ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ (electric scooter) ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ (electric mobility) ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ , ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಂಕ್ರಾಂತಿ ಹಬ್ಬಕ್ಕೆ ಓಲಾ ಸ್ಕೂಟಿಯ ಮೇಲೆ ಭರ್ಜರಿ ಆಫರ್ :

ಓಲಾ(Ola), ಎಥರ್(Ather)ಹಾಗೂ ಸಿಂಪಲ್ ಎನರ್ಜಿ(Simple Energy) ಇವು ಬೆಂಗಳೂರು ಮೂಲದ ಕಂಪನಿಯಾಗಿದ್ದು ಭಾರೀ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉತ್ಪಾದನೆ ಮಾಡುತ್ತವೇ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೂಡಾ ಮಾರಾಟವಾಗುತ್ತಿವೆ. ಇದೀಗ ದೇಶದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕರಾದ ಓಲಾ ಎಲೆಕ್ಟ್ರಿಕ್ (Ola Electric) ಇಂದು ದೇಶಾದ್ಯಂತ ಸಂಕ್ರಾಂತಿ ಹಬ್ಬದ ಪ್ರಯುಕ್ತ ರೂ. 15,000 ವರೆಗಿನ ಅತ್ಯಾಕರ್ಷಕ ಕೊಡುಗೆಗಳನ್ನು(Offer) ನೀಡುತ್ತಿದೆ. ಜನವರಿ 15 ರವರೆಗೆ ಈ ಆಫರ್‌ಗಳು (Offers)ಜಾರಿಯಲ್ಲಿರುತ್ತವೆ ಎಂದು ಓಲಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕೊಡುಗೆಗಳು (Offer) ಓಲಾ S1 Pro (Ola S1 Pro) ಮತ್ತು ಓಲಾ S1 Air (Ola S1 Air) ಖರೀದಿಯ ಮೇಲೆ ರೂ. 6,999 ವರೆಗಿನ ಉಚಿತ ವಿಸ್ತೃತ ಬ್ಯಾಟರಿ ವಾರಂಟಿ(Free battery warranty) ರೂ. 3,000 ವರೆಗಿನ ವಿನಿಮಯ ಬೋನಸ್ ಮತ್ತು ಆಕರ್ಷಕ ಹಣಕಾಸು ವ್ಯವಹಾರಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಓಲಾ S1 X+ ಫ್ಲಾಟ್ ರೂ. 20,000 ರಿಯಾಯಿತಿಯೊಂದಿಗೆ ರೂ. 89,999 ಕ್ಕೆ ಗ್ರಾಹಕರಿಗೆ ಖರೀಗೆ ಲಭ್ಯವಿರುತ್ತದೆ ಎಂದು ತಿಳಿದು ಬಂದಿದೆ.
EMI ಗಳಲ್ಲಿಯೂ ಕೂಡ ರಿಯಾಯಿತಿ
ಈ ಓಲಾ ಎಲೆಕ್ಟ್ರಿಕ್ ವಾಹನ (Ola Electric vehicle) ಖರೀದಿದಾರರು ಆಯ್ದ ಕ್ರೆಡಿಟ್ ಕಾರ್ಡ್(Selected credit card) EMI ಗಳಲ್ಲಿ ರೂ. 5,000 ವರೆಗೆ ರಿಯಾಯಿತಿಗಳನ್ನು (Offers) ಪಡೆಯಬಹುದು. ಮತ್ತು ಇವುಗಳ ಜೊತೆ ಇತರೆ ಹಣಕಾಸು ಕೊಡುಗೆಗಳಲ್ಲಿ (price offer) ಶೂನ್ಯ (0) ಡೌನ್ ಪೇಮೆಂಟ್(down payment), ನೋ-ಕಾಸ್ಟ್ EMI(No cost Emi), ಶೂನ್ಯ ಸಂಸ್ಕರಣಾ ಶುಲ್ಕ ಮತ್ತು 7.99% ರಷ್ಟು ಕಡಿಮೆ ಬಡ್ಡಿದರಗಳನ್ನು(low intrest rate) ಅನ್ನು ಹೊಂದಿರುತ್ತದೆ ಎಂದು ಓಲಾ ತನ್ನ ಪ್ರೀತಿಯ ಗ್ರಾಹಕರಿಗೆ ಹೇಳಿಕೊಂಡಿದೆ.
ಓಲಾ ಸ್ಕೂಟರಿನ ವಿಶೇಷತೆಗಳು :
ಇನ್ನ ಜನಪ್ರಿಯ ಮೆಚ್ಚಿನ ಓಲಾ ಸ್ಕೂಟರ್‌ಗಳ ಬಗ್ಗೆ ಅವುಗಳ ವಿಶೇಷತೆ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ತನ್ನ ಸ್ಕೂಟರ್ ಪೋರ್ಟ್‌ಫೊಲಿಯೊವನ್ನು ಐದು ಉತ್ಪನ್ನಗಳಿಗೆ ವಿಸ್ತರಿಸಿದೆ. S1 Pro (2 ನೇ ತಲೆಮಾರಿನ) ಬೆಲೆ ರೂ. 1,47,499 ವಿದ್ದರೆ, S1 Air ರೂ. 1,19,999 ನಲ್ಲಿ ಲಭ್ಯವಿದೆ. ಸದ್ಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್‌ಗಳು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ.
ಇದರ ಜೊತೆಗೆ ಓಲಾ S1X (Ola S1X) ಅನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಿದೆ. ಅವುಗಳೆಂದರೆ – S1 X+, S1 X (3kWh), ಮತ್ತು S1 X (2kWh) ಮಾದರಿಗಳಾಗಿವೆ. ಇವು ಕೂಡ ಇತ್ತೀಚೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ ಎಂದು ಹೇಳಬಹುದು.
ಇನ್ನು S1 X (3kWh) ಮತ್ತು S1 X (2kWh) ಮಾದರಿಗಳನ್ನು ಬುಕ್ ಮಾಡಿಕೊಳ್ಳಲು ರೂ. 999 ಪಾವತಿಸಿದರೆ ಸಾಕೆಂದು ಓಲಾ ತನ್ನ ಗ್ರಾಹಕರಿಗೆ ತಿಳಿಸಿದೆ. ಇನ್ನು ಈ ಎರಡೂ ಮಾದರಿಗಳ ಬೆಲೆಗಳನ್ನು ತಿಳಿಯುವುದಾದರೆ 99,999ರೂ ಮತ್ತು 89,999 ರೂ ಬೆಲೆಯಲ್ಲಿ ಲಭ್ಯವಿರುವುದಾಗಿ ಓಲಾ ಎಲೆಕ್ಟ್ರಿಕ ಹೇಳಿದೆ. ಇಂತಹ ಉತ್ತಮವಾದ ಎಲೆಕ್ಟ್ರಿಕ್ ಸ್ಕೂಟಿ ಯ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೂ ಶೇರ ಮಾಡಿ. ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





