ಪಿಎಂ ಕಿಸಾನ್ ಹಣ ಇನ್ನು ಬರದಿದ್ದರೆ ಕೂಡಲೆ ಈ ಸಣ್ಣ ಕೆಲಸ ಮಾಡಿ

PM kisan image

ಎಲ್ಲರಿಗೂ ನಮಸ್ಕಾರ. ಇಂದಿನ ಲೇಖನದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ 2000 ರೂ ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಅಂತೆಯೇ ಈಗಾಗಲೇ 11 ಕಂತುಗಳಲ್ಲಿ ರೈತರು ಹಣವನ್ನು ಪಡೆದಿದ್ದಾರೆ. 12ನೇ ಕಂತು ಇಕೆವೈಸಿ ಮಾಡಿಸಿದ ರೈತರ ಖಾತೆಗೆ ಜಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಯೋಜನೆಯಂತೆ ವಾರ್ಷಿಕ 6000 ರೂಗಳನ್ನು ರೈತರ ಖಾತೆಗೆ ಕೇಂದ್ರ ನೇರವಾಗಿ ಜಮೆ ಮಾಡುತ್ತದೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ಇದರ ನೆರವನ್ನು ಪಡೆಯುತ್ತಿದ್ದಾರೆ. ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂ ಗಳಂತೆ ವಾರ್ಷಿಕ ನಗದನ್ನು ನೀಡಲಾಗುತ್ತದೆ. ಈ  ಬಾರಿ ಸೆಪ್ಟೆಂಬರ್ ಕೊನೆಯ ವಾರ  ರೈತರ ಖಾತೆಗೆ ನೇರವಾಗಿ 2000 ರೂ ಹಣ ಬರಲಿದೆ ಎಂದು ಕೇಂದ್ರ ತಿಳಿಸಿದೆ.

ಪಿ ಎಮ್ ಕಿಸಾನ್ ಯೋಜನೆ ಅಡಿ ವರ್ಷದ ಮೊದಲ ಕಂತನ್ನು ಏಪ್ರಿಲ್ ಒಂದರಿಂದ ಜುಲೈ 31ರವರೆಗೆ ರೈತರಿಗೆ ನೀಡಲಾಗುತ್ತದೆ ಮತ್ತು ಎರಡನೇ ಕಂತನ್ನು ಅಗಸ್ಟ್1 ರಿಂದ ನವೆಂಬರ್ 31 ವರೆಗೆ ನೀಡಲಾಗುತ್ತದೆ ಅದೇ ಸಮಯದಲ್ಲಿ ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ಮತ್ತು ಮಾರ್ಚ್ 31ರ ನಡುವೆ ವರ್ಗಾಯಿಸಲಾಗುತ್ತದೆ. ಇದರ ಪ್ರಕಾರ ಪಿಎಂ ಕಿಸಾನ್ 12ನೇ ಕಂತು ಮುಂದಿನ ತಿಂಗಳು ಅಂದರೆ ಅಕ್ಟೊಬರ್ 17 ರಂದು ರೈತರ ಖಾತೆಗೆ ಬರುತ್ತದೆ.

ಪಿಎಂ ಕಿಸಾನ್ ಹಣ ಇದ್ದಕ್ಕಿದ್ದಂತೆ ಬರುವುದು ನಿಂತಿದ್ದರೆ, ಅದಕ್ಕೆ ಕಾರಣವನ್ನು ಹೀಗೆ ಚೆಕ್ ಮಾಡಿ

PMkisan.gov ಡಾಟ್ ಕಾಮ್

ನಂತರ “Farmers corner” ನಲ್ಲಿ “Beneficiary status” ಮೇಲೆ ಕ್ಲಿಕ್ ಮಾಡಿ

ನಂತರ “Mobile number” ಮೇಲೆ ಕ್ಲಿಕ್ ಮಾಡಿ,ಮೊಬೈಲ್ ನಂಬರನ್ನು ನಮೂದಿಸಿ

ನಂತರ Captcha Type ಮಾಡಿ “Get Data” ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇಲ್ಲಿಯವರೆಗೂ ಬಂದಿರುವ ಮತ್ತು ಬರದೇ ಇರುವ ಕಂತಿನ ಕುರಿತ ಮಾಹಿತಿಯನ್ನು ನೋಡಬಹುದು.

ಅಥವಾ ಮೊಬೈಲ್ ನಂಬರ್ ಬದಲು “Farmer Registration” ನಂಬರ್ select ಮಾಡಿ Farmer Registration ನಂಬರ್ ಹಾಕಿ captcha type ಮಾಡಿ “Get Data” ಮೇಲೆ ಕ್ಲಿಕ್ ಮಾಡಿ ನಿಮ್ಮ ಮುಂದಿನ ಸ್ಥಿತಿಗತಿ ತಿಳಿಯಬಹುದು.

ಸೂಚನೆ:ನಿಮಗೆ ನಿಮ್ಮ Farmer Registration ನಂಬರ್ ಗೊತ್ತಿಲ್ಲ ಎಂದರೆ  Cick here to know your registration ಮೇಲೆ click ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಕಿದರೆ ನಿಮ್ಮ Farmer Registration ಸಿಗುತ್ತದೆ.

Farmer registration number ಬಳಸಿ ಕಾರಣವನ್ನು ತಿಳಿದುಕೊಳ್ಳಿ

ಕಾರಣ 1

“Installment payment stopped by state on request of district”ಎಂದು ತೋರಿಸುತ್ತಿದ್ದರೆ,ತಾಲೂಕಿನಲ್ಲಿ Revarification ಮಾಡಿಸಿ,ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಕಳಿಸಿ ಸರಿಪಡಿಸಬೇಕು

ಕಾರಣ 2

“Adhar number is not varified”ಎಂದು ತೋರಿಸುತ್ತಿದ್ದರೆ ಜಂಟಿ ಕೃಷಿ ನಿರ್ದೇಶಕರ login ಮೂಲಕ authentication ಮಾಡಿಸಬೇಕು.

ಕಾರಣ 3

“NPCI is not mapped” ಎಂದು ತೋರಿಸುತ್ತಿದ್ದರೆ, ನಿಮ್ಮ ಆಧಾರ ನಂಬರ್ ಲಿಂಕ್ ಇರುವ ಬ್ಯಾಂಕ್ ಗೆ ಹೋಗಿ ಆಧಾರ ಜೋಡಣಿಯನ್ನು Delink ಮಾಡಿ ನಂತರ Relink ಮಾಡಿಸಬೇಕು

ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರೊಂದಿಗೆ ಶೇರ್ ಮಾಡಿ. ಧನ್ಯವಾದಗಳು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!