ಇದು 2025ರ ಅತ್ಯಂತ ಮಹತ್ವದ ಸರ್ಕಾರಿ ಉದ್ಯೋಗಾವಕಾಶಗಳಲ್ಲಿ ಒಂದಾಗಿದ್ದು, ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತದ ಪ್ರಮುಖ ಗುಪ್ತಚರ ಸಂಸ್ಥೆ — ಗುಪ್ತಚರ ಬ್ಯೂರೋ (IB), ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ACIO) ಗ್ರೇಡ್–II / ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗೆ ಬೃಹತ್ ಪ್ರಮಾಣದ ನೇಮಕಾತಿಯನ್ನು ಘೋಷಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 3,717 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೌದು, ಇದೀಗ ನೇರವಾಗಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಅಂಶಗಳ ವಿಶ್ಲೇಷಣೆ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಯ ಹಂಚಿಕೆ ವಿವರ:
ಸಾಮಾನ್ಯ ವರ್ಗ (UR): 1,537 ಹುದ್ದೆಗಳು
ಆರ್ಥಿಕವಾಗಿ ದುರ್ಬಲ ವರ್ಗ (EWS): 442 ಹುದ್ದೆಗಳು
ಒಬಿಸಿ (OBC): 946 ಹುದ್ದೆಗಳು
ಪರಿಶಿಷ್ಟ ಜಾತಿ (SC): 566 ಹುದ್ದೆಗಳು
ಪರಿಶಿಷ್ಟ ಪಂಗಡ (ST): 226 ಹುದ್ದೆಗಳು
ಅರ್ಹತಾ ಮಾನದಂಡ:
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಮುಗಿದಿರಬೇಕು.
ಜೊತೆಗೆ, ಕಂಪ್ಯೂಟರ್ ನ್ವೊಲೆಜ್ (Computer Knowledge) ಅಗತ್ಯವಿದೆ.
ವಯೋಮಿತಿ:
ಕನಿಷ್ಠ: 18 ವರ್ಷ
ಗರಿಷ್ಠ: 27 ವರ್ಷ (ಅಗಸ್ಟ್ 10, 2025 ರ ಮಟ್ಟಿಗೆ)
ಮೀಸಲು ವರ್ಗದವರಿಗೆ ವಿಶ್ರಾಂತಿ:
OBC: 3 ವರ್ಷ
SC/ST: 5 ವರ್ಷ
ಅರ್ಜಿ ಶುಲ್ಕ:
UR/OBC/EWS: ₹650
SC/ST/ಮಹಿಳೆಯರು/ಪಿಡಬ್ಲ್ಯೂಡಿಇ (PwD): ₹550
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್‌ಸೈಟ್ www.mha.gov.in ಗೆ ಭೇಟಿ ನೀಡಿ.
IB ACIO Recruitment 2025 ಲಿಂಕ್ ಕ್ಲಿಕ್ ಮಾಡಿ.
ಹೊಸ ನೋಂದಣಿ ಮಾಡಿ ಮತ್ತು ಲಾಗಿನ್ ಆಗಿ.
ಅರ್ಜಿ ನಮೂನೆ ಭರ್ತಿ ಮಾಡಿ.
ಅರ್ಜಿ ಶುಲ್ಕ ಪಾವತಿಸಿ.
ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಆಯ್ಕೆ ಪ್ರಕ್ರಿಯೆ:
ಟೈಯರ್–1 (Tier-1) — ವಸ್ತುನಿಷ್ಠ ಪರೀಕ್ಷೆ:
100 ಅಂಕಗಳು, 100 ಪ್ರಶ್ನೆಗಳು
ವಿಷಯಗಳು: ಸಾಮಾನ್ಯ ಜ್ಞಾನ, ಅಂಕಗಣಿತ, ತಾರ್ಕಿಕ ಚಿಂತನೆ, ಇಂಗ್ಲಿಷ್
ಅವಧಿ: 60 ನಿಮಿಷ
ಟೈಯರ್–2 (Tier-2) — ವಿವರಣಾತ್ಮಕ ಪರೀಕ್ಷೆ:
50 ಅಂಕಗಳು
ವಿಷಯಗಳು: ಪ್ರಬಂಧ/ಅಭಿಪ್ರಾಯ ಲೇಖನ, ನಿಬಂಧನೆ
ಸಂದರ್ಶನ:
100 ಅಂಕಗಳು
ವೈಯಕ್ತಿಕತೆ, ನೈಪುಣ್ಯತೆ ಮತ್ತು ವಿಷಯ ಜ್ಞಾನ ಆಧಾರಿತ ಪ್ರಶ್ನೆಗಳು
ಮುಕ್ತಾಯದಲ್ಲಿ, ಎಲ್ಲ ಹಂತಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಪ್ರಕಟವಾಗುತ್ತದೆ.
ವೇತನದ ವಿವರ (Salary Structure):
ಪೇ ಬ್ಯಾಂಡ್: Level-7 (₹44,900 – ₹1,42,400)
ಜೊತೆಗೆ DA, HRA, TA ಸೇರಿದಂತೆ ವಿವಿಧ ಭತ್ಯೆಗಳೂ ಲಭ್ಯ
ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ: ಜುಲೈ 19, 2025
ಅಂತಿಮ ದಿನಾಂಕ: ಆಗಸ್ಟ್ 10, 2025
ಕೊನೆಯದಾಗಿ ಹೇಳುವುದಾದರೆ, ಈ ACIO ನೇಮಕಾತಿ 2025 ಪ್ರಕ್ರಿಯೆಯು ಯುವ ಉದ್ಯೋಗಾಕಾಂಕ್ಷಿಗಳಿಗೆ ಒಂದು ಅಪರೂಪದ ಅವಕಾಶ. ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಗೌರವದ ವಿಷಯವಷ್ಟೇ ಅಲ್ಲದೆ, ಉತ್ತಮ ವೇತನ ಹಾಗೂ ಭದ್ರತೆಗೆ ಕಾರಣವಾಗುತ್ತದೆ. ಈ ಹುದ್ದೆಗಳಿಗೆ ಸಿದ್ಧತೆ ಮಾಡುವವರು ತಕ್ಷಣವೇ ಅರ್ಜಿ ಸಲ್ಲಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯನ್ನು ಪ್ರಾರಂಭಿಸಬೇಕಾಗಿದೆ.
ನಿಮ್ಮ ಕನಸಿನ ಕೇಂದ್ರ ಸರ್ಕಾರಿ ಉದ್ಯೋಗ ತಲುಪುವ ಹಾದಿಯಲ್ಲಿ ಈ ಅವಕಾಶವನ್ನು ಕೈಬಿಡಬೇಡಿ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.