ಪಿಎಂ ಸೂರ್ಯಘರ್ ಯೋಜನೆಯ ಮನೆಮನೆಗೆ ಸೌರಶಕ್ತಿ, ಬರೋಬ್ಬರಿ 1.45 ಲಕ್ಷ ನೊಂದಣಿ; ನೀವು ಅಪ್ಲೈ ಮಾಡಿ

IMG 20241205 WA0001

ಪಿಎಂ ಸೂರ್ಯಘರ್ ಯೋಜನೆಯಲ್ಲಿ(PM Suryaghar Scheme) 1.45 ಕೋಟಿ ನೊಂದಣಿ.! ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿರುವ ರಾಜ್ಯಗಳ ಪಟ್ಟಿ.

ದೇಶಾದ್ಯಂತ ಮನೆಗಳಲ್ಲಿ ನವೀಕರಿಸಬಹುದಾದ ಶಕ್ತಿ ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪಿಎಂ ಸೂರ್ಯಘರ್ ಯೋಜನೆಯನ್ನು(PM Suryaghar Scheme) 2024ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ಮನೆಗೂ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ(300 units) ಉಚಿತ ವಿದ್ಯುತ್ ಪಡೆಯುವ ಕೇಂದ್ರ ಸರ್ಕಾರದ ವಿಶೇಷ ಯೋಜನೆ ಇದಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಮನೆಗಳ ಟೆರೆಸ್(Terrace) ಮೇಲೆ ಸೌರ ಫಲಕಗಳನ್ನು(Solar panels) ಅಳವಡಿಸಿ ಉಚಿತ ವಿದ್ಯುತ್ ಒದಗಿಸುವುದು ಹಾಗೂ ಸೂರ್ಯನಿಂದ ಉತ್ಪತ್ತಿಯಾಗುವ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ(natural resources) ಸದ್ಬಳಕೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯಡಿ ಈವರೆಗೆ ಎಷ್ಟು ನೊಂದಣಿಗಳಾಗಿವೆ? ಈಗಾಗಲೇ ಎಷ್ಟು ಸೌರಫಲಕಗಳನ್ನು ಸ್ಥಾಪಿಸಲಾಗಿದೆ? ಯಾವ ರಾಜ್ಯದಿಂದ ಅತಿ ಹೆಚ್ಚು ಅರ್ಜಿಗಳು ಬಂದಿದ್ದಾವೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯಡಿ ಸಿಗಲಿದೆ ಆದಾಯ :

ಪಿಎಂ ಸೂರ್ಯಘರ್ ಯೋಜನೆಯಡಿ (PM Suryaghar Scheme)ಮನೆಯ ಟೆರೆಸ್ ಮೇಲೆ ಸೌರ ಫಲಕಗಳನ್ನು ಅಳವಡಿಸಲು 30,000 ದಿಂದ 78,000 ರೂ. ವರೆಗಿನ ಸಬ್ಸಿಡಿಯನ್ನು(subsidy) ಸರ್ಕಾರದಿಂದ ನೀಡಲಾಗುತ್ತದೆ. 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ತಯಾರಿಸಲು ಈ ಸೌರ ಶಕ್ತಿ ವ್ಯವಸ್ಥೆ ನೆರವಾಗುವುದರ ಜೊತೆಗೆ ಉಳಿದ ಶಕ್ತಿಯನ್ನು ಸರ್ಕಾರಕ್ಕೆ ಮಾರುವ ಮೂಲಕ ಹೆಚ್ಚಿನ ಆದಾಯವನ್ನೂ (More income) ಪಡೆದುಕೊಳ್ಳಬಹುದು.

ಪಿಎಂ ಸೂರ್ಯಘರ್ ಯೋಜನೆಯಲ್ಲಿ ಎಷ್ಟು ಮಂದಿ ನೊಂದಣಿಯಾಗಿದ್ದಾರೆ :

ಮನೆಯ ಟೆರೆಸ್ ಮೇಲೆ ಸೋಲಾ‌ರ್ ಸ್ಥಾಪಿಸುವ ಪಿಎಂ ಸೂರ್ಯಘರ್ ಯೋಜನೆಯಡಿ ಈರೆಗೆ 1.45 ಕೋಟಿ ನೊಂದಣಿಗಳಾಗಿದ್ದು(1.45 crore registrations), ಈ ಪೈಕಿ 6.34 ಲಕ್ಷ ಸೌರಫಲಕಗಳನ್ನು(6.34 lakh solar panels) ಸ್ಥಾಪಿಸಲಾಗಿದೆ. 26.38 ಲಕ್ಷ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲಾಗಿದ್ದು, 3.66 ಲಕ್ಷ ಮಂದಿಗೆ ಸರ್ಕಾರದಿಂದ ಸಬ್ಸಿಡಿ(subsidy) ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಮರುಬಳಕೆ ಇಂಧನ ಖಾತೆ ರಾಜ್ಯ ಸಚಿವ(Union Minister of State for Recycled Energy) ಶ್ರೀಪಾದ್‌ ನಾಯ್ಕ (Shripad Nayka)ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಸರ್ಕಾರದಿಂದ ಸಿಗುವ ಸಬ್ಸಿಡಿ ವಿವರ :

ತಿಂಗಳಲ್ಲಿ ಬಳಸುವ ವಿದ್ಯುತ್ ಆಧಾರದ ಮೇಲೆ ಸೋಲಾರ್ ಸ್ಥಾಪಿಸಿಕೊಳ್ಳಬಹುದು. ಒಂದು ವೇಳೆ ನೀವು ಮನೆಗೆ 150 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವುದಾದರೆ 1-2 ಕಿವ್ಯಾ ಸೋಲಾರ್ ಸ್ಥಾಪಿಸಿಕೊಳ್ಳಬಹುದು. 150ರಿಂದ 300 ಯೂನಿಟ್ ಗಳಷ್ಟು ವಿದ್ಯುತ್ ಬಳಸಿಕೊಳ್ಳುವುದಾದರೆ 2-3 ಕಿವ್ಯಾ ಸೋಲಾ‌ರ್ ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಇನ್ನೂ ಹೆಚ್ಚಿನ ವಿದ್ಯುತ್ ಅವಶ್ಯಕತೆ ಇದ್ದಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯದ ಸೋಲಾರ್ ಬಳಸಿಕೊಳ್ಳಬಹುದು. 3.66 ಲಕ್ಷ ಮಂದಿಗೆ ಸರ್ಕಾರದಿಂದ ಸಬ್ಸಿಡಿ ಬಿಡುಗಡೆ ಮಾಡಲಾಗಿದ್ದು, 1-2 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದರೆ 60,000 ರೂವರೆಗೂ ಸಬ್ಸಿಡಿ ಸಿಗುತ್ತದೆ. 2-3 ಕಿವ್ಯಾ ವಿದ್ಯುತ್‌ ಉತ್ಪಾದನೆ ಮಾಡಿದರೆ 78,000 ರೂವರೆಗೆ ಸಬ್ಸಿಡಿ ಸಿಗುತ್ತದೆ. ಅದಕ್ಕೂ ಮೇಲ್ಪಟ್ಟ ಸಾಮರ್ಥ್ಯದ ಸೋಲಾರ್ ಸ್ಥಾಪನೆ ಮಾಡಿದರೆ ಸಬ್ಸಿಡಿ ಮಿತಿ 78,000 ರೂ ಇರುತ್ತದೆ.

ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿರುವ ರಾಜ್ಯಗಳ ಪಟ್ಟಿ:

2026-27ರ ವೇಳೆಗೆ ಒಂದು ಕೋಟಿ ಮನೆಗಳಲ್ಲಿ ಸೋಲಾರ್ ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದರಲ್ಲಿ ಶೇ.40ರಷ್ಟು ವೆಚ್ಚವನ್ನು ಸರಕಾರ ಸಬ್ಸಿಡಿ ಮೂಲಕ ಭರಿಸುತ್ತದೆ. ಯೋಜನೆಗೆ 1.45 ಕೋಟಿ ನೊಂದಣಿಯಾಗಿರುವ ಪೈಕಿ ಹೆಚ್ಚಿನ ಅರ್ಜಿಗಳು ಗುಜರಾತ್(Gujarat), ಮಹಾರಾಷ್ಟ್ರ(Maharashtra), ಉತ್ತರ ಪ್ರದೇಶದಿಂದ(Uttar Pradesh) ಬಂದಿದ್ದಾವೆ. ಗುಜರಾತ್‌ನಲ್ಲಿ 2,86,545 ಅರ್ಜಿಗಳು ಸಲ್ಲಿಕೆ ಆಗಿವೆ. ಮಹಾರಾಷ್ಟ್ರದಿಂದ 1.26 ಲಕ್ಷ ಅರ್ಜಿಗಳು ಬಂದಿದ್ದರೆ, ಉತ್ತರಪ್ರದೇಶದ 53,423 ನಿವಾಸಿಗಳು ಸೋಲಾರ್‌ಗಾಗಿ ಅರ್ಜಿ ಹಾಕಿದ್ದಾರೆ ಎಂದು ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್‌ ನಾಯ್ಕ(Shripad Nayka) ಅವರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಈ ಯೋಜನೆಗೆ ಕೇಂದ್ರ ₹75,021 ಕೋಟಿ ಮೀಸಲಿಟ್ಟಿದೆ.

ಪಿಎಂ ಸೂರ್ಯಘರ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ಪಿಎಂ ಸೂರ್ಯಘರ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ www.pmsuryaghar.gov.in/  ಭೇಟಿ ನೀಡಬೇಕು.
ರಿಜಿಸ್ಟ್ರೇಶನ್ ಟ್ಯಾಬ್ ಕ್ಲಿಕ್ ಮಾಡುವು ಮೂಲಕ ಮೊದಲು ನೊಂದಣಿ ಮಾಡಿಕೊಳ್ಳಬೇಕು.
ನಂತರ ರಾಜ್ಯವನ್ನು ಆಯ್ಕೆ ಮಾಡಿ. ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿ ಅನುಮೋದನೆ ಸಿಗುವವರೆಗೂ ಕಾಯಬೇಕು.
ಇದಾದ ಬಳಿಕ ಡಿಸ್ಕಾಂನಲ್ಲಿ ನೊಂದಾಯಿತವಾಗಿರುವ ವೆಂಡ‌ರ್ ಮೂಲಕ ಸೋಲಾರ್ ಸ್ಥಾಪಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ಗುರುತಿನ ಪುರಾವೆ
ವಿಳಾಸದ ಪುರಾವೆ
ವಿದ್ಯುತ್ ಬಿಲ್ ಛಾವಣಿಯ/ಮನೆ ಮಾಲೀಕತ್ವದ ಪ್ರಮಾಣಪತ್ರ

ಪಿಎಂ ಸೂರ್ಯಘರ್ ಯೋಜನೆ ಭಾರತದಲ್ಲಿ ಶಕ್ತಿಯ ನವೀಕರಣ ಮತ್ತು ಪರಿಸರದ ರಕ್ಷಣೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದರ ಪರಿಣಾಮವಾಗಿ, ದೇಶವು ನವೀನ ಶಕ್ತಿ ಸ್ವಾಯತ್ತತೆಯನ್ನು ಸಾಧಿಸಲು ಮತ್ತು ಪರಿಸರ ಸ್ನೇಹಿ(Environmental friendly) ಶಕ್ತಿಯನ್ನು ಉತ್ತೇಜಿಸಲು ಸಿದ್ಧವಾಗಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!