ನರೇಗಾ ಕಾರ್ಮಿಕರಿಗೆ ಶುಭಸುದ್ದಿ: ಏಪ್ರಿಲ್ 1 ರಿಂದ ದಿನಕ್ಕೆ ಕೂಲಿ ₹370ಕ್ಕೆ ಹೆಚ್ಚಳ!
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೀಡಲಾಗುವ ದೈನಂದಿನ ಕೂಲಿಯನ್ನು ಏಪ್ರಿಲ್ 1 ರಿಂದ ₹370ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ, ಬೇಸಿಗೆ ಕಾಲದಲ್ಲಿ ಗ್ರಾಮೀಣ ಪ್ರದೇಶಗಳ ಜನರಿಗೆ ನಿರಂತರ ಕೆಲಸದ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ತಿಳಿಸಿದ್ದಾರೆ.
ಪ್ರಸ್ತುತ ವರ್ಷದಲ್ಲಿ ನರೇಗಾ ಯೋಜನೆಯಡಿ ₹349 ಕೂಲಿ ನೀಡಲಾಗುತ್ತಿದ್ದು, ಇದನ್ನು ₹370ಕ್ಕೆ ಹೆಚ್ಚಿಸಿ, 2025-26 ಆರ್ಥಿಕ ವರ್ಷದಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಮೀಣ ರೋಜಗಾರಿ ಖಾತರಿಗೆ ಮಾರ್ಗಸೂಚಿಗಳು:
- ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರು ನಮೂನೆ-6 ಅರ್ಜಿಯನ್ನು ಗ್ರಾಮ ಪಂಚಾಯತ್ಗೆ ಸಲ್ಲಿಸಬೇಕು.
- ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳವರೆಗೆ ಸ್ಥಳೀಯ ನರೇಗಾ ಕೆಲಸದಲ್ಲಿ ಭಾಗವಹಿಸಲು ಅವಕಾಶ.
- ಇದರ ಮೂಲಕ ಜನರ ವಲಸೆ ತಡೆಗಟ್ಟುವ ಗುರಿ.
ವಿಶೇಷ ಸೌಲಭ್ಯಗಳು:
- ವಿಶೇಷ ಚೇತನರು & ಹಿರಿಯ ನಾಗರಿಕರು:
- ನಿಗದಿತ ಕೂಲಿಗೆ 50% ಕಡಿಮೆ ಕೆಲಸ (ಕಾರ್ಯಪ್ರಮಾಣದಲ್ಲಿ ರಿಯಾಯತಿ).
- ಮಹಿಳೆಯರು:
- ಕಾರ್ಯಸ್ಥಳದಲ್ಲಿ 60% ಮಹಿಳಾ ಭಾಗವಹಿಸುವಿಕೆ ಇದ್ದರೆ, ಅವರ ಕೆಲಸದ ಪ್ರಮಾಣದಲ್ಲಿ 10% ರಿಯಾಯತಿ.
- ಗರ್ಭಿಣಿ & ಬಾಣಂತಿಯರು:
- 6 ತಿಂಗಳ ಗರ್ಭಿಣಿಯರಿಗೆ ಪ್ರಸೂತಿ ವರೆಗೆ, ಮತ್ತು ಬಾಣಂತಿಯರಿಗೆ ಪ್ರಸೂತಿಯ ನಂತರ 6 ತಿಂಗಳವರೆಗೆ 50% ರಿಯಾಯತಿ.
- ತಾಯಿ ಕಾರ್ಡ್ (ಆರೋಗ್ಯ ಇಲಾಖೆ) ಸಲ್ಲಿಕೆ ಬೇಕು.
ಹೇಗೆ ಅರ್ಜಿ ಸಲ್ಲಿಸುವುದು?
- ನಮೂನೆ-1 ಅರ್ಜಿಯನ್ನು ಗ್ರಾಮ ಪಂಚಾಯತ್ಗೆ ಸಲ್ಲಿಸಿ.
- ಅಗತ್ಯ ದಾಖಲೆಗಳು: ಪಾಸ್ಪೋರ್ಟ್ ಗಾತ್ರ ಫೋಟೋ, ಆಧಾರ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ವಿವರ.
- 18 ವರ್ಷ+ ಕುಟುಂಬದ ಸದಸ್ಯರು ಉದ್ಯೋಗ ಚೀಟಿ ಪಡೆಯಬಹುದು.
ಈ ನವೀಕೃತ ಕೂಲಿ ಮತ್ತು ಸೌಲಭ್ಯಗಳು ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವುದು ಎಂದು ಸರ್ಕಾರ ನಿರೀಕ್ಷಿಸಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply