನ, ಶಾಖೆ ಬದಲಾವಣೆ ಅಥವಾ ಮರೆತಿರುವ ಸ್ಥಿರ ಠೇವಣಿ ದಾಖಲೆಗಳ ಕಾರಣ ಸಾವಿರಾರು ಭಾರತೀಯರು ತಮ್ಮದೇ ಹಣವನ್ನು ವರ್ಷಗಳ ಕಾಲ ಹಿಂಪಡೆಯದೆ ಬಿಟ್ಟಿರುವುದು ಸಾಮಾನ್ಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವರದಿಯ ಪ್ರಕಾರ, ದೇಶದಾದ್ಯಂತ ಲಕ್ಷಾಂತರ ಖಾತೆಗಳಲ್ಲಿ ಬಿದ್ದಿರುವ ಹಕ್ಕುರಹಿತ ಠೇವಣಿಗಳ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಜನರು ತಮ್ಮದೇ FD/ಸೇವಿಂಗ್ಸ್ ಖಾತೆಗಳಲ್ಲಿ ಇರುವ ಮೊತ್ತವನ್ನು ಹಿಂಪಡೆಯದೆ ಬಿಡುವುದರಿಂದ ಹಣ RBIಯ ಡೆಪಾಸಿಟ್ ಎಜುಕೇಶನ್ ಅಂಡ್ ಅವೇರ್‌ನೆಸ್ (DEA) ಫಂಡ್ ಗೆ  ವರ್ಗಾಯಿಸಲಾಗುತ್ತದೆ. ಆದರೆ ಈ ಹಣ ಖಾತೆದಾರರದ್ದೇ, ಬೇಕಾದರೆ ಯಾವಾಗ ಬೇಕಾದರೂ ಹಿಂಪಡೆಯಬಹುದು ಎಂಬುದು ಹಲವರಿಗೆ ತಿಳಿದೇ ಇರುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು RBI ಒಂದು ಅತ್ಯಂತ ಉಪಯುಕ್ತ ಆನ್‍ಲೈನ್ ಪರಿಹಾರವನ್ನು ಪರಿಚಯಿಸಿದೆ  UDGAM Portal (Unclaimed Deposits – Gateway to Access Information). ಈ ಪರಿಹಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

UDGAM ಪೋರ್ಟಲ್ ಎಂದರೇನು?:

UDGAM ಪೋರ್ಟಲ್ RBI ಪ್ರಾರಂಭಿಸಿರುವ ಏಕೀಕೃತ ಆನ್‌ಲೈನ್ ವೇದಿಕೆ. ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಉಳಿದಿರುವ ಹಕ್ಕುರಹಿತ ಠೇವಣಿಗಳನ್ನು ನಾಗರಿಕರು ಒಂದೇ ವೇದಿಕೆಯಲ್ಲಿ ಸುಲಭವಾಗಿ ಹುಡುಕಿ, ಪರಿಶೀಲಿಸಿ, ಕ್ರೈಮ್ (Claim) ಮಾಡಲು ಈ ವೇದಿಕೆ ಸಹಾಯ ಮಾಡುತ್ತದೆ.
2024 ಮಾರ್ಚ್ ವೇಳೆಗೆ ಸುಮಾರು 30 ಪ್ರಮುಖ ಬ್ಯಾಂಕ್‌ಗಳು ಈ ಪೋರ್ಟಲ್‌ಗೆ ಸೇರಿಕೊಂಡಿವೆ.
DEA ನಿಧಿಗೆ ಸೇರ್ಪಡೆಗೊಂಡಿರುವ ಒಟ್ಟು ಹಕ್ಕುರಹಿತ ಠೇವಣಿಗಳ 90% ಈ ಬ್ಯಾಂಕ್‌ಗಳಿಂದ ಬರುತ್ತದೆ.
UDGAM ಮೂಲಕ ಕೇವಲ ನಿಮ್ಮ ಹೆಸರು ಅಥವಾ PAN ನಮೂದಿಸಿದರೆ ಸಾಕು ನಿಮ್ಮ ನಿಮ್ಮ ಕುಟುಂಬದ ಸದಸ್ಯರ ಹಕ್ಕುರಹಿತ ಹಣಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.

UDGAM ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು ಹೇಗೆ?: 

ಅಧಿಕೃತ UDGAM ವೆಬ್‌ಸೈಟ್‌ಗೆ ಭೇಟಿ ನೀಡಿ.
ನಂತರ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಅನ್ನು ನಮೂದಿಸಿ ಲಾಗಿನ್ ಕ್ರಿಯೇಟ್ ಮಾಡಿ.
OTP ಮೂಲಕ ಲಾಗಿನ್ ದೃಢಪಡಿಸಿದ ನಂತರ, ಹುಡುಕಾಟ ಪುಟಕ್ಕೆ ಪ್ರವೇಶ ಸಿಗುತ್ತದೆ.

ಹಕ್ಕುರಹಿತ ಹಣ ಹುಡುಕುವ ವಿಧಾನ ಹೀಗಿದೆ:

ಒಬ್ಬ ಖಾತೆದಾರ ಅಥವಾ ಅವರ ಕುಟುಂಬ ಸದಸ್ಯರು ಕೆಳಗಿನ ಯಾವುದೇ ವಿವರಗಳನ್ನು ಬಳಸಬಹುದು,
ಹೆಸರು
ಬ್ಯಾಂಕ್ ಹೆಸರು
PAN
ಪಾಸ್‌ಪೋರ್ಟ್
ವೋಟರ್ ID
ಡ್ರೈವಿಂಗ್ ಲೈಸೆನ್ಸ್
ಜನ್ಮದಿನಾಂಕ

ಸಂಸ್ಥೆಗಳು (ಕಂಪನಿಗಳು, NGO, ಟ್ರಸ್ಟ್) ಹುಡುಕಲು:

ಸಂಸ್ಥೆಯ ಹೆಸರು
CIN/ನೋಂದಣಿ ಸಂಖ್ಯೆ
ಸಹಿ ಅಧಿಕಾರಿಯ ಹೆಸರು
ಬ್ಯಾಂಕ್ ವಿವರಗಳು
ಪ್ರಮುಖ ಬ್ಯಾಂಕ್‌ಗಳ ಡೇಟಾಬೇಸ್ ಒಂದೇ ಸ್ಥಳದಲ್ಲಿ ಇರುವುದರಿಂದ, ಹುಡುಕಾಟ ಬಹಳ ವೇಗವಾಗಿ ನಡೆಯುತ್ತದೆ.

ಹಕ್ಕುರಹಿತ ಠೇವಣಿಯನ್ನು ಕ್ಲೈಮ್ ಮಾಡುವುದು ಹೇಗೆ?

UDGAMನಲ್ಲಿ ಹಣ ಪತ್ತೆಯಾದ ನಂತರ,
ಸಂಬಂಧಿತ ಖಾತೆಯ ಮಾಹಿತಿಯನ್ನು ಪರಿಶೀಲಿಸಿ.
ಪೋರ್ಟಲ್ ನೀಡುವ Unclaimed Deposit Reference Number (UDRN) ಅನ್ನು ಗಮನಿಸಿಕೊಳ್ಳಿ.
ನಂತರ ಆ ಬ್ಯಾಂಕ್‌ನ ಶಾಖೆಯನ್ನು ಸಂಪರ್ಕಿಸಿ.
KYC ಮತ್ತು ದಾಖಲೆ ಪರಿಶೀಲನೆಯ ನಂತರ ಮೊತ್ತವನ್ನು ಹಿಂಪಡೆಯಬಹುದು.

UDGAM ಪೋರ್ಟಲ್ ಏಕೆ ಮಹತ್ವವದ್ದು?:

ಮರೆತಿರುವ FD/SB/Recurring Deposit ಹಣವನ್ನು ಪತ್ತೆ ಮಾಡಬಹುದು.
ಕುಟುಂಬ ಸದಸ್ಯರ ಹಳೇ ಬ್ಯಾಂಕ್ ಖಾತೆಗಳಿಗೂ ಮಾಹಿತಿ ಸಿಗುತ್ತದೆ.
ಬ್ಯಾಂಕ್‌ಗಳಿಗೆ ಓಡಾಟ, ಶಾಖೆಗಳಲ್ಲಿ ವಿಚಾರಣೆ ಮುಗಿದು ಹೋಗುತ್ತದೆ.
ಕ್ಲೈಮ್ ಪ್ರಕ್ರಿಯೆ ಪಾರದರ್ಶಕ.
ಆರ್ಥಿಕ ನಷ್ಟದಿಂದ ಜನರನ್ನು ಉಳಿಸುತ್ತದೆ.
ಇದು ನಿಜವಾಗಿಯೂ ಭಾರತೀಯ ಗ್ರಾಹಕರ ಆರ್ಥಿಕ ಜಾಗೃತಿಗೆ ಮತ್ತು ಹಣದ ಸುರಕ್ಷಿತ ಹಿಂತೆಗೆದುಕೊಳ್ಳುವಿಕೆಗೆ ಇದು ಮಹತ್ತರ ಹೆಜ್ಜೆ.

ಒಟ್ಟಾರೆಯಾಗಿ, UDGAM ಪೋರ್ಟಲ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಅನುಕೂಲ ತಂದಿದೆ. ಹಳೆಯ ಖಾತೆಗಳಲ್ಲಿ ಮರೆತುಹೋಗಿರುವ ಹಣವನ್ನು ಹುಡುಕಲು ಈಗ ಯಾವುದೇ ಸಂಕೀರ್ಣ ಪ್ರಕ್ರಿಯೆ ಇಲ್ಲ. ನಿಮ್ಮ ಅಥವಾ ನಿಮ್ಮ ಕುಟುಂಬದ ಸದಸ್ಯರ ಹಕ್ಕಿನ ಹಣವನ್ನು ಕೆಲವು ನಿಮಿಷಗಳಲ್ಲಿ ಪತ್ತೆಹಚ್ಚುವ ಸುಲಭ ವ್ಯವಸ್ಥೆಯನ್ನು RBI ಒದಗಿಸಿದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories