ಈ ರೈತರ ಖಾತೆಗೆ 2 ಸಾವಿರ ರೂಪಾಯಿ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಜಮಾ!

IMG 20241005 WA0000

WhatsApp Group Telegram Group
ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರ ಖಾತೆಗೆ ಜಮಾ ಆಗಲಿದೆ 2,000 ರೂ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan Yojana) ಒಂದು ಸರ್ಕಾರಿ ಯೋಜನೆಯಾಗಿದ್ದು, ಇದರ ಮೂಲಕ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕನಿಷ್ಠ ಆದಾಯ ಬೆಂಬಲವಾಗಿ ಈ ಯೋಜನೆಯಡಿ ಕೇಂದ್ರವು ಪ್ರತಿ ವರ್ಷ ರೈತರಿಗೆ 3 ಕಂತುಗಳಲ್ಲಿ 6,000 ರೂ. ನೀಡುತ್ತದೆ. ಈ ಯೋಜನೆಯು ಭಾರತದಲ್ಲಿ ಭೂ ಹಿಡುವಳಿಯ ಗಾತ್ರವನ್ನು ಲೆಕ್ಕಿಸದೆ 125 ಮಿಲಿಯನ್ ರೈತರನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಉದ್ದೇಶ :

ಕೃಷಿಯು (agriculture) ಭಾರತದ ಆರ್ಥಿಕತೆಯ ಒಂದು ಭಾಗವಾಗಿದ್ದು, ರೈತರು ದೇಶದ ಬೆನ್ನೆಲುಬು. ಇಂದಿನ ಕಾಲಘಟ್ಟದಲ್ಲಿ ರೈತರು ಬಹಳ ಕಷ್ಟ ಪಾಡುಗಳನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಪ್ರಚಲಿತದಲ್ಲಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳಿಂದಾಗಿ, ಕೃಷಿ ಸಮುದಾಯಗಳು ಸಾಮಾನ್ಯವಾಗಿ ಆರ್ಥಿಕತೆ, ಮತ್ತು ಇತರೆ ಸೌಲಭ್ಯಗಳಿಂದ ಕಷ್ಟ ಅನುಭವಿಸುವಂತಾಗಿದೆ. ಇಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸಿ ರೈತರಿಗೆ ಆರ್ಥಿಕವಾಗಿ ನೆರವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ 18ನೇ ಕಂತಿನ ಹಣ ಬಿಡುಗಡೆ :

ಇದೀಗ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಕೇಂದ್ರ ಸರ್ಕಾರವು (Central government) 18ನೇ ಕಂತಿನ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ. ದೇಶಾದ್ಯಂತ ಸುಮಾರು 9 ಕೋಟಿ ರೈತರ ಖಾತೆಗಳಿಗೆ 2 ಸಾವಿರ ರೂ. ಹಾಕಲಾಗುತ್ತಿದೆ. ಅ.5 ಅಂದರೆ ಇಂದು ಮಹಾರಾಷ್ಟ್ರದ ವಾಶಿಮ್‌ನಿಂದ ಪ್ರಧಾನಿಯವರು ಹಣ ಜಮಾಕ್ಕೆ ಚಾಲನೆ ನೀಡಲಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತನ್ನು ಪಡೆಯಲು ಇ-ಕೆವೈಸಿ (e-KYC) ಕಡ್ಡಾಯ :

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan) ಮೂಲಕ ಸರ್ಕಾರವು ದೇಶದ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದೆ. ಸರ್ಕಾರವು (government) ಒಂದು ವರ್ಷದಲ್ಲಿ ರೈತರಿಗೆ 6000 ರೂಪಾಯಿಗಳನ್ನು ನೀಡುತ್ತಿದೆ. ಮತ್ತು ಈ ಮೊತ್ತವು ಅವರ ಖಾತೆಗೆ ತಲಾ 2000 ರೂಪಾಯಿಯಂತೆ ಮೂರು ಕಂತುಗಳಲ್ಲಿ ತಲುಪುತ್ತದೆ. ಇದುವರೆಗೆ ಸರಕಾರ ಈ ಯೋಜನೆಯ ಮೂಲಕ 17ನೇ ಕಂತು ಬಿಡುಗಡೆ ಮಾಡಿದೆ. ರೈತ ಈಗ 18ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ (Pradhan manthri kisan sammana yojana) ಒಳಗೊಂಡಿರುವ ರೈತರು ಇ-ಕೆವೈಸಿಯನ್ನು ಇನ್ನೂ ಮಾಡದಿದ್ದರೆ, ಈ ಕೆಲಸವನ್ನು ಪೂರ್ಣಗೊಳಿಸಿ, ಇಲ್ಲದಿದ್ದರೆ 18ನೇ ಕಂತಿನ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಾಗಿ ನೋಂದಾಯಿಸಲು ಸಲ್ಲಿಸಬೇಕಾದ ದಾಖಲೆಗಳು (Documents) :

ಆಧಾರ್ ಕಾರ್ಡ್
ಪೌರತ್ವದ ಪುರಾವೆ
ಭೂಮಿಯ ಮಾಲೀಕತ್ವವನ್ನು ದೃಢೀಕರಿಸುವ ದಾಖಲೆಗಳು
ಬ್ಯಾಂಕ್ ಖಾತೆಯ ವಿವರಗಳು
ವ್ಯಕ್ತಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸುತ್ತಿದ್ದರೆ ಅಂತಹ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಒದಗಿಸಬೇಕಾಗುತ್ತದೆ.

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಪರಿಶೀಲನೆ ಮಾಡುವುದು ಹೇಗೆ?

ಹಂತ 1: ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ www.pmkisan.gov.in ಗೆ ಭೇಟಿ ನೀಡಬೇಕು.
ಹಂತ 2: ನಂತರ ಪಲಾನುಭವಿಗಳ ಪಟ್ಟಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಬಳಿಕ ಡ್ರಾಪ್‌-ಡೌನ್‌ನಿಂದ ಆಯ್ದ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ವಿವರಗಳನ್ನು ಆಯ್ಕೆ ಮಾಡಿ.
ಹಂತ 4: ಗೆಟ್‌ ರಿಪೋರ್ಟ್‌ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ ಫಲಾನುಭವಿಗಳ ಪಟ್ಟಿಯ ವಿವರ ಸಿಗುತ್ತದೆ.

ಗಮನಿಸಿ (notice) :

ಈ ಮಾಹಿತಿಗಳನ್ನು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿಯೂ ತಿಳಿದುಕೊಳ್ಳಬಹುದು. ಸಹಾಯವಾಣಿ ಸಂಖ್ಯೆ – 155261 2 011-24300606 ಆಗಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!