Picsart 25 11 07 23 35 56 009 scaled

ರಾಜ್ಯದ ಕಾರ್ಮಿಕರಿಗೆ ಸರ್ಕಾರದಿಂದ  ಸಿಗುವ  ಸಹಾಯಧನ ಸೌಲಭ್ಯಗಳು ತುಂಬಾ ಜನರಿಗೆ ಗೊತ್ತಿಲ್ಲ.! 

Categories:
WhatsApp Group Telegram Group

ರಾಜ್ಯ ಸರ್ಕಾರವು ಕಾರ್ಮಿಕ ವರ್ಗದ ಜೀವನಮಟ್ಟವನ್ನು ಉತ್ತಮಗೊಳಿಸುವ ಉದ್ದೇಶದಿಂದ 15 ಪ್ರಮುಖ ಸಹಾಯಧನ ಸೌಲಭ್ಯಗಳನ್ನು(15 major Subsidy Schemes) ಘೋಷಿಸಿದೆ. ಕಟ್ಟಡ ಕಾರ್ಮಿಕರಿಂದ ಹಿಡಿದು ವಿವಿಧ ಶ್ರಮ ಕ್ಷೇತ್ರಗಳಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರಿಗೆ ಈ ಯೋಜನೆಗಳು ಆಶಾದೀಪವಾಗಿವೆ. ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ವಸತಿ ಸೇರಿದಂತೆ ಜೀವನದ ಪ್ರತಿಯೊಂದು ಹಂತದಲ್ಲಿ ನೆರವಾಗುವ ರೀತಿಯಲ್ಲಿ ಈ ಸೌಲಭ್ಯಗಳನ್ನು ರೂಪಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಪಿಂಚಣಿ ಸೌಲಭ್ಯ:

ಮೂರು ವರ್ಷಗಳ ಸದಸ್ಯತ್ವದ ನಂತರ 60 ವರ್ಷ ವಯಸ್ಸು ಪೂರೈಸಿದ ಫಲಾನುಭವಿಗಳಿಗೆ ಮಾಸಿಕ ರೂ. 1,000/- ಪಿಂಚಣಿ ದೊರೆಯಲಿದೆ. ಇದು ವಯೋವೃದ್ಧ ಕಾರ್ಮಿಕರ ಜೀವನಕ್ಕೆ ಸ್ಥಿರತೆ ನೀಡುವ ಮಹತ್ವದ ಯೋಜನೆ.

ದುರ್ಬಲತೆ ಪಿಂಚಣಿ(Disability pension) ಮತ್ತು ಅನುಗ್ರಹ ಧನ:

ಕಾರ್ಮಿಕರು ಕೆಲಸದ ವೇಳೆ ಅಪಘಾತಕ್ಕೊಳಗಾದರೆ ಅಥವಾ ಅಂಗವಿಕಲರಾದರೆ, ತಿಂಗಳಿಗೆ ರೂ.1,000/- ಪಿಂಚಣಿ ಹಾಗೂ ಶೇಕಡಾವಾರು ದುರ್ಬಲತೆಯ ಆಧಾರದ ಮೇಲೆ ರೂ.2 ಲಕ್ಷದವರೆಗೆ ಸಹಾಯಧನ ದೊರೆಯಲಿದೆ.

ಟ್ರೈನಿಂಗ್-ಕಮ್-ಟೂಲ್ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ):

ತಮ್ಮ ಕೌಶಲ್ಯವನ್ನು ವೃದ್ಧಿಸಲು ಬಯಸುವ ಕಾರ್ಮಿಕರಿಗೆ ರೂ. 20,000/- ವರೆಗೆ ತರಬೇತಿ ಹಾಗೂ ಉಪಕರಣ ಸಹಾಯಧನ ನೀಡಲಾಗುತ್ತದೆ.

ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ):

ಸ್ವಂತ ಮನೆ ಕನಸನ್ನು ಸಾಕಾರಗೊಳಿಸಲು, ನೋಂದಾಯಿತ ಕಾರ್ಮಿಕರಿಗೆ ರೂ. 2,00,000/- ವರೆಗೆ ಮನೆ ನಿರ್ಮಾಣ ಮುಂಗಡ ಸಹಾಯಧನ ಲಭ್ಯ.

ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ):

ಮಹಿಳಾ ಕಾರ್ಮಿಕರ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 30,000/-, ಗಂಡು ಮಗುವಿಗೆ ರೂ. 20,000/- ಸಹಾಯಧನ ನೀಡಲಾಗುತ್ತದೆ.

ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ:

ಫಲಾನುಭವಿ ನಿಧನರಾದಲ್ಲಿ ಕುಟುಂಬಕ್ಕೆ ರೂ.4,000/- ಅಂತ್ಯಕ್ರಿಯೆ ವೆಚ್ಚ ಹಾಗೂ ರೂ.50,000/- ಅನುಗ್ರಹ ಧನ ನೀಡಲಾಗುತ್ತದೆ.

ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ):

ಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕದಿಂದ ಪಿಹೆಚ್‌ಡಿ ಮಟ್ಟದವರೆಗೆ ಸಹಾಯಧನ ಲಭ್ಯ:

1–3ನೇ – ತರಗತಿ₹2,000

4–6ನೇ – ತರಗತಿ₹3,000

7–8ನೇ – ತರಗತಿ₹4,000

9–10ನೇ – ತರಗತಿ / I PUC₹6,000

II PUC – ₹8,000

ಐಟಿಐ / ಡಿಪ್ಲೋಮಾ – ₹7,000 ಪ್ರತಿ ವರ್ಷ

ಪದವಿ – ₹10,000 ಪ್ರತಿ ವರ್ಷ

ಸ್ನಾತಕೋತ್ತರ – ₹20,000 ಸೇರ್ಪಡೆಗೆ + ₹10,000 ಪ್ರತಿ ವರ್ಷ

ಇಂಜಿನಿಯರಿಂಗ್ – ₹25,000 ಸೇರ್ಪಡೆಗೆ + ₹20,000 ಪ್ರತಿ ವರ್ಷ

ವೈದ್ಯಕೀಯ ಕೋರ್ಸ್ – ₹30,000 ಸೇರ್ಪಡೆಗೆ + ₹25,000 ಪ್ರತಿ ವರ್ಷ

ಪಿಹೆಚ್‌ಡಿ – ₹20,000ಪ್ರತಿ ವರ್ಷ + ಪ್ರಬಂಧ ನಂತರ ₹20,000 ಹೆಚ್ಚುವರಿ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೋನಸ್ ಸಹಾಯಧನ:

SSLC: ₹5,000

PUC: ₹7,000

ಪದವಿ: ₹10,000

ಸ್ನಾತಕೋತ್ತರ: ₹15,000

ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ):

ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ₹300 ರಿಂದ ₹10,000 ವರೆಗೆ ವೈದ್ಯಕೀಯ ನೆರವು ದೊರೆಯಲಿದೆ.

ಅಪಘಾತ ಪರಿಹಾರ:

ಮರಣ: ₹5,00,000

ಶಾಶ್ವತ ದುರ್ಬಲತೆ: ₹2,00,000

ಭಾಗಶಃ ದುರ್ಬಲತೆ: ₹1,00,000

ಮುಖ್ಯ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ):

ಹೃದ್ರೋಗ, ಕ್ಯಾನ್ಸರ್, ಕಿಡ್ನಿ, ಶಸ್ತ್ರಚಿಕಿತ್ಸೆ ಮೊದಲಾದ ಗಂಭೀರ ರೋಗಗಳಿಗೆ ₹2,00,000 ವರೆಗೆ ಸಹಾಯಧನ ಲಭ್ಯ.

ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್):

ಕಾರ್ಮಿಕ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹50,000/- ಸಹಾಯಧನ ನೀಡಲಾಗುತ್ತದೆ.

LPG ಸಂಪರ್ಕ (ಕಾರ್ಮಿಕ ಅನಿಲ ಭಾಗ್ಯ):

ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟವ್ ಸಹಿತ ಉಚಿತ ಸೌಲಭ್ಯ ಲಭ್ಯ.

ಬಿಎಂಟಿಸಿ ಬಸ್ ಪಾಸ್ ಸೌಲಭ್ಯ:

ಬೆಂಗಳೂರು ನಗರ ವ್ಯಾಪ್ತಿಯ ಕಾರ್ಮಿಕರಿಗೆ ಹಾಗೂ ನಗರದ ಹೊರವಲಯದಿಂದ ಕೆಲಸಕ್ಕೆ ಬರುವವರಿಗೆ ಬಿಎಂಟಿಸಿ ಬಸ್ ಪಾಸ್ ನೀಡಲಾಗುತ್ತದೆ.

ಕೆಎಸ್‌ಆರ್ಟಿಸಿ ಬಸ್ ಪಾಸ್ ಸೌಲಭ್ಯ:

ರಾಜ್ಯಾದ್ಯಂತ ವಿದ್ಯಾಭ್ಯಾಸದಲ್ಲಿರುವ ಕಾರ್ಮಿಕರ ಇಬ್ಬರು ಮಕ್ಕಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲಾಗುತ್ತದೆ.

ತಾಯಿ ಮಗು ಸಹಾಯ ಹಸ್ತ:

ಮಗುವಿನ ಪೌಷ್ಠಿಕತೆ ಹಾಗೂ ಶಾಲಾ ಪೂರ್ವ ಶಿಕ್ಷಣಕ್ಕಾಗಿ, ತಾಯಿ ಫಲಾನುಭವಿಗೆ ಮಗುವಿಗೆ ಪ್ರತಿ ವರ್ಷ ₹6,000/- (ಮೂರು ವರ್ಷಗಳವರೆಗೆ) ಸಿಗುತ್ತದೆ.

ಒಟ್ಟಾರೆ, ಈ ಸೌಲಭ್ಯಗಳು ಕೇವಲ ಆರ್ಥಿಕ ನೆರವಿನಷ್ಟೇ ಅಲ್ಲ; ಇದು ಕಾರ್ಮಿಕರ ಬದುಕನ್ನು ಮಾನವೀಯತೆ, ಗೌರವ ಮತ್ತು ಭದ್ರತೆಯೊಂದಿಗೆ ತುಂಬುವ ಸರ್ಕಾರದ ಹೆಜ್ಜೆಯಾಗಿದೆ. ಕೆಲಸಗಾರ ಸಮುದಾಯದ ಶ್ರಮಕ್ಕೆ ಸರ್ಕಾರದ ಗೌರವ ಮತ್ತು ಕೃತಜ್ಞತೆಯ ಪ್ರತೀಕವೇ ಈ ಯೋಜನೆಗಳು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories