ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಏರಿಕೆ ಕಾಣುತ್ತಿರುವ ಈರುಳ್ಳಿಯ ದರದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಹಿಂದೆ ಟೊಮೇಟೊ..ಟೊಮೇಟೊ ಎಂದು ಮಾರ್ಕೆಟ್ ನಲ್ಲಿ ಟೊಮೇಟೊ ಬೆಲೆ ಜೋರಾಗಿತ್ತು, ಆದರೆ ಈಗ ಈರುಳ್ಳಿ ಬೆಲೆಯು ಮತ್ತೆ ಜನರಲ್ಲಿ ಅಲ್ಲೋಲ-ಕಲ್ಲೋಲ ಮೂಡಿಸಿದೆ. ಈರುಳ್ಳಿ ಕೂಡ ಕಣ್ಣೀರು ಹಾಕಿಸಲು ಸಜ್ಜಗಿದೆ, ಈರುಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಈಗ ಪ್ರಸ್ತುತ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಎಷ್ಟಿದೆ? ಮತ್ತು ಬೆಲೆ ಎಷ್ಟು ಏರಿಕೆಯಾಗಿದೆ ಎಂದು ಪೂರ್ಣ ಮಾಹಿತಿ ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಮತ್ತೆ ಕಣ್ಣೀರು ತರಿಸುತ್ತಿದೆ ಈರುಳ್ಳಿಯ ಬೆಲೆ :
ಟೊಮೆಟೊ ದರದಲ್ಲಿ ಏರಿಕೆಯು ಜನಸಾಮನ್ಯರಲ್ಲಿ ಟೆನ್ಶನ್ ಮೂಡಿಸಿತ್ತು, ಆದರೆ ಟೊಮೇಟೊ ಬೆಲೆ ಇಳಿಕೆಯ ನಂತರ ಜನರು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಈರುಳ್ಳಿ ದರ ಏರಿಕೆಯಾಗುವ ಸೂಚನೆ ಕಂಡುಬಂದಿದೆ ಇದು ಜನಸಾಮಾನ್ಯರಲ್ಲಿ ಕಣ್ಣೀರು ತರಿಸಲಾರಂಭಿಸಿದೆ.
ಕೆಲವು ಪ್ರದೇಶಗಳಲ್ಲಿ ಅನಾವೃಷ್ಟಿಯಿಂದಾಗಿ ಸರಿಯಾಗಿ ಬಿತ್ತನೆ ಆಗಿಲ್ಲ ಇನ್ನು ಮತ್ತೊಂದಡೆ ತೀವ್ರ ಮಳೆಯಿಂದ ಫಸಲು ಕೈಕೊಟ್ಟಿದೆ. ಇನ್ನು ಮಾರುಕಟ್ಟೆಯಲ್ಲಿ ಈರುಳ್ಳಿಯ ಆಗಮನವು ಕಡೆಮೆಯಾಗಿದೆ.
ಹರಪನಹಳ್ಳಿ ತಾಲೂಕಿನ ಚೀಗಟೇರಿ ಹೋಬಳಿ ಗ್ರಾಮಗಳು ಈರುಳ್ಳಿ ಬೆಳೆಯಲು ಹೆಸರುವಾಸಿಯಾಗಿದೆ. ಶೇ 80 ರಷ್ಟು ರೈತೊಪಿಗಳು ಅಲ್ಲಿ ಈರುಳ್ಳಿಯನ್ನು ಬೆಳೆಸುತ್ತಾರೆ. ಕೆಲ ವರ್ಷಗಳ ಹಿಂದೆ ಈ ಗ್ರಾಮದ ರೈತರು ಈರುಳ್ಳಿಯನ್ನು ಬೆಳೆದು ಹೆಚ್ಚಿನ ಲಾಭವನ್ನು ಪಡೆದು ಆಗರ್ಭ ಶ್ರೀಮಂತಿಕೆಯನ್ನು ಪಡೆದಿದ್ದಾರೆ.
ಆರ್ಥಿಕವಾಗಿ 10 ರಿಂದ 50 ಲಕ್ಷ ರೂ. ಲಾಭವನ್ನು ಬಹುತೇಕ ರೈತರು ಪಡೆದುಕೊಂಡಿದ್ದಾರೆ.
ಮಾರ್ಕೆಟ್ ಗೆ ಬರುತ್ತಿಲ್ಲ ಈರುಳ್ಳಿ :
ಹರಪನಹಳ್ಳಿ ತಾಲೂಕಿನ ಚಿಗಟೇರಿ, ಮೈದೂರು ಈ ಗ್ರಾಮಗಳು ಈರುಳ್ಳಿ ಬೆಳೆಯನ್ನು ಬೆಳೆಯಲು ಹೆಸರುವಾಸಿಯಾಗಿದೆ. ಕೇವಲ ಈರುಳ್ಳಿ ಬೆಳೆಯಲು ಮಾತ್ರವಲ್ಲದೆ ಬಾಗಲಕೋಟ, ವಿಜಯಪುರ, ಬೆಳಗಾವಿ, ಬೆಂಗಳೂರು ಗಳಂತಹ ನಗರಕ್ಕೆ ಹಾಗೂ ಹೊರ ರಾಜ್ಯಕ್ಕೂ ಮಾರಾಟ ಸಹ ಮಾಡುತ್ತಾರೆ.
ಆದರೆ ಈಗ ಹರಪನಹಳ್ಳಿ ತಾಲೂಕಿನಲ್ಲಿ ಮಳೆಯ ಕೊರೆತೆಯಿಂದಾಗಿ ಈರುಳ್ಳಿ ಬೆಳೆಯಲ್ಲಿ ನಷ್ಟವನ್ನು ಕಾಣಿಸಿಕೊಂಡಿದೆ. ತಾಲೂಕಿನಲ್ಲಿ 1018 ಹೆಕ್ಟೇರ್ ಈರುಳ್ಳಿ ಬಿತ್ತನೆಯಾದರೆ ಅದರಲ್ಲಿ 430 ಹೆಕ್ಟೇರ್ ಈರುಳ್ಳಿಯ ನಷ್ಟವನ್ನು ರೈತರು ಅನುಭವಿಸಿದ್ದಾರೆ. ಕೇವಲ ಈರುಳ್ಳಿಯಲ್ಲದೆ ಇನ್ನಿತರೇ ಬೆಳೆಗಳಾದ ಮೆಣಸಿನಕಾಯಿ, ಬದನೆಕಾಯಿ, ಟೊಮೆಟೊ ಬೆಳೆಗಳಲ್ಲಿಯೂ ಸಹ ನಷ್ಟವನ್ನು ಕಂಡಿದ್ದಾರೆ.
ಸಕಾಲಕ್ಕೆ ಸರಿಯಾಗಿ ಬಿತ್ತನೆಯಾಗದ ಹಿನ್ನಲೆಯಲ್ಲಿ ಹೊಸ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಈ ಕಾರಣಾಂತರಗಳಿಂದ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹರಪನಹಳ್ಳಿ, ಹಡಗಲಿ, ಬೊಮ್ಮನಹಳ್ಳಿ, ವಿಜಯನಗರ, ಚಿತ್ರದುರ್ಗ, ಚಳ್ಳಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಮಳೆಯಿಲ್ಲದ ಕಾರಣ ಈರುಳ್ಳಿಯ ದರ ಹೆಚ್ಚಿದೆ. ಇನ್ನು ಚಿಗಟೇರಿ, ಮೈದೂರು, ಕೊಂಗನಹೊಸೂರು, ಕಣವಿಹಳ್ಳಿ, ನಂದಿಬೇವೂರು, ಬೆಣ್ಣಿಹಳ್ಳಿ, ಸೇರಿ ಇತರೆ ಗ್ರಾಮದ ರೈತರು ಈರುಳ್ಳಿ ಬೆಳೆಯನ್ನು ಹೆಚ್ಚಾನೆಚ್ಚು ಬೆಳೆಯುತ್ತಾರೆ. ಆದರೆ ಈ ಗ್ರಾಮದ ರೈತರು ಸಹ
ನೀರಿಲ್ಲದೇ ಬೆಳೆ ಬೆಳೆಯಲು ಆಗದೇ ಅಸಹಾಯಗೊಂಡಿದ್ದಾರೆ.
ಈರುಳ್ಳಿ ದರ(onion price) ಎಷ್ಟಿದೆ?
ಈ ಹಿಂದೆ ಪ್ರತಿ ಕೆ.ಜಿ. ಈರುಳ್ಳಿ 35 ರಿಂದ 40 ರೂ.ಗಳಿಗೆ ಮಾರಾಟವಾಗುತ್ತಿದ್ದು, ಆದರೆ ಗುರುವಾರದಿಂದ ಕೆ.ಜಿ.ಗೆ 40 ರಿಂದ 50 ರೂ.ಗಳಿಗೆ ಈರುಳ್ಳಿಯ ಬೆಲೆಯು ಏರಿಕೆ ಕಂಡಿದೆ. ಅಂದರೆ ಈರುಳ್ಳಿಯ ಬೆಲೆಯು 5-10 ರೂಗಳಿಗೆ ಏರಿಕೆಯಾಗಿದೆ. ಇನ್ನು ತರಕಾರಿ ಅಂಗಡಿಗಳಲ್ಲಿ ಪ್ರತಿ ಕೆ.ಜಿ. ದಪ್ಪ ಈರುಳ್ಳಿಗೆ ರೂ. 50 ಇತ್ತು ಈಗ 60 ರೂ.ಗಳಿಗೇರಿದೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






