BiggBoss Kannada – ದೊಡ್ಮನೆಯಲ್ಲಿ ಪ್ರತಾಪ್ ಟಾರ್ಗೆಟ್..! ಪ್ರತಾಪ್ ಗೆ ಭಾರಿ ಬೆಂಬಲ ನೀಡಿದ ಕನ್ನಡಿಗರು

namratha targeting done prathap

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10(BigBoss Kannada season 10) ಪ್ರಾರಂಭವಾಗಿ ಸುಮಾರು 15 ದಿನಗಳಾಯ್ತು. ಬಿಗ್ ಬಾಸ್ ಮನೆಯೊಳಗೆ ಹಲವಾರು ಬದಲಾವಣೆಗಳನ್ನು ಕಂಡಿದೆ. ಹೀಗೆ ಹಂತ ಹಂತದಲ್ಲೂ ಹೊಸ ತಿರುವನ್ನು ಕಾಣುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಡ್ರೋನ್ ಪ್ರತಾಪ್(Drone Prathap) ರವರ ಬಗ್ಗೆ ಮಾತು ಕತೆ ಮತ್ತು ಅವರ ಬಗ್ಗೆ ಹೆಚ್ಚಿನ ರೀತಿಯಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ಹಾಗೆಯೇ ಈ ವಾರದ ಸೀಸನ್ ನಲ್ಲಿ ಪ್ರತಾಪ್ ರವರದ್ದೇ ಮಾತುಕತೆ. ಏನಿದು ಸುದ್ದಿ?, ಇದರ ಬಗ್ಗೆ ಪೂರ್ಣ ಮಾಹಿತಿಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಮತ್ತೆ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಟಾರ್ಗೆಟ್ :

ಬಿಗ್ ಬಾಸ್ ಪ್ರಾರಂಭವಾದ ಮೊದಲೆರಡು ವಾರ ಡ್ರೋನ್ ಪ್ರತಾಪ್ ಎಲ್ಲರಿಗೂ ಟಾರ್ಗೆಟ್ ಆಗಿದ್ದರು. ಅವರನ್ನು ಕಾಮಿಡಿ ಮ್ಯಾನ್ ಆಗಿ ನೋಡುತ್ತಿದ್ದರು. ಅಷ್ಟೇ ಮಾತ್ರವಲ್ಲ ಮೊದಲ ವಾರ ಅಸಮರ್ಥರ ಗುಂಪಿನಲ್ಲಿದ್ದ ಅವರನ್ನು ಸೇವೆಗೂ ಬಳಸಿಕೊಳ್ಳಲಾಗಿತ್ತು.
ಹಾಗೆಯೇ ಕಿಚ್ಚ ಸುದೀಪ್ ಅವರು ಸಣ್ಣದಾಗಿ ಬಿಸಿ ಮುಟ್ಟಿಸಿದ ಬಳಿಕ ಡ್ರೋನ್ ಬಗೆಗಿನ ವ್ಯಂಗ್ಯ ಕಡಿಮೆ ಆಗಿದೆ. ಆದರೂ ಸಹ, ಸ್ಪಷ್ಟವಾಗಿ ಅಂದುಕೊಂಡದ್ದನ್ನು ಹೇಳಲಾರದ, ದೊಡ್ಡ ದನಿಯಲ್ಲಿ ಮಾತನಾಡಲಾರದ ವ್ಯಕ್ತಿತ್ವದ ಮನುಷ್ಯ ಡ್ರೋನ್ ಪ್ರತಾಪ್ ಅವರನ್ನು ಮನೆಯ ಮಂದಿ ಈಗ ಟಾರ್ಗೆಟ್ ಮಾಡಿಕೊಂಡಿದ್ದಾರೆ.

ಭಾಗ್ಯಶ್ರೀ, ಡ್ರೋನ್ ಪ್ರತಾಪ್, ಕಾರ್ತಿಕ್, ತನಿಷಾ, ಮೈಖಲ್, ಸ್ನೆಹಿತ್, ವಿನಯ್ ಅವರುಗಳೂ ಎಲಿಮಿನೇಶನ್ ಗೆ ನಾಮಿನೇಟ್ ಆಗಿದ್ದರು. ನೀತು ಹಾಗೂ ಇಶಾನಿ ಅವರುಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ನೇರವಾಗಿ ನಾಮಿನೇಟ್ ಆಗಿರುವ ನೀತು ಹಾಗೂ ಇಶಾನಿಯನ್ನು ಹೊರತುಪಡಿಸಿ ಉಳಿದವರಲ್ಲಿ ಒಬ್ಬ ಅದೃಷ್ಟಶಾಲಿಯನ್ನು ನಾಮಿನೇಷನ್ ನಿಂದ ಪಾರು ಮಾಡುವ ಟಾಸ್ಕ್ ಒಂದನ್ನು ಬಿಗ್ ಬಾಸ್ ಆಡಿಸಿದರು.

ಟಾಸ್ಕ್ ನಂತೆ ನಾಮಿನೇಟ್ ಆಗಿರುವ ಸದಸ್ಯರು, ತಮ್ಮನ್ನು ನಾಮಿನೇಟ್ ಮಾಡಿರಬಹುದಾದ ಸದಸ್ಯರ ಹೆಸರುಗಳನ್ನು ಸರಿಯಾಗಿ ಹೇಳಿದರೆ ಅವರಿಗೆ ನಾಮಿನೇಷನ್ ನಿಂದ ಮುಕ್ತಿ. ಈ ಟಾಸ್ಕ್ ನಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಅವರುಗಳು ತಮ್ಮನ್ನು ನಾಮಿನೇಟ್ ಮಾಡಿದವರ ಹೆಸರನ್ನು ಬಹುತೇಕ ಸರಿಯಾಗಿ ಹೇಳಿದರು. ಹಾಗಾಗಿ ಇಬ್ಬರಿಗೂ ಮನೆ ಮಂದಿಯೊಟ್ಟಿಗೆ ಸಂವಾದ ಏರ್ಪಡಿಸಿ ಮನೆ ಮಂದಿಯೇ ವಿನ್ನರ್ ಅನ್ನು ತೀರ್ಮಾನಿಸುವಂತೆ ಹೇಳಲಾಯ್ತು.

ಡ್ರೋನ್ ಪ್ರತಾಪನ ಮೇಲೆ ವಿನಯವರ ಆರೋಪ :

ಸಂವಾದದ ಆರಂಭದಾಗ ವಿನಯ್ ಕೆಲವು ಆರೋಪಗಳನ್ನು ಡ್ರೋನ್ ಪ್ರತಾಪ್ ಮೇಲೆ ಹೇರಿದರು. ಸದಾ ಗೊಂದಲದಲ್ಲಿರುತ್ತಾನೆ, ದ್ವಿ-ವ್ಯಕ್ತಿತ್ವವುಳ್ಳ ವ್ಯಕ್ತಿ, ಡ್ಯಾನ್ಸ್ ಮಾಡುತ್ತಾ ಹೀರೋ ಆಗಲು ನೋಡುತ್ತಾನೆ ಎಂಬ ಕೆಲವು ಆರೋಪಗಳನ್ನು ಮಾಡಿದರು.

ಅಂತಿಮವಾಗಿ ಮನೆಯ ಸದಸ್ಯರೆಲ್ಲ ಸೇರಿ ವಿನಯ್ ಅನ್ನು ನಾಮಿನೇಷನ್ ನಿಂದ ಪಾರು ಮಾಡಿದರು. ಡ್ರೋನ್ ಪ್ರತಾಪ್ ಅನ್ನು ನಾಮಿನೇಷನ್ ನಲ್ಲಿಯೇ ಉಳಿಸಿದರು. ಸಂವಾದದ ಬಳಿಕ, ನೀವು ನನಗೆ ಮತಹಾಕಲಿಲ್ಲ ಎಂಬ ಬೇಸರ ನನಗಿಲ್ಲ ಎಂದರು ಡ್ರೋನ್ ಪ್ರತಾಪ್.

ರಕ್ಷಕ್ ಕೂಡ ಗೂಬೆ ಎಂದು ಪ್ರತಾಪ ಅವರಿಗೆ ಹೇಳಿದ್ದಾರೆ :

ಹೀಗೆ ಬಿಗ್ ಬಾಸ್ ಮನೆಯಲ್ಲಿ ಮಾತನಾಡುತ್ತಿರುವಾಗ, ರಕ್ಷಕ ಅವರು ಗೂಬೆ ತರ ಆಡಬೇಡ ಎಂದು ಪ್ರತಾಪ್ ಅವರಿಗೆ ಹೇಳಿದ್ದಾರೆ. ಅದಕ್ಕೆ ಪ್ರತಾಪ ಅವರು ಏಕೆ ಹೀಗೆ ಕರೆಯುತ್ತೀರಾ? ಹೀಗೆಲ್ಲ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ, ಅದರಲ್ಲೇನು ತಪ್ಪಿದೆ? ನಾನು ಹೀಗೆ ಕರೆಯುವುದು ಇನ್ನೊಂದು ಸಾರಿ ಬೇಕಾದ್ರೆ ಕರೀತೀನಿ ಎಂದು ಹೇಳಿದರು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!