Free Ration – ಉಚಿತ ಪಡಿತರ ಪಡೆಯುತ್ತಿರುವವರಿಗೆ ಕೇಂದ್ರದಿಂದ ಮತ್ತೊಂದು ಸಿಹಿ ಸುದ್ದಿ

rice yojane

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅರ್ಹ ನಾಗರಿಕರಿಗೆ ಸಾರ್ವಜನಿಕ ವಿತರಣಾ ಯೋಜನೆಯಡಿ ಕೇಂದ್ರ ಸರ್ಕಾರ(central government)ವು ಇನ್ನೂ ಐದು ವರ್ಷಗಳವರೆಗೆ ಉಚಿತ ಧಾನ್ಯಗಳನ್ನು(Free grains) ನೀಡುತ್ತದೆ ಎಂದು ತಿಳಿಸಿದರು. ಹೌದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು (PMGKY)ವಿಸ್ತರಿಸುವ ಕೇಂದ್ರದ ಉದ್ದೇಶವನ್ನು ಪ್ರಧಾನಿ ಮೋದಿ ಅವರೇ ಕಳೆದ ತಿಂಗಳ ಆರಂಭದಲ್ಲಿ ನವೆಂಬರ್ 4 ರಂದು ಛತ್ತೀಸ್‌ಗಢದ ದುರ್ಗ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುವ ನಿರ್ಧಾರವನ್ನು ಘೋಷಿಸಿದ್ದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇನ್ನೂ ಐದು ವರ್ಷಗಳು ದೊರೆಯಲಿದೆ ಉಚಿತ ಧಾನ್ಯಗಳು

ಬಿಜೆಪಿ ಸರ್ಕಾರವು(BJP government) ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರ ನೀಡುವ ಯೋಜನೆಯನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲು ನಾನು ನಿರ್ಧರಿಸಿದ್ದೇನೆ, ನಿಮ್ಮ ಪ್ರೀತಿ ಮತ್ತು ಆಶೀರ್ವಾದವು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನನಗೆ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಯೋಜನೆಯ ವಿಸ್ತರಣೆಯ ಮೂಲಕ ಬಡವರು ಉಳಿಸಿದ ಹಣವು ಇತರ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ನಮ್ಮ ಪ್ರಧಾನಿ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ಹೇಳಿಕೊಂಡರು. ಮೋದಿ ಭರವಸೆ ನೀಡಿದರೆ ಭರವಸೆ ಈಡೇರಿಸುವುದಾಗಿ ನಡೆದುಕೊಳ್ಳುತ್ತಾರೆ ಎಂದು ಹೇಳಿದ್ದರು.

ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKY)ನಡೆಸುತ್ತಿದೆ. ಪಿಎಂ ಗರೀಬ್ ಕಲ್ಯಾಣ್ ಯೋಜನೆಯನ್ನು ಆರಂಭದಲ್ಲಿ ಕೋವಿಡ್ (covid) ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ಪ್ರಾರಂಭಿಸಲಾಯಿತು, ಅಲ್ಲಿ ಪಡಿತರ ಕಾರ್ಡ್ (ration card) ಹೊಂದಿರುವವರು ಹೆಚ್ಚುವರಿ 5kg ಧಾನ್ಯಗಳನ್ನು ಸ್ವೀಕರಿಸಲು ಅರ್ಹರಾಗಿದ್ದರು.

ಸರ್ಕಾರವು ಇನ್ನು 5 ವರ್ಷಗಳವರೆಗೆ ಈ ಯೋಜನೆಯಡಿ ಉಚಿತ ಪಡಿತರವನ್ನು ವಿತರಿಸಲಿದೆ ಎಂದು ಹೇಳಿದರು. ಅಂದರೆ ಈಗ ಅದರ ಗಡುವನ್ನು ಜನವರಿ 1, 2024 ರಿಂದ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ. ಪಡಿತರ ಚೀಟಿ ಹೊಂದಿರುವವರಿಗೆ ಈ ಯೋಜನೆಯ ಲಾಭ ದೊರೆಯುತ್ತದೆ. ಯಾವುದೇ ಪಡಿತರ ಚೀಟಿದಾರರು ಪಡಿತರ ಅಂಗಡಿಗೆ ತೆರಳಿ ಪಡಿತರ ಪಡೆಯಬಹುದು. ಕಾರ್ಡ್‌ನಲ್ಲಿ ಪ್ರತಿ ಕುಟುಂಬದ ಸದಸ್ಯರಿಗೆ 5 ಕೆಜಿ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಡ್ರೋನ್ ಸಖಿ ಯೋಜನೆಗೆ ಅನುಮೋದನೆ :

ಅಷ್ಟೇ ಅಲ್ಲದೆ ಮೋದಿಯವರು ಕ್ಯಾಬಿನೆಟ್ ಅಲ್ಲಿ ಬುಧವಾರ ಡ್ರೋನ್ ಸಖಿ ಯೋಜನೆಗೆ (Drone sakhi yojana) ಅನುಮೋದನೆ ನೀಡಿದ್ದಾರೆ. ಈ ಯೋಜನೆಯಡಿ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಡ್ರೋನ್‌ಗಳನ್ನು ಹಾರಿಸುವ ತರಬೇತಿ ನೀಡಲಾಗುತ್ತದೆ. ಈ ಡ್ರೋನ್‌ಗಳ ಸಹಾಯದ ಮೂಲಕ ಹೊಲಗಳಲ್ಲಿ ಕೀಟನಾಶಕ ಸಿಂಪಡಿಸಲಾಗುವುದು. ಈ ಯೋಜನೆಯಿಂದ ಮಹಿಳಾ ಗುಂಪುಗಳು ಲಕ್ಷಗಟ್ಟಲೆ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮತ್ತು ಮೋದಿಯವರು ಮಹಿಳೆಯರನ್ನು ಲಖ್ಪತಿ ದೀದಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದರು, ಈ ಯೋಜನೆಯಡಿಯಲ್ಲಿ ಮಹಿಳಾ ಗುಂಪುಗಳಿಗೆ 8 ಲಕ್ಷ ರೂ.ವರೆಗೆ ಸಹಾಯಧನ(subsidy) ನೀಡಲಾಗುತ್ತದೆ.

ಈ ಯೋಜನೆಯಲ್ಲಿ 18 ವರ್ಷ ಮೇಲ್ಪಟ್ಟ ಹಾಗೂ 10ನೇ ತರಗತಿ ಉತ್ತೀರ್ಣರಾಗಿರುವ ಮಹಿಳಾ ಸ್ವಸಹಾಯ ಸಂಘದ ಸದಸ್ಯರನ್ನು ಡ್ರೋನ್ ಸಖಿಯಾಗಿ ಇರಿಸಲಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಅವರಿಗೆ 15 ದಿನಗಳ ಡ್ರೋನ್‌ಗಳನ್ನು ಹಾರಿಸುವ ತರಬೇತಿ ನೀಡಲಾಗುತ್ತದೆ. ಇದರಲ್ಲಿ 5 ದಿನಗಳ ಡ್ರೋನ್ ಪೈಲಟ್ (Drone pilot)ತರಬೇತಿ ಅಗತ್ಯವಿದ್ದು, 10 ದಿನಗಳ ಹೆಚ್ಚುವರಿ ಗೊಬ್ಬರ ಮತ್ತು ಕೀಟನಾಶಕ ಸಿಂಪಡಿಸಲು ತರಬೇತಿ ನೀಡಲಾಗುತ್ತದೆ. ಆ ಸದಸ್ಯರನ್ನು ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (SRLM) ಮತ್ತು ಲೀಡ್ ಫರ್ಟಿಲೈಸರ್ ಕಂಪನಿ (LFC) ಆಯ್ಕೆ ಮಾಡುತ್ತದೆ.

ಅಗ್ರಿ ಡ್ರೋನ್ ಹಾರಿಸುವ ಮಹಿಳೆಗೆ ಮಾಸಿಕ 15,000 ರೂ. ಹಾಗೂ ಸಹಾಯಕಿಗೆ ಮಾಸಿಕ 10,000 ರೂ. ಮತ್ತು ಡ್ರೋನ್ ದುರಸ್ತಿ ಮಾಡುವ ಸದಸ್ಯರಿಗೆ 5,000 ರೂ. ಸಿಗುತ್ತದೆ.ಈ ಯೋಜನೆಯು 2026 ರವರೆಗೆ ಮುಂದುವರಿಯುತ್ತದೆ.ಮತ್ತು ಗುಂಪಿನ ಮಹಿಳೆಯರು ಡ್ರೋನ್ ಮೂಲಕ 1.25 ಲಕ್ಷ ರೂ.ವರೆಗೆ ಗಳಿಸುತ್ತಾರೆ. ಹಾಗೆಯೇ ಇಂತಹ ಉಪಯುಕ್ತ ಹಾಗೂ ಮುಖ್ಯ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!