ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಕರ್ನಾಟಕದಲ್ಲಿರುವ ವಸತಿ ರಹಿತರಿಗಾಗಿ ವಿವಿಧ ಯೋಜನೆಗಳು, ಇಲ್ಲಿದೆ ಮಾಹಿತಿ…!
ಇಂದು ಕೂಡ ಭಾರದಲ್ಲಿ ಹಲವಾರು ಜನರು ವಸತಿ, ಮನೆ, ಮಠ ಇಲ್ಲದೆ ಬೀದಿ ಬದಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಸ್ವಂತ ಮನೆಯನ್ನು (Own house) ಹೊಂದಬೇಕು, ತಮ್ಮದೇ ಆದ ಸೂರಿನ ಕೆಳಗೆ ಜೀವನ ನಡೆಸಬೇಕು ಎಂಬ ಅಸೆ ಇರುತ್ತದೆ. ಅದಕ್ಕಾಗಿ ದಿನವಿಡಿ ದುಡಿದು ಹಣವನ್ನು ಕುಡಿಡುತ್ತಾರೆ.
ಆದರೆ, ಇಂದು ವಸತಿ ರಹಿತರು ಚಿಂತಿಸುವ ಹಾಗಿಲ್ಲ. ಹೌದು, ಇಂದು ಭಾರತದ ಪ್ರತಿಯೊಬ್ಬರಿಗೂ ಸ್ವಂತ ಸೂರು ಇರಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (state and central government) ವಿವಿಧ ವಸತಿ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮನೆ ಇಲ್ಲದ ಅರ್ಹರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರ ಅನುದಾನವನ್ನು ನೀಡುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿರುವ ಬಡ ಜನರಿಗೆ ಅನುಕೂಲವಾಗಿದೆ:
ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ವಿವಿಧ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಬಡ ಜನರಿಗೆ ಅನುಕೂಲವಾಗಿದೆ. ಈ ಯೋಜನೆಗಳ ಮೂಲಕ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿದೆ. ಆದಷ್ಟು ಈ ಯೋಜನೆಗಳು ಯಾರಿಗೆಲ್ಲ ನೆಲೆಸಲು ವಸತಿ ಇಲ್ಲವೋ ಅಂತವರು ಇದರ ಪ್ರಯೋಜನ ಪಡೆಯಬಹುದು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಜೆಟ್ (Budget) ಗಳಲ್ಲಿ ವಸತಿ ಯೋಜನೆಗಳಿಗಾಗಿ ಇಂತಿಷ್ಟು ಹಣ ಮೀಸಲಿಡುತ್ತವೆ :
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷದ ಬಜೆಟ್ ಗಳಲ್ಲಿ ವಸತಿ ರಹಿತರ ಯೋಜನೆಗಳಿಗಾಗಿಯೇ ಇಂತಿಷ್ಟು ಹಣವನ್ನು ಮೀಸಲಿಡುತ್ತವೆ. ಪ್ರತಿ ವರ್ಷ ಬಡವರಿಗೆ ಮನೆಗಳನ್ನು ಕಟ್ಟಿಕೊಡುವ ಅಥವಾ ಅವರಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಬಡವರ ಸ್ವಂತ ಮನೆಯನ್ನು ಕಟ್ಟಿಕೊಳ್ಳುವ ಆಸೆಯನ್ನು ಈಡೇರಿಸುತ್ತವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳು (Different schemes) :
ಪ್ರಧಾನ ಮಂತ್ರಿ ಆವಾಸ್ ಯೋಜನೆ
ಡಾ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ
ವಾಜಪೇಯಿ ನಗರ ವಸತಿ ಯೋಜನೆ
ದೇವರಾಜ್ ಅರಸು ವಸತಿ ಯೋಜನೆ
ರಾಜೀವ್ ಗಾಂಧಿ ವಸತಿ ಯೋಜನೆ(ಬಸವ ವಸತಿ ಯೋಜನೆ)
ದೇವರಾಜ್ ಅರಸು ವಸತಿ ಯೋಜನೆ
ಹಾಗೂ ಡಾ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ
ಹೀಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪ್ರತಿಯೊಬ್ಬರಿಗೂ ವಸತಿ ಕಲ್ಪಿಸುವ ಹಲವು ಯೋಜನೆಗಳು ಚಾಲ್ತಿಯಲ್ಲಿವೆ.
ವಸತಿ ರಹಿತರು ಮನೆಗಾಗಿ ಅರ್ಜಿ ಸಲ್ಲಿಸುವ ವಿಧಾನ (How to apply application) :
ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi vasathi yojana) :
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ-ಆರ್ ಜಿಆರ್ ಎಚ್ ಸಿಎಲ್ ಯಲ್ಲಿ ವಸತಿ ರಹಿತರು ಮನೆಗಾಗಿ ಅರ್ಜಿ ಸಲ್ಲಿಸಬಹುದು.
ಹಂತ 1: ಮೊದಲು ಆರ್ ಜಿಆರ್ ಎಚ್ ಸಿಎಲ್ ವೆಬ್ ಸೈಟ್ ಗೆ ಭೇಟಿ ನೀಡಿ: https://ashraya.karnataka.gov.in/BeneficiaryStatusNew.aspx.
ಹಂತ 2: ನೋಂದಣಿ ಅಥವಾ ಆನ್ ಲೈನ್ ಅಪ್ಲಿಕೇಷನ್ (Online application) ಮೇಲೆ ಕ್ಲಿಕ್ ಮಾಡಿ.
ಹಂತ 3: ಹೆಸರು, ಲಿಂಗ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಸೇರಿದಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ.
ಹಂತ 4: ವಿಳಾಸ, ವಾರ್ಷಿಕ ಆದಾಯ ಹಾಗೂ ಆಧಾರ್ ಸಂಖ್ಯೆಯನ್ನು ತಪ್ಪಿದೆ ನಮೂದಿಸಬೇಕು.
ಹಂತ 5: ಇದಾದ ಬಳಿಕ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




