ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನದ ವೇಳೆ..? ಜ್ಯೋತಿಯ ಮಹತ್ವ, ಸ್ಪಷ್ಟ ಮಾಹಿತಿ ಇಲ್ಲಿದೆ

jyothi

ಸೂರ್ಯನು ಮಕರ ರಾಶಿಯನ್ನು ( Makara Rashi ) ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ವಿಧವಾಗಿ ಆಚರಣೆ ಮಾಡಲಾಗುತ್ತದೆ. ಉತ್ತರಾಯಣ ( Uttarayana ), ಪೊಂಗಲ್ ( Pongal ), ಸಂಕ್ರಾಂತಿ ಮುಂತಾದ ಹಲವು ಹೆಸರುಗಳಿಂದ ಈ ಹಬ್ಬವನ್ನು ಕರೆಯಲಾಗುತ್ತದೆ.

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ( South India ) ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ(sankranti Festival) ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ( Hindu Religion ) ಆಚರಿಸಲ್ಪಡುತ್ತದೆ. ಕರ್ನಾಟಕ ( Karnataka ), ಆಂಧ್ರ ಪ್ರದೇಶ ( Andra Pradesh ) ಮತ್ತು ತಮಿಳುನಾಡುಗಳ ( Thamil Nadu ) ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಕರ ಸಂಕ್ರಾಂತಿಯು ಹಿಂದೂ ಸುಗ್ಗಿಯ ಹಬ್ಬವಾಗಿದ್ದು ( Suggi Fest ), ಇದನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಮುಖ್ಯವಾಗಿ ಸಂಕ್ರಾಂತಿ ಎಂದರೆ ಸೂರ್ಯನ ಚಲನೆ, ಮಕರ ಸಂಕ್ರಾಂತಿ ಎಂದರೆ ವರ್ಷದಲ್ಲಿ ಬರುವ ಎಲ್ಲಾ 12 ಸಂಕ್ರಾಂತಿಗಳಲ್ಲಿ ಪ್ರಮುಖವಾಗಿದೆ.

ಮಕರ ಸಂಕ್ರಾಂತಿ ಹಬ್ಬದ ಈ ವರ್ಷದ ದಿನಾಂಕ ( Date ) :

ಪ್ರತಿ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಬರುತ್ತದೆ. ಆದರೆ, ಈ ವರ್ಷದ ದಿನಾಂಕದ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಮಕರ ಸಂಕ್ರಾಂತಿ ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ 14 ರಂದು ಬರುತ್ತದೆ. ಆದರೆ ದೃಕ್ ಪಂಚಾಂಗದ ಪ್ರಕಾರ, ಈ ವರ್ಷ ಜನವರಿ 14 ರಂದು ನಡೆಯುವ ಸಂಕ್ರಾಂತಿ ಹಬ್ಬವನ್ನು ಜನವರಿ 15 ರಂದು ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿಯು ಪ್ರಾರಂಭವಾಗುವ ದಿನಾಂಕ , ಶುರುವಾಗುವ ಸಮಯ ( Starting Time ) ಮತ್ತು ಕೊನೆಗೊಳ್ಳುವ ಸಮಯ ( Ending Time ) :

ದೃಕ್ ಪಂಚಾಂಗದ ( Druk Panchang ) ಪ್ರಕಾರ, ಸಂಕ್ರಾಂತಿ ತಿಥಿಯು ಜನವರಿ 15 ರಂದು ಬೆಳಿಗ್ಗೆ 2:45 ರಿಂದ ಪ್ರಾರಂಭವಾಗುತ್ತದೆ. ಇನ್ನು ಮಕರ ಸಂಕ್ರಾಂತಿ ಪುಣ್ಯಕಾಲವು ಬೆಳಿಗ್ಗೆ 7:15 ರಿಂದ ರಾತ್ರಿ 8:07 ರವರೆಗೆ 10 ಗಂಟೆ 31 ನಿಮಿಷಗಳವರೆಗೆ ಇರುತ್ತದೆ. ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ 7:15 ಕ್ಕೆ ಪ್ರಾರಂಭವಾಗಿ, 1 ಗಂಟೆ 45 ನಿಮಿಷಗಳ ಕಾಲ ಅಂದರೆ 9.00 ಕ್ಕೆ ಮುಕ್ತಾಯಗೊಳ್ಳುತ್ತದೆ.

whatss

ಮಕರ ಸಂಕ್ರಾಂತಿಯಂದು ಮಕರಜ್ಯೋತಿಗೆ ಹೆಚ್ಚಿನ ಮಹತ್ವ ( Importance of Makara Jyothi ) :

ಮಕರ ಸಂಕ್ರಾಂತಿಯಂದು (Makar Sankranti) ಶಬರಿಮಲೆಯ ಅಯ್ಯಪ್ಪ ಸ್ವಾಮಿ (Sabarimala Ayyappa) ಜ್ಯೋತಿ ಮೂಲಕ ದರ್ಶನ ನೀಡುತ್ತಾರೆ. ಈ ಮಕರ ಜ್ಯೋತಿಯ ದರ್ಶನಕ್ಕಾಗಿ ಅಯ್ಯಪ್ಪನ ಭಕ್ತರು ಕಾದು ಕುಳಿತಿರುತ್ತಾರೆ. ಇನ್ನು ಶಬರಿ ಮಲೆಯಲ್ಲಿ ಮೂಡುವ ಈ ಜ್ಯೋತಿಯನ್ನು (Jyothi) ನೇರವಾಗಿ ಕಣ್ತುಂಬಿಕೊಳ್ಳಲು ವಿವಿಧ ರಾಜ್ಯಗಳ ( Different State ) ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. 41ದಿನಗಳ ಕಠಿಣ ವ್ರತವನ್ನು ನಡೆಸಿದ ಭಕ್ತರು ಇರುಮುಡಿ ಹೊತ್ತು ಶಬರಿಮಲೆಗೆ ಹೋಗುತ್ತಾರೆ. ಕಾಡು ಮೇಡುಗಳ ಈ ಪ್ರಯಾಣ ಸುಲಭದಲ್ಲ. ಇದಾದ ಬಳಿಕ ದೇವರ ದರ್ಶನಕ್ಕೆ ಮುನ್ನ 18 ಪವಿತ್ರ ಮಟ್ಟಿಲುಗಳನ್ನು (18 Steps) ಹತ್ತಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಈ 18 ಮೆಟ್ಟಿಲುಗಳು ದೇವರ ದರ್ಶನಕ್ಕೆ ಇರುವ ಮಾರ್ಗ ಅಷ್ಟೇ ಅಲ್ಲ, ಧಾರ್ಮಿಕ- ಲೌಕಿಕ ಜೀವನ ಸಾರವನ್ನು ಹೊಂದಿದೆ. ಮಕರ ಜ್ಯೋತಿಗೆ “ಮಕರ ವಿಳಕ್ಕು” ( Makara Vilakku ) ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ( Shabari mala ) ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ.

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಯಾವಾಗ?

ಹಾಗೆಯೇ ಇದೀಗ ಎಲ್ಲರೂ ಶಬರಿಮಲೆಗೆ ಹೊರಡುವ ಸಮಯವಾಗಿದೆ. ಹಾಗೆಯೇ ಶಬರಿಮಲೆ ದೇವಸ್ಥಾನದ ಮೂಲಗಳ ಪ್ರಕಾರ ಜನವರಿ 15ರಂದು ಪೊನ್ನಂಬಲ ಮೇಡುವಿನಲ್ಲಿ ( Ponnambela Medu ) ಮಕರ ಜ್ಯೋತಿ ದರ್ಶನವಾಗಲಿದೆ. ಜನವರಿ 15ರಂದು, ಅಂದರೆ ಇಂದು ಸಂಜೆ 6.30 ರಿಂದ 7ಗಂಟೆ ಒಳಗೆ ಮಕರ ಜ್ಯೋತಿಯ ದರ್ಶನವಾಗಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!