ಆಗಸ್ಟ್ 1ರಿಂದ ಬೆಂಗಳೂರಿನಲ್ಲಿ ಹೊಸ ಆಟೋ ಮೀಟರ್ ದರ ಜಾರಿ: ರಾತ್ರಿ ದರ 50% ಹೆಚ್ಚಳ, ಲಗೇಜ್ ಹಾಗೂ ಕಾಯುವಿಕೆ ಶುಲ್ಕ ನಿಗದಿ

Picsart 25 08 01 00 00 12 316

WhatsApp Group Telegram Group

ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣಿಕರಿಗೆ ಮಹತ್ವದ ಸುದ್ದಿ ಬಂದಿದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಆಟೋ ಮೀಟರ್ ದರ ಪರಿಷ್ಕರಣೆ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿರುವ ಆಟೋರಿಕ್ಷಾಗಳಿಗೆ ಹೊಸ ದರಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) ನಿಖರವಾಗಿ ಪರಿಶೀಲಿಸಿ ನಿಗದಿಪಡಿಸಿದೆ. ಈ ಪರಿಷ್ಕೃತ ದರಗಳು ಆಗಸ್ಟ್ 1, 2025ರಿಂದ ಜಾರಿಗೆ ಬರಲಿವೆ. ಪರಿಷ್ಕೃತ ದರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ನಗರದಲ್ಲಿ ಕಳೆದ ಕೆಲ ವರ್ಷಗಳಿಂದ ಇಂಧನ ಬೆಲೆ ಏರಿಕೆ, ನಿರ್ವಹಣಾ ವೆಚ್ಚ ಹೆಚ್ಚಳ ಮತ್ತು ಚಾಲಕರ ಆರ್ಥಿಕ ಸಂಕಷ್ಟಗಳ ಹಿನ್ನೆಲೆಯಲ್ಲಿ ಆಟೋ ಚಾಲಕರ ಸಂಘಗಳು ದರ ಪರಿಷ್ಕರಣೆಗಾಗಿ ಒತ್ತಾಯಿಸುತ್ತಿದ್ದವು. ಅನೇಕ ಸಭೆ, ಚರ್ಚೆಗಳ ನಂತರ ಕೊನೆಗೂ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಹೊಸ ಆಟೋ ಮೀಟರ್ ದರಗಳು (01-08-2025 ರಿಂದ ಜಾರಿ),

1. ಕನಿಷ್ಠ ದರ (ಮೊದಲ 2 ಕಿ.ಮೀ.):
₹36/- (ಮೂರು ಪ್ರಯಾಣಿಕರಿಗೆ)

2. ನಂತರ ಪ್ರತಿ ಕಿಲೋಮೀಟರ್ ದರ:
₹18/- (ಮೂರು ಪ್ರಯಾಣಿಕರಿಗೆ)

3. ಕಾಯುವಿಕೆ ದರ (Waiting Charges):
ಮೊದಲ 5 ನಿಮಿಷ ಉಚಿತ
5 ನಿಮಿಷದ ನಂತರ ಪ್ರತಿ 15 ನಿಮಿಷಕ್ಕೆ ₹10

4. ಲಗೇಜು ದರ (Luggage Charges):
ಮೊದಲ 20 ಕೆ.ಜಿ. ಉಚಿತ
20 ಕೆ.ಜಿ. ಮೀರಿದ ಪ್ರತೀ 20 ಕೆ.ಜಿ. ಅಥವಾ ಅದರ ಭಾಗಕ್ಕೆ ₹10
ಗರಿಷ್ಠ ಲಗೇಜು: 50 ಕೆ.ಜಿ.

5. ರಾತ್ರಿ ವೇಳೆ ದರ (Night Fare):
ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ 5:00 ಗಂಟೆಯವರೆಗೆ
ಸಾಮಾನ್ಯ ದರ + 50% ಹೆಚ್ಚುವರಿ.

ಮೀಟರ್ ದರಪಟ್ಟಿ:
ಪ್ರತಿಯೊಂದು ಆಟೋರಿಕ್ಷಾದಲ್ಲೂ ಅನುಮೋದಿತ ಪರಿಷ್ಕೃತ ದರಪಟ್ಟಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು.
ಮೀಟರ್‌ಗಳನ್ನು 31-10-2025 (90 ದಿನಗಳಲ್ಲಿ) ಪುನಃ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಳ್ಳಬೇಕು.

ಈ ಪರಿಷ್ಕೃತ ದರ ಜಾರಿಗೆ ಬರುವುದರಿಂದ ಆಟೋ ಚಾಲಕರ ಆರ್ಥಿಕ ಭಾರ ಕಡಿಮೆಯಾಗುವ ನಿರೀಕ್ಷೆಯಿದ್ದು, ಪ್ರಯಾಣಿಕರು ಸಹ ಸ್ಪಷ್ಟ ಮತ್ತು ಸರಿಯಾದ ದರವನ್ನು ಪಾವತಿಸಲು ಸಾಧ್ಯವಾಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!