ತೋಟಗಾರಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಸರ್ಕಾರದ ನರೇಗಾ ಯೋಜನೆಯಡಿ 5 ಲಕ್ಷ ಉಚಿತ ಸಹಾಯಧನ!
ತೋಟಗಾರಿಕೆ ಎಂಬುದು ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಸಸ್ಯಗಳ ಕೃಷಿ, ಸಂಸ್ಕರಣೆ ಮತ್ತು ಮಾರಾಟ ಮಾಡುವ ಒಂದು ಕ್ಷೇತ್ರವಾಗಿದೆ. ತೋಟಗಾರಿಕೆಯು (Horticulture) ಕೃಷಿಯ ಒಂದು ಶಾಖೆಯಾಗಿದ್ದು, ಇಲ್ಲಿ ಹೂವುಗಳು, ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಮಹತ್ವದ ಸಸ್ಯಗಳನ್ನು ಬೆಳೆಸುವುದಾಗಿದೆ.
ಇಂದು ಎಲ್ಲರೂ ತಮ್ಮ ತಮ್ಮ ಕೃಷಿ ಭೂಮಿಯಲ್ಲಿ ತೋಟಗಾರಿಕೆ ಮಾಡುತ್ತಿದ್ದು, ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಂತಹ ತೋಟಗಾರಿಕೆ ಬೆಳೆಗಾರರಿಗೆ ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಸರ್ಕಾರದ ನರೇಗಾ ಯೋಜನೆಯಡಿ (Narega scheme) 5 ಲಕ್ಷ ಉಚಿತ ಸಹಾಯಧನ ನೀಡುತ್ತಿದ್ದು, ಬೆಳೆಗಾರರು ತಮ್ಮ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2024-25ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಜಾರಿ :
ಇದೀಗ ತೋಟಗಾರಿಕೆ ಬೆಳೆಗಾರರಿಗೆ ಸರ್ಕಾರದಿಂದ ಸಹಾಯ ಧನ ದೊರೆಯುತ್ತಿದ್ದು, 2024-25 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ತೋಟಗಾರಿಕೆ ಬೆಳೆಗಳಿಗೆ ಬೆಳಗಾರರು ಗ್ರಾಮ ಪಂಚಾಯತಿಯಿಂದ ಅನುದಾನ ಪಡೆದುಕೊಳ್ಳಬಹುದಾಗಿದೆ. ವಿವಿಧ ರೀತಿಯ ಬೆಳೆಗಳಿಗೆ ಇಂತಿಷ್ಟು ಸಬ್ಸಿಡಿ (subsidy) ದೊರೆಯುತ್ತಿದ್ದು, ಯಾವೆಲ್ಲಾ ಬೆಳೆಗಳಿಗೆ ಎಷ್ಟೆಷ್ಟು ಸಬ್ಸಿಡಿ ದೊರೆಯುತ್ತದೆ ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳೋಣ ಬನ್ನಿ.
ನರೇಗಾ ಯೋಜನೆಯ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ (Application) ಆಹ್ವಾನ :
ನರೇಗಾ ಯೋಜನೆಯನ್ನು ಪಡೆಯಲು ಬೆಳೆಗಾರರು ಹಾಗೂ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗುದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ (Mahathma Gandhi Narega Scheme) ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಲು ಇಚ್ಛಿಸುವ ರೈತರು, ಕೂಲಿಕಾರರು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಭಾಗದ ಒಂದು ಅರ್ಹ ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷ ರೂ.ಗಳ ವರಗೂ ವೈಯಕ್ತಿಕ ಕಾಮಗಾರಿ ಪಡೆಯಲು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಸೌಲಭ್ಯ ಕಲ್ಪಿಸಲಾಗಿದೆ.
ವಿವಿಧ ಬೆಳೆಗಳಿಗೆ ತೋಟಗಾರಿಕೆ ಪ್ರದೇಶಾಭಿವೃದ್ಧಿಯಿಂದ ಅರ್ಥಿಕ ನೆರವು :
ತೋಟಗಾರಿಕೆ ಇಲಾಖೆಯಿಂದ ಈ ಕೆಳಗೆ ನೀಡಿರುವ ವಿವಿಧ ಬೆಳೆಗಳಿಗೆ ಆರ್ಥಿಕ ನೆರವು ನೀಡಲಾಗಿದೆ :
ತೆಂಗು
ಮಾವು
ದಾಳಿಂಬೆ
ಪೇರಲೆ
ನುಗ್ಗಿ
ಗುಲಾಬಿ
ವೀಳ್ಯದೆಲೆ
ಮಲ್ಲಿಗೆ
ಲಿಂಬೆ
ಬಾಳೆ
ಪಪ್ಪಾಯ
ಡ್ರ್ಯಾಗನ್ ಫ್ರೂಟ್
ಕಾಳುಮೆಣಸು
ಹಲಸು ಸೇರಿದಂತೆ ಅನೇಕ ತೋಟಗಾರಿಕೆ ಪ್ರದೇಶಾಭಿವೃದ್ಧಿಗೆ ಅರ್ಥಿಕ ನೆರವು ಸಿಗಲಿದೆ.
ವಿವಿಧ ಬೆಳೆಗಳಿಗೆ ಸೇರಿದಂತೆ ಜಾನುವಾರು ರಕ್ಷಣೆಗಾಗಿ ಸಹಾಯಧನ (subsidy) :
ರೇಷ್ಮೆ ಇಲಾಖೆಯಿಂದ ಹಿಪ್ಪುನೆರಳೆ ನಾಟಿ ಪದ್ಧತಿ ಸೇರಿದಂತೆ, ಜಾನುವಾರುಗಳನ್ನು ಬಿಸಿಲು ಹಾಗೂ ಮಳೆಯಿಂದ ರಕ್ಷಿಸಲು ಕುರಿ-ಮೇಕೆ, ದನ, ಕೋಳಿ, ಹಂದಿ ಶೆಡ್ ನಿರ್ಮಾಣ ಹಾಗೂ ಅಜೋಲಾ ಫಿಟ್ (Azola Fit) ನಿರ್ಮಾಣಕ್ಕೂ ಸಹಾಯಧನ ಸಿಗಲಿದೆ. ಅಷ್ಟೇ ಅಲ್ಲದೆ ಕೃಷಿ ಇಲಾಖೆಯಿಂದ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿಹೊಂಡ, ಕೊಳವೆ ಬಾವಿ ಮರುಪೂರಣ ಘಟಕ ಹಾಗೂ ಉತ್ತಮ ಆರೋಗ್ಯಕ್ಕಾಗಿ ಬಚ್ಚಲುಗುಂಡಿ (ಜೋನ್ ಫಿಟ್) ಮತ್ತು ಪೌಷ್ಟಿಕ ತೋಟ ನಿರ್ಮಾಣಕ್ಕೂ ನರೇಗಾ ಯೋಜನೆಯಡಿ ಆರ್ಥಿಕ ನೆರವು ದೊರೆಯಲಿದೆ.
ನರೇಗಾ ಯೋಜನೆಯ ಸಹಾಯಧನದ ಸೌಲಭ್ಯ ಪಡೆದುಕೊಳ್ಳುವವರು :
ತೋಟಗಾರಿಕೆ ಬೆಳೆಗಳಿಗೆ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಸಣ್ಣ ಮತ್ತು ಅತೀ ಸಣ್ಣ ರೈತರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ತೋಟಗಾರಿಕೆ ಅಭಿವೃದ್ಧಿಪಡಿಸಿಕೊಳ್ಳಲು ಈ ಎಲ್ಲ ಸಹಾಯಧನ ಸೌಲಭ್ಯವಿರುತ್ತದೆ.
ಪ್ರತಿ ಹೆಕ್ಟೇರ್ಗೆ ಫಲಾನುಭವಿಗಳಿಗೆ ನೀಡುವ ಸಹಾಯಧನ ಸೌಲಭ್ಯದ ಮೊತ್ತದ ವಿವರ ಈ ಕೆಳಗಿನಂತಿದೆ:
ತೆಂಗು ₹65,565
ಗೇರು ₹63,086
ಮಾವು / ಸಪೋಟ (10X10 ಮೀಟರ್) ₹56,279
ದಾಳಿಂಬೆ ₹68,834
ಸೀಬೆ (6X6 ಮೀಟರ್) ₹131,431
ದಾಲ್ಚಿನ್ನಿ ₹173,595
ಕಾಳುಮೆಣಸು (ಅಡಿಕೆ ತೋಟದ ಅಂತರ ಬೆಳೆ) ₹108,922
ನುಗ್ಗೆ ₹70,362
ಬಾಳೆ (ಅಂಗಾಂಶ) ₹205,195
ಪಪಾಯ (2.4X2.4 ಮೀಟರ್) ₹117,965
ಪಪಾಯ (1.8X1.8 ಮೀಟರ್) ₹205,411
ತೆಂಗು ಪುನಶ್ಚೇತನ (ಎತ್ತರ ತಳಿ) ₹61,999
ಅಡಿಕೆ ಪುನಶ್ಚೇತನ (25% ಮರುನಾಟಿ) ₹60,381
ಅಡಿಕೆ ಹೊಸ ಪ್ರದೇಶ ವಿಸ್ತರಣೆ ₹167,682
ವೀಳೆದೆಲೆ (2X2.5 ಮೀಟರ್) ಅರ್ಧ ಎಕರೆ ₹57,701
ತಾಳೆಬೆಳೆ ₹34,456
ಈ ಯೋಜನೆಯಲ್ಲಿ ಹಣ ಪಡೆಯುವುದು ಹೇಗೆ (how to get money) ?
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಈ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ಈ ಕೆಳಗಿನ ಮಾಹಿತಿಯನ್ನು ಹೊಂದಿರಬೇಕು :
ರೈತರು ಜಾಬ್ ಕಾರ್ಡ್ (job card) ಹೊಂದಿರಬೇಕು
ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ 1ನ್ನು ಭರ್ತಿ ಮಾಡಬೇಕು
18 ವರ್ಷ ಮೇಲ್ಪಟ್ಟವರಾಗಿರಬೇಕು
ಸದಸ್ಯರ ಇತ್ತೀಚಿನ ಭಾವಚಿತ್ರ
ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ಇವುಗಳ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಜಾಬ್ಕಾರ್ಡ್ ಪಡೆಯಬಹುದು.
ಉದ್ಯೋಗ ಚೀಟಿ (job card) ಪಡೆಯುದು ಹೇಗೆ ?
ಕುಟುಂಬದ ಪ್ರತಿಯೊಬ್ಬ ವಯಸ್ಕ ಸದಸ್ಯರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಗತ್ಯ. ಉದ್ಯೋಗಕ್ಕಾಗಿ ನಮೂನೆ-6ರಲ್ಲಿ ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಯುವ ಮೂಲಕ ತೋಟಗಾರಿಕೆ ಬೆಳೆಗಳಿಗೆ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ಸಹಾಯಧನ ಪಡೆಯಬಹುದಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




