ಕಮ್ಮಿ ಬೆಲೆಯಲ್ಲಿ ಈರುಳ್ಳಿ & ಗೋದಿ ಹಿಟ್ಟು ವಿತರಣೆ, ದೀಪಾವಳಿಗೆ ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

hike in onion and wheat flour price

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಈರುಳ್ಳಿ (Onion) ಮತ್ತು ಗೋದಿ ಹಿಟ್ಟಿನ ಬೆಲೆ ಏರಿಕೆಯ ಬೆನ್ನಲೆಯಲ್ಲಿ ಮೋದಿ ಸರ್ಕಾರದಿಂದ ಕೈಗೊಂಡ ಕ್ರಮಗಳ/ ಯೋಜನೆಗಳ ಕುರಿತು ತಿಳಿಸಿಕೊಡಲಾಗುತ್ತಿದೆ. ಯಾವ ಯಾವ ಕ್ರಮಗಳು / ಯೋಜನೆಗಳು ಎಂದು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 

ಹೆಚ್ಚುತ್ತಿರುವ ಈರುಳ್ಳಿಯ ಬೆಲೆಗೆ ನಾಫೆಡ್(NAFED) ಪರಿಹಾರ :

ತಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗೆ ಮಳೆಯಾಗದ ಕಾರಣ ಕೃಷಿ ಮೇಲೆ ತೀವ್ರ ಪರಿಣಾಮ ಬೀರಿದೆ, ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕೆಲವು ತಿಂಗಳ ಹಿಂದೆ ಟೊಮ್ಯಾಟೊ ರೇಟು ಹೆಚ್ಚಾಗಿತ್ತು, ಕೆ.ಜಿ ಗೆ 200 ರೂಗಳ ವರೆಗೂ ಬೆಲೆ ಏರಿಕೆಯನ್ನು ಕಂಡಿತ್ತು. ಆದರೆ ಈಗ ಈರುಳ್ಳಿ(onion price)ಯ ದರ ಕೂಡ ಗಗನಕ್ಕೆರಿದೆ.
ಮಾರ್ಕೆಟ್( Market) ನಲ್ಲಿ ಪ್ರತಿ ಕೆಜಿ ಗೆ 70 ರಷ್ಟು ಈರುಳ್ಳಿ ಮಾರಾಟವಾಗುತ್ತಿದೆ. ಕೇವಲ ಈರುಳ್ಳಿಯ ದರ ಮಾತ್ರವಲ್ಲ ಇನ್ನು ಮುಂದೆ ಗೋದಿ ಹಿಟ್ಟಿನ ರೇಟ್ ಸಹ ಹೆಚ್ಚಾಗುವ ಸದ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏರಿಕೆ ಆಗ್ತಿದ್ದ ಈರುಳ್ಳಿ ದರಕ್ಕೆ ಕೇಂದ್ರ ಸರ್ಕಾರ ‘ನಾಫೆಡ್(NAFED)’ ಎಂಬ ಪರಿಹಾರದೊಂದಿಗೆ ಬಂದಿದೆ. ಏನೀದು ‘ನಾಫೆಡ್’ ಅಂದ್ರೆ ? ಗೋದಿ ಹಿಟ್ಟಿನ ದರವೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರಕಾರ ಯಾವ ಪರಿಹಾರದೊಂದಿಗೆ ಬಂದಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ನಾಫೆಡ್ (NAFED):

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಸಂಘಟನೆ (National Agricultural Cooperative Marketing Federation of India Ltd.) ಇದನ್ನು ಸರಳವಾಗಿ ‘NAFED’ ಎನ್ನಲಾಗುತ್ತದೆ. ಇದನ್ನು ರಾಷ್ಟ್ರದಾದ್ಯಂತ ಕೃಷಿ ಉತ್ಪನ್ನ ವ್ಯಾಪಾರವನ್ನು ಉತ್ತೇಜಿಸಲು 2 ಅಕ್ಟೋಬರ್ 1958 ರಂದು ಮಹಾತ್ಮ ಗಾಂಧಿಯವರ ಜನ್ಮದಿನದಂದು ಸ್ಥಾಪಿಸಲಾಯಿತು. NAFED ಈಗ ಭಾರತದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣೆ ಮಾಡುವ ಬೃಹತ್ ಮಾರುಕಟ್ಟೆ ಏಜೆನ್ಸಿ(Agency)ಗಳಲ್ಲಿ ಒಂದಾಗಿದೆ.

ಈ ಸಂಘಟನೆಯ ತುಂಬಾ ಸರಳವಾಗಿದೆ, ದೇಶದ ಎಲ್ಲ ರಾಜ್ಯಗಳ ನಡುವೆ ಕೃಷಿ ಉತ್ಪನ್ನಗಳ ಸಮಾನ ರೂಪದಲ್ಲಿ ಹಂಚಿಕೆ ಹಾಗೂ ಅತಿ ಹೆಚ್ಚು ಬೆಳೆ ಬೆಳೆದ ರಾಜ್ಯದ ರೈತರು, ಬೆಳೆಗಳ ಕೊರತೆ ಉಂಟಾದ ಇತರೆ ರಾಜ್ಯಗಳಿಗೆ ನಾಫೆಡ್ ಮೂಲಕ ತಮ್ಮ ಕೃಷಿ ಉತ್ಪನ್ನ ರವಾನೆ ಮಾಡುವುದು. ಈ ಸಂಘಟನೆಯ ಸದಸ್ಯತ್ವವನ್ನು ರೈತರೆ ಹೊಂದಿರುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಹೆಚ್ಚಾಗಿದ್ದು, ನಾಫೆಡ್ ಮೂಲಕ ಮಾರುಕಟ್ಟೆಯಲ್ಲಿ ಅತಿ ಕಡಿಮೆ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗ್ತಿದೆ. 75 ರೂ ಪ್ರತಿ ಕೆಜಿ ಇದ್ದ ಈರುಳ್ಳಿಯ ರೇಟ್ ನಾಫೆಡ್ ಮೂಲಕ ಕೇವಲ ಕೆಜಿಗೆ 25 ರೂಪಾಯಿಗೆ ಸಿಗ್ತಾಯಿದೆ.

ದುಬಾರಿಯದ ಈರುಳ್ಳಿ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರದ ಬ್ರಹ್ಮಾಸ್ತ್ರ;ನಾಫೆಡ್

onion price

ಪಂಚ್ಯ ರಾಜ್ಯದ ಚುನಾವಣೆಯ ಹೊತ್ತಿನಲ್ಲಿ ಈರುಳ್ಳಿಯ ಬೆಲೆ ಹೆಚ್ಚಿದ್ದು, ಇದು ಚುನಾವಣೆ ಸಂಧರ್ಭದಲ್ಲಿ ಸಮಸ್ಯೆಯನ್ನುಂಟು ಮಾಡಿದೆ. ಹೀಗಾಗಿ ಕೇಂದ್ರ ಸರಕಾರವು ನಾಫೆಡ್ ಸಂಘಟನೆಯೊಂದಿಗೆ ಕೈಜೋಡಿಸಿ ಈರುಳ್ಳಿಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಸಜ್ಜಗಿದೆ. ದೇಶಾದ್ಯಂತ ನಾಫೆಡ್ ಮೂಲಕ ಪ್ರತಿ ಕೆಜಿಗೆ 25 ರೂಪಾಯಿಯಂತೆ ಈರುಳ್ಳಿ ಮಾರಾಟ ಮಾಡಲಾಗ್ತಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ನಮ್ಮ ಕರ್ನಾಟಕದಲ್ಲಿಯೂ ಸಹ ಸರಕಾರವು ಕೆಜಿ 25 ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ರಾಜ್ಯಧಾನಿ ಬೆಂಗಳೂರಿನ ಶಿವಾಜಿನಗರ, ವಸಂತ ನಗರ ಪ್ರದೇಶಗಳಲ್ಲಿ ನಾಫೆಡ್ ಈರುಳ್ಳಿ ಸೇಲ್ ಮಾಡಲಾಗ್ತಿದೆ. ಬೆಂಗಳೂರು ಮಾತ್ರವಲ್ಲದೆ , ಧಾರವಾಡನಲ್ಲಿಯೂ ಸಹ ರಿಯಾಯ್ತಿ ದರಕ್ಕೆ ಈರುಳ್ಳಿ ಮಾರಾಟ ಆಗ್ತಿದೆ. ಮುಂದಿನ ದಿನಮಾನಗಳಲ್ಲಿ ಹೆಚ್ಚುವರಿ 25 ಟನ್ ಈರುಳ್ಳಿ ತರೆಸಿಕೊಂಡು ರಾಜ್ಯದಲ್ಲಿ ಬೆಲೆ ಹೆಚ್ಚಳ ಇರುವ ಎಲ್ಲ ಕಡೆಗಳಲ್ಲೂ ಮಾರಾಟ ಮಾಡಲು ನಾಫೆಡ್ ಸಹಕರಿಸುತ್ತದೆ. ಮಹಾರಾಷ್ಟ್ರದ ಅತೀ ಹೆಚ್ಚು ಈರುಳ್ಳಿಯನ್ನು ಬೆಳೆಯಲಾಗುವ ನಾಸಿಕ್‌ನಿಂದ ಸುಮಾರು 75 ಟನ್ ಈರುಳ್ಳಿ ತರಿಸಿಕೊಳ್ಳಲಾಗುತ್ತಿದೆ, ಮತ್ತು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತದೆ.

APMC ಗಳಲ್ಲಿ ಈರುಳ್ಳಿಯ ಪೂರೈಕೆ :

ಯಾವದೇ ವಸ್ತುವಾಗಿರಲಿ ಅದರ ಪೂರೈಕೆ ಕಡಿಮೆ ಇದ್ದರೆ ಬೆಲೆ ಸಹಜವಾಗಿ ಏರುತ್ತದೆ, ಇದು ಸರಳ ಹಾಗೂ ಸಾಮನ್ಯ ಅರ್ಥ ಶಾಸ್ತ್ರ. ಹೀಗಿರುವಾಗ ಸರಕಾರವು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ( APMC ) ಗಳಲ್ಲಿ ಈರುಳ್ಳಿ ಪೂರೈಕೆ ಹೆಚ್ಚಿಸುವ ಕ್ರಮ ಕೈಗೊಂಡಿದೆ. ವಿದೇಶಗಳಿಂದಲೂ ಈರುಳ್ಳಿ ಆಮದು(Import)ಮಾಡಿಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ. ಯಶವಂತಪುರ ಎಪಿಎಂಸಿಗೆ 255 ವಾಹನಗಳಲ್ಲಿ 65,768 ಚೀಲ ಈರುಳ್ಳಿ ಹಾಗೂ ದಾಸನಪುರಕ್ಕೆ 10 ವಾಹನಗಳಲ್ಲಿ 2,448 ಚೀಲ ಈರುಳ್ಳಿ ಬಂದು ಸೇರಿದೆ. ನೇರೆಯ ರಾಜ್ಯ ಮಹಾರಾಷ್ಟ್ರ ದಿಂದ ಬೆಂಗಳೂರಿಗೆ 165 ಲಾರಿ ಈರುಳ್ಳಿ ಬಂದಿದೆ ಎಂಬ ವರದಿ ಬಂದಿದೆ, ಈ ಪೈಕಿ ಸುಮಾರು 100 ರಷ್ಟು ಲಾರಿಗಳಲ್ಲಿ ಹೊಸ ಈರುಳ್ಳಿ ಇದೆ. ಇದರ ಜೊತೆ ಜೊತೆಗೆ ನಾಫೆಡ್‌ ಕೂಡಾ 4 ಲಾರಿ ತುಂಬಾ ಈರುಳ್ಳಿಗಳನ್ನು ರವಾನಿಸಿದೆ. ಇದರ ಪರಿಣಾಮವಾಗಿ, APMC ಮಾರುಕಟ್ಟೆಯಲ್ಲಿ ಈರುಳ್ಳಿಯ ವೋಲ್‌ಸೇಲ್(Wholesale) ದರದಲ್ಲಿ ಇಳಿಕೆ ಕಂಡುಬಂದಿದೆ, ಕ್ವಿಂಟಲ್‌ಗೆ 6 ಸಾವಿರ ಇದ್ದ ಈರುಳ್ಳಿ ಈಗ 2,500ಕ್ಕೆ ಮಾರಾಟವಾಗಲಿದೆ. ಕೆಲವೊಂದು ರಿಟೇಲ್ ಮಾರ್ಕೆಟ್ ನಲ್ಲಿ ಈರುಳ್ಳಿಯ ಬೆಲೆಯಲ್ಲಿ ಯಾವದೇ ಕಡಿತ ಕಂಡಿಲ್ಲ, ಆದರೆ ಮುಂಬರುವ ದಿನಗಳಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಭಾರತ್ ಆಟ ಯೋಜನೆ; ಗೋಧಿ ಹಿಟ್ಟಿ(wheat flour)ನ ಬೆಲೆ ನಿಯಂತ್ರಣಕ್ಕೂ ಕೇಂದ್ರ ಸರಕಾರದಿಂದ ಪರಿಹಾರ:

ದೀಪಾವಳಿ ಬಂಪರ್ ಆಫರ್ ಆಗಿ ಮೋದಿ ಸರಕಾರವು ‘ಭಾರತ್ ಆಟಾ'(Bharat aata) ಎಂಬ ಯೋಜನೆ ಕೈಗೊಂಡಿದೆ. ದೀಪಾವಳಿ ಸಂಧರ್ಭದಲ್ಲಿ ಹಿಟ್ಟಿನ ಬೆಲೆಯು ಸಹ ಹೆಚ್ಚುತ್ತಿದೆ, ಇದು ಜನರಲ್ಲಿ ಆತಂಕ ಮೂಡಿಸಿದೆ. ಈ ಸಮಸ್ಯೆಯಿಂದ ಮುಕ್ತಿ ನೀಡಲು ಹಾಗೂ ನಾಗರಿಕರ ಅನುಕೂಲಕ್ಕಾಗಿ ಸರಕಾರವು ಈ ಕ್ರಮವನ್ನು ಕೈಗೊಂಡಿದೆ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿ ಸೋಮವಾರ ದೆಹಲಿಯಲ್ಲಿ ‘ಭಾರತ್ ಆಟಾ ‘ ವಿತರಣಾ ವಾಹನಗಳಿಗೆ (ಮೊಬೈಲ್ ವ್ಯಾನ್) ಫ್ಲ್ಯಾಗ್ ಆಫ್ ಮಾಡಿದರು.

ಈ ಯೋಜನೆಯಡಿ ಕಡಿಮೆ ಬೆಲೆಯಲ್ಲಿ ಅಂದರೆ, 27.5 ರೂಪಾಯಿಗೆ ಪ್ರತಿ ಕೆಜಿ ಗೋಧಿ ಹಿಟ್ಟು ಮಾರಲು ಸರ್ಕಾರ ತೀರ್ಮಾನಿಸಿದೆ. 100 ‘ಭಾರತ್ ಆಟಾ ಮೊಬೈಲ್ ವ್ಯಾನ್‌ಗಳನ್ನು ದೆಹಲಿಯಿಂದ ರವಾನೆ ಮಾಡಲಾಗಿದೆ. ಭಾರತ್ ಅಟ್ಟಾವನ್ನು 800 ಮೊಬೈಲ್ ವ್ಯಾನ್‌ಗಳು ಮತ್ತು 2,000 ಕ್ಕೂ ಹೆಚ್ಚು ಮಳಿಗೆಗಳಲ್ಲಿ NAFED, NCCF ಮತ್ತು ಕೇಂದ್ರೀಯ ಭಂಡಾರ್ ಹಾಗೂ ಇನ್ನಿತರೇ ಸರ್ಕಾರಿ ಸಂಸ್ಥೆಗಳ ಮೂಲಕ ದೇಶಾದ್ಯಂತ ಮಾರಾಟ ಮಾಡಲಾಗುತ್ತದೆ. ಹಿಟ್ಟು 10 ಕೆಜಿ ಹಾಗೂ 30 ಕೆಜಿ ಪ್ಯಾಕ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಇದರ ಜೊತೆಯಲ್ಲೇ ಕೆಜಿಗೆ 60 ರೂ. ನಂತೆ ಕಡಲೆ ಕಾಳು ಕೂಡಾ ಮಾರಾಟ ಮಾಡಲಾಗ್ತಿದೆ.

ಈರುಳ್ಳಿ, ಗೋದಿ ಹಿಟ್ಟು, ಬೇಳೆ ಕಾಳುಗಳು ದಿನನಿತ್ಯ ಆಹಾರದಲ್ಲಿ ಅತ್ಯಗತ್ಯವಿರುವ ಕಾರಣ ಇದರ ಬೆಲೆಗಳಲ್ಲಿ ಏರಿಕೆಯನ್ನು ನಿಯಂತ್ರಿಸಲು ಹಾಗೂ ನಾಗರಿಕರ ಟೆನ್ಶನ್ ಕಡಿಮೆ ಮಾಡಲು ಈ ಕ್ರಮಗಳನ್ನು ಸರಕಾರ ಕೈಗೊಂಡಿದ್ದು, ಇದರ ಮುಖ್ಯ ಉದ್ದೇಶ ಮಾರುಕಟ್ಟೆಯಲ್ಲಿ ದರ ನಿಯಂತ್ರಣ ಮಾಡುವುದಾಗಿದೆ.

ಇದನ್ನೂ ಓದಿ – Health insurance- ಹೆಲ್ತ್ ಇನ್ಶೂರೆನ್ಸ್ ಕಡೆಗಣೆಸುವ ಮುನ್ನ ಇದು ಗೊತ್ತಿರಲಿ! Health isurance inforamation

ಇದನ್ನೂ ಓದಿ – ಮಹಿಳೆಯರೇ ಗಮನಿಸಿ : ಕೇಂದ್ರ ಸರ್ಕಾರದ ಈ ಯೋಜನೆ’ಗೆ ಅರ್ಜಿ ಸಲ್ಲಿಸಿದ್ರೆ ಸಿಗುತ್ತೆ 6,000 ರೂ.! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ – Gold rate Today- ಚಿನ್ನ-ಬೆಳ್ಳಿಯ ದರದಲ್ಲಿ ಇಳಿಕೆ, ದೀಪಾವಳಿಗೆ ಚಿನ್ನಾಭರಣ ಖರೀದಿಸೋರಿಗೆ ಗುಡ್ ನ್ಯೂಸ್

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!