Picsart 25 10 24 22 55 06 415 scaled

ಬ್ಯಾಂಕ್ ಅಕೌಂಟ್ ಇದ್ದವರ ಗಮನಕ್ಕೆ.! ನವೆಂಬರ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮ ಜಾರಿ! ತಿಳಿದುಕೊಳ್ಳಿ 

Categories: ,
WhatsApp Group Telegram Group

ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಹಣಕಾಸು ಸಚಿವಾಲಯವು ಪ್ರಕಟಿಸಿರುವ ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆ, 2025 ಅಡಿಯಲ್ಲಿ, ಬ್ಯಾಂಕ್ ಖಾತೆದಾರರಿಗೆ ಹಾಗೂ ಲಾಕರ್‌ ಮಾಲೀಕರಿಗೆ ದೊಡ್ಡ ಸೌಲಭ್ಯ ಒದಗಿಸಿದೆ. ಈ ಕಾಯ್ದೆಯ ಪ್ರಕಾರ, ಇನ್ಮುಂದೆ ಒಂದು ಖಾತೆ ಅಥವಾ ಲಾಕರ್‌ಗೆ ಒಬ್ಬರ ಬದಲು ನಾಲ್ಕು ನಾಮಿನಿಗಳನ್ನು ನೇಮಿಸಬಹುದಾಗಿದೆ. ಈ ಹೊಸ ನಿಯಮಗಳು ನವೆಂಬರ್ 1, 2025ರಿಂದ ಜಾರಿಗೆ ಬರಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಹೊಸ ನಿಯಮದ ಹಿನ್ನಲೆ ಎನು?:

ಬ್ಯಾಂಕ್ ಖಾತೆಗಳಲ್ಲಿ ಅಥವಾ ಲಾಕರ್‌ಗಳಲ್ಲಿ ನಾಮಿನಿ ಹೊಂದಿರುವುದು, ಆಸ್ತಿ ಹಕ್ಕುಗಳ ಹಸ್ತಾಂತರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಖಾತೆದಾರರ ನಿಧನದ ನಂತರ ನಾಮಿನಿ ಸಂಬಂಧಿತ ವಿವಾದಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ಬ್ಯಾಂಕಿಂಗ್ ಕಾನೂನಿನಲ್ಲಿ ಪರಿಷ್ಕರಣೆ ಅಗತ್ಯವಿದೆ ಎಂದು ತಿಳಿಸಿತ್ತು. ಇದನ್ನೇ ಆಧರಿಸಿ, ಏಪ್ರಿಲ್ 15, 2025ರಂದು ಅಧಿಸೂಚನೆ ಹೊರಡಿಸಿದ ಹೊಸ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಒಟ್ಟು 19 ಬದಲಾವಣೆಗಳನ್ನು ಮಾಡಲಾಗಿದೆ.
ಈ ತಿದ್ದುಪಡಿಗಳು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1955, ಹಾಗೂ ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ಉದ್ಯಮಗಳ ವರ್ಗಾವಣೆ) ಕಾಯ್ದೆ 1970 ಮತ್ತು 1980 ಗಳಿಗೂ ಅನ್ವಯವಾಗುತ್ತವೆ.

ನಾಮಿನಿಗಳಿಗೆ ಹೊಸ ಅವಕಾಶ:

ಹೊಸ ನಿಯಮದ ಪ್ರಕಾರ, ಗ್ರಾಹಕರು ತಮ್ಮ ಸೆವಿಂಗ್ಸ್ ಖಾತೆ, ಫಿಕ್ಸ್‌ಡ್ ಡೆಪಾಸಿಟ್‌ಗಳು, ಹಾಗೂ ಬ್ಯಾಂಕ್ ಲಾಕರ್‌ಗಳಲ್ಲಿ ಏಕಕಾಲಕ್ಕೆ ನಾಲ್ಕು ಜನರನ್ನು ನಾಮಿನಿಗಳಾಗಿ ನೇಮಿಸಬಹುದು.
ಪ್ರತಿಯೊಬ್ಬ ನಾಮಿನಿಗೆ ಶೇಕಡಾವಾರು ಪಾಲು ನಿಗದಿಪಡಿಸಲು ಅವಕಾಶವಿರುತ್ತದೆ.
ಅಗತ್ಯವಿದ್ದರೆ ಖಾತೆದಾರರು ಯಾವಾಗ ಬೇಕಾದರೂ ನಾಮಿನಿಗಳನ್ನು ಸೇರಿಸಲು ಅಥವಾ ಬದಲಾಯಿಸಲು ಸಹ ಸಾಧ್ಯ.
ಇದು ಠೇವಣಿದಾರರ ಆಸ್ತಿ ಹಕ್ಕು ಹಸ್ತಾಂತರ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಶೂನ್ಯಕ್ಕಿಂತ ಕಡಿಮೆ ಬ್ಯಾಲೆನ್ಸ್ ನಿಯಮ:

ಈ ಕಾಯ್ದೆಯ ಜೊತೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೂಡ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸಿದೆ. ಅನೇಕ ಖಾಸಗಿ ಮತ್ತು ಕಾರ್ಪೊರೇಟ್ ಬ್ಯಾಂಕ್‌ಗಳು ಖಾತೆದಾರರು ಕನಿಷ್ಠ ಸರಾಸರಿ ಬ್ಯಾಲೆನ್ಸ್ ಕಾಪಾಡದಿದ್ದರೆ ದಂಡ ವಿಧಿಸುತ್ತಿವೆ. ಕೆಲವೊಮ್ಮೆ ಈ ದಂಡದ ಮೊತ್ತದಿಂದ ಖಾತೆಯ ಶೇ. ಶೂನ್ಯಕ್ಕಿಂತ ಕಡಿಮೆ (Negative Balance) ಆಗುತ್ತದೆ. ಅಂದರೆ, ದಂಡ ವಿಧಿಸುವುದರಿಂದ ಖಾತೆಯ ಶೇಷ ಶೂನ್ಯಕ್ಕಿಂತ ಕಡಿಮೆ ಆಗಬಾರದು. ಯಾವುದೇ ಬ್ಯಾಂಕ್ ಖಾತೆದಾರರನ್ನು ಈ ರೀತಿಯ ಋಣಾತ್ಮಕ ಸ್ಥಿತಿಗೆ ತಳ್ಳಬಾರದು.
ಹಾಗಾಗಿ ಬ್ಯಾಂಕ್‌ಗಳು ಈ ನಿಯಮವನ್ನು ಉಲ್ಲಂಘಿಸಿದರೆ, ಅದು RBI ಮಾರ್ಗಸೂಚಿ ಉಲ್ಲಂಘನೆಗೆ ಸಮಾನ.

ಗ್ರಾಹಕರಿಗೆ ಲಾಭ ಇದರಿಂದ ಯಾವ ರೀತಿಯ ಲಾಭ ಸಿಗಬಹುದು:

ಕುಟುಂಬದ ಸದಸ್ಯರಿಗೆ ಸಮಾನ ಹಕ್ಕು ನೀಡಲು ಅವಕಾಶ ಸಿಕ್ಕಿದಂತೆ ಆಗುತ್ತದೆ.
ನಿಧನದ ಬಳಿಕ ಹಕ್ಕು ಹಸ್ತಾಂತರ ಸುಲಭವಾಗುತ್ತದೆ.
ಗ್ರಾಹಕರ ಆರ್ಥಿಕ ಒತ್ತಡ ಕಡಿಮೆಯಾಗಲಿದೆ.
ಬ್ಯಾಂಕ್‌ಗಳು ಮತ್ತು ಗ್ರಾಹಕರ ನಡುವಿನ ನಂಬಿಕೆ ಹೆಚ್ಚುತ್ತದೆ.

ಒಟ್ಟಾರೆಯಾಗಿ, ಈ ಹೊಸ ನಿಯಮಗಳು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ಕ್ರಾಂತಿಕಾರಿ ಬದಲಾವಣೆ ತರಲಿವೆ. ಒಂದೇ ಖಾತೆಯಲ್ಲಿ ಹಲವಾರು ನಾಮಿನಿಗಳನ್ನು ಹೊಂದುವ ಅವಕಾಶವು ಗ್ರಾಹಕರಿಗೆ ಹೆಚ್ಚು ಭದ್ರತೆ ಮತ್ತು ಸ್ವಾತಂತ್ರ್ಯ ನೀಡುತ್ತದೆ. ಅಲ್ಲದೇ RBI ನ ಶೂನ್ಯಕ್ಕಿಂತ ಕಡಿಮೆ ಬ್ಯಾಲೆನ್ಸ್‌ ನಿಷೇಧ ನಿಯಮದಿಂದ ಆರ್ಥಿಕವಾಗಿ ದುರ್ಬಲ ಗ್ರಾಹಕರು ದಂಡದ ಒತ್ತಡದಿಂದ ಮುಕ್ತಿ ಪಡೆಯಲಿದ್ದಾರೆ.
ನವೆಂಬರ್ 1, 2025ರಿಂದ ಈ ಎರಡು ನಿಯಮಗಳು ಜಾರಿಗೆ ಬರುವುದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಆಗುತ್ತವೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories