voter id

Voter ID – ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೆ ಅವಕಾಶ, ಮೊಬೈಲ್ ನಲ್ಲೂ ಅರ್ಜಿ ಸಲ್ಲಿಸಿ.

WhatsApp Group Telegram Group

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ತಿಳಿಸುವುದೇನೆಂದರೆ, ಮತದಾರರ ಪಟ್ಟಿಯಲ್ಲಿ (Voter list) ಹೆಸರು ಸೇರಿಸಲು ಅಥವಾ ಇನ್ನಿತರೇ ತಿದ್ದುಪಡೆಗಾಗಿ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಪೂರ್ಣ ಮಾಹಿತಿಯನ್ನು ಪಡೆಯಲು ವರದಿಯನ್ನು ಕೊನೆಯವರೆಗೂ ಓದಿ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ :

ನೀವು 18 ವರ್ಷದ ಯುವಕ – ಯುವತಿಯರಾಗಿದ್ದು, ಮತದಾನ ಪಟ್ಟಿಯಲ್ಲಿ ಹೊಸದಾಗಿ ನಿಮ್ಮ ಹೆಸರನ್ನು ಸೇರ್ಪಡಿಸಬೇಕೇ?, ವೋಟಿಂಗ್ ಹಕ್ಕನ್ನು ಪಡೆದಿದ್ದರೂ ಸಹ ಮತದಾರ ಪಟ್ಟಿಯಲ್ಲಿ ತಿದ್ದುಪಡಿ ಮಾಡಬೇಕೆ? ಹೀಗಿರುವಾಗ, ಎಲ್ಲಾ ಜಿಲ್ಲೆಗಳ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಿದ್ದು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಚುನಾವಣಾ ಆಯೋಗ ಮತ್ತೆ ಅವಕಾಶ ಕಲ್ಪಿಸಿದೆ. ವೋಟರ್ ಹೆಲ್ಪ್‌ಲೈನ್ ಅಲ್ಪಿಕೇಶನ್‌(Voter Helpline Application) ಮೂಲಕ ಸುಲಭವಾಗಿ ಸೇರ್ಪಡೆ /ತೆಗೆದುಹಾಕುವಿಕೆ/ತಿದ್ದುಪಡಿಗೆ ಅವಕಾಶವಿದೆ.
ಅದಲ್ಲದೆ https://voters.eci.gov.in ವೆಬ್ ಸೈಟ್ (Website)ಗೆ ಲಾಗಿನ್ ಆಗಿ ಆನ್ ಲೈನ್  ಮೂಲಕ ಸಲ್ಲಿಸಬಹುದು, ಇಲ್ಲದಿದ್ದರೆ ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿ ಕಛೇರಿಗೆ ಭೇಟಿ ನೀಡಿ ಅವರೊಂದಿಗೆ ಸಂಪರ್ಕಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ವಿಳಾಸ ಬದಲಾವಣೆ, ಬದಲಿ ಮತದಾರರ ಗುರುತಿನ ಚೀಟಿ ಪಡೆಯಲು, ಮತದಾರರ ಪಟ್ಟಿಯಲ್ಲಿನ ನಮೂದು ತಿದ್ದುಪಡಿಗಾಗಿ , ಅಂಗವಿಕಲ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಗುರುತಿಸಲು ಅವಕಾಶ ನೀಡಲಾಗಿದೆ. ಇನ್ನೂ ನವೆಂಬರ್ ಹಾಗೂ ಡಿಸೆಂಬರ್‌ ತಿಂಗಳಿನಲ್ಲಿ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ.

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್, 7 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ

ಈ ವಿಶೇಷ ನೋಂದಣಿ ಅಭಿಯಾನದ ದಿನಾಂಕಗಳು ಕೆಳಗಿಂತವೆ:

18-11-2023 (ಶನಿವಾರ)

19-11-2023 (ಭಾನುವಾರ)

02-12-2023 (ಶನಿವಾರ)

03-12-2023 (ಭಾನುವಾರ)

ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ(polling stations) ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.

ಈ ಕೆಳಗಿನ ವಿಡಿಯೋ ನೋಡುವ ಮೂಲಕ ನಿಮ್ಮ ಮೊಬೈಲ್ ಫೋನ್ ಮೂಲಕವೂ ನೀವು ಅರ್ಜಿ ಸಲ್ಲಿಸಬಹುದು, ಸುಮಾರು ಒಂದು ಲಕ್ಷ ಜನ ಈ ವಿಡಿಯೋನ ವೀಕ್ಷಿಸಿ, ಅರ್ಜಿ ಸಲ್ಲಿಸಿದ್ದಾರೆ.

ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ನಿಮ್ಮ ವಿವರಗಳನ್ನು ಪರಿಶೀಲಿಸಲು  https://voterportal.eci.gov.in ಗೆ ಭೇಟಿ ನೀಡಿ. ಈ ವೆಬ್ಸೈಟ್ ನಲ್ಲಿ ನಿಮಗೆ ಎಲ್ಲಾ ಮಾಹಿತಿ ಲಭ್ಯವಿರುತ್ತದೆ.

ಈ ಮಾಹಿತಿಯನ್ನುವೋಟರ್ ಐಡಿ ಕಾರ್ಡ್ ಹೊಂದಿರದೆ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ, ಮತ್ತು ನೀವು ವೋಟ್ ಮಾಡುವ ತಾಲೂಕಿನ ಹೆಸರನ್ನು ಈ ಕೆಳಗೆ ಕಮೆಂಟ್ ಮಾಡಿ.

ಇದನ್ನೂ ಓದಿ – Free Coaching – ಬ್ಯಾಂಕಿಂಗ್, UPSC, KAS ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Popular Categories