kusum b solar pumpset subsidy scaled

PM KUSUM-B Scheme Karnataka: ಸೋಲಾರ್ ಪಂಪ್‌ಸೆಟ್‌ಗಳಿಗೆ 80% ಸಬ್ಸಿಡಿ! ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿ.

WhatsApp Group Telegram Group

ಪ್ರಮುಖ ಮುಖ್ಯಾಂಶಗಳು

  • ಸೋಲಾರ್ ಪಂಪ್‌ಸೆಟ್‌ಗೆ ಸರ್ಕಾರದಿಂದ ಬರೋಬ್ಬರಿ 80% ಸಬ್ಸಿಡಿ.
  • ರೈತರು ಕೇವಲ 20% ಹಣ ಕಟ್ಟಿದರೆ ಸಾಕು; ಕರೆಂಟ್ ಬಿಲ್ ಟೆನ್ಷನ್ ಇಲ್ಲ.
  • ಡಿಸೆಂಬರ್‌ನಲ್ಲಿ ಯೋಜನೆ ಮುಕ್ತಾಯ; ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.

ಹೊಲದಲ್ಲಿ ಬೆಳೆದು ನಿಂತಿರುವ ಬೆಳೆಗೆ ಸರಿಯಾದ ಸಮಯಕ್ಕೆ ನೀರು ಹರಿಸಲು ಕರೆಂಟ್ ಇರಲ್ವಾ? ದಿನವಿಡೀ ಕರೆಂಟ್‌ಗಾಗಿ ಕಾಯ್ದು ಕಾಯ್ದು, ರಾತ್ರಿ ಹೊತ್ತು ನಿದ್ದೆಗೆಟ್ಟು ಹೊಲಕ್ಕೆ ನೀರು ಹಾಯಿಸಿ ಸುಸ್ತಾಗಿದ್ದೀರಾ? ಹಾಗಿದ್ದರೆ ಇನ್ಮುಂದೆ ನೀವು ಕರೆಂಟ್‌ಗಾಗಿ ಕಾಯುವ ಅಗತ್ಯವಿಲ್ಲ! ಡೀಸೆಲ್ ಪಂಪ್‌ಸೆಟ್‌ಗೆ ಸಾವಿರಾರು ರೂಪಾಯಿ ಸುರಿಯುವ ಕರ್ಮವೂ ಇಲ್ಲ! ಹೌದು, ನಿಮ್ಮಂತಹ ರೈತರಿಗಾಗಿಯೇ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

(ಸರ್ಕಾರದ ಕುಸುಮ-ಬಿ ಯೋಜನೆಯಡಿ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್‌ಸೆಟ್ ಪಡೆಯುವುದು ಹೇಗೆ ಎಂದು ಸುಲಭವಾಗಿ ತಿಳಿಯಲು ಈ ವಿಡಿಯೋ ತಪ್ಪದೆ ವೀಕ್ಷಿಸಿ)

ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು, ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ (PM-KUSUM Component-B) ಅಡಿಯಲ್ಲಿ ‘ಜಾಲಮುಕ್ತ ಸೌರ ಪಂಪ್‌ಸೆಟ್‌’ಗಳನ್ನು (Off-grid Solar Pumps) ನೀಡಲಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

ಕುಸುಮ-ಬಿ ಯೋಜನೆ: ರೈತರಿಗೆ ಎಷ್ಟು ಲಾಭ?

ಸಾಮಾನ್ಯವಾಗಿ ಒಂದು 5 HP ಸೋಲಾರ್ ಪಂಪ್‌ಸೆಟ್ ಹಾಕಿಸಲು ಸುಮಾರು 2.85 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ ಈ ಯೋಜನೆಯಡಿ:

  • ಕೇಂದ್ರ ಸರ್ಕಾರವು 30% ಸಬ್ಸಿಡಿ ನೀಡುತ್ತದೆ.
  • ರಾಜ್ಯ ಸರ್ಕಾರವು ಬರೋಬ್ಬರಿ 50% ಸಬ್ಸಿಡಿ ನೀಡುತ್ತದೆ.
  • ಅಂದರೆ, ಒಟ್ಟು 80% ರಷ್ಟು ಹಣವನ್ನು ಸರ್ಕಾರವೇ ಕಟ್ಟುತ್ತದೆ. ರೈತರು ಕೇವಲ ತಮ್ಮ ಪಾಲಿನ 20% (ಅಂದಾಜು ₹58,000) ಹಣ ಪಾವತಿಸಿದರೆ ಸಾಕು!

ಇದರಿಂದ ರೈತರಿಗೆ ಪ್ರತಿ ವರ್ಷ ಡೀಸೆಲ್ ಖರೀದಿಗೆ ತಗುಲುತ್ತಿದ್ದ ಸುಮಾರು ₹50,000 ಹಣ ಉಳಿತಾಯವಾಗಲಿದ್ದು, ಹಗಲಿನ ಹೊತ್ತಿನಲ್ಲೇ ನಿರಂತರ ನೀರಾವರಿ ಮಾಡಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Documents Required)

ಈ ಸೌಲಭ್ಯ ಪಡೆಯಲು ನೀವು ರೈತರಾಗಿರಬೇಕು, ರೈತ ಗುಂಪುಗಳು ಅಥವಾ ಪಂಚಾಯತ್ ವ್ಯಾಪ್ತಿಗೆ ಸೇರಿರಬೇಕು. ಅರ್ಜಿ ಹಾಕುವಾಗ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  • ನಿಮ್ಮ ಆಧಾರ್ ಕಾರ್ಡ್
  • ಭೂಮಿಯ ದಾಖಲೆಗಳು (ಪಹಣಿ/RTC)
  • ಬ್ಯಾಂಕ್ ಖಾತೆಯ ಪಾಸ್‌ಬುಕ್
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು 1 ಪಾಸ್‌ಪೋರ್ಟ್ ಸೈಜ್ ಫೋಟೋ

ಪಂಪ್ ಸಾಮರ್ಥ್ಯ ಮತ್ತು ರೈತರು ಕಟ್ಟಬೇಕಾದ ಹಣದ ಪಟ್ಟಿ

ಪಂಪ್ ಸಾಮರ್ಥ್ಯ (HP) ಪಂಪ್ ಮಾದರಿ ರೈತರು ಕಟ್ಟಬೇಕಾದ ಹಣ (20%) ಒಟ್ಟು ವೆಚ್ಚ (100%)
3 HP ಸರ್ಫೇಸ್ (Surface) ₹43,276 ₹1,95,944
ಸಬ್‌ಮರ್ಸಿಬಲ್ (Submersible) ₹44,827 ₹1,99,047
5 HP ಸರ್ಫೇಸ್ (Surface) ₹57,733 ₹2,83,985
ಸಬ್‌ಮರ್ಸಿಬಲ್ (Submersible) ₹58,509 ₹2,85,536
7.5 HP ಸರ್ಫೇಸ್ (Surface) ₹92,628 ₹4,13,663
ಸಬ್‌ಮರ್ಸಿಬಲ್ (Submersible) ₹81,817 ₹3,92,040
10 HP ಸರ್ಫೇಸ್ (Surface) ₹1,91,983 ₹5,13,018
ಸಬ್‌ಮರ್ಸಿಬಲ್ (Submersible) ₹1,81,911 ₹4,92,134

ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ souramitra.com ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

image 10

ನಮ್ಮ ವಿಶೇಷ ಸಲಹೆ: ಆನ್‌ಲೈನ್‌ನಲ್ಲಿ ಅರ್ಜಿ ಹಾಕುವಾಗ ಸೈಬರ್ ಸೆಂಟರ್‌ನವರು ಅಥವಾ ಬೇರೆ ಯಾವುದೇ ವ್ಯಕ್ತಿಗಳಿಗೆ ನಿಮ್ಮ ಮೊಬೈಲ್‌ಗೆ ಬರುವ OTP ಯನ್ನು ಶೇರ್ ಮಾಡಬೇಡಿ. ಸಾಧ್ಯವಾದಷ್ಟು ನಿಮ್ಮ ಮುಂದೆಯೇ ಅಪ್ಲಿಕೇಶನ್ ಹಾಕಿಸಿಕೊಳ್ಳಿ. ಹಾಗೆಯೇ, ಅರ್ಜಿ ಹಾಕುವಾಗ ‘ಮಾರಾಟಗಾರ/ಏಜೆನ್ಸಿಯನ್ನು’ (Vendor Selection) ಆಯ್ಕೆ ಮಾಡುವ ಆಪ್ಷನ್ ಬರುತ್ತದೆ. ಆ ಸಮಯದಲ್ಲಿ ನಿಮ್ಮ ಊರಿಗೆ ಹತ್ತಿರವಿರುವ ಹಾಗೂ ಉತ್ತಮ ಸರ್ವಿಸ್ ನೀಡುವ ಕಂಪನಿಯನ್ನೇ ಆಯ್ಕೆ ಮಾಡಿಕೊಳ್ಳಿ. ಇದು ಮುಂದೆ ಪಂಪ್‌ಸೆಟ್ ರಿಪೇರಿ ಬಂದರೆ ಸುಲಭವಾಗುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

1. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ತಿಳಿಸಿರುವ ಪ್ರಕಾರ ಈ ಯೋಜನೆಯು ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಆದ್ದರಿಂದ ರೈತರು ಆದಷ್ಟು ಬೇಗ souramitra.com ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸುವುದು ಉತ್ತಮ. ಹೆಚ್ಚಿನ ಮಾಹಿತಿಗೆ 080-22202100 ಸಹಾಯವಾಣಿಗೆ ಕರೆ ಮಾಡಬಹುದು.
2. ನನ್ನ ಬಳಿ ಈಗಾಗಲೇ ಕರೆಂಟ್ ಕನೆಕ್ಷನ್ ಇರುವ ಪಂಪ್‌ಸೆಟ್ ಇದೆ, ನಾನೂ ಅರ್ಜಿ ಹಾಕಬಹುದಾ?
ಈ ನಿರ್ದಿಷ್ಟ ಕುಸುಮ-ಬಿ (Component-B) ಯೋಜನೆಯು ಪ್ರಮುಖವಾಗಿ ವಿದ್ಯುತ್ ಗ್ರಿಡ್ ಸಂಪರ್ಕವಿಲ್ಲದ (Off-grid) ಪ್ರದೇಶಗಳಿಗೆ ಮತ್ತು ಡೀಸೆಲ್ ಪಂಪ್‌ಗಳನ್ನು ಬದಲಾಯಿಸಲು ತರಲಾಗಿದೆ. ಆದಾಗ್ಯೂ, ನಿಮ್ಮ ವಿದ್ಯುತ್ ಸಂಪರ್ಕವನ್ನು ಸೋಲಾರ್‌ಗೆ ಬದಲಾಯಿಸಲು ಇರುವ ಕುಸುಮ-ಸಿ (Component-C) ಯೋಜನೆಯ ಬಗ್ಗೆ ನಿಮ್ಮ ಹತ್ತಿರದ ಬೆಸ್ಕಾಮ್/ಮೆಸ್ಕಾಮ್ ಕಚೇರಿಯನ್ನು ಸಂಪರ್ಕಿಸಬಹುದು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ ಬಿತ್ತರಿಸುವುದಿ

WhatsApp Group Join Now
Telegram Group Join Now

Popular Categories