ಇಂದಿನಿಂದ ರಾಜ್ಯದಲ್ಲಿ ಹಾಲು, ದಿನಸಿ, ಮದ್ಯ, ಇತರ ಸೇವೆಗಳ ಬೆಲೆ ಏರಿಕೆ- ಇಲ್ಲಿದೆ ಸಂಪೂರ್ಣ ಮಾಹಿತಿ ತಪ್ಪದೆ ತಿಳಿದುಕೊಳ್ಳಿ

WhatsApp Image 2023 08 01 at 5.45.40 AM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಆಗಸ್ಟ್ 1ರಿಂದ ಹಾಲು, ದಿನಸಿ, ಮಧ್ಯ, ತರಕಾರಿ ಹಾಗೂ ಇನ್ನಿತರೆಗಳ ದರವು ಏರಿಕೆ ಆಗುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ದಿಡೀರ್ ಬೆಲೆಯ ಏರಿಕೆಯಿಂದಾಗಿ ಜನರು ಕಂಗಾಲು ಪಡುವಂತೆ ಆಗಿದೆ. ಯಾವ ಯಾವ ಪದಾರ್ಥಗಳು ಅಥವಾ ಸೇವೆಗಳ ಮೇಲೆ ಬೆಲೆಯ ಏರಿಕೆಯಾಗಿದೆ?, ಏಕೆ ಈ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಗಸ್ಟ್  1ರಿಂದ ಈ ಕೆಳಗಿನವುಗಳ ಬೆಲೆ ಏರಿಕೆಯಾಗಲಿದೆ :

ನಂದಿನಿ ಹಾಲಿನ ಬೆಲೆ ಹೆಚ್ಚಳ :
ಕರ್ನಾಟಕ ಕ್ಯಾಬಿನೆಟ್, ಆಗಸ್ಟ್ 1 ರಿಂದ ನಂದಿನಿ ಹಾಲಿನ ಬೆಲೆಯನ್ನು ಲೀಟರ್‌ಗೆ ಮೂರು ರೂಪಾಯಿಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ. ಹಾಲು ಉತ್ಪಾದಕರು ಮತ್ತು ರೈತರನ್ನು ಬೆಂಬಲಿಸಲು ಬೆಲೆ ಏರಿಕೆ ಅಗತ್ಯ ಎಂದು ಹೇಳಿದರು. ಆದರೆ ರೈತರಿಗೆ ಈ ಹಣ ದೊರೆಯದಿದ್ದರೆ ಮುಷ್ಕರ ಮಾಡುತ್ತೀವಿ ಎಂದು ಹೇಳುತ್ತಿದ್ದಾರೆ. ಅದೇನೆ ಇದ್ದರೂ ಕರ್ನಾಟಕ ಸರ್ಕಾರ ಮಾತ್ರ ಆಗಸ್ಟ್ ಒಂದರಿಂದ ಕಡ್ಡಾಯವಾಗಿ ನಂದಿನಿ ಹಾಲಿನ ದರವನ್ನು ಲೀಟರಿಗೆ ರೂ.3 ಹೆಚ್ಚಳ ಮಾಡುತ್ತೇವೆ ಎಂದು ನಿರ್ಧಾರವನ್ನು ಮಾಡಿದ್ದಾರೆ.

whatss

ಕೆಎಂಎಫ್‌ ಹಾಲಿನ ದರ ಹೆಚ್ಚಳ (ಆಗಸ್ಟ್‌ 1 ರಿಂದ ಜಾರಿ)

ಹಾಲಿನ ಉತ್ಪನ್ನಈಗಿನ ದರ (ರೂಪಾಯಿ)ಪರಿಷ್ಕೃತ ದರ (ರೂಪಾಯಿ)
ಟೋನ್ಡ್‌ ಹಾಲು3942
ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು4043
ಸ್ಪೆಷಲ್‌ ಹಾಲು4548
ಹೋಮೋಜಿನೈಸ್ಡ್‌ ಸ್ಟಾಂಡರ್ಡೈಸ್ಡ್‌ ಹಾಲು4649
ಸಂತೃಪ್ತಿ ಹಾಲು5255
ಡಬಲ್‌ ಟೋನ್ಡ್‌ ಹಾಲು3841

ತರಕಾರಿ ಹಾಗೂ ಹಣ್ಣಿನ ಬೆಲೆ ಏರಿಕೆ :
ರೋಗ ಬಾಧೆ, ಧಾರಣೆ ಕುಸಿತದ ಭೀತಿಯಿಂದಾಗಿ ಬಹಳಷ್ಟು ರೈತರು ಹಣ್ಣು ತರಕಾರಿ ಬೆಳೆಯುವುದಕ್ಕೆ ಹಿಂದೇಟು ಹಾಕಿದ್ದ ಪರಿಣಾಮ ಉತ್ಪಾದನೆ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ಧಾರಣೆ ದುಪ್ಪಟ್ಟು,, ತ್ರಿಪಟ್ಟು ಹೆಚ್ಚುವಂತಾಗಿದೆ. ಇತ್ತೀಚಿಗೆ ಹೆಚ್ಚುತ್ತಿರುವ ಉಷ್ಣಾಂಶ, ಅಕಾಲಿಕ ಮಳೆಯ ಕಾರಣ ಕೈಗೆ ಬರಬೇಕಾಗಿದ್ದ ಉತ್ಪನ್ನಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಉತ್ಪಾದನೆಯಲ್ಲಿ ಕುಂಠಿತವಾಗಿದೆ. ತರಕಾರಿ, ಹಣ್ಣುಗಳ ಪೂರೈಕೆ ಕಡಿಮೆಯಾದ ಕಾರಣ ಬೇಡಿಕೆ ಜತೆ ಬೆಲೆ ಕೂಡ ಬಾರಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಟೊಮೊಟೊ, ಹಸಿರು ಬಟಾಣಿ, ಹಸಿರು ಮೆಣಸಿನಕಾಯಿ, ಶುಂಠಿ, ಕ್ಯಾರೆಟ್ ಮತ್ತು ಬೀನ್ಸ್‌ಗಳು ಬೆಲೆಯಲ್ಲಿ ಅಧಿಕವಾಗಿ  ಏರಿಕೆಯಾಗಿದೆ.

ಹೋಟೆಲ್ ಗಳಲ್ಲಿ ಊಟ ತಿಂಡಿಗಳ ಬೆಲೆ ಏರಿಕೆ :
ತರಕಾರಿಗಳು ಹಾಗೂ ದಿನಸಿಯ ಬೆಲೆ ಏರಿಕೆ  ಆಗಿರುವುದರ ಕಾರಣದಿಂದಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಶೇಕಡ 10ರಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದರ ಬಗ್ಗೆ ಹೋಟೆಲ್ ಮಾಲೀಕರ ಸಂಘವು ವರದಿಯನ್ನು ನೀಡಿದೆ. ಸಣ್ಣ ಹೋಟೆಲ್‌ಗಳಲ್ಲಿ ಕಾಫಿ-ಚಹಾಕ್ಕೆ 7-10 ರೂ. ದರವನ್ನು ಹಾಗೇ ಉಳಿಸಿಕೊಂಡು ಊಟಕ್ಕೆ 5 ರೂ. ಹಾಗೂ ತಿಂಡಿಗೆ 1-2 ರೂ. ಹೆಚ್ಚಳವಾಗಲಿದೆ. ದೋಸೆ, ಬನ್ಸ್, ಈರುಳ್ಳಿ ಬಜ್ಜಿ, ಪಲಾವ್, ಇಡ್ಲಿ-ವಡೆ ಒಂದಿಷ್ಟು ತುಟ್ಟಿಯಾಗಲಿದೆ. ಹೋಟೆಲ್‌ಗಳಲ್ಲಿ ಅನ್ನಕ್ಕೆ ಬಳಸುವ ಟೈಗರ್ ರಾ ಅಕ್ಕಿ ಕೆ. ಜಿ.ಗೆ 38-40 ರೂ. ಗಳಾಗಿದೆ. ಹಾಗಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಊಟ ತಿಂಡಿಯ ದರ ಏರಲಿದೆ.

ಮಧ್ಯದ ಬೆಲೆ ಏರಿಕೆ :
ಗ್ಯಾರಂಟಿಗಳ ಜಾರಿಗಾಗಿ ಮದ್ಯಪ್ರಿಯರ ಮೇಲೆ ಸಿಎಂ ಸಿದ್ದರಾಮಯ್ಯ ಹೆಚ್ಚಿನ ಹೊರೆ ಹಾಕಿದ್ದಾರೆ. ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.20ರಷ್ಟು ಏರಿಸಿರುವುದು ಮದ್ಯದ ದರದಲ್ಲಿ ಭಾರೀ ಹೆಚ್ಚಳವಾಗಿದೆ. ಅದರಲ್ಲೂ ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ದರ ದೇಶದಲ್ಲಿಯೇ ಅತ್ಯಂತ ದುಬಾರಿಯಾಗಿದೆ. ಇನ್ನು ಬಿಯರ್‌ ಮೇಲಿನ ಸುಂಕ ಕೂಡ ಹೆಚ್ಚಾಗಿರುವುದರಿಂದ ಕರ್ನಾಟಕದ ಬಿಯರ್‌ ದರ ದೇಶದಲ್ಲಿಯೇ ಮೂರನೇ ಸ್ಥಾನಕ್ಕೆ ತಲುಪಿದೆ. ಮೊದಲೆರಡು ಸ್ಥಾನದಲ್ಲಿ ತಮಿಳುನಾಡು ಹಾಗೂ ದಿಲ್ಲಿ ಇವೆ.
ದೇಶಿಯ ಕಚ್ಚಾ ಮದ್ಯವನ್ನು ನಿಷೇಧಿಸಿದ ಬಳಿಕ ಕರ್ನಾಟಕದಲ್ಲಿ ಮದ್ಯದ ದರ ಇತರ ರಾಜ್ಯಗಳಿಗಿಂತ ಕಡಿಮೆಯಿತ್ತು ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈಗ ಬೇರೆ ರಾಜ್ಯಗಳ ಮದ್ಯದ ದರದ ಜೊತೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಕೆಳ ಹಂತದ ಲಿಕ್ಕರ್‌ ಬ್ರಾಂಡ್‌ಗಳು ಕೂಡ ಅತ್ಯಂತ ದುಬಾರಿಯಾಗಿವೆ ಎಂದು ತಿಳಿದುಬಂದಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

 

ಆಸ್ತಿಯ ಮಾರ್ಗದರ್ಶನ ಮೌಲ್ಯ ಹೆಚ್ಚಳ: 

ಕರ್ನಾಟಕ ಸರ್ಕಾರವು 2023-24ರ ಬಜೆಟ್‌ನಲ್ಲಿ ಸ್ಥಿರಾಸ್ತಿಗಳ ಮಾರ್ಗದರ್ಶಿ ಮೌಲ್ಯದಲ್ಲಿ ಶೇಕಡಾ 14 ರಷ್ಟು ಹೆಚ್ಚಳ ಮಾಡಿದೆ. ಇದು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಮಾರ್ಗದರ್ಶನ ಮೌಲ್ಯವು ಆಸ್ತಿಯನ್ನು ನೋಂದಾಯಿಸುವ ಕನಿಷ್ಠ ಮೌಲ್ಯವಾಗಿದೆ.

ಇಷ್ಟೇ ಅಲ್ಲದೆ, ಇಲೆಕ್ಟ್ರಿಕ್ ವಾಹನ ಗಳ ಬೆಲೆಯು ಹೆಚ್ಚಳ ವಾಗಿದ್ದು ಹೋಂಡಾ ಕಾರ್ಸ್ ಇಂಡಿಯಾ ಕೂಡ ಕಾರುಗಳ ಬೆಲೆಯನ್ನು ಹೆಚ್ಚು ಮಾಡಲಿದೆ. ಇನ್ನು ಮಹಿಳೆಯರಿಗೆ ಈಗಾಗಲೇ ಉಚಿತ ಬಸ್ ನೀಡಲು ಮುಂದಾಗಿದೆ, ಅದರ ಜೊತೆ ಕೆಎಸ್ ಆರ್ ಟಿಸಿ ಬಸ್ ಬಾಡಿಗೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಹೀಗೆ ಸರ್ಕಾರ ಬದಲಾದ ನಂತರ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಕೂಡ ಬೆಲೆ ಏರಿಕೆಯ ಬದಲಾವಣೆ ಬಂದಿದೆ. ಈ ಬೆಲೆ ಏರಿಕೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅಗತ್ಯವಾಗಿದೆ ಆದ್ದರಿಂದ ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!