ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Yojana) ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಕಲಿ ದಾಖಲೆಗಳ ಮೂಲಕ ಹಣ ಪಡೆದ ರೈತರಿಂದ ಈಗಾಗಲೇ ₹335 ಕೋಟಿ ಹಣವನ್ನು ವಾಪಸ್ ಪಡೆಯಲಾಗಿದೆ. ಇ-ಕೆವೈಸಿ ಪೂರ್ಣಗೊಳಿಸದ ಅಥವಾ ಅರ್ಹತಾ ಮಾನದಂಡಗಳನ್ನು ಪೂರೈಸದ ರೈತರ ಹಣವನ್ನು ಸ್ಥಗಿತಗೊಳಿಸಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಮುಖ್ಯ ವಿವರಗಳು
ಪ್ರತಿ ವರ್ಷ ₹6,000 ರೈತರ ಖಾತೆಗೆ ಮೂರು ಕಂತುಗಳಲ್ಲಿ (ತಲಾ ₹2,000) ಜಮಾ ಮಾಡಲಾಗುತ್ತದೆ.
20ನೇ ಕಂತಿನ ಹಣ ಪಾವತಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, e-KYC ಮತ್ತು ಆಧಾರ್-ಬ್ಯಾಂಕ್ ಲಿಂಕ್ ಪೂರ್ಣಗೊಳಿಸದ ರೈತರಿಗೆ ಹಣ ಸಿಗುವುದಿಲ್ಲ.
ಅರ್ಹತೆ ಪಾಲಿಸದ ಸರ್ಕಾರಿ ಉದ್ಯೋಗಿಗಳು, ತೆರಿಗೆದಾರರು ಮತ್ತು ಕೃಷಿ ಜಮೀನು ಇಲ್ಲದವರು ಯೋಜನೆಯಿಂದ ಹೊರಗಿಡಲಾಗಿದೆ.
ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ?
ರೈತರು ತಮ್ಮ ಹೆಸರು ಅರ್ಹರ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಬಹುದು:
ಅಧಿಕೃತ ವೆಬ್ ಸೈಟ್ https://pmkisan.gov.in ಗೆ ಭೇಟಿ ನೀಡಿ.
“Beneficiary List” ಆಯ್ಕೆಮಾಡಿ ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮದ ವಿವರಗಳನ್ನು ನಮೂದಿಸಿ.
ನಿಮ್ಮ ಹೆಸರು ಪಟ್ಟಿಯಲ್ಲಿ ಇದ್ದರೆ, ಹಣ ನಿಮ್ಮ ಖಾತೆಗೆ ಜಮೆಯಾಗುತ್ತದೆ.
SMS ಮೂಲಕ ಸೂಚನೆ
ಹಣ ಜಮಾ ಆದರೆ ಅಥವಾ ನೀವು ಅನರ್ಹರಾದರೆ, ಸರ್ಕಾರ SMS ಮೂಲಕ ತಿಳಿಸುತ್ತದೆ.
ಸಂದೇಶದಲ್ಲಿ “ನೀವು ಅನರ್ಹ” ಎಂದು ಹೇಳಿದರೆ, ಕಾರಣಗಳನ್ನು ತಿಳಿದುಕೊಂಡು ಸರಿಪಡಿಸಲು ಪ್ರಯತ್ನಿಸಿ.
e-KYC ಮಾಡಿಸಿಕೊಳ್ಳಿ
ಇನ್ನೂ e-KYC ಪೂರ್ಣಗೊಳಿಸದ ರೈತರು ತುರ್ತಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಆಧಾರ್ OTP ಅಥವಾ ಮುಖದ ಗುರುತು (Face Authentication) ಮೂಲಕ KYC ಮಾಡಿಸಬೇಕು.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದಿದ್ದರೆ, NPCI ಮ್ಯಾಪಿಂಗ್ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ.
ಅರ್ಹತೆಯ ಮಾನದಂಡಗಳು
ಕೃಷಿ ಜಮೀನಿನ ಮಾಲಿಕರಾಗಿರಬೇಕು.
ಆದಾಯ ತೆರಿಗೆ ಅಥವಾ GST ಪಾವತಿದಾರರಾಗಿರಬಾರದು.
ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿರಬಾರದು.
ಮುಖ್ಯ ಸಲಹೆ
ನಿಮ್ಮ ಹೆಸರು ಪಟ್ಟಿಯಲ್ಲಿಲ್ಲದಿದ್ದರೆ ಅಥವಾ ಹಣ ಬಂದಿಲ್ಲ ಎಂದಾದರೆ, ತಕ್ಷಣ ತಾಲ್ಲೂಕ ಕೃಷಿ ಕಚೇರಿ ಅಥವಾ
ಹೆಲ್ಪ್ಲೈನ್: ನಂಬರ್ 155261/1800115526 ಗೆ ಸಂಪರ್ಕಿಸಿ.
ಗಮನಿಸಿ: ಈ ಯೋಜನೆಯ ಪ್ರಯೋಜನ ಪಡೆಯಲು e-KYC ಮತ್ತು ಆಧಾರ್-ಬ್ಯಾಂಕ್ ಲಿಂಕ್ ಅತ್ಯಗತ್ಯ. ಹಣ ಪಡೆಯಲು ತಾವು ಅರ್ಹರೆಂದು ಖಚಿತಪಡಿಸಿಕೊಳ್ಳಿ!
ಮಾಹಿತಿ: ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಮತ್ತು ಸರ್ಕಾರಿ ಪ್ರಕಟಣೆಗಳ ಆಧಾರದ ಮೇಲೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Kavitha holds a Master’s degree in Computer Applications (MCA) and has a deep interest in technology. Leveraging her academic background, she writes articles on science and technology, simplifying complex technical topics for general readers. Her work focuses on making cutting-edge advancements in tech accessible and engaging.


WhatsApp Group




