Oppo A3 Pro: ಒಪ್ಪೋ ಹೊಸ ಮೊಬೈಲ್ A3 Pro ಮಾರುಕಟ್ಟೆಗೆ ಭರ್ಜರಿ ಎಂಟ್ರಿ!!

WhatsApp Image 2024 07 01 at 4.58.09 PM

ಮಾರುಕಟ್ಟೆಗೆ ಲಗ್ಗೆ ಇಟ್ಟ ಒಪ್ಪೋ ಕಂಪನಿಯ ಹೊಸ 5G ಸ್ಮಾರ್ಟ್‌ಫೋನ್ Oppo A3 Pro!

ಒಂದಲ್ಲ ಎರಡಲ್ಲ ಹಲವಾರು ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಿವೆ. ಪ್ರತಿಯೊಂದು ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ನಾ ಮುಂದೆ ನಾ ಮುಂದೆ ಅಂತ ಸ್ಪರ್ಧೆಗಳನ್ನು ನೀಡುತ್ತಿವೆ. ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಹಾಗೆಯೇ ಪ್ರತಿಯೊಂದು ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಬಳಸುವವರಿದ್ದಾರೆ. ಒಪ್ಪೋ ಬ್ರ್ಯಾಂಡ್ ಕೂಡ ತನ್ನದೇ ಆದ ಗ್ರಾಹಕರನ್ನು ಹೊಂದಿದ್ದು, ಹೆಚ್ಚು ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಲೇ ಬರುತ್ತಿದೆ. ಹಾಗೆಯೇ ಇದೀಗ ಕಂಪನಿಯು ತನ್ನ ಗ್ರಾಹಕರಿಗಾಗಿ ಹೊಸ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ. ಅದುವೇ Oppo A3 Pro 5G, ಅದರ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಒಪ್ಪೋ ಹೊಚ್ಚ ಹೊಸ ಸ್ಮಾರ್ಟ್ ಫೋನ್ Oppo A3 Pro 5G :

ಒಪ್ಪೋ ಪ್ರಿಯರಿಗೆ ಇದೊಂದು ಗುಡ್ ನ್ಯೂಸ್ ಎನ್ನಬಹುದು. ಯಾಕೆಂದರೆ, ಇದೀಗ ಒಪ್ಪೋ ತನ್ನ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ನ ಸ್ಟೈಲಿಶ್ ಲುಕ್, ಅದ್ಭುತ ಕ್ಯಾಮೆರಾ, ಆಕರ್ಷಕ ಫೀಚರ್ಸ್‌ಗಳು ಕಣ್ಣು ಕುಕ್ಕುತ್ತಿವೆ. ಅದರ ಫೀಚರ್ಸ್ ಗಳು ಹಾಗೂ ಆಫರ್ ಗಳ ಬಗ್ಗೆ ಈ ಕೆಳಗೆ ನೀಡೋಣ ಬನ್ನಿ.

AI ಲಿಂಕ್ ಬೂಸ್ಟ್ ಮತ್ತು AI ಎರೇಸರ್‌ನಂತಹ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳನ್ನು ಹೊಂದಿದೆ ಈ ಸ್ಮಾರ್ಟ್ ಫೋನ್ :

AI ಲಿಂಕ್ ಬೂಸ್ಟ್, AI ಎರೇಸರ್‌ ಫೀಚರ್ಸ್
ಈ ಫೋನ್ ಕೇವಲ 7.68mm ತೆಳುವಾಗಿದ್ದು, ಬ್ರೈಟ್‌ನೆಸ್‌ ಮಧ್ಯಮ ಫ್ರೇಮ್ ವಿನ್ಯಾಸ ಮತ್ತು ಹಿಂಭಾಗದ ಕವರ್‌ನಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. A3 Pro ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್‌ಗಳನ್ನು ಹೊಂದಿದೆ. ಮತ್ತು SGS ಡ್ರಾಪ್ ಪ್ರತಿರೋಧ ಮತ್ತು ಮಿಲಿಟರಿ ಪ್ರಮಾಣಿತ ಪ್ರಮಾಣೀಕರಣವನ್ನು ಸಹ ಹೊಂದಿದೆ. ಇದು AI ಲಿಂಕ್ ಬೂಸ್ಟ್ ಮತ್ತು AI ಎರೇಸರ್‌ನಂತಹ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

Oppo A3 Pro 5G ಸ್ಮಾರ್ಟ್ ಫೋನ್‌ನ ಸಂಪೂರ್ಣ ಫೀಚರ್ಸ್‌ (features) :

ಡಿಸ್ಪ್ಲೇ (display) :
ಈ ಒಪ್ಪೋ ಎ3 ಪ್ರೋ 5ಜಿ ಮೊಬೈಲ್ 6.67-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ದರದೊಂದಿಗೆ 1080*2412 ಪಿಕ್ಸೆಲ್ ರೆಸಲ್ಯೂಶನ್ ಮತ್ತು 1,000 nits ಗರಿಷ್ಠ ಬ್ರೈಟ್‌ನೆಸ್‌ ಪಡೆದಿದೆ.

ಪ್ರೊಸೆಸರ್ (processor) :
ಆರ್ಮ್ ಮಾಲಿ-G57 MC2 GPU ಜೊತೆಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ (2x ಕಾರ್ಟೆಕ್ಸ್-A76 @ 2.4GHz 6x ಕಾರ್ಟೆಕ್ಸ್-A55 @ 2GHz) ನಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಟೋರೇಜ್ (storage) :
8GB LPDDR4x RAM, 128GB / 256GB (UFS 2.2) ಸ್ಟೋರೇಜ್, ಮೈಕ್ರೊ SD ಜೊತೆಗೆ 2TB ವರೆಗೆ ವಿಸ್ತರಿಸಬಹುದಾದ ಮೆಮೊರಿ ಇದರಲ್ಲಿದೆ.

ಆಪರೇಟಿಂಗ್ ಸಿಸ್ಟಮ್ (operating system) : ColorOS 14 ಜೊತೆಗೆ Android 14 ಅನ್ನು ಹೊಂದಿದೆ.

ಕ್ಯಾಮೆರಾ (camea) :
ಈ ಒಪ್ಪೋ ಹೊಸ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು LED ಫ್ಲಾಶ್ ಹೊಂದಿದೆ. f/1.7 ದ್ಯುತಿರಂಧ್ರದೊಂದಿಗೆ 64MP ಮುಖ್ಯ ಕ್ಯಾಮೆರಾ, f/2.2 ದ್ಯುತಿರಂಧ್ರದೊಂದಿಗೆ 2MP ಡೆಪ್ತ್ ಸೆನ್ಸಾರ್ ಇದೆ. ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ f/2.2 ದ್ಯುತಿರಂಧ್ರದೊಂದಿಗೆ 8MP ಕ್ಯಾಮೆರಾವನ್ನು ಹೊಂದಿದೆ. ಇದು ಪೋರ್ಟ್ರೇಟ್ ಮೋಡ್, ಡ್ಯುಯಲ್ ವ್ಯೂ ವಿಡಿಯೋ ಸೇರಿದಂತೆ ಹಲವು ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ.

ಬ್ಯಾಟರಿ (battery) :
45W SuperVOOC ವೇಗದ ಚಾರ್ಜಿಂಗ್‌ನೊಂದಿಗೆ 5100mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದೆ.

ಕನೆಕ್ಟಿವಿಟಿ ಆಯ್ಕೆಗಳು (connectivity options) :
3.5 ಎಂಎಂ ಆಡಿಯೊ ಜಾಕ್, 5G SA / NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.3, GPS, GLONASS, ಗೆಲಿಲಿಯೋ, QZSS, USB ಟೈಪ್-ಸಿ ಹೊಂದಿದೆ.

ಸ್ಟೋರೇಜ್ (storage) :
ಇದು MediaTek ಡೈಮೆನ್ಸಿಟಿ 6400 SoC ಯಿಂದ 8GB RAM ಮತ್ತು 8GB ವರ್ಚುವಲ್ RAM ಅನ್ನು ಹೊಂದಿದೆ.

ಬಣ್ಣಗಳು (colors) :
ಈ ಫೋನ್ ಎರಡು ಬಣ್ಣಗಳಲ್ಲಿ ಲಾಮಚ್ ಆಗಿದೆ. ಸ್ಟಾರ್ರಿ ಬ್ಲ್ಯಾಕ್ ಮತ್ತು ಮೂನ್‌ಲೈಟ್ ಪರ್ಪಲ್ ಬಣ್ಣಗಳಲ್ಲಿ ನೀವು ಖರೀದಿಸಬಹುದು.

Oppo A3 Pro ಫೋನ್‌ನ ವಿಶೇಷತೆಗಳು :

ಈ ಸ್ಮಾರ್ಟ್‌ಫೋನ್ Android 14 ಆಧಾರಿತ ColorOS 14 ಅನ್ನು ರನ್ ಮಾಡುತ್ತದೆ. ಮತ್ತು ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಶನ್ 7050 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 45W Supervooc ಫ್ಲಾಶ್ ಚಾರ್ಜಿಂಗ್ ಬೆಂಬಲದೊಂದಿಗೆ 5100mAh ಸಾಮರ್ಥ್ಯದ ಬ್ಯಾಟರಿಯಿಂದ ಚಾಲಿತವಾಗಿದೆ. ಬ್ಯಾಟರಿಯು 1,600 ಚಾರ್ಜ್ ಸೈಕಲ್‌ಗಳ ನಂತರ ಅದರ ಮೂಲ ಸಾಮರ್ಥ್ಯದ 80% ಕ್ಕಿಂತ ಹೆಚ್ಚು ನಿರ್ವಹಿಸುತ್ತದೆ. ದಿನಕ್ಕೆ ಒಮ್ಮೆ ಚಾರ್ಜ್ ಮಾಡಿದರೆ 4 ವರ್ಷಗಳ ಬಳಕೆಗೆ ಸಮನಾಗಿರುತ್ತದೆ.

ಈ ಸ್ಮಾರ್ಟ್ ಫೋನ್‌ನ ಬೆಲೆ (price) :

OPPO A3 Pro 5G ಫೋನ್‌ ಎರಡು ಸ್ಟೋರೇಜ್‌ ಮಾದರಿಯಲ್ಲಿ ಲಭ್ಯವಿರಲಿದೆ. 128GB ಸ್ಟೋರೇಜ್ ಮಾದರಿಯ ಬೆಲೆ 17,999 ರೂ. ಮತ್ತು 256GB ಸ್ಟೋರೇಜ್ ವೇರಿಯಂಟ್ ಬೆಲೆ 19,999 ರೂ. ಇದೆ. ಇಂದಿನಿಂದ Amazon, Flipkart, OPPO ಸ್ಟೋರ್ ಮತ್ತು ಮುಖ್ಯ ಚಿಲ್ಲರೆ ಅಂಗಡಿಗಳಲ್ಲಿ ಈ ಫೋನ್ ಖರೀದಿಗೆ ಲಭ್ಯವಿದೆ.

ಬಂಫರ್ ಆಫರ್ಸ್ (offers) ಮತ್ತು ಕ್ಯಾಶ್ ಬ್ಯಾಕ್ (cash back) ಲಭ್ಯವಿದೆ :

ಮೊದಲ ಸೇಲ್‌ನಲ್ಲೇ ಬಂಪರ್‌ ಆಫರ್
ಇನ್ನೂ OPPO A3 Pro 5G ಮೊಬೈಲ್‌ ಖರೀದಿಯ ಮೇಲೆ ನೀವು ಲಾಂಚ್ ಆಫರ್‌ಗಳನ್ನು ಪಡೆಯಬಹುದು. HDFC ಬ್ಯಾಂಕ್, SBI ಕಾರ್ಡ್‌ಗಳು, ಯೆಸ್ ಬ್ಯಾಂಕ್, IDFC ಫಸ್ಟ್ ಬ್ಯಾಂಕ್ ಮತ್ತು ಮತ್ತು ICICI ಬ್ಯಾಂಕ್‌ಗಳಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 10% ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಮತ್ತು ಪ್ರಮುಖ ಪಾಲುದಾರರೊಂದಿಗೆ ಯಾವುದೇ ಡೌನ್ ಪೇಮೆಂಟ್ ಇಲ್ಲದೆ ಗ್ರಾಹಕ ಸಾಲ(loan) ಲಭ್ಯವಿದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!