ಪ್ರೀಮಿಯಂ ಲುಕ್, ಶಕ್ತಿಶಾಲಿ ಪರ್ಫಾರ್ಮೆನ್ಸ್ ಮತ್ತು ಅದ್ಭುತ ಡಿಸ್ಪ್ಲೇ ಬಯಸುವವರಿಗೆ Oneplus 13s ಮತ್ತು Google Pixel 9a ಎರಡು ಅದ್ಬುತ ಮೊಬೈಲ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯ. Pixel 9a ಮಿಡ್-ರೇಂಜ್ ಸೆಗ್ಮೆಂಟ್‌ಗೆ ಹೊಂದಿಕೆಯಾದರೆ, Oneplus 13s ಪ್ರೀಮಿಯಂ ಫ್ಲ್ಯಾಗ್ಶಿಪ್ ಅನುಭವ ನೀಡುತ್ತದೆ. ಇವೆರಡರ ನೇರ ಹೋಲಿಕೆಯಲ್ಲಿ ಯಾವುದು ಉತ್ತಮ ಎಂದು ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಡಿಸೈನ್ ಮತ್ತು ಡಿಸ್ಪ್ಲೇ: ಯಾವುದು ಪ್ರೀಮಿಯಂ ಅನುಭವ ನೀಡುತ್ತದೆ?
Pixel 9a ಪ್ಲಾಸ್ಟಿಕ್ ಬ್ಯಾಕ್ ಹೊಂದಿದ್ದರೆ, Oneplus 13s ಗ್ಲಾಸ್ ಮತ್ತು ಮೆಟಲ್ ಕಾಂಬಿನೇಶನ್‌ನೊಂದಿಗೆ ಫ್ಲ್ಯಾಗ್ಶಿಪ್ ಲುಕ್ ನೀಡುತ್ತದೆ. 6.3-ಇಂಚ್ LTPO AMOLED ಡಿಸ್ಪ್ಲೇ (1-120Hz ವೇರಿಯಬಲ್ ರಿಫ್ರೆಶ್ ರೇಟ್, 1.5K ರೆಸೊಲ್ಯೂಷನ್) ಹೊಂದಿರುವ Oneplus ಸ್ಕ್ರೀನ್ ಸುಗಮತೆ ಮತ್ತು 1600 ನಿಟ್ಸ್ ಬ್ರೈಟ್ನೆಸ್‌ನೊಂದಿಗೆ ಹಗಲಿನಲ್ಲೂ ಸ್ಪಷ್ಟವಾಗಿ ಕಾಣುತ್ತದೆ. Pixel 9a ಕೂಡ 120Hz ಡಿಸ್ಪ್ಲೇ ನೀಡುತ್ತದೆ, ಆದರೆ LTPO ತಂತ್ರಜ್ಞಾನ ಇಲ್ಲದಿರುವುದು ಗಮನಾರ್ಹ.
ಪರ್ಫಾರ್ಮೆನ್ಸ್: ಯಾವ ಚಿಪ್‌ಸೆಟ್ ಶಕ್ತಿಶಾಲಿ?
Oneplus 13s ನಲ್ಲಿ ಸ್ನಾಪ್ಡ್ರ್ಯಾಗನ್ 8 ಎಲೈಟ್ ಚಿಪ್‌ಸೆಟ್ (3nm) ಇದೆ, ಇದು ಆಂಡ್ರಾಯ್ಡ್ ಫೋನ್‌ಗಳಿಗೆ ಸದ್ಯದ ಅತ್ಯಂತ ವೇಗವಾದ ಪ್ರೊಸೆಸರ್. ಗೇಮಿಂಗ್, ಮಲ್ಟಿಟಾಸ್ಕಿಂಗ್ ಅಥವಾ ಕ್ಯಾಮೆರಾ ಯೂಸ್‌ನಲ್ಲಿ ಇದು ಅತ್ಯುತ್ತಮ. Pixel 9a ನ ಟೆನ್ಸರ್ G4 ಚಿಪ್ AI ಕ್ಷಮತೆಗಳಲ್ಲಿ ಉತ್ತಮವಾಗಿದೆ, ಆದರೆ ಸ್ನಾಪ್ಡ್ರ್ಯಾಗನ್‌ಗೆ ಹೋಲಿಸಿದರೆ ರಾ ಪರ್ಫಾರ್ಮೆನ್ಸ್‌ನಲ್ಲಿ ಹಿಂದೆ.
ಬ್ಯಾಟರಿ ಮತ್ತು ಚಾರ್ಜಿಂಗ್: ಯಾವುದು ಹೆಚ್ಚು ಡ್ಯೂರೇಬಲ್?
Oneplus 13s ನ 5850mAh ಬ್ಯಾಟರಿ Pixel 9a ಯ 5100mAh ಗಿಂತ ದೊಡ್ಡದು. ಚಾರ್ಜಿಂಗ್‌ನಲ್ಲಿ Oneplus 13s 80W ಸೂಪರ್ ಫಾಸ್ಟ್ ಚಾರ್ಜಿಂಗ್ Pixel 9a 23W ಚಾರ್ಜಿಂಗ್‌ಗಿಂತ 3x ವೇಗವಾಗಿದೆ! Pixel 9a ನಲ್ಲಿ 7.5W ವೈರ್ಲೆಸ್ ಚಾರ್ಜಿಂಗ್ ಇದ್ದರೂ, ಫಾಸ್ಟ್ ಚಾರ್ಜಿಂಗ್‌ನಲ್ಲಿ Oneplus 13s ಮುಂದೆ.

ಬೆಲೆ: ಯಾವುದು ‘ವ್ಯಾಲ್ಯೂ ಫರ್ ಮನಿ’?
Pixel 9a ಯ 256GB ಮೊಬೈಲ್ ನ ಬೆಲೆ ₹49,999, ಆದರೆ Oneplus 13s ಕೂಡ ಬ್ಯಾಂಕ್ ಆಫರ್‌ಗಳೊಂದಿಗೆ ₹49,999 ಗೆ ಲಭ್ಯ. ಅದೇ ಬೆಲೆಯಲ್ಲಿ Oneplus ನಲ್ಲಿ ಬಹುಮುಖ್ಯ ಡಿಸ್ಪ್ಲೇ, ಶಕ್ತಿಶಾಲಿ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿ ಸೇರಿದಂತೆ ಹೆಚ್ಚಿನ ಫೀಚರ್ಸ್ ಇವೆ.
ಯಾವುದು ಉತ್ತಮ?
Pixel 9a ಉತ್ತಮ ಆಯ್ಕೆ ಅಗಬಹುದು AI ಫೋಟೋ ಎಡಿಟಿಂಗ್ ಮತ್ತು ಕ್ಲೀನ್ ಆಂಡ್ರಾಯ್ಡ್ ಬಯಸುವವರಿಗೆ. ಆದರೆ ಡಿಸೈನ್, ಪರ್ಫಾರ್ಮೆನ್ಸ್, ಡಿಸ್ಪ್ಲೇ ಮತ್ತು ಬ್ಯಾಟರಿ ಎಲ್ಲದರಲ್ಲೂ Oneplus 13s ಸ್ಪಷ್ಟವಾಗಿ ಮುಂದಿದೆ. ಹೀಗಾಗಿ, ಈ ಹೋಲಿಕೆಯಲ್ಲಿ Oneplus 13s BEST…..!
₹50K ಬಜೆಟ್‌ನಲ್ಲಿ ಫ್ಲ್ಯಾಗ್ಶಿಪ್ ಅನುಭವ ಬಯಸಿದರೆ, Oneplus 13s ನಿಮ್ಮಿಗೆ ಸೂಪರ್ ವ್ಯಾಲ್ಯೂ ನೀಡುತ್ತದೆ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.
ಈ ಮಾಹಿತಿಗಳನ್ನು ಓದಿ
- ಕೇಂದ್ರದ ಈ ಯೋಜನೆಯಲ್ಲಿ ಸಿಗುತ್ತೆ ಡಬಲ್ ಹಣ, ಕಿಸಾನ್ ವಿಕಾಸ್ ಪತ್ರ ಯೋಜನೆ ಬಗ್ಗೆ ತಿಳಿದುಕೊಳ್ಳಿ
- 2025ರ ಹೋಂಡಾ ಶೈನ್ 100: ಕಡಿಮೆ ಬೆಲೆಗೆ ಭರ್ಜರಿ ಎಂಟ್ರಿ.! ಇಲ್ಲಿದೆ ಡೀಟೇಲ್ಸ್
- ಅತೀ ಕಮ್ಮಿ ಬೆಲೆಗೆ, ಹೊಸ ಇ ಸ್ಕೂಟರ್ ಎಂಟ್ರಿ, ಬರೋಬ್ಬರಿ 500km ಮೈಲೇಜ್, ಖರೀದಿಗೆ ಮುಗಿಬಿದ್ದ ಜನ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.