ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, LPG ದರ ಇಳಿಕೆ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಕೇಂದ್ರ ಸರ್ಕಾರವು ಮನೆಬಳಕೆಯ ಗ್ಯಾಸ್ ಬೆಲೆಯನ್ನು 200 ರುಪಾಯಿ ವರೆಗೂ ಇಳಿಸಿದೆ. ಈ ಬೆಲೆ ಇಳಿಕೆಯು ಎಲ್ಲಾ ಗ್ರಾಹಕರಿಗೂ ಇರುತ್ತದೆಯೇ ಅಥವಾ ಯಾರೆಲ್ಲಾ ಈ 200 ರೂಪಾಯಿ ಕಡಿತದ ಗ್ಯಾಸ್ ಸಿಲಿಂಡರಿನ ಫಲಾನುಭವಿಗಳಾಗಿರುತ್ತಾರೆ?, ಯಾವ ಯಾವ ಜಿಲ್ಲೆಗಳಲ್ಲಿ ಪ್ರಸ್ತುತ ಗ್ಯಾಸ್ ಸಿಲಿಂಡರ್ ಗಳ ಬೆಲೆ ಎಷ್ಟಿದೆ?, ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಅಡುಗೆ ಸಿಲಿಂಡರ್ ದರ 200 ರೂಪಾಯಿ ಇಳಿಕೆ:
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವತಿಯಿಂದ ಮನೆ ಬಳಿಕೆಯ ಅನಿಲದ ದರವನ್ನು 200 ರೂಪಾಯಿವರೆಗೆ ಇಳಿಸಲಾಗಿದೆ. ರಾಜ್ಯ ಸರ್ಕಾರದಲ್ಲಿ ಎಲ್ಲಾ ಮನೆ ಬಳಕೆಯ ದಿನನಿತ್ಯದ ಸಾಮಗ್ರಿಗಳಲ್ಲಿ ಬೆಲೆ ಏರಿಕೆ ಆಗಿರುವುದರಿಂದ ಕಂಗೆಟ್ಟಿರುವ ಜನರಿಗೆ ಕೇಂದ್ರ ಸರ್ಕಾರವು ಒಂದು ಖುಷಿಯ ವಿಷಯವನ್ನು ನೀಡಿದ್ದಾರೆ. ಇದುವರೆಗೂ 1,100 ರೂಪಾಯಿ ಕೊಟ್ಟು ಸಿಲಿಂಡರ್ ಖರೀದಿಸುತ್ತಿರುವ ಗ್ರಾಹಕರು ಇನ್ಮುಂದೆ 900 ರೂಪಾಯಿ ಕೊಡಬೇಕಾಗುತ್ತೆ. ಉಜ್ವಲಾ ಯೋಜನೆಯಡಿ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ.ಗಳ ಹೆಚ್ಚುವರಿ ಸಬ್ಸಿಡಿ(subsidy)ಯನ್ನು ನೀಡಲು ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮಂಗಳವಾರ ಕೇಂದ್ರ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ವಿವರಗಳನ್ನು ಸುದ್ದಿಗಾರರಿಗೆ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಅವರು, ಎಲ್ಲ ಬಳಕೆದಾರರಿಗೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ. ತಗ್ಗಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಸರಕಾರವು ಶೂನ್ಯ ವೆಚ್ಚದಲ್ಲಿ ಇನ್ನೂ 75 ಲಕ್ಷ ಉಜ್ವಲ ಅನಿಲ ಸಂಪರ್ಕಗಳನ್ನು ನೀಡಲಿದೆ ಎಂದರು.
ಉಜ್ವಲ ಯೋಜನೆಯಡಿ ಗ್ಯಾಸ್ ಹೊಂದಿದವರಿಗೆ 400 ರೂಪಾಯಿ ಸಬ್ಸಿಡಿ :
ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಎಲ್ಪಿಜಿ ಗ್ಯಾಸ್ ಹೊಂದಿರುವ ಪ್ರತಿಯೊಬ್ಬರ ಮೊಬೈಲ್ ಫೋನ್ ಗೆ ಈ ಮೇಲಿನ ಮೆಸೇಜ್ ಬಂದಿರುತ್ತದೆ. ಕನ್ನಡ ಅನುವಾದ ಕೆಳಗೆ ಕೊಡಲಾಗಿದೆ
ನನ್ನ ಸಹೋದರಿಯರಿಗೆ "ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ" ರಕ್ಷಾ ಬಂಧನದ ಉಡುಗೊರೆ,
ಗೃಹೋಪಯೋಗಿ LPG ಅನಿಲವು ರೂ 200 ರಷ್ಟು ಕಡಿಮೆ ಮಾಡಿದ್ದೇವೆ, ಶುಭಾಶಯಗಳೊಂದಿಗೆ,
ನಿಮ್ಮ ಸಹೋದರ
ನರೇಂದ್ರ ಮೋದಿ
ಈಗಾಗಲೇ ಉಜ್ವಲಾ ಯೋಜನೆಯಡಿಯಲ್ಲಿ ಸಂಪರ್ಕ ಪಡೆದು ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬಳಸುತ್ತಿರುವವರು ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿ ಪಡೆಯುತ್ತಿದ್ದಾರೆ. ಈ ಫಲಾನುಭವಿಗಳು ಇನ್ನು ಮುಂದೆ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ಒಟ್ಟು 400 ರೂ. ಸಬ್ಸಿಡಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವ ಯಾವ ಜಿಲ್ಲೆಗಳಲ್ಲಿ LPG ಬೆಲೆ ಎಷ್ಟಿದೆ ನೋಡಿ?:
ಬಾಗಲಕೋಟೆ : ₹1,124 (924)
ಬೆಂಗಳೂರು : ₹1,105.50 (905.5)
ಬೆಂಗಳೂರು ಗ್ರಾ. : ₹1,105.50 (905.5)
ಬೆಳಗಾವಿ : ₹1,118 (918)
ಬಳ್ಳಾರಿ : ₹1,123 (923)
ಬೀದರ್ : ₹1,174.50 (974.5)
ವಿಜಯಪುರ : ₹1,127.50 (927.5)
ಚಾಮರಾಜನಗರ : ₹1,114 (914)
ಚಿಕ್ಕಬಳ್ಳಾಪುರ : ₹1,117.50 (1,097.5)
ಚಿಕ್ಕಮಗಳೂರು : ₹1,116 (916)
ಚಿತ್ರದುರ್ಗ : ₹1,116 (916)
ದಕ್ಷಿಣ ಕನ್ನಡ : ₹1,116 (916)
ದಾವಣಗೆರೆ : ₹1,116 (916)
ಧಾರವಾಡ : ₹1,122 (922)
ಗದಗ : ₹1,139 (939)
ಕಲಬುರ್ಗಿ : ₹1,129.50 (929.5)
ಹಾಸನ : ₹1,116 (916)
ಹಾವೇರಿ : ₹1,140.50 (940.5)
ಕೊಡಗು : ₹1,121 (921)
ಕೋಲಾರ : ₹1,105.50 (905.5)
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಕೊಪ್ಪಳ : ₹1,139 (939)
ಮಂಡ್ಯ : ₹1,113 (913)
ಮೈಸೂರು : ₹1,107.50 (907.5)
ರಾಯಚೂರು : ₹1,129.50 (929.5)
ರಾಮನಗರ : ₹1,110.50 (910.5)
ಶಿವಮೊಗ್ಗ : ₹1,116 (916)
ತುಮಕೂರು : ₹1,107.50 (907.5)
ಉಡುಪಿ : ₹1,110.50 (910.5)
ಉತ್ತರ ಕನ್ನಡ : ₹1,122 (922)
ವಿಜಯನಗರ : ₹1,117 (917)
ಯಾದಗಿರಿ : ₹1,129 (929)
ಈ ವರ್ಷ 5 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಸರ್ಕಾರದ ಈ ಹೆಜ್ಜೆ ಅತ್ಯಂತ ಮಹತ್ವದ್ದಾಗಿದೆ. ಗ್ಯಾಸ್ ಸಿಲಿಂಡರಿನ 200 ರೂಪಾಯಿಯ ಬೆಲೆ ಇಳಿಕೆಯಿಂದಾಗಿ ರಾಜ್ಯದ ಜನತೆಗೆ ಸಂತೋಷವಾಗಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ