Community Awards Ceremony

ಮೆಡ್ಲೇರಿ ಶಾಲೆಯಲ್ಲಿ ಮಕ್ಕಳ ಕವಿಗೋಷ್ಠಿ: ಕಾವ್ಯ ರಚನೆಗೆ ಲೋಕಜ್ಞಾನ, ಪ್ರತಿಭೆ ಮತ್ತು ರಸಾನುಭವ ಅಗತ್ಯ – ಮಂಜುಳಾ ಹಿರೇಬಿದರಿ

ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಲುಮತ ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳ ಕವಿಗೋಷ್ಠಿ ಆಯೋಜಿಸಲಾಗಿದ್ದು, 15 ವಿದ್ಯಾರ್ಥಿಗಳು ಕವನ ವಾಚಿಸಿದರು.

ಮುಖ್ಯ ಮಾಹಿತಿಗಳು

  • ಮೆಡ್ಲೇರಿ ಸರ್ಕಾರಿ ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳ ಕವಿಗೋಷ್ಠಿ ಆಯೋಜನೆ.
  • 15 ವಿದ್ಯಾರ್ಥಿ ಕವಿಗಳಿಂದ ಸ್ವರಚಿತ ಕವನಗಳ ವಾಚನ.
  • ಕಾವ್ಯ ರಚನೆಗೆ ಲೋಕಜ್ಞಾನ, ಪ್ರತಿಭೆ ಮತ್ತು ರಸಾನುಭವ ಅಗತ್ಯ ಎಂದು ಮಂಜುಳಾ ಹಿರೇಬಿದರಿ ಅಭಿಮತ.

ರಾಣೇಬೆನ್ನೂರು: ಕಾವ್ಯ ರಚನೆಗೆ ಲೋಕಜ್ಞಾನ, ರಸಾನುಭವ ಹಾಗೂ ಪ್ರತಿಭೆ ಅತ್ಯಗತ್ಯ. ಕವಿ ತನ್ನ ಅಂತರಂಗದ ಕಣ್ಣಿನಿಂದ ಜಗತ್ತನ್ನು ನೋಡುತ್ತಾನೆ ಎಂದು ಶಿಕ್ಷಕಿ ಹಾಗೂ ಕವಯಿತ್ರಿ ಮಂಜುಳಾ ಹಿರೇಬಿದರಿ ಹೇಳಿದರು.

ತಾಲೂಕಿನ ಮೆಡ್ಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಲುಮತ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೆಡ್ಲೇರಿ ಗ್ರಾಮ ಘಟಕದ ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೋಚಿದ್ದೆಲ್ಲವನ್ನೂ ಬರೆದರೆ ಅದು ಕವಿತೆಯಾಗುವುದಿಲ್ಲ. ಕಾವ್ಯ ರಚನೆಗೆ ಶ್ರದ್ಧೆ, ಶ್ರಮ, ಕೌಶಲ, ಭಾಷಾ ಜ್ಞಾನ, ಪದಸಂಪತ್ತು, ಸಮಾಜಮುಖಿ ಚಿಂತನೆ ಹಾಗೂ ಔಚಿತ್ಯದ ಅರಿವು ಇರಬೇಕು. ಮಕ್ಕಳು ಹಿರಿಯ ಕವಿಗಳ ಸಾಹಿತ್ಯ ಮತ್ತು ಕವನಗಳನ್ನು ಓದುವ ಮೂಲಕ ಅವರ ಚಿಂತನೆ ಹಾಗೂ ಕಾವ್ಯ ರಚನೆಯ ಶೈಲಿಯನ್ನು ತಿಳಿದುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

WhatsApp Image 2026 11 26 at 4.54.54 PM

ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಹಾಲುಮತ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಂಜಪ್ಪ ರಾವಳ್ಯಾರ ಉದ್ಘಾಟಿಸಿದರು. ಕಸಾಪ ಮೆಡ್ಲೇರಿ ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕವಿಗೋಷ್ಠಿಯಲ್ಲಿ 15 ವಿದ್ಯಾರ್ಥಿ ಕವಿಗಳು ಪಾಲ್ಗೊಂಡು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಕಾರ್ಯಕ್ರಮ ವೇದಿಕೆಯಾಯಿತು.

ಈ ಸಂದರ್ಭದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಕಾಂತೇಶ್ ಅಂಬಿಗೇರ, ಶಾಲೆಯ ಮುಖ್ಯ ಶಿಕ್ಷಕಿ ಎಸ್.ಎಲ್. ಹರಿಹರ, ಶಿಕ್ಷಕಿ ಜಿ.ಆರ್. ಅಂಬಿಗೇರ, ಶಿಕ್ಷಕ ಹನುಮಂತ ಚಿತ್ತೇನಹಳ್ಳಿ, ಕರಿಯಪ್ಪ ಹದಡಿ, ರತ್ನಮ್ಮ ಕಂದಾಟಿ, ಎಸ್.ಎಚ್. ಮೇಟಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories