ಸ್ಯಾಮ್ ಸಂಗ್ ಗೆ ಶಾಕ್ ನೀಡಿದ ಒನ್ ಪ್ಲಸ್, ಕಡಿಮೆ ಬೆಲೆಗೆ 108 MP ಕ್ಯಾಮೆರಾ ಫೋನ್ ಬಿಡುಗಡೆ

Picsart 23 06 07 03 26 18 703 scaled

ಎಲ್ಲರಿಗೂ ನಮಸ್ಕಾರ, ಇತ್ತೀಚಿನ ದಿನಮಾನಗಳಲ್ಲಿ ಅತ್ತ್ಯುತ್ತಮ ಕ್ಯಾಮೆರಾ ಫೀಚರ್ಸ್ ಹೊಂದಿರುವ ಸ್ಮಾರ್ಟ್​ಫೋನ್​ಗಳಿಗೆ ಭರ್ಜರಿ ಬೇಡಿಕೆ ಹೊಂದಿದೆ. Oneplus N30 5G, 108MP ಕ್ಯಾಮೆರಾದ ಸ್ಮಾರ್ಟ್​ಫೋನ್ ಜೂನ್ 06 ರಂದು ಬಿಡುಗಡೆ ಮಾಡಲಾಗಿದೆ. ಇದರ ವಿನ್ಯಸ ಹಾಗೂ ವಿಶ್ಲೇಷಣೆ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.  ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Oneplus Nord N30 5G ಸ್ಮಾರ್ಟ್ ಫೋನ್(smartphone):

003

ಈಗಿನ ದಿನಮಾನಗಳಲ್ಲಿ ಎಲ್ಲರು ಡ್ಯಾಶಿಂಗ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್ ವನ್ನು ಖರೀದಿಸಲು ಇಚ್ಚಿಸಿತ್ತಾರೆ. ಜೂನ್ 06 ರಂದು Samsung Galaxy F54 5G 108 MP ಕ್ಯಾಮೆರಾ ಬೆಂಬಲಿತ ಸ್ಮಾರ್ಟ್ ಫೋನ್ ಬಿಡುಗಡೆಮಾಡಿದ್ದೂ, ಇದರ ಬೆನ್ನಲೇಯಲ್ಲಿಯೇ ಸದ್ದಿಲ್ಲದೆ OnePlus Nord N20 5G ಉತ್ತರಾಧಿಕಾರಿ, Nord N30 5G ಅನ್ನು US ನಲ್ಲಿ ಬಿಡುಗಡೆ ಮಾಡಿದೆ. Oneplus ಇದು ಸುಪ್ರಸಿದ್ದ, ಮರುಕಟ್ಟೆಯಲ್ಲಿ ಅತೀ ಬೇಡಿಕೆಯುಳ್ಳ ಸ್ಮಾರ್ಟ್ ಫೋನ್ ಆಗಿದೆ ಎನ್ನಲು ತಪ್ಪಾಗುವುದಿಲ್ಲ. ಇದರ ಡ್ಯಾಶಿಂಗ್ ಫೀಚರ್ಸ್, ಕ್ಯಾಮರಾ ಕ್ವಾಲಿಟಿ ಹಾಗೂ ಇನ್ನಿತರೇ ಫೀಚರ್ಸ್ ಜನರನ್ನು ಆಕರ್ಷಣೆಗೊಳಪಡಿಸಿದೆ. ನೀವು ಅದ್ಭುತ ಕ್ಯಾಮೆರಾ ಕ್ವಾಲಿಟಿವುಳ್ಳ ಹಾಗೂ ಉತ್ತಮ ಫೀಚರ್ಸ್ ಗೆ ಸೇರಿದಂತೆ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಫೋನ್ ಅನ್ನು ಒಮ್ಮೆ ನೋಡಿ.

Untitled 1 scaled

Oneplus Nord N30 5G ಸ್ಮಾರ್ಟ್ ಫೋನ್ ವಿನ್ಯಾಸ ಹಾಗೂ ವೈಶಿಷ್ಟತೆಗಳು ಈ ಕೆಳಗಿನಂತಿಹೇ :

Oneplus Nord N30 ಯು 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯೊಂದಿಗೆ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. 120Hz ರಿಫ್ರೆಶ್ ದರ, 240Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌, ಮತ್ತು 391 ppi ಅನುಪಾತದ ಪಿಕ್ಸೆಲ್ ಹೊಂದಿದೆ.
ಆಕ್ಟಾ-ಕೋರ್ Qualcomm Snapdragon 695 SoC ಪ್ರೋಸೆಸ್ ಮೂಲಕ ರನ್ ಆಗುತ್ತದೆ.

ಕ್ಯಾಮೆರಾ(camera) ವಿವರ :

Oneplus Nord N30 ಯು ಟ್ರಿಪಲ್‌ ರಿಯರ್‌(Rear) ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರುವುದಾಗಿದೆ. ಮುಖ್ಯ(primary) ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ S5KHM6SX03 ಸೆನ್ಸಾರ್ ಲೆನ್ಸ್ , ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಲೆನ್ಸ್ ಬೆಂಬಲಿತವಾಗಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16  ಮೆಗಾಪಿಕ್ಸೆಲ್ ಸೆನ್ಸಾರ್‌ ಲೆನ್ಸ್ ಅನ್ನು ಒಳಗೊಂಡಿರುತ್ತದೆ.

ಬ್ಯಾಟರಿ(Battary):

The mid range OnePlus Nord N30 5G goes official and up for US pre orders at an exquisite price

ಇನ್ನು ಬ್ಯಾಟರಿ ಸಾಮರ್ಥ್ಯವನ್ನು ಗಮನಿಸಿದರೆ, Onelpus Nord N30 ನ ಬ್ಯಾಟರಿ ಸಾಮರ್ಥವು 5,000mAh ಆಗಿದ್ದು,  50W SuperVOOC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. Android 13 ಆಧಾರಿತ OxygenOS 13.1 ದಲ್ಲಿ ಕಾರ್ಯನಿರ್ವಹಿಸುತ್ತದೆ.

Oneplus Nord N30 ಯು ಮಾರುಕಟ್ಟೆಯಲ್ಲಿ ಕ್ರೊಮ್ಯಾಟಿಕ್ ಗ್ರೇ ಬಣ್ಣ(colour)ದಲ್ಲಿ, ಸದ್ಯಕ್ಕೆ ಒಂದೇ ಆಯ್ಕೆಯಲ್ಲಿ ಅಷ್ಟೇ ಅನಾವರಣಗೊಂಡಿದೆ. ಇದು 8GB RAM + 128GB  ರೂಪಾಂತರದ ಸ್ಟೋರೇಜ್ ಒಳಗೊಂಡಿದೆ. ಇನ್ನಿತರೇ ಫೀಚರ್ಸ್ ಗಳಾದ GPS, WiFi 802.11,  ಬ್ಲೂಟೂತ್ ಆವೃತ್ತಿ 5.1, USB-C ಪೋರ್ಟ್, ಮತ್ತು 3.5mm ಹೆಡ್‌ಫೋನ್ ಜ್ಯಾಕ್.v5.1, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಬೆಂಬಲಿಸಲಿದೆ.

telee

Oneplus Nord N30 5G ಸ್ಮಾರ್ಟ್ ಫೋನ್ ಬೆಲೆ(price) ಹೀಗಿದೆ:

ಇದು ಪ್ರಸ್ತುತ ಕಂಪನಿಯ US ವೆಬ್‌ಸೈಟ್‌ನಲ್ಲಿ ಪ್ರಿ ಬುಕ್ಕಿಂಗ್‌ ಆರ್ಡರ್‌ಗೆ ಸಿದ್ಧವಾಗಿದೆ. OnePlus Nord N30 5G ಬೆಲೆ $299.99 ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು ರೂ.24,800 ಆಗಿರುತ್ತದೆ. ಮುಂಗಡವಾಗಿ ಬುಕಿಂಗ್ ಮಾಡುವ ಗ್ರಾಹಕರು $59 (ಅಂದಾಜು ರೂ. 4,900) ಮೌಲ್ಯದ OnePlus Nord Buds 2 TWS ಇಯರ್‌ಫೋನ್‌ಗಳನ್ನು ಉಚಿತ(free)ವಾಗಿ ಪಡೆಯಬಹುದಾಗಿದೆ. ಜೂನ್ 8 ರಂದು ಸ್ಮಾರ್ಟ್ ಫೋನ್ ಮಾರಾಟವು ಪ್ರಾರಂಭವಾಗುತ್ತದೆ.

ನೀವೇನಾದರೂ ಒಂದು ಪ್ಲಸ್ ಅಭಿಮಾನಿಗಳಾಗಿದ್ದರೆ ಇದು ನಿಮಗೆ ಒಂದು ಉತ್ತಮವಾದ ಆಯ್ಕೆ ಎನ್ನಬಹುದಾಗಿದೆ. ಹಾಗೆಯೇ ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ  ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

Leave a Reply

Your email address will not be published. Required fields are marked *