ಹಳೆಯ ₹100 ನೋಟುಗಳು (Old ₹100 notes) ಚಾಲ್ತಿಯಲ್ಲಿವೆಯೇ ಇಲ್ಲವೇ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ ಆರ್.ಬಿ.ಐ(RBI)
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ (social media) ಹಳೆಯ ₹100 ನೋಟುಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಈ ಕಾರಣ ಹಳೆಯ ₹100 ನೋಟುಗಳನ್ನು ಅಂಗಡಿಗಳಲ್ಲಿ ಅಥವಾ ವ್ಯವಹಾರದ ಸ್ಥಳಗಳಲ್ಲಿ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದರು. ಹಳೆಯ ₹100 ನೋಟುಗಳು ಚಾಲ್ತಿಯಲ್ಲಿಲ್ಲ ಎಂದುಕೊಂಡು ಯಾರೇ ಹಳೆಯ ₹100 ನೋಟುಗಳನ್ನು ನೀಡಿದರು ಕೂಡ ನಿರಾಕರಿಸುತ್ತಿದ್ದರು. ಈ ಎಲ್ಲಾ ವಿಷಯಗಳನ್ನು ಗಮನಿಸಿದ ಆರ್.ಬಿ.ಐ(RBI) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಳೆಯ ₹100 ನೋಟುಗಳ ಬಗ್ಗೆ ಸ್ಪಷ್ಟನೆ ನೀಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸರಿ ಸುಮಾರು 1938 ರಿಂದ ₹100 ನೋಟುಗಳು ಚಾಲ್ತಿಯಲ್ಲಿವೆ. 1969 ರವರೆಗೆ ₹100 ನೋಟುಗಳ ಮೇಲೆ ಆರನೇ ಜಾರ್ಜ್ ರಾಜನ(King George VI) ಚಿತ್ರವಿತ್ತು. ನಂತರ ಮಹಾತ್ಮ ಗಾಂಧಿಯವರ(Mahatma Gandhi) ಭಾವಚಿತ್ರ ಬಳಸಲಾಗಿದೆ. 2018 ರಲ್ಲಿ ಹೊಸ ವಿನ್ಯಾಸದ ಲ್ಯಾವೆಂಡರ್ ಬಣ್ಣದ (Lavender colore) ನೋಟು ಬಿಡುಗಡೆಯಾಯಿತು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ:
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಳೆಯ ₹100 ನೋಟುಗಳು ಚಾಲ್ತಿಯಲ್ಲಿಲ್ಲ ಎಂಬ ವದಂತಿಗಳ ಹರಿದಾಡುತ್ತಿದ್ದವು. ಈ ಬಗ್ಗೆ ಜನರಿಗೆ ಎಚ್ಚರಿಸುವ ನಿಟ್ಟಿನಲ್ಲಿ RBI ₹100 ನೋಟುಗಳ ಬಗ್ಗೆ ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಸುಳ್ಳು ಎನ್ನುವ ಮೂಲಕ ಸುಳ್ಳು ಮಾಹಿತಿಗೆ ತೆರೆ ಎಳೆದಿದೆ. ಹಳೆಯ ₹100 ನೋಟುಗಳು ಚಾಲ್ತಿಯಲ್ಲಿವೆ ಮತ್ತು ಮಾನ್ಯವಾಗಿವೆ ಎಂದು RBI ಸ್ಪಷ್ಟಪಡಿಸಿದೆ.
ಹಳೆಯ ₹100 ನೋಟುಗಳಿಗೆ ಸ್ಪಷ್ಟನೆ ನೀಡಿದ ಆರ್.ಬಿ.ಐ:
ಹಳೆಯ ₹100 ನೋಟುಗಳು ಚಾಲ್ತಿಯಲ್ಲಿವೆ ಮತ್ತು ಮಾನ್ಯವಾಗಿವೆ ಎಂದು RBI ಸ್ಪಷ್ಟಪಡಿಸಿದ್ದು, ಹಳೆಯ ಹಾಗೂ ಹೊಸ ₹100 ನೋಟುಗಳು ಕಾನೂನುಬದ್ಧವಾಗಿ ಚಾಲ್ತಿಯಲ್ಲಿದ್ದು, ಜನರು ವ್ಯವಹಾರಗಳಿಗೆ ಹಳೆಯ ಹಾಗೂ ಹೊಸ ₹100 ನೋಟುಗಳನ್ನು ಬಳಸಬಹುದು. ಅಂಗಡಿಯವರೂ ಕೂಡ ಯಾವುದೇ ಆತಂಕವಿಲ್ಲದೆ ನೋಟುಗಳನ್ನು ತೆಗೆದುಕೊಳ್ಳಬಹುದು. ಹಾಗೂ ಜನರಿಗೆ ಈ ನೋತುಗಳನ್ನು ಬದಲಾವಣೆ ಮಾಡಲು ಯಾವುದೇ ರೀತಿಯ ಗಡುವು ಇಲ್ಲ. ಹಾಗೂ ಈ ಹಳೆಯ ನೋಟುಗಳು ರದ್ದುಗೊಳಿಸುವ ಯಾವ ಯೋಜನೆಯೂ ಇಲ್ಲ. ಜನರು ಈ ರೀತಿಯ ಸುಳ್ಳು ವದಂತಿಗಳಿಗೆ ಕಿವಿಕೊಡದೆ ಅಧಿಕೃತ ಮಾಹಿತಿಯನ್ನು ನಂಬಬೇಕು ಎಂದು RBI ಮನವಿ ಮಾಡಿದೆ.
ಹಳೆಯ ನೋಟುಗಳನ್ನು ಹೇಗೆ ಬದಲಾಯಿಸುವುದು :
ಜನರು ನೋಟುಗಳನ್ನು ಬದಲಾವಣೆ ಮಾಡಬೇಕು ಎಂದರೆ ಯಾವುದೇ ಬ್ಯಾಂಕ್ ಶಾಖೆಗೆ (bank branch) ಹೋಗಿ ಬದಲಾಯಿಸಿಕೊಳ್ಳಬಹುದು. ಹಳೆಯ ಅಥವಾ ಹರಿದ ನೋಟುಗಳನ್ನು ಬದಲಾಯಿಸಿಕೊಳ್ಳಲು ಯಾವುದೇ ರೀತಿಯ ಶುಲ್ಕವನ್ನು ಕಟ್ಟುವಂತಿಲ್ಲ. ಜನರು ತಮಗೆ ಹತ್ತಿರವಾದಂತಹ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ನೋಟು ಬದಲಾವಣೆ ಫಾರ್ಮ್ ಭರ್ತಿ ಮಾಡಿ, ಗುರುತಿನ ಚೀಟಿ ತೋರಿಸಬೇಕು. ತದನಂತರ ಬ್ಯಾಂಕ್ ಸಿಬ್ಬಂದಿ ನೋಟುಗಳನ್ನು ಪರಿಶೀಲಿಸಿ ಹೊಸ ನೋಟುಗಳನ್ನು ನೀಡುತ್ತಾರೆ.
₹ 100 ನೋಟುಗಳಲ್ಲಿ ಕೆಲವು ವಿಶೇಷ ಲಕ್ಷಣಗಳಿವೆ:
ಮೊದಲಿಗೆ 100 ರೂಪಾಯಿ ನೋಟಿನ ಎರಡೂ ಬದಿಗಳಲ್ಲಿ ದೇವನಾಗರಿ ಲಿಪಿಯಲ್ಲಿ ‘100’ ಎಂದು ಬರೆದಿರುತ್ತದೆ. ದೇವನಾಗರಿ ಒಂದು ರೀತಿಯ ಫಾಂಟ್ (ಅಕ್ಷರ ಶೈಲಿ). ಇದಲ್ಲದೆ, ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿರುತ್ತದೆ. ‘ಆರ್‌ಬಿಐ’, ‘ಭಾರತ್’, ‘ಇಂಡಿಯಾ’ ಮತ್ತು ‘100’ ಸಣ್ಣ ಅಕ್ಷರಗಳಲ್ಲಿ ಬರೆದಿರುತ್ತದೆ. ಇಂಟಾಗ್ಲಿಯೊ ಮುದ್ರಣದಲ್ಲಿ ದೃಷ್ಟಿಹೀನರಿಗಾಗಿ ಗುರುತಿನ ಗುರುತು ಇರುತ್ತದೆ. ರಿಸರ್ವ್ ಬ್ಯಾಂಕಿನ ಮುದ್ರೆ, ಗ್ಯಾರಂಟಿ ಮತ್ತು ಭರವಸೆಯ ನಿಯಮಗಳನ್ನು ಮುದ್ರಿಸಲಾಗುತ್ತದೆ. ಕೊನೆಯದಾಗಿ ಅಶೋಕ ಸ್ತಂಭ ಚಿಹ್ನೆ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್‌ರ ಸಹಿ ಇರುತ್ತದೆ.
ಗಮನಿಸಿ :
ಜನರು ನೋಟಿನ ಮೇಲೆ ಏನನ್ನು ಬರೆಯಬಾರದು ಹಾಗೂ ಅಂಟಿಸಬಾರದು. ನೋಟನ್ನು ಮಡಚಿ ಅಥವಾ ಹೊಲೆಯಬಾರದು ಹಾಗೂ ಬಿಸಿಲು ಅಥವಾ ಶಾಖದಿಂದ ನೋಟುಗಳನ್ನು ರಕ್ಷಿಸಿ ನೋಟುಗಳು ಒದ್ದೆಯಾಗದಂತೆ ನೋಡಿಕೊಳ್ಳಬೇಕು. ಹರಿದ ನೋಟುಗಳನ್ನು ತಮಗೆ ಹತ್ತಿರವಾದಂತಹ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಬದಲಾಯಿಸಿಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




