PM Vidyalakshmi: ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿ ಸಾಲ ಸಿಗುವ ಪಿಎಂ ವಿದ್ಯಾಲಕ್ಷ್ಮೀ ಯೋಜನೆ. ಅಪ್ಲೈ ಮಾಡಿ

pm vidyalskhmi

WhatsApp Group Telegram Group

ನವೆಂಬರ್ 27, 2025: ಉನ್ನತ ಶಿಕ್ಷಣದ ಕನಸು ನನಸಾಗಲು, ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ’ ಪ್ರಮುಖ ಅವಕಾಶವಾಗಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕಳೆದುಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯೋಜನೆಯ ಪ್ರಮುಖ ಲಕ್ಷಣಗಳು

ಈ ಕೇಂದ್ರ ಪ್ರಾಯೋಜಿತ ಯೋಜನೆಯು ವಿದ್ಯಾರ್ಥಿಗಳಿಗೆ ಅಡಮಾನ ರಹಿತವಾಗಿ 10 ಲಕ್ಷ ರೂಪಾಯಿಗಳವರೆಗೆ ಶಿಕ್ಷಣ ಸಾಲವನ್ನು ಒದಗಿಸುತ್ತದೆ. ಇದರ ಮೂಲಕ ಮ್ಯಾನೇಜ್ಮೆಂಟ್ ಕೋಟಾ ಬದಲು ಮೆರಿಟ್ ಆಧಾರಿತ ಸೀಟು ಪಡೆದ ವಿದ್ಯಾರ್ಥಿಗಳು ರಿಯಾಯಿತಿ ಬಡ್ಡಿದರದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ.

ಸಾಲದ ವಿವರಗಳು ಮತ್ತು ಬಡ್ಡಿದರ

ಗರಿಷ್ಠ ಸಾಲ ಮೊತ್ತ: 10 ಲಕ್ಷ ರೂ.
ಬಡ್ಡಿದರ: ಬ್ಯಾಂಕಿನ IBLR + 0.5%
ವಿಶೇಷ ರಿಯಾಯಿತಿ: 8 ಲಕ್ಷ ರೂ. ವಾರ್ಷಿಕ ಆದಾಯ ಇರುವ ಕುಟುಂಬಗಳ ವಿದ್ಯಾರ್ಥಿಗಳಿಗೆ 3% ಹೆಚ್ಚುವರಿ ಬಡ್ಡಿ ರಿಯಾಯಿತಿ.
ಪೂರ್ಣ ಬಡ್ಡಿ ವಿನಾಯಿತಿ: 4.5 ಲಕ್ಷ ರೂ. ಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಗಳ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳಿಗೆ ಸೇರಿದರೆ ಪೂರ್ಣ ಬಡ್ಡಿ ವಿನಾಯಿತಿ ಲಭ್ಯ.

ಯಾರಿಗೆ ಅರ್ಹತೆ?

ಸರ್ಕಾರ ಅನುಮೋದಿಸಿದ 800 ಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಕೋರ್ಸುಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು.
ಮೆರಿಟ್ ಆಧಾರದಲ್ಲಿ ಸೀಟು ಪಡೆದವರು ಮಾತ್ರ (ಮ್ಯಾನೇಜ್ಮೆಂಟ್ ಕೋಟಾ ಅರ್ಹರಲ್ಲ).
ಓದಿನಲ್ಲಿ ಹಿಂದುಳಿಯದ ವಿದ್ಯಾರ್ಥಿಗಳು.

ಸಾಲ ಮರುಪಾವತಿ ಅವಧಿ

ಸಾಲ ಮಂಜೂರಾದ ದಿನದಿಂದ ಓದು ಮುಗಿದ ನಂತರ 1 ವರ್ಷದವರೆಗಿನ ‘ಮೊರಾಟೋರಿಯಂ ಅವಧಿ’ಯಲ್ಲಿ ಸಾಲ ಮರುಪಾವತಿ ಅಗತ್ಯವಿಲ್ಲ. ಈ ನಂತರ ವಿದ್ಯಾರ್ಥಿಗಳಿಗೆ 15 ವರ್ಷಗಳ ಕಾಲಾವಕಾಶದಲ್ಲಿ ಸಾಲ ಮರುಪಾವತಿ ಮಾಡಲು ಅವಕಾಶವಿದೆ.

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್ಸೈಟ್ pmvidyalaxmi.co.in ಗೆ ಭೇಟಿ ನೀಡಿ.

    pm vidyalakhmi

    ‘ವಿದ್ಯಾರ್ಥಿ’ ವರ್ಗದಲ್ಲಿ ನೋಂದಣಿ ಮಾಡಿಕೊಳ್ಳಿ.

    pm vidyalakhmi 1

    ಲಾಗಿನ್ ಆದ ನಂತರ ‘Apply for Education Loan’ ಆಯ್ಕೆಯನ್ನು ಆರಿಸಿ.

      ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.

        ಈ ಯೋಜನೆಯು ದೇಶದ ಭವಿಷ್ಯವನ್ನು ಕಟ್ಟುವ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಸೇರಿಸುವ ಉದ್ದೇಶ ಹೊಂದಿದೆ. ಶಿಕ್ಷಣಕ್ಕಾಗಿ ಹಣಕಾಸು ಸಹಾಯ ಬೇಕಾದ ವಿದ್ಯಾರ್ಥಿಗಳು ಈ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಬಹುದು.

        This image has an empty alt attribute; its file name is WhatsApp-Image-2025-09-05-at-11.51.16-AM-12-1024x330.jpeg
        ಈ ಮಾಹಿತಿಗಳನ್ನು ಓದಿ

        ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

        WhatsApp Group Join Now
        Telegram Group Join Now

        Leave a Reply

        Your email address will not be published. Required fields are marked *