ಜುಲೈ ತಿಂಗಳ ಮೊದಲ ದಿನದಿಂದಲೇ ಗ್ರಾಹಕರಿಗೆ ಸಿಹಿಸುದ್ದಿ ತಂದಿದ್ದಾರೆ ತೈಲ ಮಾರುಕಟ್ಟೆ ಕಂಪನಿಗಳು. 19 ಕೆಜಿ ವಾಣಿಜ್ಯ ಉದ್ದೇಶದ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ₹58.50 ರೂಪಾಯಿ ಕಡಿಮೆ ಮಾಡಲಾಗಿದೆ. ಈ ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಈ ಬದಲಾವಣೆಯ ನಂತರ, ಈಗ 19 ಕೆಜಿ ವಾಣಿಜ್ಯ ಸಿಲಿಂಡರ್ ನ ಚಿಲ್ಲರೆ ಬೆಲೆ ₹1,665 ರೂಪಾಯಿಗೆ ನಿಗದಿಯಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿವಿಧ ನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ ಹೊಸ ದರಗಳು
ತೈಲ ಕಂಪನಿಗಳು ಪ್ರಕಟಿಸಿದ ಹೊಸ ದರಗಳ ಪ್ರಕಾರ, ವಾಣಿಜ್ಯ ಸಿಲಿಂಡರ್ ಗಳ ಬೆಲೆ ಕಡಿಮೆಯಾಗಿದ್ದರೆ, ಸಾಮಾನ್ಯ ಗೃಹಬಳಕೆದಾರರಿಗೆ ಸಿಗುವ 14 ಕೆಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಗಳ ಹೊಸ ದರಗಳು ಈ ರೀತಿ ಇವೆ:
- ದೆಹಲಿ: ₹1,723.50 ರಿಂದ ₹1,665 (₹58.50 ಇಳಿಕೆ)
- ಕೋಲ್ಕತ್ತಾ: ₹1,826 ರಿಂದ ₹1,769 (₹57 ಇಳಿಕೆ)
- ಮುಂಬೈ: ₹1,674.50 ರಿಂದ ₹1,616 (₹58.50 ಇಳಿಕೆ)
- ಚೆನ್ನೈ: ₹1,881 ರಿಂದ ₹1,823.50 (₹57.50 ಇಳಿಕೆ)
ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಗಳ ಬೆಲೆ ಯಾವುದೇ ಬದಲಾವಣೆ ಇಲ್ಲ
ಸರ್ಕಾರವು ಸಾಮಾನ್ಯ ಗೃಹಬಳಕೆದಾರರಿಗೆ ಎಲ್ಪಿಜಿ ಸಿಲಿಂಡರ್ ಗಳಿಗೆ ನೇರ ಸಬ್ಸಿಡಿ ನೀಡುತ್ತಿದೆ. ಉದಾಹರಣೆಗೆ, ಉಜ್ವಲ ಯೋಜನೆ ಯಡಿಯಲ್ಲಿ, ಫಲಾನುಭವಿಗಳು ಪ್ರತಿ ಸಿಲಿಂಡರ್ ಗೆ ₹300 ರಿಯಾಯಿತಿ ಪಡೆಯುತ್ತಾರೆ. 2025-26ರ ಬಜೆಟ್ ನಲ್ಲಿ ಸರ್ಕಾರವು ಎಲ್ಪಿಜಿ ಸಬ್ಸಿಡಿಗಾಗಿ ₹11,100 ಕೋಟಿ ನಿಗದಿ ಪಡಿಸಿದೆ. ಆದರೆ, ವಾಣಿಜ್ಯ ಸಿಲಿಂಡರ್ ಗಳಿಗೆ ಯಾವುದೇ ಸಬ್ಸಿಡಿ ಇಲ್ಲ. ಇವುಗಳನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲಾಗುತ್ತದೆ, ಅದರಿಂದಾಗಿ ಇವುಗಳ ಬೆಲೆ ಹೆಚ್ಚಾಗಿರುತ್ತದೆ.
ಪ್ರಸ್ತುತ, 14.2 ಕೆಜಿ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆ ₹853 ರೂಪಾಯಿ ಇದೆ. ವಾಣಿಜ್ಯ ಸಿಲಿಂಡರ್ ಗಳ ಬೆಲೆ ಕಡಿಮೆಯಾದದ್ದು ಅನಿಲದ ಮಾರುಕಟ್ಟೆ ಬೆಲೆಗಳಲ್ಲಿನ ವ್ಯತ್ಯಾಸ ಮತ್ತು ಅಂತರರಾಷ್ಟ್ರೀಯ ಕಚ್ಚಾ ತೈಲ ದರಗಳ ಪರಿಣಾಮವಾಗಿದೆ ಎಂದು ತಜ್ಞರು ವಿವರಿಸುತ್ತಾರೆ.
ಗ್ರಾಹಕರಿಗೆ ಉಪಯೋಗ
ಈ ಬೆಲೆ ಇಳಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಮತ್ತು ಇತರ ಸಣ್ಣ-ದೊಡ್ಡ ವ್ಯಾಪಾರಸ್ಥರಿಗೆ ಹೆಚ್ಚಿನ ಉಪಯೋಗವಾಗಲಿದೆ. ಏಕೆಂದರೆ, ವಾಣಿಜ್ಯ ಸಿಲಿಂಡರ್ ಗಳು ಹೆಚ್ಚಾಗಿ ಇಂತಹ ಸಂಸ್ಥೆಗಳಲ್ಲಿ ಬಳಕೆಯಾಗುತ್ತವೆ. ಆದರೆ, ಸಾಮಾನ್ಯ ಗ್ರಾಹಕರು 14 ಕೆಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ.
ಈ ಬೆಲೆ ಕಡಿತವು ಎಲ್ಪಿಜಿ ಬಳಕೆದಾರರಿಗೆ ಸ್ವಲ್ಪ ಉಪಶಮನ ತಂದಿದೆ ಎಂದು ಹೇಳಬಹುದು. ಮುಂದಿನ ತಿಂಗಳುಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ ಮತ್ತು ಸರ್ಕಾರದ ನೀತಿಗಳ ಆಧಾರದ ಮೇಲೆ ಎಲ್ಪಿಜಿ ದರಗಳು ಮತ್ತೆ ಬದಲಾಗಬಹುದು ಎಂದು ಅಂದಾಜಿಸಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.