WhatsApp Image 2025 11 22 at 4.21.16 PM

ರಾಜ್ಯದ `ಪಡಿತರ ಚೀಟಿ’ದಾರರಿಗೆ ಸಿಹಿಸುದ್ದಿ : ಫೆಬ್ರವರಿ ತಿಂಗಳಿನಿಂದ ‘ಇಂದಿರಾ ಕಿಟ್’ ವಿತರಣೆಗೆ ಅಧಿಕೃತ ಆದೇಶ…!

WhatsApp Group Telegram Group

ಬೆಂಗಳೂರು: ರಾಜ್ಯದ ಎಲ್ಲಾ ಪಡಿತರ ಚೀಟಿದಾರರಿಗೆ ಶುಭಸುದ್ದಿ. ಫೆಬ್ರವರಿ ತಿಂಗಳಿನಿಂದ ‘ಇಂದಿರಾ ಕಿಟ್’ ವಿತರಣೆ ಪ್ರಾರಂಭವಾಗಲಿದೆ ಎಂದು ಇದರ ಬಗ್ಗೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ದೃಢೀಕರಿಸಿದ್ದಾರೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.…….

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ (PMGKY) ಅಡಿಯಲ್ಲಿ ಈ ಹೊಸ ‘ಇಂದಿರಾ ಕಿಟ್’ ಅನ್ನು ಪರಿಚಯಿಸಲಾಗುವುದು. ಸಚಿವರ ಮಾತಿನಂತೆ, ಈ ಕಿಟ್‌ನಲ್ಲಿ ಕುಟುಂಬದ ಅವಶ್ಯಕತೆಗೆ ಅನುಗುಣವಾಗಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಸೇರಿದಂತೆ ಅತ್ಯಾವಶ್ಯಕ ಆಹಾರ ಪದಾರ್ಥಗಳು ಇರುತ್ತವೆ.

ಕುಟುಂಬದಲ್ಲಿರು ಜನಸಂಖ್ಯೆ ಆಧಾರದ ಮೇಲೆ ವಿಂಗಡಣೆ:

ಸಚಿವರು ವಿವರಿಸಿದಂತೆ, ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಕಿಟ್‌ಗಳನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ:

  1. 1-2 ಸದಸ್ಯರು: ಈ ಕಿಟ್‌ನಲ್ಲಿ 750 ಗ್ರಾಂ ತೊಗರಿ ಬೇಳೆ, 0.5 ಲೀಟರ್ ಅಡುಗೆ ಎಣ್ಣೆ, ಮತ್ತು 500 ಗ್ರಾಂ (ಅರ್ಧ ಕಿಲೋ) ಸಕ್ಕರೆ ಮತ್ತು ಉಪ್ಪು ಸೇರಿರುತ್ತದೆ.
  2. 3-4 ಸದಸ್ಯರು: ಈ ಕುಟುಂಬಗಳಿಗೆ 1.5 ಕಿಲೋ ತೊಗರಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ, ಮತ್ತು 1 ಕಿಲೋ ಸಕ್ಕರೆ ಮತ್ತು ಉಪ್ಪು ನೀಡಲಾಗುವುದು.
  3. 5 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರು: ಇಂತಹ ದೊಡ್ಡ ಕುಟುಂಬಗಳಿಗೆ 2.25 ಕಿಲೋ ತೊಗರಿ ಬೇಳೆ, 1.5 ಲೀಟರ್ ಅಡುಗೆ ಎಣ್ಣೆ, ಮತ್ತು 1.5 ಕಿಲೋ ಸಕ್ಕರೆ ಮತ್ತು ಉಪ್ಪು ಒದಗಿಸಲಾಗುವುದು.

ಯೋಜನೆಯ ಉದ್ದೇಶ:

‘ಇಂದಿರಾ ಆಹಾರ ಕಿಟ್’ ಯೋಜನೆಯು ಅನ್ನ ಭಾಗ್ಯ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದ 5 ಕಿಲೋ ಉಚಿತ ಅಕ್ಕಿಯ ಸ್ಥಾನ ಪಡೆಯಲಿದೆ. ಈ ಹೊಸ ಕಿಟ್ ಕೇವಲ ಅಕ್ಕಿ ಮಾತ್ರವಲ್ಲದೇ, ತೊಗರಿ ಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯನ್ನು ಒಳಗೊಂಡಿರುತ್ತದೆ. ರಾಜ್ಯದ ಬಿಪಿಎಲ್ ಕುಟುಂಬಗಳಿಗೆ ಹೆಚ್ಚು ಸಮತೋಲಿತ ಮತ್ತು ಪೋಷಕಾಂಶದ ಆಹಾರ ಸರಬರಾಜು ಖಚಿತಪಡಿಸುವುದೇ ಈ ಬದಲಾವಣೆಯ ಮುಖ್ಯ ಉದ್ದೇಶವಾಗಿದೆ.

ಈ ಕ್ರಮವು ದೇಶದ ಗರೀಬ್ ಕಲ್ಯಾಣ ಯೋಜನೆಗಳೊಂದಿಗೆ ಹೊಂದಿಕೊಂಡು, ಬಡ ಮತ್ತು ದುರ್ಬಲ ವರ್ಗದ ಜನತೆಗೆ ಸಮಗ್ರ ಆಹಾರ ಸುರಕ್ಷತೆ ನೀಡುವ ದಿಶೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ಹೆಚ್ಚಿನ ಮಾಹಿತಿಗೆ:

  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (https://food.karnataka.gov.in)
  • ಟೋಲ್-ಫ್ರಿ ಹೆಲ್ಪ್‌ಲೈನ್: 1967
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories