ಪೋಕ್ಸೋ ಪ್ರಕರಣದಲ್ಲಿ ಸಂಬಂಧ ಜೈಲು ಪಾಲಾಗಿದ್ದ ಚಿತ್ರದುರ್ಗದ ಮುರುಘಾಶ್ರೀಗೆ (Chitradurga Murugha Shree ) ಜಾಮೀನು ಸಿಕ್ಕಿದ್ದು, ಇದೀಗ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ.ಪೋಕ್ಸೋ ಕೇಸ್ ದಾಖಲಾಗಿ ಕಳೆದ ವರ್ಷ ಮುರುಘಾ ಶರಣರು (Shivamurthy Muruga Sharanaru) ಜೈಲುಸೇರಿದ್ದರು. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ದೊರೆತ ಹಿನ್ನಲೆಯಲ್ಲಿ ಇಂದು(ನವೆಂಬರ್ 16) ಮುರುಘಾಶ್ರೀ ಬರೋಬ್ಬರಿ 14 ತಿಂಗಳು ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮಠ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ನವೆಂಬರ್ 8 ರಂದು ಕರ್ನಾಟಕ ಹೈಕೋರ್ಟ್ ಶರಣ ಅವರಿಗೆ ಜಾಮೀನು ನೀಡಿತ್ತು. ಜಾಮೀನು ಷರತ್ತುಗಳನ್ನು ಈಡೇರಿಸುವಂತೆ ಶರಣ ಪರ ವಕೀಲ ಸಂದೀಪ್ ಪಾಟೀಲ್ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಭದ್ರತೆಯ ಖಾತರಿಯನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದರು.
ಜಗದ್ಗುರು ಮುರುಗರಾಜೇಂದ್ರ ವಿದ್ಯಾಪೀಠದ ಮುಖ್ಯಸ್ಥರಾದ ಶರಣರು, ಸಾರ್ವಜನಿಕರ ತೀವ್ರ ಒತ್ತಡದ ನಂತರ ಸೆಪ್ಟೆಂಬರ್ 1 2022 ರಂದು ತಡವಾಗಿ ಬಂಧಿಸಲಾಯಿತು. 2019 ಮತ್ತು 2022 ರ ನಡುವೆ 15 ಮತ್ತು 16 ವರ್ಷ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಅವರು ಹೊಂದಿದ್ದು, ಆಗಸ್ಟ್ 25 ರಂದು ಪೋಕ್ಸೋ ಕಾಯಿದೆ 2012 ರ ಅಡಿಯಲ್ಲಿ ಅತ್ಯಾಚಾರದ ಆರೋಪವನ್ನು ಪೊಲೀಸರು ದಾಖಲಿಸಿದ್ದಾರೆ.
ಜೈನಿಂದ ನೇರವಾಗಿ ದಾವಣಗೆರೆಯತ್ತ ಮುರುಘಾಶ್ರೀ
ಚಿತ್ರದುರ್ಗದಲ್ಲಿ ನೆಲೆಸುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದ ಹಿನ್ನಲೆಯಲ್ಲಿ ಶ್ರೀಗಳು ಜೈಲಿನಿಂದ ನೇರವಾಗಿ ದಾವಣಗೆರೆ ಕಡೆ ಹೊರಟಿದ್ದಾರೆ. ಭಕ್ತರು ಸ್ವಾಗತ ಮಾಡಿದ್ದಾರೆ. ದಾವಣಗೆರೆ ನಗರದ ಜಯದೇವ ವೃತ್ತದ ಬಳಿ ಇರುವ ಶಿವಯೋಗಿ ಮಂದಿರಕ್ಕೆ ತೆರಳಿ ಜಯದೇವ ಸ್ವಾಮೀಜಿ ಗದ್ದುಗೆಗೆ ನಮಸ್ಕರಿಸಲಿದ್ದಾರೆ. ಚಿತ್ರದುರ್ಗ ಪ್ರವೇಶ ಇಲ್ಲದಿರುವುದರಿಂದ ಮುರುಘಾಶ್ರೀಗಳು ಶಿವಯೋಗಿ ಮಂದಿರದಲ್ಲೇ ಉಳಿದುಕೊಳ್ಳುವ ಸಾಧ್ಯತೆಗಳಿವೆ.
ಕೋರ್ಟ್ ಷರತ್ತು ಗಳೇನು?
– ಪ್ರಕರಣದ ಸಾಕ್ಷ್ಯಾಧಾರ ನಾಶ ಮಾಡುವಂತಿಲ್ಲ,
– ಪ್ರಭಾವ ಬೀರುವಂತಿಲ್ಲ. ಇಂತಹ ಕೃತ್ಯ ಪುನರಾವರ್ತನೆ ಮಾಡುವಂತಿಲ್ಲ.
– ಇಬ್ಬರು ಶೂರಿಟಿ ನೀಡಬೇಕು.
– ಪಾಸ್‌ಪೋರ್ಟ್ ಕೋರ್ಟ್‌ಗೆ ಸಲ್ಲಿಸಬೇಕು.
– ಕೋರ್ಟ್‌ಗೆ ವಿಸಿ ಮೂಲಕ ಹಾಜರಾಗಬೇಕು.
– ಚಿತ್ರದುರ್ಗಕ್ಕೆ ಪ್ರವೇಶವಿಲ್ಲ.
– ವೀಡಿಯೋ ಕಾನ್ಫರೆನ್ಸ್ ಮೂಲಕವಾದರೂ ಪ್ರಕರಣದ ವಿಚಾರಣೆಗೆ ಹಾಜರಾಗಬೇಕು.
ವಕೀಲರಾದ ಸಂದೀಪ್ ಪಾಟೀಲ್ ಮಾತನಾಡಿ, ನಾಲ್ಕು ದಿನ ಮೊದಲೇ ಬಿಡುಗಡೆ ಆಗಬೇಕಿತ್ತು ಆದರೆ ದೀಪಾವಳಿ ರಜೆ ಹಿನ್ನಲೆ ಇವತ್ತು ರಿಲೀಸ್ ಆಗಿದ್ದಾರೆ. ಯಾವ ಕೇಸ್‌ನಲ್ಲಿ ಕಸ್ಟಡಿಯಲ್ಲಿರುತ್ತಾರೆ, ಅದರಲ್ಲಿ ನಾವು ಬೇಲ್ ಹಾಕಬಹುದು. ಎರಡನೇ ಪ್ರಕರಣದಲ್ಲಿ ಕಸ್ಟಡಿಯಾಗಲೀ ಅರೆಸ್ಟಾಗಲಿ ಆಗಲೇ ಇಲ್ಲ. ಹಾಗಾಗಿ ಮೊದಲನೇ ಪ್ರಕರಣದಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು. ಬೇಲ್ ಪ್ರಕಾರ ಹಾಕಿರುವ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ ಎಂದರು.
ಇದನ್ನೂ ಓದಿ – ಈ ವರ್ಗದ ಜನರ ಗೃಹಲಕ್ಷ್ಮಿ & ಅನ್ನಭಾಗ್ಯದ ಹಣ ರದ್ದು.! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ , @ahara.kar.nic.in/
ಇದನ್ನೂ ಓದಿ – ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿದೊರಿಗೆ ಗುಡ್ ನ್ಯೂಸ್, ಶೀಘ್ರದಲ್ಲೆ ಕಾರ್ಡ್ ವಿತರಣೆ, ಇಲ್ಲಿದೆ ಡೀಟೇಲ್ಸ್
ಇದನ್ನೂ ಓದಿ – Free LPG – ಇನ್ನೂ ಮುಂದೆ ಬಿಪಿಎಲ್ ಕಾರ್ಡ್ ಇಲ್ಲಾ ಅಂದ್ರು ಸಿಗುತ್ತೆ ಉಚಿತ LPG ಗ್ಯಾಸ್ ಸಂಪರ್ಕ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






