WhatsApp Image 2025 10 11 at 5.45.19 PM

ಕರ್ನಾಟಕ ಬಂದ್‌ ಅಕ್ಟೋಬರ್ 13 ಸೋಮವಾರ ಶಾಲೆ-ಕಾಲೇಜುಗಳಿಗೆ ರಜೆ ಸಾಧ್ಯತೆ.?

Categories:
WhatsApp Group Telegram Group

ಕರ್ನಾಟಕದಲ್ಲಿ ಇತ್ತೀಚೆಗೆ ಶಾಲಾ ಮತ್ತು ಕಾಲೇಜುಗಳಿಗೆ ಪದೇ ಪದೇ ರಜೆಗಳನ್ನು ಘೋಷಿಸಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ವಿದ್ಯಾರ್ಥಿಗಳು ಭಾರಿ ಪ್ರಮಾಣದಲ್ಲಿ ರಜೆಗಳನ್ನು ಪಡೆದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಿತ್ತು. ಆದರೆ ಖಾಸಗಿ ಶಾಲೆ ಮತ್ತು ಕಾಲೇಜುಗಳು ಮಾತ್ರ ಎಂದಿನಂತೆ ಕಾರ್ಯಾರಂಭ ಮಾಡಿವೆ. ಇದರ ಬೆನ್ನಲ್ಲೇ ಇದೀಗ ದಿಢೀರ್ ಒಂದು ಹೊಸ ಸುದ್ದಿ ಸಂಚಲನ ಮೂಡಿಸಿದೆ. ಅದೇನೆಂದರೆ, ‘ಕರ್ನಾಟಕ ಬಂದ್’ ಹಿನ್ನೆಲೆಯಲ್ಲಿ ಅಕ್ಟೋಬರ್ 13, ಸೋಮವಾರದಂದು ರಜೆ ಘೋಷಣೆಯಾಗುವ ಸಾಧ್ಯತೆ ಇದೆ ಎಂಬುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

2025 ರಜೆಗಳ ವರ್ಷ:

2025ನೇ ವರ್ಷವನ್ನು ಕನ್ನಡಿಗರು ರಜೆಗಳ ವರ್ಷವೆಂದೇ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಯಾಕೆಂದರೆ, ಪ್ರತಿಭಟನೆ, ಮುಷ್ಕರ, ಮಳೆ, ಹಬ್ಬಗಳು ಮತ್ತು ಜಯಂತಿಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಈ ವರ್ಷದಲ್ಲಿ ರಾಜ್ಯದಲ್ಲಿ ಅಧಿಕ ರಜೆಗಳು ಸಿಕ್ಕಿವೆ. ಇಂತಹ ಭರ್ಜರಿ ರಜೆಗಳನ್ನು ನೀಡಿದ 2025ರಲ್ಲಿ ಮತ್ತೊಂದು ರಜೆಯ ಸುದ್ದಿ ಹರಿದಾಡುತ್ತಿದೆ. ಈ ಬಾರಿ ಬಂದ್ ಮೂಲಕ ರಜೆ ಕೊಡಿಸಲು ಕೆಲವರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಅಕ್ಟೋಬರ್ 13ರಂದು ಕರ್ನಾಟಕ ಬಂದ್‌ಗೆ ಸಿದ್ಧತೆ:

ಹೌದು, ಕರ್ನಾಟಕದಲ್ಲಿ ಮತ್ತೊಮ್ಮೆ ಬಂದ್ ನಡೆಸಲು ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗೆ ‘ಭಾರತ್ ಬಂದ್’ ನಡೆದಾಗಲೂ ರಾಜ್ಯದಲ್ಲಿ ಬಂದ್ ಮಾಡಿ ರಜೆ ಘೋಷಿಸಲಾಗಿತ್ತು. ಇದೀಗ ಮತ್ತೊಮ್ಮೆ ಕರ್ನಾಟಕ ಬಂದ್‌ಗೆ ಸಿದ್ಧತೆ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಂತಹ ಸಂದರ್ಭದಲ್ಲಿ ‘ಕರ್ನಾಟಕ ಬಂದ್… ಅಕ್ಟೋಬರ್ 13 ಸೋಮವಾರ ರಜೆ ಘೋಷಣೆ ಸಾಧ್ಯತೆ’ ಎಂಬ ಸುದ್ದಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ.

ಬಂದ್‌ಗೆ ಕಾರಣವೇನು? ದರ್ಶನ್ ಅಭಿಮಾನಿಗಳ ಕರೆ:

ಈ ಕರ್ನಾಟಕ ಬಂದ್‌ಗೆ ಕಾರಣವೇನು? ನಟ ದರ್ಶನ್ ತೂಗುದೀಪ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ, ಅವರಿಗೆ ಬೇಕೆಂದೇ ಕಷ್ಟ ನೀಡಲಾಗುತ್ತಿದೆ ಎಂಬ ಆರೋಪವಿದೆ. ಆದರೆ ರೌಡಿಶೀಟರ್‌ಗಳು ಮತ್ತು ಇತರರು ಜೈಲಿನಲ್ಲಿ ಅನುಕೂಲಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ, ತಮ್ಮ ನೆಚ್ಚಿನ ನಟ ದರ್ಶನ್ ಅವರಿಗೆ ನ್ಯಾಯ ಒದಗಿಸಬೇಕು, ತಮ್ಮ ಆಕ್ರೋಶವನ್ನು ಪ್ರತಿಭಟನೆಯ ಮೂಲಕ ಹೊರಹಾಕಬೇಕು ಎಂದು ಡಿ-ಬಾಸ್ ಅಭಿಮಾನಿಗಳು ದೊಡ್ಡ ಮಟ್ಟದ ಚರ್ಚೆ ಪ್ರಾರಂಭಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಕ್ಟೋಬರ್ 13, ಸೋಮವಾರದಂದು ಕರ್ನಾಟಕ ಬಂದ್ ಮಾಡಲು ಕರೆ ನೀಡುತ್ತಿದ್ದಾರೆ. ಆದರೆ, ಈ ಬಂದ್‌ಗೆ ಅಧಿಕೃತ ಅನುಮತಿ ಸಿಗಲಿದೆಯೇ ಎಂಬ ಚರ್ಚೆಯೂ ಶುರುವಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲು ನಾವು ಅಕ್ಟೋಬರ್ 12, ಭಾನುವಾರದವರೆಗೆ ಕಾಯಬೇಕಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories