ಸ್ವಂತ ಮನೆ ಕಟ್ಟಲು ಕೇಂದ್ರದ ನೆರವು, ಸಾಲ ಮತ್ತು ಸಬ್ಸಿಡಿ ಯೋಜನೆ, ನೀವೂ ಅಪ್ಲೈ ಮಾಡಿ

WhatsApp Image 2025 05 12 at 7.29.49 PM

WhatsApp Group Telegram Group

ಪ್ರಧಾನಮಂತ್ರಿ ಆವಾಸ್ ಯೋಜನೆ 2025: ಭಾರತದ 3 ಕೋಟಿ ವಸತಿರಹಿತ ಕುಟುಂಬಗಳಿಗೆ ಸ್ವಂತ ಮನೆ ಒದಗಿಸುವ ಉದ್ದೇಶದೊಂದಿಗೆ ಕೇಂದ್ರ ಸಚಿವಾಲಯವು ಹೊಸ ತೀರ್ಮಾನ ಕೈಗೊಂಡಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಹೆಸರಿನಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ, ಅರ್ಹರಾದ ನಾಗರಿಕರಿಗೆ ಸ್ವಂತ ಮನೆ ಕಟ್ಟಲು ಹಣಕಾಸು ಸಹಾಯವನ್ನು ನೀಡಲಾಗುತ್ತದೆ. ಯಾರು ಅರ್ಜಿ ಸಲ್ಲಿಸಬಹುದು? ಯಾವ ರೀತಿಯ ಪ್ರಯೋಜನಗಳಿವೆ? ಹೇಗೆ ಅರ್ಜಿ ಸಲ್ಲಿಸುವುದು? – ಇವೇ ಮುಂತಾದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY)

2015ರ ಜೂನ್ನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿತು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಡವರು ಮತ್ತು ಮಧ್ಯಮ ಆದಾಯದ ವರ್ಗದವರಿಗೆ ಸ್ವಂತ ಮನೆಗಳನ್ನು ಒದಗಿಸುವುದು ಇದರ ಮುಖ್ಯ ಗುರಿ. ಕಳೆದ ಆರ್ಥಿಕ ವರ್ಷದಲ್ಲಿ (2023-24), ಈ ಯೋಜನೆಗಾಗಿ ಸುಮಾರು 79,000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. 2024-25ರ ಬಜೆಟ್‌ನಲ್ಲಿ, ಈ ಹಣವನ್ನು 15% ಹೆಚ್ಚಿಸಿ 1,01,300 ಕೋಟಿ ರೂಪಾಯಿಗೆ ಏರಿಸಲಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಭಾರತದ ನಾಗರಿಕರಾಗಿರಬೇಕು ಮತ್ತು ಸ್ವಂತ ಮನೆ ಇಲ್ಲದವರಾಗಿರಬೇಕು.

ಇತರ ಸರ್ಕಾರಿ ವಸತಿ ಯೋಜನೆಗಳಿಂದ ಯಾವುದೇ ಪ್ರಯೋಜನ ಪಡೆಯದಿರಬೇಕು.

ಮಹಿಳೆಯರು, SC/ST ಮತ್ತು OBC ವರ್ಗದವರಿಗೆ ಆದ್ಯತೆ.

ಆದಾಯ ಮಿತಿ:

  • EWS (Economically Weaker Section): ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಕಡಿಮೆ.
  • LIG (ಕಡಿಮೆ ಆದಾಯ ಗುಂಪು): 3 ಲಕ್ಷದಿಂದ 6 ಲಕ್ಷ ರೂ.
  • MIG-I (ಮಧ್ಯಮ ಆದಾಯ ಗುಂಪು-I): 6 ಲಕ್ಷದಿಂದ 12 ಲಕ್ಷ ರೂ.
  • MIG-II: 12 ಲಕ್ಷದಿಂದ 18 ಲಕ್ಷ ರೂ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ನಿವಾಸ ಪುರಾವೆ (ರೇಷನ್ ಕಾರ್ಡ್/ವಿದ್ಯುತ್ ಬಿಲ್)
  • ಆದಾಯ ಪ್ರಮಾಣಪತ್ರ
  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ ವಿವರ
  • ಪಾಸ್ಪೋರ್ಟ್ ಗಾತ್ರದ ಫೋಟೋ

ಅರ್ಜಿ ಹೇಗೆ ಸಲ್ಲಿಸುವುದು?

  1. ಆನ್‌ಲೈನ್ ವಿಧಾನ: PMAY ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ನಮೂದಿಸಿ.
  2. ಆಫ್‌ಲೈನ್ ವಿಧಾನ: ನಿಮ್ಮ ನೆರೆಯ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸೀವಾ ಕೇಂದ್ರಕ್ಕೆ ದಾಖಲೆಗಳೊಂದಿಗೆ ಭೇಟಿ ನೀಡಿ.

ಹೆಚ್ಚಿನ ಮಾಹಿತಿಗಾಗಿ:
ಅಧಿಕೃತ ವೆಬ್‌ಸೈಟ್: https://pmaymis.gov.in/

ಸರ್ಕಾರದ ಈ ಯೋಜನೆಯಿಂದ ಲಾಭ ಪಡೆಯಲು ಇಂದೇ ಅರ್ಜಿ ಸಲ್ಲಿಸಿ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!