Home » ಮುಖ್ಯ ಮಾಹಿತಿ » Gruhalakshmi – ಗೃಹಲಕ್ಷ್ಮಿ ಉಚಿತ ರೂ.2000 ಹಣ ಇನ್ನೂ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ

Gruhalakshmi – ಗೃಹಲಕ್ಷ್ಮಿ ಉಚಿತ ರೂ.2000 ಹಣ ಇನ್ನೂ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ

WhatsApp Image 2023 09 02 at 3.29.13 PM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಪಡಿತರ ಚೀಟಿ(Ration card)ಯ  ಮುಖ್ಯಸ್ಥರು ಏಕೆ ಗಂಡಸರಾಗಿರಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ರೇಷನ್ ಕಾರ್ಡಿನ ಮುಖ್ಯಸ್ಥರು ಗಂಡಸರಾಗಿದ್ದರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ಪಡಿತರ ಚೀಟಿಯಲ್ಲಿ ಗಂಡಸರು ಮುಖ್ಯಸ್ಥರಾಗಿದ್ದಾರೆ ಏನು ಮಾಡಬೇಕು?, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರುವುದಕ್ಕೆ ಏನೆಲ್ಲ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಪಡಿತರ ಚೀಟಿಯ ಮುಖ್ಯಸ್ಥರು ಗಂಡಸರಾಗಿದ್ದರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರಲ್ಲ :

ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, ಅನೇಕ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸರ್ಕಾರವು ಒಂದು ಶೋಕಿಂಗ್ ನ್ಯೂಸ್ ಅನ್ನು ನೀಡಿದೆ ಅದೇನೆಂದರೆ ಬಿಪಿಎಲ್ ಕಾರ್ಡ್(BPL Card) ಅಥವಾ ಎಪಿಎಲ್ ಕಾರ್ಡ್ ಗಳಲ್ಲಿ ಗಂಡಸರು ಮುಖ್ಯಸ್ಥರಾಗಿದ್ದಾರೆ, ಅಂಥವರಿಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ(gruhalakshmi and annabhagya) ಹಣ ಬರುವುದಿಲ್ಲ.

ಪಡಿತರ ಚೀಟಿಯಲ್ಲಿ 18 ವರ್ಷದ ಒಳಗಿನ ಬಾಲಕಿ ಇದ್ದರೆ, ಅಂಥವರ ಪಡಿತರ ಚೀಟಿಯ ಮುಖ್ಯಸ್ಥರು ಗಂಡಸರಾಗಿರಬಹುದು ಆದರೆ ವಯಸ್ಕ ಮಹಿಳೆಯರು ರೇಷನ್ ಕಾರ್ಡಿನಲ್ಲಿದ್ದರೆ, ಮಹಿಳೆಯರೇ ರೇಷನ್ ಕಾರ್ಡಿನ ಅಥವಾ ಮನೆಯ ಒಡತಿಯನ್ನಾಗಿ ಮಾಡಬೇಕಾಗುತ್ತದೆ. ಆಗ ಮಾತ್ರ ಎಲ್ಲಾ ಯೋಜನೆಯ ಲಾಭವನ್ನು ನೀವು ಪಡೆಯಬಹುದಾಗಿದೆ. ನಿಮ್ಮ ಪಡಿತರ ಚೀಟಿಯಲ್ಲಿ ಗಂಡಸರು ಮುಖ್ಯಸ್ಥರಾಗಿದ್ದಾರೆ ಯೋಚನೆ ಮಾಡಬೇಕಾಗಿಲ್ಲ. ಏಕೆಂದರೆ ಸರ್ಕಾರವು ಈಗ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಿದೆ. ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 10ರವರೆಗೆ ಈ ತಿದ್ದುಪಡಿಯ ಅವಕಾಶವನ್ನು ನೀವು ಪಡೆದುಕೊಂಡು ಪಡಿತರ ಚೀಟಿಯ ಮುಖ್ಯಸ್ಥರನ್ನಾಗಿ ಮಹಿಳೆಯರನ್ನು ತಿದ್ದುಪಡಿ ಮಾಡಬಹುದಾಗಿದೆ.

whatss

ರೇಷನ್ ಕಾರ್ಡಿನಲ್ಲಿ ಮನೆಯ ಮುಖ್ಯಸ್ಥರ ಬದಲಾವಣೆಗೆ ಅವಕಾಶ :

ನಿಮ್ಮ ರೇಷನ್ ಕಾರ್ಡ್ ನಲ್ಲಿ ಗಂಡಸರು ಮನೆಯ ಮುಖ್ಯಸ್ಥರಾಗಿದ್ದಾರೆ, ಸೆಪ್ಟೆಂಬರ್ ಒಂದರಿಂದ ಸೆಪ್ಟೆಂಬರ್ ಹತ್ತನೇ ತಾರೀಖಿನವರೆಗೂ ಪರಿಸರ ಚೀಟಿಯನ್ನು ತಿದ್ದುಪಡಿ ಮಾಡುವ ಅವಕಾಶವಿದೆ. ಹಾಗಾಗಿ ಪಡಿತರ ಚೀಟಿಯಲ್ಲಿ ಮಹಿಳೆಯರನ್ನು ಮುಖ್ಯಸ್ಥರನ್ನಾಗಿ ಮಾಡಿಕೊಂಡು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯಬಹುದಾಗಿದೆ. ಆಹಾರ ಇಲಾಖೆಯು ಪಡಿತರ ಚೀಟಿಯಲ್ಲಿ ಕುಟುಂಬ ಸದಸ್ಯರ ಹೆಸರು ಬದಲಾವಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಈ ನಿಟ್ಟಿನಲ್ಲಿ ಆಯಾ ಜಿಲ್ಲಾ ಆಹಾರ ಇಲಾಖೆ ಕಚೇರಿಗಳು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

ರೇಷನ್ ಕಾರ್ಡ್ ನಲ್ಲಿ ಏನೆಲ್ಲಾ ತಿದ್ದುಪಡಿ ಮಾಡಿಸಬಹುದು?:

ಮರಣ ಹೊಂದಿರುವ ಸದಸ್ಯರನ್ನು ಮಾತ್ರ ತೆಗೆಯಲಾಗುತ್ತದೆ.
(ಪಡಿತರ ಚೀಟಿ ಜೆರಾಕ್ಸ್ ಮತ್ತು ಮರಣ ಪ್ರಮಾಣ ಪತ್ರ ಜೆರಾಕ್ಸ್ ಕಡ್ಡಾಯ)

ಜೀವಂತ ಸದಸ್ಯರನ್ನು ಯಾವುದೇ ಕಾರಣಕ್ಕೂ ತೆಗೆಯಲು ಅವಕಾಶವಿಲ್ಲ.

ಮುಖ್ಯಸ್ಥರು ಗಂಡಸರಾಗಿದ್ದರೆ, ಕಾರ್ಡಿನಲ್ಲಿ ಇರುವ ಹಿರಿಯ ಮಹಿಳೆಯನ್ನು ಮುಖ್ಯಸ್ಥರನ್ನಾಗಿ ಮಾಡಿಸಬಹುದು.

ಹೊಸ ಪಡಿತರ ಚೀಟಿ ಮತ್ತು ತಿದ್ದುಪಡಿಗಳಿಗೆ ಅವಕಾಶವಿರುವುದಿಲ್ಲ.

ಹಿರಿಯ ವ್ಯಕ್ತಿಗಳು ಮಾತ್ರ ಕಡ್ಡಾಯವಾಗಿ ಕುಟುಂಬ ಮುಖ್ಯಸ್ಥರಾರುತ್ತಾರೆ.

ಇ-ಕೆವೈಸಿಯನ್ನು ನಿಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಡಿಸಿಕೊಳ್ಳುವುದು.

ಬ್ಯಾಕ್ ಖಾತೆಗಳು ಸರಿ ಇಲ್ಲದಿದ್ದಲ್ಲಿ ನಿಮ್ಮ ಬ್ಯಾಂಕ್ ಗಳಲ್ಲಿ ಸರಿ ಮಾಡಿಸಿಕೊಳ್ಳುವುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ರೇಷನ್ ಕಾರ್ಡಿನಲ್ಲಿ ಮುಖ್ಯಸ್ಥರನ್ನು ಬದಲಾಯಿಸುವ ವಿಧಾನ:

ರೇಷನ್ ಕಾರ್ಡ್‌ ಮುಖ್ಯಸ್ಥರ ಹೆಸರು ಬದಲಾವಣೆಗೆ ಹೀಗೆ ಈ ಕೆಳಗಿನ ಹಂತಗಳನ್ನು ಅನುಸರಿಸಿ :
ಮೊದಲಿಗೆ, ನಿಮ್ಮ ಸಮೀಪದ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ.
ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ ಅರ್ಜಿಯನ್ನು ಭರ್ತಿ ಮಾಡಿ.
ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ.
ಬಯೋಮೆಟ್ರಿಕ್‌ ದೃಡೀಕರಣದ ಮೂಲಕ ದಾಖಲೆಗಳನ್ನು ದೃಢೀಕರಿಸಿ.
ಪಡಿತರ ಸೇವಾ ಕೇಂದ್ರದಲ್ಲಿ ಮಾಹಿತಿಯನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ.
ಅಲ್ಲಿ ನೀಡಲಾಗುವ ಸ್ವೀಕೃತಿಯನ್ನು ಜಾಗ್ರತೆಯಿಂದ ಸಂರಕ್ಷಿಸಿ ಇಟ್ಟುಕೊಂಡಿರಿ.
ಅರ್ಜಿ ಸಲ್ಲಿಕೆ ನಂತರ, ಆಹಾರ ಕಚೇರಿಯಿಂದ ನಿಮಗೆ ಎಸ್‌ಎಂಎಸ್ ಬರಲಿದೆ
ಎಸ್‌ಎಂಎಸ್‌ ಬಂದ ಬಳಿಕ ನಿಮ್ಮಲ್ಲಿರುವ ಸ್ವೀಕೃತಿ ಪತ್ರವನ್ನು ನೀಡಿ ಹೊಸ (ಮನೆ ಯಜಮಾನಿಯನ್ನು ಬದಲಿಸಿದ) ಪಡಿತರ ಚೀಟಿ ಪಡೆಯಬಹುದು.

ನಿಮಗೆ ಏನಾದರೂ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರದಿದ್ದರೆ, ಪಡಿತರ ಚೀಟಿಯಲ್ಲಿ ಗಂಡಸರು ಮುಖ್ಯಸ್ಥರಾಗಿರುವುದು ಒಂದು ಕಾರಣವಾಗಿದೆ. ಹಾಗಾಗಿ ಈ ಕೂಡಲೇ ತಿದ್ದುಪಡಿಯನ್ನು ಮಾಡಿಸಿಕೊಂಡು ಯೋಜನೆಯ ಫಲವನ್ನು ಕಳೆದುಕೊಳ್ಳಿ. ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

Picsart 23 07 16 14 24 41 584 transformed 1

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

 

About

Lingaraj Ramapur BCA, MCA, MA ( Journalism )

Leave a Reply

Your email address will not be published. Required fields are marked *