ಅಂಚೆ ಕಚೇರಿ ಕಾರ್ಡ್ ದಾರರಿಗೆ ಗುಡ್ ನ್ಯೂಸ್, ಭಾಗ್ಯಲಕ್ಷ್ಮಿ- ಸುಕನ್ಯಾ ಸಮೃದ್ಧಿ ಖಾತೆಯಿಂದ ಹಲವು ಪ್ರಯೋಜನಗಳು…!
ಜನರಿಗೆ ಇಂದು ಅನೇಕ ರೀತಿಯ ಯೋಜನೆಗಳು, ಸಾಲ ಸೌಲಭ್ಯಗಳು(loan facilities), ಮತ್ತಿತರ ಸಹಾಯಧನವನ್ನು ಸರ್ಕಾರ (Government) ನೀಡುತ್ತಿದೆ. ಈ ಯೋಜನೆಗಳ ಮೂಲಕ ಬಡವರು, ಬಿಪಿಲ್ ಕಾರ್ಡ್ ದಾರರರು(BPL card holders) ತಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಿನವರ ವರೆಗೂ ಅನೇಕ ರೀತಿಯ ಯೋಜನೆಗಳಿವೆ. ಇನ್ನು ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ ಅಂತೂ ಸಣ್ಣ ವಯಸ್ಸಿನಿಂದ ಹಿಡಿದು ಅಜ್ಜಿಯಂದಿರೂ ಕೂಡ ಅನೇಕ ಯೋಜನೆಗಳನ್ನು ಸರ್ಕಾರದ ಮೂಲಕ ಪಡೆಯಬಹುದು.
ಸರ್ಕಾರದ ಯೋಜನೆಗಳನ್ನು ಒದಗಿಸುವಲ್ಲಿ ಅಂಚೆ ಕಚೇರಿಯು (Post office) ಒಂದು. ಇಂದು ಅಂಚೆ ಕಚೇರಿಯಲ್ಲಿ ಹತ್ತು ಹಲವು ಯೋಜನೆಗಳು, ಹೂಡಿಕೆಗಳಿದ್ದು ಜನರು ಇದರ ಸದುಪಯೋಗ ಪಡಿಕೊಳ್ಳಬೇಕು. ಹಾಗೆಯೇ ಇದೀಗ ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರಿಗೆ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು, ಕಾರ್ಡ್‌ದಾರರು ಅಂಚೆ ಕಛೇರಿಯಲ್ಲಿ ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆ (Bhagyalakshmi-Sukanya Samriddhi account) ಯನ್ನು ಹೆಣ್ಣು ಮಗುವಿನ ಹೆಸರಿನಲ್ಲಿ ತೆರೆಯಬಹುದು :
ಹೌದು, ಅಂಚೆ ಕಚೇರಿಯ ಈ ಒಂದು ಯೋಜನೆಯು ಮುಖ್ಯವಾಗಿ ಹೆಣ್ಣು ಮಗುವಿಗೆ ಅನ್ವಯಿಸುತ್ತದೆ. ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆದು ವಾರ್ಷಿಕ ರೂ. 3000ದಂತೆ 15 ವರ್ಷಗಳವರೆಗೆ ಒಟ್ಟು ರೂ
45,000ಗಳನ್ನು ಠೇವಣಿಯನ್ನು ಈ ಯೋಜನೆಯಲ್ಲಿ ಇಡಬಹುದು. ಮಗುವಿಗೆ 21 ವರ್ಷ (21 Years) ಪೂರ್ಣಗೊಂಡ ಬಳಿಕ ಈ ಹಣ ಬಡ್ಡಿಯ ಜೊತೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಮೊತ್ತವು ದೊರೆಯುತ್ತದೆ.
ಹೆಣ್ಣು ಮಗುವಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯ ಮೊತ್ತದ ಶೇ.50 ರಷ್ಟು ಭಾಗವನ್ನು ಹಿಂಪಡೆಯಲು ಅವಕಾಶ :
ಈ ಖಾತೆಯನ್ನು ಹೊಂದಿರುವ ಹೆಣ್ಣು ಮಗುವಿನ ಹೆಸರಿನಲ್ಲಿ ವಾರ್ಷಿಕ ರೂ. 3000ದಂತೆ 15 ವರ್ಷಗಳವರೆಗೆ ಒಟ್ಟು ರೂ. 45,000ಗಳನ್ನು ಹೂಡಿಕೆ ಮಾಡಿದರೆ, ಮಗುವಿಗೆ 21 ವರ್ಷ ಪೂರ್ಣಗೊಂಡ ನಂತರ ಪರಿಪಕ್ವ ಮೊತ್ತ ಅಂದಾಜು ರೂ. 1.27 ಲಕ್ಷ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಮಕ್ಕಳು 10ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ (Higher education) ಖಾತೆಯಲ್ಲಿರುವ ಮೊತ್ತದ ಶೇ.50ರಷ್ಟು ಭಾಗವನ್ನು ಹಿಂಪಡೆಯಲು ಅವಕಾಶವಿರುತ್ತದೆ. ಕಡು ಬಡತನ ಅಥವಾ ಬಿಪಿಲ್ ಕಾರ್ಡ್ (BPL card) ಹೊಂದಿದವರು ಈ ಒಂದು ಯೋಜನೆಯ ಮೂಲಕ ತಮ್ಮ ಹೆಣ್ಣು ಮಗುವಿನ ಭವಿಷ್ಯವನ್ನು ರೂಪಿಸಬಹುದು.
ಭಾಗ್ಯಲಕ್ಷ್ಮೀ – ಸುಕನ್ಯಾ ಸಮೃದ್ಧಿ ಯೋಜನೆಗೆ ಬಿ.ಪಿ.ಎಲ್. ಕಾರ್ಡ್ ಕಡ್ಡಾಯ :
ಭಾಗ್ಯಲಕ್ಷ್ಮೀ ಯೋಜನೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯಾಗಿದ್ದು, ಈ ಒಂದು ಯೋಜನೆಯು ಮುಖ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯವಾಗುತ್ತದೆ. ಕುಟುಂಬದ ಯಜಮಾನನ ಹೆಸರಿನಲ್ಲಿರುವ ಬಿಪಿಎಲ್ ಕಾರ್ಡ್ ಮೂಲಕ ಖಾತೆ ತೆರೆಯಬಹುದು. ಬಿಪಿಎಲ್ ಕಾರ್ಡ್‌ನಲ್ಲಿ ತಾಯಿಯ ಹೆಸರು ಇರಬೇಕಾದ್ದು ಕಡ್ಡಾಯವಲ್ಲ. ಆದರೆ ತಾಯಿಯ ಅಂದರೆ ಸುಕನ್ಯಾ ಸಮೃದ್ಧಿ ಖಾತೆ ಅಪ್ರಾಪ್ತ ಮಗುವಿನ ಹೆಸರಿನಲ್ಲಿ ತೆರೆಯುವಾಗ ನಿಗದಿ ಪಡಿಸಿದ ಪೋಷಕರ ಗುರುತಿನ ಹಾಗೂ ವಿಳಾಸದ ಪುರಾವೆ ನೀಡುವುದು ಕಡ್ಡಾಯವಾಗಿರುತ್ತದೆ.
ಹೆಣ್ಣು ಮಗುವಿನ ಭಾಗ್ಯಲಕ್ಷ್ಮೀ ಯೋಜನೆಯ ಖಾತೆಗೆ ನಾಮಿನಿ (Nominee) ಯಾರು ?
ಹೆಣ್ಣು ಮಗುವಿನ ತಾಯಿ ಖಾತೆಯಲ್ಲಿ ಪೋಷಕಿಯಾಗಿದ್ದು ನಾಮಿನಿ ಕೂಡ ಆಗಿರುತ್ತಾರೆ. ತಾಯಿ ಇರದಿದ್ದರೆ, ತಂದೆ ನಾಮಿನಿಯಾಗಿ ಗುರುತಿಸತಕ್ಕದ್ದು. ಇಬ್ಬರೂ ಇಲ್ಲದೇ ಇದ್ದಲ್ಲಿ ಕಾನೂನು ರೀತ್ಯಾ ಪೋಷಕರು ನಾಮಿನಿಯಾಗಿ ಗುರುತಿಸಬಹುದು.
ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆ ತೆರೆಯಲು ಬೇಕಾಗುವ ದಾಖಲೆಗಳ (Documents) ವಿವರ :
ಅರ್ಜಿ ನಮೂನೆ
ಪೋಷಕರೊಂದಿಗೆ ಮಗುವಿನ ಭಾವಚಿತ್ರ
ಮಗುವಿನ ಮೂಲ ಜನನ ಪ್ರಮಾಣ ಪತ್ರ
ಆದ್ಯತಾ ಕುಟುಂಬ ಪಡಿತರ ಚೀಟಿಯ ಪ್ರತಿ (ಪಡಿತರ ಚೀಟಿಯಲ್ಲಿ ತಂದೆಯ ಹೆಸರು ಇರಬೇಕು) ದಾಖಲೆಗಳು ಅಗತ್ಯವಾಗಿದೆ.
ಈ ಯೋಜನೆಗೆ ಮಗುವಿನ ಹೆಸರನ್ನು ನೊಂದಾಯಿಸುವುದು ಹೇಗೆ ?
ಪೋಷಕರ ಆಧಾರ್ ಕಾರ್ಡ್, ಮಗುವಿನ ಆಧಾರ್ ಕಾರ್ಡ್, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಪೋಷಕರ ಸ್ವಯಂ ಘೋಷಣಾ ವಿವಾಹ ದೃಢೀಕರಣ ಪತ್ರ (ನಮೂನೆ-6ರಲ್ಲಿ), ಭರ್ತಿ ಮಾಡಿದ ಅರ್ಜಿಯನ್ನು ಮಗು ಹುಟ್ಟಿದ ದಿನಾಂಕದಿಂದ 2 ವರ್ಷ ಪೂರ್ಣಗೊಳ್ಳುವ ಮೊದಲು ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಪಡೆದು ಅಂಗನವಾಡಿ ಕಾರ್ಯಕರ್ತೆಗೆ ನೀಡಿ ಹೆಸರನ್ನು ನೋಂದಾಯಿಸಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




