ಆಸ್ತಿ ರಿಜಿಸ್ಟ್ರೇಷನ್(Property registration) ಮಾಡಿಸಿ ಮಾಲೀಕನಾದೆ ಎಂದುಕೊಳ್ಳ ಬೇಡಿ. ಆಸ್ತಿ ಮಾಲೀಕನಾಗಬೇಕು ಎಂದರೆ ಮ್ಯೂಟೇಷನ್(Mutation) ಮಾಡಿಸುವುದು ಬಹಳ ಮುಖ್ಯ.
ಆಸ್ತಿ ನೋಂದಣಿ(Property registration) ಪ್ರಕ್ರಿಯೆ ಪ್ರಾಚೀನ ಕಾಲದಿಂದಲೇ ಭಾರತದಲ್ಲಿ ಪ್ರಮುಖವಾಗಿದ್ದು, ಇದು ಕೇವಲ ಒಬ್ಬರ ಆಸ್ತಿಯ ಮಾಲೀಕತ್ವವನ್ನು(Ownership) ದೃಢಪಡಿಸುವುದಕ್ಕೆ ಮಾತ್ರವಲ್ಲ, ಸಾಂವಿಧಾನಿಕ ಹಕ್ಕುಗಳನ್ನು ಸುವ್ಯವಸ್ಥಿತವಾಗಿ ತೋರಿಸಲು ಮತ್ತು ಆಸ್ತಿಯ ಲೆಕ್ಕಪತ್ರವನ್ನು ಸರಿಯಾಗಿ ನಿಖರವಾಗಿ ದಾಖಲಿಸುವುದಕ್ಕೆ ಸಹಾಯಕವಾಗಿದೆ. ಭಾರತದಲ್ಲಿ ಆಸ್ತಿ ನೋಂದಣಿಯು 1908 ರ ರಿಜಿಸ್ಟ್ರೇಷನ್ ಆಫ್ ಡೀಡ್ಸ್ ಅಂಡ್ ಡಾಕ್ಯುಮೆಂಟ್ಸ್ ಆಕ್ಟ್ ಪ್ರಕಾರ ನಿಯಂತ್ರಿತವಾಗಿದೆ. ಆಸ್ತಿ ನೋಂದಣಿಯ ಪ್ರಕ್ರಿಯೆ ಹಕ್ಕುಗಳನ್ನು ಕಾನೂನು ಪ್ರಕಾರ ಸರಿಯಾಗಿ ದೃಢಪಡಿಸಲು, ದೂರುಗಳನ್ನು ತಡೆಗಟ್ಟಲು, ಮತ್ತು ಭವಿಷ್ಯದ ಯಾವುದೇ ಕಾನೂನು ವಿವಾದಗಳಲ್ಲಿ ಪಾರದರ್ಶಕತೆಯನ್ನು ಒದಗಿಸಲು ಸಹಕಾರಿಯಾಗುತ್ತದೆ. ಇದು ಪ್ರತ್ಯೇಕವಾಗಿ ಮನೆ, ಭೂಮಿ, ಕಟ್ಟಡ, ಮತ್ತು ಇತರ ಪ್ರಕಾರದ ಆಸ್ತಿಗಳಿಗೆ ಅನ್ವಯವಾಗುತ್ತದೆ. ಆದರೆ ಕೇವಲ ಆಸ್ತಿ ನೋಂದಣಿ ಮಾಡಿಸಿ, ನಾವು ಆಸ್ತಿಯ ಮಾಲೀಕರು ಎಂದು ಹೇಳುವುದು ತಪ್ಪು. ನೋಂದಣಿ ನಂತರವೂ ಹಲವು ಪ್ರಕ್ರಿಯೆಗಳನ್ನು ಮಾಡಿಸುವುದು ಅವಶ್ಯಕ. ಆಸ್ತಿ ಮಾಲೀಕರಾಗಲು ಆಸ್ತಿ ನೋಂದಣಿ ಜೊತೆಯಲ್ಲಿ ಮ್ಯೂಟೇಷನ್ ಮಾಡಿಸಬೇಕು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಿಜಿಸ್ಟ್ರೇಷನ್ ಏಕೆ ಮಾಡಿಸಬೇಕು?:
ಆಸ್ತಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಸರಕಾರದ ದಾಖಲೆಗಳಲ್ಲಿ ಆಸ್ತಿ ಹಸ್ತಾಂತರವನ್ನು ಅಧಿಕೃತವಾಗಿ ದಾಖಲಿಸುವುದು. ಇದು ಆಸ್ತಿಯ ಮಾಲೀಕತ್ವವನ್ನು ಖಾಯಂ ಮಾಡುತ್ತದೆ ಮತ್ತು ಭವಿಷ್ಯದಲ್ಲಿ ಯಾವುದೇ ಕಾನೂನು ಸಮಸ್ಯೆಗಳನ್ನು(Legal issues) ತಪ್ಪಿಸಲು ಸಹಾಯಕವಾಗುತ್ತದೆ.
ಮ್ಯೂಟೇಷನ್‌ನ ಪ್ರಾಮುಖ್ಯತೆ ಏನು?:
ಮ್ಯೂಟೇಷನ್ ಎಂದರೆ, ನೋಂದಾಯಿತ ಆಸ್ತಿ ಅಥವಾ ದಾಖಲೆಗಳಲ್ಲಿ ಇರುವ ಮಾಲೀಕತ್ವದ ಬದಲಾವಣೆ ಅಥವಾ ಅವುಗಳ ಪರಿಷ್ಕರಣೆ ಪ್ರಕ್ರಿಯೆ. ಸಾಮಾನ್ಯವಾಗಿ ಮ್ಯೂಟೇಷನ್ ಪ್ರಕ್ರಿಯೆ ಆಸ್ತಿಯ ವಾಸ್ತವದ ಯಜಮಾನನ ಹೆಸರನ್ನು ಹೊಸ ಖರೀದಿದಾರನ ಹೆಸರಿಗೆ ಬದಲಾಯಿಸಲು ಅಥವಾ ಕುಟುಂಬದ ಸದಸ್ಯರ ನಡುವೆ ಹಂಚಿಕೆಗೆ ಬಳಸಲಾಗುತ್ತದೆ.
ಮ್ಯೂಟೇಷನ್ ಮಾಡಿಸಿಕೊಳ್ಳಬಹುದು ಹೇಗೆ ?
ಒಟ್ಟಾರೆಯಾಗಿ ದೇಶದಲ್ಲಿ ಮೂರು ರೀತಿಯ ಸ್ಥಿರ ಆಸ್ತಿಗಳಿದ್ದು, ಅದರಲ್ಲಿ ಕೃಷಿ ಭೂಮಿ, ವಸತಿ ಭೂಮಿ, ಕೈಗಾರಿಕಾ ಭೂಮಿ ಮತ್ತು ಮನೆಗಳು. ಮೂರು ರೀತಿಯ ಭೂಮಿಯ ವರ್ಗಾವಣೆ ವಿವಿಧ ರೀತಿಯಲ್ಲಿ ನಡೆಯುತ್ತದೆ. ಸೇಲ್ ಡೀಡ್ ಮೂಲಕ ಆಸ್ತಿ ಖರೀದಿಸಿದಾಗ ಅಥವಾ ಯಾವುದೇ ರೀತಿಯಲ್ಲಿ ಸ್ವಾಧೀನಪಡಿಸಿಕೊಂಡಾಗ ಆ ದಾಖಲೆಯೊಂದಿಗೆ ಸಂಬಂಧಪಟ್ಟ ಕಚೇರಿಗೆ ಹೋಗಿ ಆಸ್ತಿ ವರ್ಗಾವಣೆ ಮಾಡಿಸಿಕೊಳ್ಳಬೇಕು. ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ ಅಥವಾ ಗ್ರಾಮ ಪಂಚಾಯಿತಿಯಲ್ಲಿ ವಸತಿ ಭೂಮಿಯ ರೆಕಾರ್ಡ್ ಇರುತ್ತದೆ. ಪಂಚಾಯಿತಿಯಲ್ಲಿ ಕೃಷಿ ಭೂಮಿಯ ರೆಕಾರ್ಡ್ ಇರುತ್ತದೆ. ಪ್ರತಿ ಜಿಲ್ಲೆಯಲ್ಲಿರುವ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿ ಕೈಗಾರಿಕಾ ಭೂಮಿಯ ರೆಕಾರ್ಡ್ ಇರುತ್ತದೆ.
ಖಾತೆ ವರ್ಗಾವಣೆಗಾಗಿ ಅಥವಾ ಮ್ಯೂಟೇಷನ್ ಮಾಡಿಸಲು ಅಗತ್ಯವಿರುವ ದಾಖಲೆಗಳು:
ನೋಂದಾಯಿತ ಮಾರಾಟ ಪತ್ರ (ಸೆಲ್ ಡೀಡ್)
ಮುಂಚಿನ ಖಾತೆ ಪಟ್ಟಿ
ಕಂದಾಯ ಪಾವತಿ ರಸೀದೆಗಳು(Revenue Payment Receipts)
ಖಾತೆ ವರ್ಗಾವಣೆ ಅರ್ಜಿ
ಖಾತೆ ವರ್ಗಾವಣೆಯ ಮಹತ್ವ:
ಖಾತೆ ನಿಮ್ಮ ಹೆಸರಿನಲ್ಲಿ ಇದ್ದರೆ, ಕಂದಾಯ ಪಾವತಿ, ಆಸ್ತಿ ತೆರಿಗೆ ಮತ್ತು ಇತರ ಕಾನೂನು ಸಂಬಂಧಿತ ಕಾರ್ಯಗಳಲ್ಲಿ ಸುಲಭತೆ ಉಂಟಾಗುತ್ತದೆ. ಇದು ಆಸ್ತಿಯ ಮೇಲೆ ನಿಮ್ಮ ಕಾನೂನು ಹಕ್ಕನ್ನು ದೃಢಪಡಿಸುತ್ತದೆ.
ಖಾತೆ ವರ್ಗಾವಣೆ ಪ್ರತ್ಯೇಕ ಪ್ರಕ್ರಿಯೆ:
ಅನೇಕರಿಗೆ ಆಸ್ತಿ ನೋಂದಣಿಯ ನಂತರ ಖಾತೆ ಸ್ವಯಂಕ್ರಿಯವಾಗಿ ವರ್ಗಾಯಿಸಲಾಗುತ್ತದೆ ಎಂಬ ತಪ್ಪು ಕಲ್ಪನೆ ಇರುತ್ತದೆ. ಆದರೆ, ಖಾತೆ ವರ್ಗಾವಣೆ(transfer) ಪ್ರತ್ಯೇಕ ಪ್ರಕ್ರಿಯೆಯಾಗಿದ್ದು, ಅದನ್ನು ನೀವು ಸ್ವತಃ ಪ್ರಾರಂಭಿಸಬೇಕು. ಆಸ್ತಿ ಖರೀದಿಯ ನಂತರ ತಕ್ಷಣವೇ ಖಾತೆ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಉತ್ತಮ. ಇದು ಭವಿಷ್ಯದಲ್ಲಿ ಯಾವುದೇ ಕಾನೂನು ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಗಮನಿಸಿ :
ಆಸ್ತಿ ನೋಂದಣಿಯ ನಂತರ ಖಾತೆ ವರ್ಗಾವಣೆ ಪ್ರಕ್ರಿಯೆಯನ್ನು ನಿರ್ಲಕ್ಷಿಸಬೇಡಿ. ಇದು ಆಸ್ತಿಯ ಮೇಲೆ ನಿಮ್ಮ ಸಂಪೂರ್ಣ ಕಾನೂನು ಹಕ್ಕನ್ನು ಸ್ಥಾಪಿಸಲು ಅತ್ಯಂತ ಮುಖ್ಯವಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




