NEW ZP RECRUITMENT ZP scaled

ZP Jobs 2025: ಪರೀಕ್ಷೆ ಇಲ್ಲ, ಇಂಟರ್ವ್ಯೂ ಇಲ್ಲ! ನೇರವಾಗಿ ಮೆರಿಟ್ ಮೇಲೆ ಆಯ್ಕೆ; ₹35,000 ಸಂಬಳದ ಈ ಹುದ್ದೆಗೆ ಇಂದೇ ಅರ್ಜಿ ಹಾಕಿ.

Categories:
WhatsApp Group Telegram Group

ರಾಯಚೂರಿಗರೇ, ಈ ಚಾನ್ಸ್ ಮಿಸ್ ಮಾಡ್ಕೋಬೇಡಿ!

ಯಾವುದೇ ಪರೀಕ್ಷೆಯ ಟೆನ್ಷನ್ ಇಲ್ಲದೆ ಸರ್ಕಾರಿ ಆಫೀಸ್‌ನಲ್ಲಿ ಕೆಲಸ ಮಾಡಬೇಕಾ? ರಾಯಚೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ತಿಂಗಳಿಗೆ ₹33,000 + ₹2,000 ಭತ್ಯೆ ಸಿಗುವ ಈ ಹುದ್ದೆಗಳಿಗೆ ಪದವಿ ಮುಗಿಸಿದವರು ಡಿ.24 ರೊಳಗೆ ಅರ್ಜಿ ಸಲ್ಲಿಸಬಹುದು. ಆಯ್ಕೆ ಹೇಗೆ? ವಿವರ ಇಲ್ಲಿದೆ.

ರಾಯಚೂರು: ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಸುವರ್ಣಾವಕಾಶ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (MGNREGA) ಅಡಿಯಲ್ಲಿ ಕೆಲಸ ಮಾಡಲು ರಾಯಚೂರು ಜಿಲ್ಲಾ ಪಂಚಾಯತ್ (Raichur ZP) ಅರ್ಜಿ ಆಹ್ವಾನಿಸಿದೆ. ಕಲಬುರಗಿಯ ‘ಮನಿಶ್ ಮ್ಯಾನ್‌ಪವರ್ ಏಜನ್ಸಿ’ ಮೂಲಕ ಈ ನೇಮಕಾತಿ ನಡೆಯುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಯಾವ ಹುದ್ದೆಗಳು? ಎಷ್ಟು ಸಂಬಳ? (Job & Salary Details)

ಒಟ್ಟು 09 ಹುದ್ದೆಗಳಿದ್ದು, ಹುದ್ದೆಗೆ ತಕ್ಕಂತೆ ಆಕರ್ಷಕ ವೇತನವಿದೆ.

ಹುದ್ದೆಯ ಹೆಸರುಖಾಲಿ ಹುದ್ದೆವಿದ್ಯಾರ್ಹತೆಮಾಸಿಕ ವೇತನ
ತಾಂತ್ರಿಕ ಸಂಯೋಜಕರು02B.E / B.Tech (Civil)₹33,000 + ₹2,000 (Travel)
ತಾಲೂಕು MIS ಸಂಯೋಜಕರು02BCA / B.Sc / B.E (CS)₹28,000
ಆಡಳಿತ ಸಹಾಯಕರು03B.Com + Computer Typing₹22,000
ಗಣಕಯಂತ್ರ ನಿರ್ವಾಹಕರು02Any Degree + Typing₹18,480

ಆಯ್ಕೆ ಪ್ರಕ್ರಿಯೆ ಹೇಗೆ? (Selection Process) 

ಇಲ್ಲಿ ಯಾವುದೇ ಲಿಖಿತ ಪರೀಕ್ಷೆ (Written Exam) ಇರುವುದಿಲ್ಲ. ಬದಲಾಗಿ ನೀವು ಡಿಗ್ರಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ (Merit List) ಆಯ್ಕೆ ಮಾಡಲಾಗುತ್ತದೆ.

ಅಂಕಗಳ ಲೆಕ್ಕಾಚಾರ: ಪದವಿ ಅಂಕಗಳು (100) + ಸ್ನಾತಕೋತ್ತರ ಪದವಿ (10) + ಅನುಭವ (10).

ವಯೋಮಿತಿ:

40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಪ್ರಮುಖ ಸೂಚನೆ (Important Condition):

ಅರ್ಜಿ ಸಲ್ಲಿಸುವಾಗ ನೀವು ಅನುಭವ (Experience) ಹೊಂದಿದ್ದರೆ, ಆ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ವೇತನ ಪಡೆದ ಬ್ಯಾಂಕ್ ಸ್ಟೇಟ್ಮೆಂಟ್ (Bank Statement) ಪ್ರತಿಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯ. ಸುಮ್ಮನೆ ಲೆಟರ್ ಹೆಡ್ ಮೇಲೆ ಅನುಭವ ಪತ್ರ ತಂದರೆ ಅದನ್ನು ಪರಿಗಣಿಸುವುದಿಲ್ಲ!

ಅರ್ಜಿ ಸಲ್ಲಿಸುವುದು ಹೇಗೆ?

  1. ವೆಬ್‌ಸೈಟ್: ರಾಯಚೂರು ಜಿಲ್ಲಾ ಪಂಚಾಯತ್ ಅಧಿಕೃತ ವೆಬ್‌ಸೈಟ್ zpraichur.karnataka.gov.in ಗೆ ಭೇಟಿ ನೀಡಿ.
  2. ಡೆಡ್‌ಲೈನ್: ಡಿಸೆಂಬರ್ 24, 2025 ರ ಒಳಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
  3. ಶುಲ್ಕ: ಯಾವುದೇ ಅರ್ಜಿ ಶುಲ್ಕದ ಬಗ್ಗೆ ಉಲ್ಲೇಖವಿಲ್ಲ (Free).

ಓದುಗರೆ ಗಮನಿಸಿ.!

ಇದು ಹೊರಗುತ್ತಿಗೆ (Outsourcing) ಆಧಾರದ ಹುದ್ದೆಯಾಗಿದ್ದರೂ, ಸರ್ಕಾರಿ ಕಚೇರಿಯ ಅನುಭವ ಪಡೆಯಲು ಇದೊಂದು ಉತ್ತಮ ವೇದಿಕೆ. ಮುಂದೆ ಕಾಯಂ ಹುದ್ದೆಗಳಿಗೆ ಅರ್ಜಿ ಹಾಕುವಾಗ ಇಲ್ಲಿನ ಅನುಭವ ಪತ್ರ (Experience Certificate) ನಿಮಗೆ ಪ್ಲಸ್ ಪಾಯಿಂಟ್ ಆಗುತ್ತದೆ. B.Com ಮತ್ತು B.E ಮುಗಿದವರು ಮಿಸ್ ಮಾಡದೇ ಅಪ್ಲೈ ಮಾಡಿ.

ಕೈಯಲ್ಲಿ ಡಿಗ್ರಿ ಇದ್ದು, ಸರ್ಕಾರಿ ಕೆಲಸದ ಅನುಭವ ಬೇಕೆನ್ನುವವರು ತಕ್ಷಣ ಅರ್ಜಿ ಹಾಕಿ. ಸಮಯ ಬಹಳ ಕಡಿಮೆಯಿದೆ (ಡಿ.24 ಕೊನೆ).

📅 ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ: 10.12.2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24.12.2025

🔗 ಪ್ರಮುಖ ಲಿಂಕ್‌ಗಳು

ಅಧಿಕೃತ ವೆಬ್‌ಸೈಟ್ Visit Site ↗
ಅಧಿಕೃತ ಅಧಿಸೂಚನೆ (PDF) Download ⇩
ಅರ್ಜಿ ಸಲ್ಲಿಸುವ ಲಿಂಕ್ Apply Now ➤

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories