ರಾಜ್ಯ ಸರ್ಕಾರವು ಸರಳವಾಗಿ ಮದುವೆಯಾಗುವ ದಂಪತಿಗಳಿಗೆ ಒಂದು ಗುಡ್ ನ್ಯೂಸ್ ಅನ್ನು ನೀಡುತ್ತಿದೆ. ಅದೇನೆಂದರೆ ಸಿಂಪಲ್ಲಾಗಿ ಮದುವೆ ಆದರೆ ರಾಜ್ಯ ಸರ್ಕಾರ(State government)ದಿಂದ ಪ್ರೋತ್ಸಾಹ ಧನವು ದೊರೆಯುತ್ತದೆ. ಈ ಪ್ರೋತ್ಸಾಹ ಧನ(Incentive money)ವನ್ನು ಹೇಗೆ ಪಡೆದುಕೊಳ್ಳುವುದು?, ಏಕೆ ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ? ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸರಳವಾಗಿ ಮದುವೆಯಾದರೆ ಕೈತುಂಬ ಹಣ :
ಮದುವೆ ಎಂದರೆ ಮೊದಲು ತಲೆಗೆ ಬರುವ ವಿಷಯ ಏನಪ್ಪಾ ಅಂದ್ರೆ, ಮದುವೆ(marriage) ಮಾಡಲು ಬೇಕಾಗುವ ಖರ್ಚು. ಇಂದಿನ ದಿನಮಾನದಲ್ಲಿ ಎಲ್ಲರೂ ಅದ್ದೂರಿಯಾಗಿ ಅದೆಷ್ಟೋ ಹಣವನ್ನು ವೆಚ್ಚ ಮಾಡಿ ಮದುವೆಯಾಗುತ್ತಾರೆ. ಡೆಸ್ಟಿನೇಷನ್ ವೆಡ್ಡಿಂಗ್(Destination wedding) ಎಂಬ ಫ್ರೆಂಡ್ ಕೂಡ ಇದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಸರಳವಾಗಿ ಮದುವೆಯಾಗುವವರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ, ಅದುವೇ ಸರಳ ವಿವಾಹಕ್ಕೆ ಪ್ರೋತ್ಸಾಹ ಧನ. ನೊಂದಾಯಿತ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿ(Scheduled caste) ದಂಪತಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಮದುವೆಯಾಗುವ ದಂಪತಿಗಳಿಗೆ 50,000ರೂಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸುವ ವಿಧಾನ :
ಹೀಗೆ ಸರಳವಾಗಿ ಮದುವೆಯಾದ ನಂತರ 50,000 /- ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಪರಿಶಿಷ್ಟ ಜಾತಿಯ ದಂಪತಿಗಳು ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ : https://swdservices.karnataka.gov.in/swincentive/HAhome.aspx
ಮದುವೆಯಾದ ಒಂದು ವರ್ಷದ ಒಳಗೆ ಅರ್ಹ ದಾಖಲೆಗಳೊಂದಿಗೆ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು.
ಸರಳ ವಿವಾಹವಾದ ದಂಪತಿಗಳಿಗೆ 50,000ಗಳನ್ನು ನೀಡಲಾಗುತ್ತದೆ ಅಷ್ಟೇ ಅಲ್ಲದೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಿದ ಆಯೋಜಕರುಗಳಿಗೆ ಪ್ರೋತ್ಸಾಹ ಧನ ಹಾಗೂ ವಿವಾಹದ ಖರ್ಚು ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ.2000/- ಸಾವಿರಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಮಿತ್ರ ಸಹಾಯವಾಣಿಗೆ ಕರೆ ಮಾಡಿ : 9482 300 400
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಪೌರತ್ವ ತಿದ್ದುಪಡಿ ಕಾಯ್ದೆಯ ಅಧಿಸೂಚನೆ ಪ್ರಕಟ..! ಏನಿದು CAA..? ಯಾರಿಗೆ ಅನ್ವಯ ಆಗುತ್ತೆ?
- ರಾಜ್ಯದಲ್ಲಿ ‘ವಿವಾಹ ನೋಂದಣಿ’ ಮತ್ತಷ್ಟು ಸುಲಭ; ಮನೆಯಲ್ಲಿ ಕುಳಿತು ವಿವಾಹ ನೋಂದಣಿ ಸರ್ಟಿಫಿಕೇಟ್ ಪಡೆಯಿರಿ
- ಆರ್ ಟಿ ಸಿ ಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡುವು ಡೈರೆಕ್ಟ್ ಲಿಂಕ್ ಇಲ್ಲಿದೆ!
- ಬರೋಬ್ಬರಿ 68 ಸಾವಿರದತ್ತ ಚಿನ್ನದ ಬೆಲೆ, ಬೆಂಗಳೂರಲ್ಲಿ ಐತಿಹಾಸಿಕ ದಾಖಲೆ ಚಿನ್ನದ ಬೆಲೆ ದರ.! ಇಲ್ಲಿದೆ ಇಂದಿನ ರೇಟ್
- ರಾಜ್ಯದಿಂದ ಮತ್ತೊಂದು ರೈಲು ಸಂಚಾರ; ಸಮಯ, ನಿಲ್ದಾಣ ವಿವರ ಇಲ್ಲಿದೆ.
- ರಾಜ್ಯದಲ್ಲಿ ಕಲರ್ ‘ಕಾಟನ್ ಕ್ಯಾಂಡಿ’ & ಗೋಬಿ ಬ್ಯಾನ್, ಮಾರಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ ..!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






