Govt Loan Schemes- ಭರ್ಜರಿ ಸಾಲ & ಸಬ್ಸಿಡಿ ಯೋಜನೆಗಳು, ವಿವಿಧ ಯೋಜನೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

WhatsApp Image 2023 10 02 at 10.28.44 1

ಇದೀಗ ಹೊಸ ಯೋಜನೆಯು ಅನುಷ್ಠಾನಕ್ಕೆ ಬರುತ್ತಿದೆ. 2023-24 ನೇ ಸಾಲಿನಲ್ಲಿ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ(Okkaliga Community Development Corporation) ನಿಯಮಿತಿಯಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಯಾವುವು ಅಂತ ತಿಳಿದುಕೊಳ್ಳ ಬೇಕೇ ಹಾಗಿದಲ್ಲಿ ಲೇಖನವನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತಿಯಿಂದ ಇಷ್ಟೆಲ್ಲಾ ಯೋಜನೆಗಳು ಜಾರಿಗೆ :

ಈ ಯೋಜನೆಯು ಒಕ್ಕಲಿಗ ಜಾತಿ ಹಾಗೂ ಉಪಜಾತಿಗೆ ಸೇರಿದ ಸಮುದಾಯದವರಿಗೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಮತ್ತು ಈ ಯೋಜನೆಗೆ ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿಯನ್ನು ಆಹ್ವಾನಿಸಿದ್ದಾರೆ.

ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮದಾರಿ ಒಕ್ಕಲಿಗ, ಗಂಗಡ್‍ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ(Gouda)/ಗೌಡ(Gouda) ಹಳ್ಳಿಕಾರ್, ಕುಂಚಿಟಿಗ, ಗೌಡ, ಪಾಕು, ಹೆಗ್ಗಡೆ, ಕಮ್ಮಾ, ರೆಡ್ಡಿ, ಗೌಡರ್, ನಾಮಧಾರಿಗೌಡ, ಉಪ್ಪಿನ ಕೊಳಗ, ಉತ್ತಮ ಕೊಳಗ ಒಕ್ಕಲಿಗ ಸಮುದಾಯದವರು ಸ್ವಯಂ ಉದ್ಯೋಗ ಸಾಲ, ಸಹಾಯಧನ ಯೋಜನೆ, ಗಂಗಾ ಕಲ್ಯಾಣ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯಡಿ ಸಮುದಾಯದ ಯುವ ಜನತೆಯನ್ನು ಅಭಿವೃದ್ದಿ ಪಡಿಸಿ ಸ್ವ-ಉದ್ಯೋಗಮುಖಿಗಳಾಗಿಸಲು
ಈ ಯೋಜನೆ ಮೂಲಕ ಒಕ್ಕಲಿಗ ಸಮುದಾಯದವರಿಗೆ
ಅರ್ಜಿ ಆಹ್ವಾನಿಸಲಾಗಿದೆ.

chanel

ಯಾವೆಲ್ಲ ಯೋಜನೆಗಳು ಇದ್ದಾವೆ ನೋಡಣ ಬನ್ನಿ:

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
ಗಂಗಾ ಕಲ್ಯಾಣ ನೀರಾವರಿ ಯೋಜನೆ
ಶೈಕ್ಷಣಿಕ ಸಾಲ ಯೋಜನೆ
ವಿದೇಶಿ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ
ಅಮೃತ ಮುನ್ನಡೆ: ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ಸ್ವಯಂ ಉದ್ಯೋಗ ಸಾಲ ಯೋಜನೆ

ಅಗತ್ಯ ದಾಖಲೆಯೊಂದಿಗೆ ಅರ್ಜಿಯನ್ನು ಆದಷ್ಟು ಬೇಗ ಸಲ್ಲಿಸಬೇಕು. ನಿಗಮದ ಎಲ್ಲ ಯೋಜನೆಗಳ ಮಾಹಿತಿಗಾಗಿ ವೆಬ್‍ಸೈಟ್ http://kvcdc.karnataka.gov.in ಮೂಲಕ ತಿಳಿದು ಕೊಳ್ಳಬಹುದು.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ :

ಈ ಯೋಜನೆಯಲ್ಲಿ ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ ಚಟುವಟಿಕೆಗಳು ಹಾಗೂ ಸೇವಾ ವಲಯ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಒದಗಿಸಲಾಗುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರತಿ ಜಿಲ್ಲೆಯ ಫಲಾನುಭವಿಗಳಿಗೆ ಘಟಕ ವೆಚ್ಚ : ರೂ. 1ಲಕ್ಷ / ರೂ. 2ಲಕ್ಷ ಆಗಿರುತ್ತದೆ. 50,000/- ಗಳಿಗೆ ರೂ.10,000/- ಗಳ ಸಹಾಯ ಧನವನ್ನು ಆಗುತ್ತದೆ. ಸಾಲದ ಮೊತ್ತ ರೂ. 80,000/- ರೂ.1,70,000/-. ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ಗಂಗಾ ಕಲ್ಯಾಣ ನೀರಾವರಿ ಯೋಜನೆ:

ಗ್ರಾಮಾಂತರ ಕೃಷಿ ಕಾರ್ಮಿಕರು ಕಡಿಮೆ ಜಮೀನು ಹೊಂದಿರುವವರು ಮಳೆಯ ನೀರನ್ನು ಅವಲಂಬಿಸಿಕೊಂಡು ಕೃಷಿ ಮಾಡುವುದು ಕಷ್ಟಕರವಾಗಿರುತ್ತದೆ. ಅವರಿಗೆ ಕೊಳವೆ ಬಾವಿ ಅಥವಾ ತೆರೆದ ಬಾವಿ ತೆಗೆಸುವುದರಿಂದ ವಾಣಿಜ್ಯ ಫಸಲುಗಳನ್ನು ಬೆಳೆದು, ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ. ಕೊಳವೆಬಾವಿಗಳಿ ಅವಶ್ಯವಿರುವಲ್ಲಿ ಕೊಳವೆಬಾವಿಗಳನ್ನು ಮತ್ತು ತೆರೆದಬಾವಿಗಳ ಅವಶ್ಯಕತೆ ಇರುವಲ್ಲಿ ತೆರೆದ ಬಾವಿಗಳಿಗೆ ಆರ್ಥಿಕ ಸೌಲಭ್ಯ ಒದಗಿಸಿದರೆ, ಕೃಷಿಕನ ಜೀವನ ಸುಧಾರಿಸುತ್ತದೆ.ಈ ಹಿನ್ನೆಲೆಯಲ್ಲಿ, ಈ ಯೋಜನೆಗೆ ನಿಗಮದ ಮೂಲಕ ಆರ್ಥಿಕ ಸಹಾಯವನ್ನು ನೀಡಲು ಉದ್ದೇಶಿಸಿದೆ.
ಘಟಕ ವೆಚ್ಚ: ರೂ. 4.75 ಲಕ್ಷ / ರೂ. 3.75 ಲಕ್ಷ
ಸಹಾಯಧನ: ರೂ. 4.25 ಲಕ್ಷ / ರೂ. 3.25 ಲಕ್ಷ
ಸಾಲದ ಮೊತ್ತ ರೂ.50,000/- ರೂ. 75,000/-

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ವಿದೇಶಿ ವ್ಯಾಸಂಗ ಸಾಲ ಯೋಜನಾ :

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗವನ್ನು ಪಡೆಯಲು ಸಾಲ ನೀಡುವ ಯೋಜನೆಯು ಇದಾಗಿದೆ.
ವಾರ್ಷಿಕ ಗರಿಷ್ಟ ರೂ. 10 ಲಕ್ಷ
ಬಡ್ಡಿದರ : ಶೂನ್ಯ
QS World Ranking- 500ರೊಳಗೆ

ಅಮೃತ ಮುನ್ನಡೆ: ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆ:

ಒಕ್ಕಲಿಗ ಸಮುದಾಯದನಿರುದ್ಯೋಗಿ ಅರ್ಹ ಯುವಜನರನ್ನು ಗುರುತಿಸಿ ಕೌಶಾಲ್ಯಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನ ತರಬೇತಿ ಸಂಸ್ಥೆಗಳಾದ (ITI’s, GTTC’s/ KGTTL’s) ಮೂಲಕ ಅಲ್ಪಾವಧಿ ಮತ್ತು ಉತ್ಕೃಷ್ಟ ಕೌಶಲ್ಯ ತರಬೇತಿಯನ್ನು ಆಯೋಜಿಸಿ ಉದ್ಯೋಗದ ಅವಕಾಶಗಳನ್ನು ಗರಿಷ್ಟ ಮಟ್ಟದಲ್ಲಿ ಹೆಚ್ಚಿಸುವುದೇ ಯೋಜನೆಯ ಸದುದ್ದೇಶವಾಗಿರುತ್ತದೆ. ತರಬೇತಿಯ ನಂತರ ಅರ್ಹ ಅಭ್ಯರ್ಥಿಗಳನ್ನು ಉದ್ಯಮಗಳೊಂದಿಗೆ ಸಂಪರ್ಕಿಸಲು ಹಾಗೂ ಸಾಧ್ಯವಿರುವ ಕ್ಯಾಂಪಸ್ ನೇಮಕಾತಿಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಅಲ್ಲದೇ ಕಾಲಕಾಲಕ್ಕೆ ಉದ್ಯೋಗ ಮೇಳಗಳನ್ನು ಆಯೋಜಿಸಿ ನಿರುದ್ಯೋಗಿ ಯುವ ಜನತೆಯನ್ನು ಉದ್ಯೋಗಸ್ಥರನ್ನಾಗಿ ಮಾಡುವುದೇ ಯೋಜನೆಯ ಆಶಯವಾಗಿದೆ.
ಉಚಿತ ಅಲ್ಪಾವಧಿ ತರಬೇತಿ ಹಾಗೂ Placement : ITI’s, GTTC’s KGTTI’s ಮೂಲಕ Job Role ಗೆ ತರಬೇತಿ
ಅರ್ಜಿಯನ್ನು ಕೌಶಲ್ಯ ತಂತ್ರಾಂಶ (https://www.kaushalkar.com) ದಲ್ಲಿ ಸಲ್ಲಿಸುವುದು.

ಶೈಕ್ಷಣಿಕ ಸಾಲ ಯೋಜನೆ:

ಹೊಸ ವಿದ್ಯಾರ್ಥಿಗಳಿಗೆ:
ವಾರ್ಷಿಕ ಗರಿಷ್ಟ ರೂ.1ಲಕ್ಷ
ವಾರ್ಷಿಕ ಬಡ್ಡಿ ಶೇ. 2ರಷ್ಟು
– ಕರ್ನಾಟಕ ಪರೀಕ್ಷಾ ಪ್ರಾಧಿಕಾರ / ನೀಟ್ ಪರೀಕ್ಷೆ ಮೂಲಕ ಪ್ರವೇಶಾತಿ ಪಡೆದಿರಬೇಕು.
ಶೈಕ್ಷಣಿಕ ಸಾಲ ಯೋಜನೆ : ನವೀಕರಣ 2ನೇ /3ನೇ ಕಂತಿನ ಸಾಲ

Picsart 23 07 16 14 24 41 584 transformed 1

ಸ್ವಾವಲಂಬಿ ಸಾರಥಿ ಯೋಜನೆ :

ರಾಜ್ಯದಲ್ಲಿ ನಿರುದ್ಯೋಗ ದರವನ್ನು ಕಡಿಮೆ ಮಾಡಲು, ಕರ್ನಾಟಕ ಸರ್ಕಾರವು ಸ್ವಾವಲಂಬಿ ಸಾರಥಿ ಯೋಜನೆಯನ್ನು ಪರಿಚಯಿಸಿದೆ. ಈ ಕಾರ್ಯಕ್ರಮದ ಮೂಲಕ, ರಾಜ್ಯ ಸರ್ಕಾರವು ಕಾರ್ಯಕ್ರಮದ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನವನ್ನು ನೀಡುತ್ತದೆ ಆದ್ದರಿಂದ ಅವರು ವಾಹನಗಳನ್ನು ಖರೀದಿಸಬಹುದು ಮತ್ತು ತಮ್ಮ ವ್ಯವಹಾರಗಳನ್ನು ಮುಂದುವರಿಸಬಹುದು.
ಘಟಕ ವೆಚ್ಚ : ಶೇ.50 ರಷ್ಟು ಗರಿಷ್ಟ ರೂ.3ಲಕ್ಷಗಳ ಸಹಾಯಧನ.
ನಾಲ್ಕು ಚಕ್ರಗಳ ವಾಹನ ಖರೀದಿಸಲು (ಹಳದಿ ಜೋರ್ಡ್)
ವಯೋಮಿತಿ 21 ರಿಂದ 45 ವರ್ಷದೊಳಗಿರಬೇಕು.

ಸ್ವಯಂ ಉದ್ಯೋಗ ಸಾಲ ಯೋಜನೆ:

ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಅವಶ್ಯವಿರುವ ಸಾಲ ಮತ್ತು ಸಹಾಯಧನವನ್ನು ನಿಗಮದ ವತಿಯಿಂದ ನೀಡಲಾಗುತ್ತದೆ. ಇದರಿಂದಾಗಿ ಅಭ್ಯರ್ಥಿಗಳು ತಮ್ಮ ಸ್ವಂತ ವ್ಯಾಪಾರವನ್ನು ಶುರು ಮಾಡಲು ಸಹಾಯವಾಗುತ್ತದೆ.
ಘಟಕ ವೆಚ್ಚ : ಶೇ. 20ರಷ್ಟು ಗರಿಷ್ಠ ರೂ. 1ಲಕ್ಷ ಸಹಾಯಧನ, ಉಳಿಕೆ ಮೊತ್ತ ಬ್ಯಾಂಕ್‌ ಪಾಲಿನ ಸಾಲ
ಉದ್ದೇಶ : ಕೃಷಿ / ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳು

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ :

30 : 10 : 2023

tel share transformed

needs of publicj

ಈ ಅನೇಕ ಯೋಜನೆಗಳ ಸದುಪಯೋಗವನ್ನು ಪಡೆದುಕೊಂಡು ಜೀವನವನ್ನು ಸಾರ್ಥಕವನ್ನಾಗಿಸಿ ಮುನ್ನಡೆಯುವುದು ಈ ಎಲ್ಲಾ ಯೋಜನೆಗಳ ಆದೇಶವಾಗಿದೆ. ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

Admin
Author

Admin

Lingaraj Ramapur BCA, MCA, MA ( Journalism )

2 thoughts on “Govt Loan Schemes- ಭರ್ಜರಿ ಸಾಲ & ಸಬ್ಸಿಡಿ ಯೋಜನೆಗಳು, ವಿವಿಧ ಯೋಜನೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

Leave a Reply

Your email address will not be published. Required fields are marked *