ಆಹಾರದ ಭದ್ರತೆಗೆ ತೀವ್ರ ಪೆಟ್ಟು: ವೈರಲ್ ಆದ ಐಸ್ ಕ್ರೀಮ್‌ನೊಳಗಿನ(ice cream) ಹಾವಿನ ಅವಶೇಷ!
ಇತ್ತೀಚಿನ ದಿನಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಅನೇಕ ಗಂಭೀರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜನರು ಹೊರಗೆ ಊಟ ಮಾಡುವಾಗ ಆಹಾರದ ಸ್ವಚ್ಛತೆ ಮತ್ತು ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಅಡುಗೆ ಮಾಡುವವರು ಅನುಸರಿಸಬೇಕಾದ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು(Health and safety standards) ಅನುಸರಿಸುತ್ತಿಲ್ಲ. ಈಗಾಗಲೇ ಹೋಟೆಲ್(Hotel) ಮತ್ತು ರೆಸ್ಟೋರೆಂಟ್‌ಗಳಲ್ಲಿ(restaurants) ಆಹಾರದಲ್ಲಿ ಜಿರಳೆಗಳು, ಹುಳುಗಳು, ಸತ್ತ ಕಪ್ಪೆಗಳು ಕಂಡುಬಂದಿರುವುದಕ್ಕೆ ಸಂಬಂಧಿಸಿದಂತೆ ಹಲವು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ(social media) ವೈರಲ್ ಆಗಿದ್ದು, ಜನರನ್ನು ಭಯಗೊಳಿಸುತ್ತಿವೆ. ಇದೀಗ ಅದೇ ತರಹದ ಒಂದು ಘಟನೆ ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ವರದಿಯಾಗಿದೆ. ಈ ಘಟನೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral) ಆಗುತ್ತಿದ್ದು, ಜನರು ಅಂತಕ ಪಡುವಂತೆ ಮಾಡಿದೆ. ಹಾಗಿದ್ದರೆಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಐಸ್ ಕ್ರೀಮ್‌ನೊಳಗೆ ಸತ್ತ ಹಾವು!
ಥೈಲ್ಯಾಂಡ್‌ನ(Thailand) ಮುವಾಂಗ್ ರಚ್ಚಾಬುರಿ ಪ್ರದೇಶದಲ್ಲಿ ಒಬ್ಬ ಯುವಕ ರೆಬನ್ ನಕ್ಷ್ಯಾಂಗ್‌ಬೂನ್(Reban Naksyangboon) ಎಂಬಾತ, ರಸ್ತೆಬದಿಯ ಅಂಗಡಿಯಿಂದ ಐಸ್ ಕ್ರೀಮ್ ಖರೀದಿಸಿದನು. ಸಾಮಾನ್ಯವಾಗಿ ತಾವು ತಿನ್ನುತ್ತಿರುವ ಐಸ್ ಕ್ರೀಮ್ ಬಗ್ಗೆ ಜನರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಈ ಯುವಕ ತನ್ನ ಐಸ್ ಕ್ರೀಮ್ ಅನ್ನು ತಿನ್ನುತ್ತಾ ಅದುನ್ನ ಗಮನಿಸುತ್ತಿದ್ದ, ಆದರೆ ಸ್ವಲ್ಪ ಸಮಯದ ನಂತರ ಅವನು ಐಸ್ ಕ್ರೀಮ್ ನಲ್ಲಿ ಏನೋ ಇರುವುದನ್ನು ಗಮನಿಸಿದ ತಕ್ಷಣವೇ ಅವನು ಗಾಬರಿಯಾದ.
ಏಕೆಂದರೆ, ಅವನು ತಿನ್ನುತ್ತಿದ್ದ ಐಸ್ ಕ್ರೀಮ್ ನಲ್ಲಿ ಒಂದು ಸತ್ತ ಹಾವಿನ(snake) ಅವಶೇಷವಿತ್ತು! ಅದು ಸಂಪೂರ್ಣವಾಗಿ ಮಂಜುಗಡ್ಡೆಯಲ್ಲಿ ಸುತ್ತಿಕೊಂಡಿದ್ದರಿಂದ ಮೊದಲ ನೋಡುವಾಗ ಸ್ಪಷ್ಟವಾಗಿರಲಿಲ್ಲ. ಆದರೆ ಸ್ವಲ್ಪ ಕಣ್ಣೂಟ ಮಾಡಿದ ನಂತರ, ಕಪ್ಪು ಮತ್ತು ಹಳದಿ ಬಣ್ಣದ(Black and yellow) ಹಾವಿನ ತಲೆ ಅದರಲ್ಲಿ ಅಡಗಿರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿತು. ಇದನ್ನು ನೋಡಿ ಆತ ಬೆಚ್ಚಿಬಿದ್ದನು.
ಘಟನೆಯಿಂದ ಬೆಚ್ಚಿಬಿದ್ದ ರೆಬನ್, ತಕ್ಷಣವೇ ಆ ಐಸ್ ಕ್ರೀಮ್‌ನ ಛಾಯಾಚಿತ್ರ(Photograph) ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡನು. ಥೈಲ್ಯಾಂಡ್ ಮಾತ್ರವಲ್ಲ, ವಿಶ್ವದಾದ್ಯಂತ ಈ ಚಿತ್ರಗಳು ಬಹಳ ವೇಗವಾಗಿ ವೈರಲ್ ಆದವು. ಚಿತ್ರದಲ್ಲಿ ಕಪ್ಪು ಮತ್ತು ಹಳದಿ ಬಣ್ಣದ ಹಾವಿನ ತಲೆ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಇದನ್ನು ನೋಡಿದವರು ಶಾಕ್ ಆಗಿದ್ದಾರೆ.
ಆಹಾರದ ಭದ್ರತೆಯ ಬಗ್ಗೆ ಹೆಚ್ಚುತ್ತಿರುವ ಆತಂಕ:
ಈ ಘಟನೆಯು ಜನರಲ್ಲಿ ಆಹಾರದ ಗುಣಮಟ್ಟದ(Food quality) ಬಗ್ಗೆ ಗಂಭೀರವಾಗಿ ಚಿಂತೆ ಮಾಡುವಂತೆ ಮಾಡಿದೆ. ಬಹಳಷ್ಟು ಜನರು ಈಗಾಗಲೇ ತಾಜಾ ಆಹಾರವನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಸೇವಿಸಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇನ್ನು, ಅದೇರೀತಿ ಇಂತಹ ಘಟನೆಗಳು ವರದಿಯಾಗುತ್ತಿರುವುದರಿಂದ, ಆಹಾರ ತಯಾರಿಕಾ ಕಂಪನಿಗಳ(food manufacturing companies) ಮೇಲೆ ನಿಗಾ ಮತ್ತು ನಿಯಂತ್ರಣ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಐಸ್ ಕ್ರೀಮ್ ಯಾವ ಕಂಪನಿಯಿಂದ ತಯಾರಿಸಲಾಯಿತು? ಅದು ಹೇಗೆ ಹಾವು ಒಳಗೆ ಸಿಕ್ಕಿತು? ಈ ರೀತಿಯ ಅಸಹ್ಯಕರ ಘಟನೆಗಳು ನಡೆಯದಂತೆ ಸರ್ಕಾರ ಏನನ್ನು ಮಾಡಲಿದೆ? ಈ ಎಲ್ಲ ಪ್ರಶ್ನೆಗಳು ಈಗ ಜನರ ಮನದಲ್ಲಿ ಮನೆ ಮಾಡಿವೆ.
ಈ ಘಟನೆ ನಮಗೆ ಒಬ್ಬ ಗ್ರಾಹಕರಾಗಿ ಆಹಾರದ ಗುಣಮಟ್ಟದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶವನ್ನು ಮತ್ತೊಮ್ಮೆ ನೆನಪಿಸುತ್ತದೆ. ಹೊರಗಿನ ಆಹಾರ ಸೇವಿಸುವಾಗ, ಅದರ ಶುದ್ಧತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.