ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸರಳ ಮಾರ್ಗವನ್ನು ಹುಡುಕುತ್ತಿದ್ದೀರಾ? LIC ಸರಳ ಪಿಂಚಣಿ ಯೋಜನೆ(LIC Simple Pension Plan)ಯೊಂದಿಗೆ, ಪ್ರತಿ ತಿಂಗಳು ನಿಮ್ಮ ಖಾತೆಗೆ 12,000 ರೂಪಾಯಿ ಸುಲಭವಾಗಿ ಸೇರಿಸಿಕೊಳ್ಳಿ. ಒಮ್ಮೆ ಮಾತ್ರ ಹೂಡಿಕೆ ಮಾಡಿ, ಜೀವನ ಪರ್ಯಂತ ನಿಮ್ಮ ವೃದ್ಧಾಪ್ಯವನ್ನು ಆನಂದಿಸಿ. ಯಾರು ಹೂಡಿಕೆ ಮಾಡಬಹುದು?, ಈ ಯೋಜನೆಯ ಪ್ರಯೋಜನಗಳೇನು?, ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವರದಿಯಲ್ಲಿ ಸಿಗಲಿದೆ, ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಿವೃತ್ತಿ ನಂತರವೂ ಆರ್ಥಿಕವಾಗಿ ಸ್ಥಿರವಾಗಿರಲು, ನಿರಂತರ ಆದಾಯ ಒಂದು ಮುಖ್ಯ ಕಾರಣವಾಗುತ್ತದೆ. LIC (Life Insurancep Corporation of India) ನೀಡುವ ಸರಳ ಪಿಂಚಣಿ ಯೋಜನೆಯು ನಿವೃತ್ತಿಯಾದ ನಂತರ ಜೀವನ ಪರ್ಯಂತ ಪಿಂಚಣಿಯ ಭರವಸೆ ನೀಡುವ ಅದ್ಭುತ ಯೋಜನೆಗಳಲ್ಲಿ ಒಂದಾಗಿದೆ.
ಇದು ಬಡ್ಡಿ(interest)ಯ ಚಟುವಟಿಕೆಗಳು ಅಥವಾ ಷೇರು ಮಾರುಕಟ್ಟೆಯ ಹೂಡಿಕೆಗಳಿಗೆ ಹೋಲಿಸಿದರೆ ಕಡಿಮೆ ಅಪಾಯದ ಯೋಜನೆ, ಹೆಚ್ಚಿನ ಭರವಸೆ ಹೊಂದಿರುವ ಯೋಜನೆಯಾಗಿ ಜನಪ್ರಿಯವಾಗಿದೆ. LIC ಸರಳ ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು ರೂ. 12,000 ಸ್ಥಿರ ಪಿಂಚಣಿಯನ್ನು ಪಡೆಯಬಹುದು, ಈ ಪಿಂಚಣಿಯನ್ನು ಜೀವನ ಪರ್ಯಂತ ಪಡೆಯಲು ಕೇವಲ ಒಮ್ಮೆ ಮಾತ್ರ ಹೂಡಿಕೆ ಮಾಡುವ ಅವಶ್ಯಕತೆಯಿದೆ.
ಈ ಯೋಜನೆಯ ವಿಶೇಷತೆಗಳು:
ಒಮ್ಮೆ ಹೂಡಿಕೆ – ಜೀವನ ಪರ್ಯಂತ ಆದಾಯ
LIC ಸರಳ ಪಿಂಚಣಿ ಯೋಜನೆ ಒಂದು ಬಗೆಯ immediate annuity (ತಕ್ಷಣ ಪಿಂಚಣಿ) ಯೋಜನೆಯಾಗಿದ್ದು, ನೀವು ಕೇವಲ ಒಂದು ಬಾರಿ ಹೂಡಿಕೆ ಮಾಡಿದರೆ ಸಾಕು, ನಿರಂತರ ಆದಾಯ ಪಡೆಯಲು ಅವಕಾಶ ನೀಡುತ್ತದೆ.
40 ರಿಂದ 80 ವಯೋಮಾನದ ನಡುವೆ ಹೂಡಿಕೆ
LIC ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯಸ್ಸು 40 ವರ್ಷ, ಗರಿಷ್ಠ ವಯಸ್ಸು 80 ವರ್ಷ. 42 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ₹30 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹12,388 ರೂ. ಪಿಂಚಣಿಯನ್ನು ಪಡೆಯುವ ಸಾಧ್ಯತೆ LIC ಕ್ಯಾಲ್ಕುಲೇಟರ್ ಪ್ರಕಾರ ಇದೆ.
ವಿವಿಧ ಪಾವತನ ಆಯ್ಕೆಗಳು
ಈ ಯೋಜನೆಯ ಅಡಿಯಲ್ಲಿ ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕವಾಗಿ ಹೂಡಿಕೆ ಮಾಡಬಹುದು. ಮಾಸಿಕ ಪಾವತಿ ಕೊಡುವ ಪಿಂಚಣಿ ಮೊತ್ತ(Pension amount)ವು ಕನಿಷ್ಠ ₹1000. ತ್ರೈಮಾಸಿಕ ಆಧಾರದ ಮೇಲೆ ಕನಿಷ್ಠ ₹3000, ಅರ್ಧವಾರ್ಷಿಕವಾಗಿ ₹6000, ಮತ್ತು ವಾರ್ಷಿಕವಾಗಿ ಕನಿಷ್ಠ ₹12,000 ಮೊತ್ತವನ್ನು ಪಾವತಿಸಬಹುದು.
ಅಪಾಯವಿಲ್ಲದ ಬಂಡವಾಳ
ಷೇರು ಮಾರುಕಟ್ಟೆ ಹೂಡಿಕೆಗಳಿಗೆ ಹೋಲಿಸಿದರೆ, LIC ಸರಳ ಪಿಂಚಣಿ ಯೋಜನೆ ಕಡಿಮೆ ಅಪಾಯವುಳ್ಳ ಬಂಡವಾಳ ಯೋಜನೆ. ಹೂಡಿಕೆದಾರರು ಶಾಂತಿಯುತವಾಗಿ ಈ ಯೋಜನೆಯನ್ನು ಆಯ್ಕೆ ಮಾಡಬಹುದು ಏಕೆಂದರೆ ಸರ್ಕಾರದ ನಿಯಂತ್ರಣದಲ್ಲಿರುವ ಇದು ಬಂಡವಾಳ ಹಾನಿಗೆ ಅಪಾಯವಿಲ್ಲದ ಭರವಸೆ ನೀಡುತ್ತದೆ.
ಸಾಲ ಸೌಲಭ್ಯ ಮತ್ತು ಸರೆಂಡರ್ ಆಯ್ಕೆ
LIC ಸರಳ ಪಿಂಚಣಿ ಯೋಜನೆಯು 6 ತಿಂಗಳ ನಂತರ ಸರೆಂಡರ್ ಮಾಡಲು ಅವಕಾಶ ನೀಡುತ್ತದೆ. ಇದಲ್ಲದೆ, ಯೋಜನೆಯ ಅಡಿಯಲ್ಲಿ ಸಾಲ(loan) ಪಡೆಯುವ ಸೌಲಭ್ಯವೂ ಇದೆ, ಇದರಿಂದ ಹೂಡಿಕೆದಾರರು ತುರ್ತು ಅವಶ್ಯಕತೆಗಳಿಗೆ ಸಾಲ ಪಡೆಯಬಹುದು.
ಯಾರು ಹೂಡಿಕೆ ಮಾಡಬಹುದು?
LIC ಸರಳ ಪಿಂಚಣಿ ಯೋಜನೆ ವಿಶೇಷವಾಗಿ ನಿವೃತ್ತಿ ಹೊತ್ತಿಗೆ ಆಗುವ ಆರ್ಥಿಕ ಅವಶ್ಯಕತೆಯನ್ನು ಪೂರೈಸಲು ತಯಾರಿಸಲಾಗಿದೆ. ಇದು ಖಾಸಗಿ ಅಥವಾ ಸರ್ಕಾರಿ ಉದ್ಯೋಗಿಗಳಿಗಾಗಿ, ಉದ್ಯೋಗದ ನಂತರದ ಜೀವನಕ್ಕೆ ಶಾಂತಿಯುತ ಜೀವನ ನಡೆಸಲು ಪೂರಕವಾಗಿದೆ. PF ಮತ್ತು ಗ್ರಾಚ್ಯುಟಿ (Gratuity) ಹಣವನ್ನು ಈ ಯೋಜನೆಗೆ ಹೂಡಿಕೆ ಮಾಡಿ, ನಿವೃತ್ತಿಯ ನಂತರ ಜೀವನ ಪೂರ್ತಿ ಖಚಿತವಾದ ಆದಾಯವನ್ನು ಪಡೆಯಬಹುದು.
ಯೋಜನೆಯ ಲಾಭಗಳು
ಸ್ಥಿರವಾದ ಪಿಂಚಣಿ: ವೃದ್ಧಾಪ್ಯದಲ್ಲಿ ಪಿಂಚಣಿ ಎಂದರೆ ಜೀವನ ಪರ್ಯಂತ ಶಾಂತಿ. ಈ ಯೋಜನೆಯು ನಿವೃತ್ತಿ ನಂತರ ಸ್ಥಿರ ಆದಾಯವನ್ನು ಖಚಿತಪಡಿಸುತ್ತದೆ, ಈ ಮೂಲಕ ವೃದ್ಧಾಪ್ಯದಲ್ಲಿ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಕಡಿಮೆ ಹೂಡಿಕೆ–ಹೆಚ್ಚಿನ ಲಾಭ: ಕಡಿಮೆ ಹೂಡಿಕೆ ಮಾಡಿಕೊಂಡು ಹೆಚ್ಚು ಲಾಭ ಪಡೆಯಬಹುದು. ಹೂಡಿಕೆ ಮಾಡಿದ ಮೊತ್ತದ ಆಧಾರದ ಮೇಲೆ ನಿಯಮಿತ ಆದಾಯ ಸಿಗುತ್ತದೆ, ಇದು ನಿರಂತರವಾಗಿ ನಿಮ್ಮ ಖಾತೆಗೆ ಬರುವ ಮೂಲಕ ಆರ್ಥಿಕ ಭದ್ರತೆ ಒದಗಿಸುತ್ತದೆ.
LIC ಸರಳ ಪಿಂಚಣಿ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು, ಅಥವಾ ಯೋಜನೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಪಡೆಯಲು, ನೀವು licindia.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




