ನವದೆಹಲಿ, ಜುಲೈ 2025: ಕೇಂದ್ರ ಸರ್ಕಾರದ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಯಾದ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಈವರೆಗೆ 10 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ನೀಡಿದೆ. 1 ಮೇ 2016ರಂದು ಪ್ರಧಾನಿ ನರೇಂದ್ರ ಮೋದಿಯವರು ಶುರುವಾದ ಈ ಯೋಜನೆ, ಗ್ರಾಮೀಣ ಮತ್ತು ನಗರದ ಬಡ ಮಹಿಳೆಯರಿಗೆ ಸುರಕ್ಷಿತ ಅಡುಗೆ ಇಂಧನವನ್ನು ಒದಗಿಸುವ ಗುರಿ ಹೊಂದಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ 2025
ಭಾರತದಲ್ಲಿ ಹಲವಾರು ಕುಟುಂಬಗಳು ಇನ್ನೂ ಸೌದೆ, ಕಲ್ಲಿದ್ದಲು ಮತ್ತು ಇತರ ಹಾನಿಕಾರಕ ಇಂಧನಗಳನ್ನು ಬಳಸುತ್ತಿದ್ದು, ಇದು ಶ್ವಾಸಕೋಶದ ರೋಗಗಳು ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಇದನ್ನು ತಡೆಗಟ್ಟಲು, ಸರ್ಕಾರವು ಸಬ್ಸಿಡಿ ದರದಲ್ಲಿ ಎಲ್ಪಿಜಿ (LPG) ಸಿಲಿಂಡರ್ ನೀಡುವ ಉಜ್ವಲ ಯೋಜನೆಯನ್ನು ಪ್ರಾರಂಭಿಸಿದೆ.
10.33 ಕೋಟಿ ಜನರು ಈ ಯೋಜನೆಯಿಂದ ಲಾಭ ಪಡೆದಿದ್ದಾರೆ.
ಸುಮಾರು 32.94 ಕೋಟಿ ಎಲ್ಪಿಜಿ ಗ್ರಾಹಕರಲ್ಲಿ 31% ಉಜ್ವಲ ಯೋಜನೆಯ ಅಡಿಯಲ್ಲಿ ಸೇರ್ಪಡೆಯಾಗಿದೆ.
ಪ್ರಸ್ತುತ ಸಬ್ಸಿಡಿ ಸಿಲಿಂಡರ್ ಬೆಲೆ ₹550 (ಸಾಮಾನ್ಯ ಬೆಲೆಗಿಂತ ₹200 ರಿಯಾಯಿತಿ).
ಪ್ರತಿ ಫಲಾನುಭವಿಗೆ ₹300 ನೇರ ಬೆಂಬಲ (DBT ಮೂಲಕ).
ಯೋಜನೆಗೆ ಯಾರು ಅರ್ಹರು?
ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳ ಮಹಿಳೆಯರು.
SC/ST, OBC, ಅತ್ಯಂತ ಹಿಂದುಳಿದ ವರ್ಗ, PMAY (ಗ್ರಾಮೀಣ), AAY ಲಾಭಾರ್ಥಿಗಳು.
ವಯಸ್ಸು 18 ವರ್ಷಕ್ಕಿಂತ ಹೆಚ್ಚು ಇರಬೇಕು.
ಆದಾಯ ತೆರಿಗೆ ದಾತರಾಗಿರಬಾರದು.
ಈಗಾಗಲೇ ಎಲ್ಪಿಜಿ ಸಂಪರ್ಕ ಹೊಂದಿರುವವರಿಗೆ ಅರ್ಹತೆ ಇಲ್ಲ.
ಅರ್ಜಿಗೆ ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್ (ಅರ್ಜಿದಾರ ಮತ್ತು ಕುಟುಂಬದ)
ಬ್ಯಾಂಕ್ ಖಾತೆ ವಿವರ (DBT ಮೂಲಕ ಸಹಾಯಧನ ಪಡೆಯಲು)
ಮೊಬೈಲ್ ನಂಬರ್ (OTP ಮತ್ತು ಅಪ್ಡೇಟ್ಗಳಿಗೆ)
ಪಾಸ್ಪೋರ್ಟ್ ಗಾತ್ರದ ಫೋಟೋ
ಅರ್ಜಿ ಹೇಗೆ ಸಲ್ಲಿಸುವುದು?
1. ಆನ್ಲೈನ್ ವಿಧಾನ:
ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

“ಹೊಸ ಸಂಪರ್ಕಕ್ಕಾಗಿ ಅರ್ಜಿ” ಆಯ್ಕೆಯನ್ನು ಆರಿಸಿ.

ನಿಮ್ಮ ಪ್ರದೇಶದ ಎಲ್ಪಿಜಿ ಡೀಲರ್ ಆಯ್ಕೆಮಾಡಿ.
ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ನಮೂದಿಸಿ.
ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಸಲ್ಲಿಸಿ.
2. ಆಫ್ಲೈನ್ ವಿಧಾನ:
ನಿಮ್ಮ ನೆರೆಯ ಎಲ್ಪಿಜಿ ಡೀಲರ್ ಅಥವಾ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ.
ಉಜ್ವಲ ಯೋಜನೆ ಅರ್ಜಿ ಫಾರ್ಮ್ ಪಡೆದು, ದಾಖಲೆಗಳೊಂದಿಗೆ ಸಲ್ಲಿಸಿ.
ಯೋಜನೆ ಅಂಗೀಕರಿಸಿದರೆ, 15 ದಿನಗಳೊಳಗೆ ಸಿಲಿಂಡರ್ ಮನೆಗೆ ತಲುಪಿಸಲಾಗುತ್ತದೆ.
ಹೊಸ ಅರ್ಜಿದಾರರಿಗೆ ಸರ್ಕಾರದ ಎಚ್ಚರಿಕೆ
ಫ್ರಾಡ್ ತಡೆಗಟ್ಟಲು, ನಕಲಿ ದಾಖಲೆಗಳನ್ನು ಬಳಸಿ ಅರ್ಜಿ ಸಲ್ಲಿಸುವವರ ವಿರುದ್ಷ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಯೋಜನೆಯ ನಿಜವಾದ ಲಾಭಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರದ ಅಪ್ಡೇಟ್.
ಪ್ರಧಾನಮಂತ್ರಿ ಉಜ್ವಲ ಯೋಜನೆಯು ಬಡ ಮಹಿಳೆಯರ ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಈ ಯೋಜನೆಗೆ ಅರ್ಹತೆ ಹೊಂದಿದವರು ತಕ್ಷಣ ಅರ್ಜಿ ಸಲ್ಲಿಸಿ, ಎಲ್ಪಿಜಿ ಸಂಪರ್ಕ ಪಡೆಯಬಹುದು.
📌 ಹೆಚ್ಚಿನ ಮಾಹಿತಿಗಾಗಿ:
- ಟೋಲ್-ಫ್ರೀ ನಂಬರ್: 1800-266-6696
- ಅಧಿಕೃತ ವೆಬ್ಸೈಟ್: pmuy.gov.in
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.