ಈರುಳ್ಳಿ ದರ ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ.. ಇಂದಿನ ಬೆಲೆ ಎಷ್ಟು ಗೊತ್ತಾ ?

hike in onion price

ಈರುಳ್ಳಿ ಬೆಲೆಯೂ ಮತ್ತೆ ಏರಿಕೆಯನ್ನು ಕಂಡಿದೆ. ಕೆಲವು ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ(onion price) ಸ್ವಲ್ಪ ಇಳಿಕೆಯನ್ನು ಕಂಡಿದ್ದರೂ ಕೂಡ, ಚಿಲ್ಲರೆ ಮಾರುವವರು ಅಥವಾ ಚಿಲ್ಲರೆ ಅಂಗಡಿಗಳಲ್ಲಿ ಈರುಳ್ಳಿಯ ಬೆಲೆ ಹೆಚ್ಚಾಗಿದೆ ಅಂತಾನೆ ಹೇಳಬಹುದು. ಈರುಳ್ಳಿಯು ಅಡುಗೆಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರತಿದಿನ ಈರುಳ್ಳಿ ಇಲ್ಲದೆ ಅಡುಗೆ ಆಗುವುದೇ ಇಲ್ಲ ಅಂತಾನು ಹೇಳಬಹುದು. ಇಂತಹ ಪರಿಸ್ಥಿತಿಯಲ್ಲಿ ಈರುಳ್ಳಿಯ ಬೆಲೆ ಸತತವಾಗಿ ಏರಿಕೆಯನ್ನು ಕಂಡಿರುವುದು ಜನಸಾಮಾನ್ಯರಲ್ಲಿ ಆತಂಕವನ್ನು ಉಂಟುಮಾಡಿದೆ. ಇಂದಿನ ಈರುಳ್ಳಿ ಬೆಲೆ ಎಷ್ಟಿದೆ?, ಈರುಳ್ಳಿಯ ಬೆಲೆ ಏರುತ್ತಿರಲು ಕಾರಣವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗಗನಕ್ಕೇರುತ್ತಿರುವ ಈರುಳ್ಳಿಯ ಬೆಲೆ :

onion price hike

Increased in onion price : ಸಗಟು ಮಾರುಕಟ್ಟೆ(Wholesale market)ಯಲ್ಲಿ ಈರುಳ್ಳಿಯ ಬೆಲೆಯು 45 ರಿಂದ 45 ರೂಪಾಯಿಗಳಿದ್ದರೆ, ಚಿಲ್ಲರೆ ಅಂಗಡಿಗಳಲ್ಲಿ 75 ರೂಪಾಯಿಗಳಿಗೆ ಈರುಳ್ಳಿಯನ್ನು ಮಾರಲಾಗುತ್ತಿದೆ. ದೇಶದಲ್ಲಿ ಈಗಾಗಲೇ ಈರುಳ್ಳಿಯ ಬೆಲೆಯು 48 ಪರ್ಸೆಂಟ್ ಅಷ್ಟು ಏರಿಕೆಯನ್ನು ಕಂಡಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ಮಾರಲು ಪ್ರಯತ್ನಿಸಿ ಕೇಂದ್ರ ಸರ್ಕಾರವು ಸಬ್ಸಿಡಿಯ ಮುಖಾಂತರ ದೊಡ್ಡ ಪ್ರಮಾಣದಲ್ಲಿ ಈರುಳ್ಳಿಯನ್ನು ಖರೀದಿಸಿ ಮಾರಲು ಪ್ರಯತ್ನಿಸಿತು. ಆದರೂ ಕೂಡ ಈರುಳ್ಳಿಯಲ್ಲಿ ಯಾವುದೇ ರೀತಿಯ ಬೆಲೆ ಇಳಿಕೆಯನ್ನು ಕಾಣುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ 7 ಟನ್ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಅಥವಾ ಖರೀದಿಯನ್ನು ಮಾಡಿ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟಕ್ಕೆ ಬಿಡುವ ಸಾಧ್ಯತೆ ಇದೆ. ಇದರಿಂದ ಈರುಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯನ್ನು ಕಾಣಬಹುದು ಎಂದು ಕೇಂದ್ರ ಸರ್ಕಾರವು ನಂಬಿದೆ .

whatss

ಏಕೆ ಈರುಳ್ಳಿಯ ಬೆಲೆ ಇಷ್ಟು ಏರಿಕೆಯಾಗುತ್ತಿದೆ?:

ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಈ ವರ್ಷ ಬರಗಾಲವೂ ಬಂದಿದೆ. ಹಾಗಾಗಿ ಅನೇಕ ಜಿಲ್ಲೆಗಳಲ್ಲಿ ಈರುಳ್ಳಿಯನ್ನು ಬೆಳೆಯುವವರು ಬೆಳೆದ ಈರುಳ್ಳಿಗೆ ಇಳುವರಿಯು ಇಲ್ಲದೆ, ಕರ್ನಾಟಕ ರಾಜ್ಯದವರು ಬೇರೆ ರಾಜ್ಯಕ್ಕೆ ಈರುಳ್ಳಿಗಾಗಿ ಅವಲಂಬಿಸಬೇಕಾಗಿರುವ ಪರಿಸ್ಥಿತಿಯು ಬಂದಿದೆ. ಅಷ್ಟೇ ಅಲ್ಲದೆ ಮಾರುಕಟ್ಟೆಯಲ್ಲಿ ಇರುವಂತಹ ಈರುಳ್ಳಿಯು ಉತ್ತಮ ಗುಣಮಟ್ಟದ್ದು ಆಗದಿರುವುದರ ಕಾರಣ ಅದನ್ನು ಅನೇಕ ದಿನಗಳ ಕಾಲ ಸಂಗ್ರಹಿಸಿ ಇಡುವುದು ಕಷ್ಟವಾಗುತ್ತಿದೆ ಎಂದು ಮಾರಾಟಗಾರರು ವರದಿಯನ್ನು ಮಾಡಿದ್ದಾರೆ. ಈರುಳ್ಳಿಯನ್ನು ಅತಿ ಹೆಚ್ಚಾಗಿ ಬೆಳೆಯುವ ಮಹಾರಾಷ್ಟ್ರದಲ್ಲಿಯೂ ಕೂಡ, ಇಳುವರಿಯೂ ಚೆನ್ನಾಗಿಯೇ ಬಂದಿತ್ತು ಆದರೆ ಕುಯ್ಲಿಯ ಟೈಮಿಗೆ ಮಳೆ ಬಂದ ಕಾರಣ ಬೆಳೆಯು ಹಾನಿಯಾಗಿ ಈರುಳ್ಳಿ ಇಲ್ಲದಂತಾಗಿದೆ.

ಈರುಳ್ಳಿಯ ಬೆಲೆ ಮತ್ತೆ ಏರದಂತೆ ರಫ್ತು ಗೆ ಕಡಿವಾಣ :

ದೇಶದಲ್ಲಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು, ಕೇಂದ್ರ ಸರ್ಕಾರವು ಆರಂಭದಲ್ಲಿ ಆಗಸ್ಟ್ 19 ರಂದು ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕವನ್ನು ವಿಧಿಸಿತ್ತು. ಇದೇ ವೇಳೆ ರೈತರಿಂದ ಹೆಚ್ಚುವರಿ 2,00,000 ಟನ್ ಈರುಳ್ಳಿಯನ್ನು ಸಂಗ್ರಹಿಸಲು ನಿರ್ಧರಿಸಿತು.
ಆರಂಭದಲ್ಲಿ ಕನಿಷ್ಟ ರಫ್ತು ಬೆಲೆ ಡಿಸೆಂಬರ್ 31ರವರೆಗೆ ಜಾರಿಯಲ್ಲಿತ್ತು. ಆದರೆ ಇದೀಗ ಮಾರ್ಚ್ 2024 ರವರೆಗೆ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಖಾರಿಫ್ ಬೆಳೆ ಆಗಮನದಲ್ಲಿನ ವಿಳಂಬ, ಟರ್ಕಿ ಮತ್ತು ಈಜಿಪ್ಟ್‌ನಿಂದ ರಫ್ತು(export) ನಿರ್ಬಂಧಗಳು, ಖಾರಿಫ್ ಬೆಳೆಗಳ ಸಮಯದಲ್ಲಿ ಆಲಿಕಲ್ಲು ಮಳೆಯಿಂದಾಗಿ ಈರುಳ್ಳಿ ಲಭ್ಯತೆಯ ಬಗ್ಗೆ ಕಳವಳ ಹೆಚ್ಚಿದ್ದು, ಇದು ಚಿಲ್ಲರೆ ಬೆಲೆಗಳಲ್ಲಿ ಏರಿಕೆಗೆ ಪ್ರಮುಖ ಕಾರಣವಾಗಿದೆ.

tel share transformed

ಇಂದಿನ ಈರುಳ್ಳಿ ಬೆಲೆ (Today’s onion price) :

ಬಂಗಾರಪೇಟೆ : ಕನಿಷ್ಠ ಬೆಲೆ : ₹3,000, ಗರಿಷ್ಠ ಬೆಲೆ : ₹3,500
ದಾವಣಗೆರೆ : ಕನಿಷ್ಠ ಬೆಲೆ: ₹1,000 , ಗರಿಷ್ಠ ಬೆಲೆ: ₹5,100
K.R.Nagar : ಕನಿಷ್ಠ ಬೆಲೆ : ₹4,000, ಗರಿಷ್ಠ ಬೆಲೆ: ₹4,000
ಶಿವಮೊಗ್ಗ : ಕನಿಷ್ಠ ಬೆಲೆ: ₹3,000 , ಗರಿಷ್ಠ ಬೆಲೆ: ₹5,500
ಬೆಂಗಳೂರು : ಕನಿಷ್ಠ ಬೆಲೆ:₹1,500, ಗರಿಷ್ಠ ಬೆಲೆ: ₹2,000

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!